ಬಹುನಿರೀಕ್ಷಿತ 'ಜಿಯೋ ಫೈಬರ್‌' ಮೆಗಾ ಆಫರ್ ಪ್ರಕಟ!

|

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ ತನ್ನ ಬಹು ನಿರೀಕ್ಷಿತ ''ಜಿಯೋ ಫೈಬರ್‌'' ಯೋಜನೆಯ ಬೆಲೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು (ಸೆಪ್ಟೆಂಬರ್ 5 ರಂದು) ಪ್ರಕಟಿಸಿದೆ. ಇಂಟರ್‌ನೆಟ್, ಟಿವಿ, ಟೆಲಿಫೋನ್‌, ಬ್ರಾಡ್‌ಬ್ಯಾಂಡ್‌, ಇ ಉಚಿತ 4ಕೆ ಟಿವಿ ಮತ್ತು ಇಂಟರ್‌ನೆಟ್ ಆಫ್ ಥಿಂಗ್ಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುವ ಜಿಯೋ ಫೈಬರ್ ಬ್ರ್ಯಾಡ್‌ಬ್ಯಾಂಡ್‌ ವಲಯದಲ್ಲಿ ಭಾರೀ ಕ್ರಾಂತಿ ಸೃಷ್ಟಿಸುವುದು ಖಚಿತವಾಗಿದೆ.!

ತಿಂಗಳಿಗೆ ಕನಿಷ್ಟ 699 ರೂ.

ಹೌದು, ತಿಂಗಳಿಗೆ ಕನಿಷ್ಟ 699 ರೂ. ನಿಂದ ಆರಂಭಗೊಂಡು 8,499 ರೂ. ವರೆಗಿನ ಒಟ್ಟು ಆರು ಜಿಯೋ ಫೈಬರ್ ಪ್ಯಾಕ್ ಗಳನ್ನು ಜಿಯೋ ಬಿಡುಗಡೆ ಮಾಡಿದೆ. ಎಲ್ಲ ಪ್ಲಾನ್‌ಗಳಲ್ಲಿ ಮೇಲೆ ತಿಳಿಸಿದ ಎಲ್ಲ ಸೇವೆಗಳನ್ನು ಬಳಸಬಹುದಾಗಿದೆ. ಗೇಮಿಂಗ್, ಡಿವೈಸ್ ಸೆಕ್ಯೂರಿಟಿ, ಹೋಮ್ ನೆಟ್‍ವರ್ಕಿಂಗ್, ವಿಆರ್, ವಿಡಿಯೋ ಸೇವೆಗಳು, ವಿಡಿಯೋ ಕಾಲಿಂಗ್ ಮತ್ತು ಕಾನ್ಫರೆನ್ಸ್ ಮಾಡಲು ಬೇಕಾಗಿರುವ ಸಾಧನಗಳನ್ನು ಗ್ರಾಹಕರು ಹಣವನ್ನು ಪಾವತಿಸಿ ಖರೀದಿಸಬೇಕು ಎಂದು ಕಂಪೆನಿ ತಿಳಿಸಿದೆ.

1ಜಿಬಿಪಿಎಸ್ ವೇಗದ ಸಂಪರ್ಕ

ದೇಶದ ಒಟ್ಟು 1600 ನಗರಗಳಲ್ಲಿ ಈ ಸೇವೆ ಆರಂಭಗೊಂಡಿದೆ. ಸದ್ಯ ಭಾರತದಲ್ಲಿ 25 ಎಂಬಿಪಿಎಸ್ ವೇಗದಲ್ಲಿ ಬ್ರಾಡ್ ಬ್ಯಾಂಡ್ ಸಿಗುತ್ತದೆ. ಅಭಿವೃದ್ಧಿ ಹೊಂದಿರುವ ದೇಶವಾದ ಅಮೆರಿಕದಲ್ಲಿ 90 ಎಂಬಿಪಿಎಸ್ ವೇಗದಲ್ಲಿ ಸಿಕ್ಕಿದರೆ ನಾವು 100 ಎಂಬಿಪಿಎಸ್ ವೇಗದ ಬ್ರಾಡ್‍ಬ್ಯಾಂಡ್ ಕಲ್ಪಿಸುತ್ತೇವೆ. ಪ್ಲಾಟಿನಂ ಮತ್ತು ಟೈಟಾನಿಯಂ ಪ್ಯಾಕ್ ಹಾಕಿಸಿದ ಗ್ರಾಹಕರಿಗೆ 1ಜಿಬಿಪಿಎಸ್ ವೇಗದ ಸಂಪರ್ಕ ನೀಡಲಾಗುವುದು. ಈ ಮೂಲಕ ಭಾರತ ವಿಶ್ವದ ಟಾಪ್ ಬ್ರಾಡ್‍ಬ್ಯಾಂಡ್ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ ಎಂದು ಜಿಯೋ ಹೇಳಿದೆ.

ಆರು ಪ್ರಿ ಪೇಯ್ಡ್ ಫೈಬರ್ ಪ್ಲ್ಯಾನ್ಸ್

ಜಿಯೋ ಒಟ್ಟು ಆರು ಪ್ರಿ ಪೇಯ್ಡ್ ಫೈಬರ್ ಪ್ಲ್ಯಾನ್ಸ್ ಆಫರ್‌ಗಳನ್ನು ನೀಡಿದ್ದು, ಅದರಲ್ಲಿ ಕಂಚು-ತಿಂಗಳಿಗೆ 699 ರೂಪಾಯಿ, ಬೆಳ್ಳಿ-ತಿಂಗಳಿಗೆ 849 ರೂಪಾಯಿ, ಚಿನ್ನ-ತಿಂಗಳಿಗೆ 1,299 ರೂಪಾಯಿ, ವಜ್ರ-ತಿಂಗಳಿಗೆ 2,499, ಪ್ಲಾಟಿನಂ-ತಿಂಗಳಿಗೆ 3,999 ಮತ್ತು ಟಿಟಾನಿಯಂ-ತಿಂಗಳಿಗೆ 8,499 ರೂ. ಬೆಲೆಗಳನ್ನು ಹೊಂದಿವೆ. ಬ್ರೋನ್ಜ್ ಮತ್ತು ಸಿಲ್ವರ್ ಪ್ಲ್ಯಾನ್ಸ್ ನಲ್ಲಿ ಡಾಟಾ ಸ್ಪೀಡ್ ಕನಿಷ್ಠ 100 ಎಂಬಿಪಿಎಸ್ ವರೆಗೆ ಇದ್ದರೆ, ಗೋಲ್ಡ್ (ಚಿನ್ನ) ಮತ್ತು ಡೈಮಂಡ್(ವಜ್ರ) ಪ್ಲ್ಯಾನ್ಸ್ ನಲ್ಲಿ 500 ಎಂಬಿಪಿಎಸ್ ವೇಗದ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ.

ಮೆಗಾ ಆಫರ್ ವಿವರ

ಜಿಯೋ ಮೆಗಾ ಆಫರ್ ವಿವರ ಹೀಗಿದ್ದು, (ಬ್ರೋನ್ಜ್ - 699 ರೂ., 100 ಎಂಬಿಪಿಎಸ್, 100 ಜಿಬಿ+50 ಜಿಬಿ ಉಚಿತ), (ಸಿಲ್ವರ್ - 849 ರೂ.100 ಎಂಬಿಪಿಎಸ್, 200 ಜಿಬಿ + 200 ಜಿಬಿ ಉಚಿತ), (ಗೋಲ್ಡ್ -1,299 ರೂ., 250 ಎಂಬಿಪಿಎಸ್, 500 ಜಿಬಿ +250 ಜಿಬಿ ಉಚಿತ), (ಡೈಮಂಡ್ - 2,499 ರೂ., 500 ಎಂಬಿಪಿಎಸ್, 1250 ಜಿಬಿ +250 ಜಿಬಿ ಉಚಿತ), (ಪ್ಲಾಟಿನಂ - 3,999 ರೂ., 1 ಜಿಬಿಪಿಎಸ್, 2500 ಜಿಬಿ ಉಚಿತ) ಮತ್ತು (ಟೈಟಾನಿಯಂ - 8,499 ರೂ., 1 ಜಿಬಿಪಿಎಸ್, 5000 ಜಿಬಿ) ಡೇಟಾವನ್ನು ಗ್ರಾಹಕರಿಗೆ ಒದಗಿಸಲಿವೆ.

ಶಾಶ್ವತವಾಗಿ ಉಚಿತ ಧ್ವನಿ ಕರೆ

ಧ್ವನಿ ಅಥವಾ ಡೇಟಾಕ್ಕಾಗಿ ಮಾತ್ರ ಪಾವತಿಸಬೇಕಿರುವ ಜಿಯೋ ಫೈಬರ್ ರೀಚಾರ್ಜ್ ಮೇಲೆ ಮನೆಯಿಂದ ಯಾವುದೇ ನೆಟ್‌ವರ್ಕ್‌ಗೆ ಶಾಶ್ವತವಾಗಿ ಉಚಿತ ಧ್ವನಿ ಕರೆಗಳನ್ನು ನೀಡಿರುತ್ತದೆ. ಇನ್ನು ದೇಶಿಯ ಕರೆಗಳು ಪೂರ್ಣ ಉಚಿತ, ಟಿವಿ ವಿಡಿಯೋ ಕಾಲಿಂಗ್ ಮತ್ತು ಕಾನ್ಫರೆನ್ಸ್ ಕಾಲರ್, ಒಟಿಟಿ ಅಪ್ಲಿಕೇಶನ್ ಬಳಕೆ, ಗೇಮಿಂಗ್, ಹೋಮ್ ನೆಟ್‍ವರ್ಕಿಂಗ್, ಡಿವೈಸ್ ಸೆಕ್ಯೂರಿಟಿ, ವರ್ಚುಯಲ್ ರಿಯಲಿಟಿ ಅನುಭವ ಸಿಗಲಿದೆ. ಅಂತರರಾಷ್ಟ್ರೀಯ ಸ್ಥಿರ ಲೈನ್ ಕರೆ ದರವು (ಯುಎಸ್ ಮತ್ತು ಕೆನಡಾಕ್ಕೆ) ತಿಂಗಳಿಗೆ ಕೇವಲ 500 ರೂ.ಗಳಾಗಿವೆ.

2500 ರೂ.ಗಳ ಭದ್ರತಾ ಠೇವಣಿ

ಜಿಯೋ ಫೈಬರ್ ಧ್ವನಿ ಅಥವಾ ಡೇಟಾಕ್ಕಾಗಿ ಮಾತ್ರ ಗ್ರಾಹಕರು ಪಾವತಿಸಬೇಕಿದ್ದು, ಜಿಯೋ ಸೆಟ್-ಟಾಪ್ ಬಾಕ್ಸ್ ಸಂಪೂರ್ಣ ಉಚಿತವಾಗಿದೆ. ಜೊತೆಗೆ ಮನೆಯಿಂದ ಧ್ವನಿ ಕರೆಗಳು ಯಾವುದೇ ನೆಟ್‌ವರ್ಕ್‌ಗೆ ಶಾಶ್ವತವಾಗಿ ಉಚಿತವಾಗಿರುತ್ತದೆ. ಜಿಯೋ ಗಿಗಾ ಫೈಬರ್ ಪೂರ್ವವೀಕ್ಷಣೆ ಪ್ರಸ್ತಾಪದೊಂದಿಗೆ 2500 ರೂ.ಗಳ ಭದ್ರತಾ ಠೇವಣಿ ಹೊಂದಿದೆ. ಹೊಸ ಗ್ರಾಹಕರು 2500 ರೂ.ಗಳ ಮರುಪಾವತಿಸಬಹುದಾದ ಭದ್ರತಾ ಠೇವಣಿ ಪಾವತಿಸಬೇಕಾಗುತ್ತದೆ. ಜೊತೆಗೆ ಎರಡು ತಿಂಗಳು ಉಚಿತ ಸೇವೆ ದೊರೆಯಲಿದೆ ಎಂದು ಹೇಳಲಾಗುತ್ತಿದೆ.

ಉಚಿತ ಸ್ಮಾರ್ಟ್‌ಟಿವಿ

ಜಿಯೋ ಫೈಬರ್‌ಗೆ ವಾರ್ಷಿಕ ಚಂದಾದಾರರಾದವರಿಗೆ 4ಕೆ ಸ್ಮಾರ್ಟ್‌ಟಿವಿಯನ್ನು ಉಚಿತವಾಗಿ ನೀಡುವುದಾಗಿ ಅಂಬಾನಿ ಈ ಮೊದಲೇ ತಿಳಿಸಿದ್ದರು, ಅದರಂತೆ, ಡೈಮಂಡ್, ಮತ್ತು ಪ್ಲಾಟಿನಂ ವಾರ್ಷಿಕ ಯೋಜನೆ ಚಂದಾದಾರರಿಗೆ ಉಚಿತ ಎಚ್‌ಡಿ ಟಿವಿ ಸಿಗುತ್ತದೆ (ಪ್ರತಿ ಯೋಜನೆಗೆ ವಿಭಿನ್ನ ಪರದೆಯ ಗಾತ್ರ). ಗೋಲ್ಡ್ ಪ್ಲಾನ್ ಚಂದಾದಾರರು 24 ಇಂಚಿನ ಎಚ್‌ಡಿ ಟಿವಿಯನ್ನು ಸಹ ಪಡೆಯುತ್ತಾರೆ. ಆದರೆ, ಅವರು ಎರಡು ವರ್ಷದ ಯೋಜನೆ ಪಡೆಯಬೇಕು. ಹಾಗೆಯೇ, ಟೈಟಾನಿಯಂ ವಾರ್ಷಿಕ ಯೋಜನೆ ಚಂದಾದಾರರಿಗೆ 43 ಇಂಚಿನ 4 ಕೆ ಟಿವಿಯು ಸಿಗಲಿದೆ.

ಫೈಬರ್ ಸೇವೆ ನೋಂದಣಿ

www.jio.com ಅಥವಾ MyJio ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ ಜಿಯೋ ಫೈಬರ್ ಸೇವೆ ಸಂಬಂಧ ನೋಂದಣಿ ಮಾಡಿ. ನಿಮ್ಮ ಪ್ರದೇಶದಲ್ಲಿ ಜಿಯೋ ಫೈಬರ್ ಸೇವೆ ಲಭ್ಯವಿದ್ದರೆ ಜಿಯೋ ಫೈಬರ್ ಸಿಬ್ಬಂದಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಇನ್ನು ನೇರವಾಗಿ ಜಿಯೋ ಫೈಬರ್ ಸೇವೆ ಪಡೆಯಲು ಜಿಯೋ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೇಳಿರುವ ವಿವರಗಳನ್ನು ದಾಖಲಿಸಿ ಬುಕ್ ಆಡಬಹುದು. ಒಮ್ಮೆ ಫೈಬರ್ ಸೇವೆ ಪಡೆದು ಮನೆಯಲ್ಲಿ ರೂಟರ್ ಅಳವಡಿಸಿದ ಕೆಲವೇ ಗಂಟೆಗಳಲ್ಲಿ ಇಂಟರ್ನೆಟ್ ಸೇವೆ ಆರಂಭವಾಗುತ್ತದೆ.

Best Mobiles in India

English summary
Finally, after a year-long wait, the Jio Fiber broadband plans have been announced. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X