ಜಿಯೋ ಗೀಗಾ ಫೈಬರ್' ಬೆಲೆಗಳ ಮಾಹಿತಿ ಲೀಕ್!..ಮತ್ತೆ 3 ತಿಂಗಳು ಉಚಿತ ಸೇವೆ?!
ಭಾರತದ ಬ್ರಾಡ್ಬ್ಯಾಂಡ್ ಕ್ಷೇತ್ರದಲ್ಲೇ ಗೇಮ್ ಚೇಂಜರ್ ಆಗಲಿದೆ ಎನ್ನಲಾಗುತ್ತಿರುವ ಜಿಯೋ ಗೀಗಾ ಫೈಬರ್ ಇದೇ ಆಗಸ್ಟ್ 15ಕ್ಕೆ ಮಾರುಕಟ್ಟೆಗೆ ಕಾಲಿಡುತ್ತಿರುವುದು ನಿಮಗೆಲ್ಲಾ ಈಗಾಗಲೇ ತಿಳಿದಿದೆ. 100 ಎಂಬಿಪಿಎಸ್ ಡೇಟಾ ಸ್ಪೀಡ್ ಇರುವ ಈ ಬ್ರಾಡ್ಬ್ಯಾಂಡ್ ಯೋಜನೆಯು ಅತ್ಯಾಧುನಿಕ ಫೈಬರ್ ಆಧಾರಿತ ಬ್ರಾಡ್ಬ್ಯಾಂಡ್ ಸೇವೆಗಳನ್ನು ದೇಶಾದ್ಯಂತ ಒದಗಿಸಲು ಸಜ್ಜಾಗಿದೆ.
ಜಿಯೋ 4G ಸೇವೆಯ ನಂತರ ಭಾರತದ ಅಂತರ್ಜಾಲ ಮಾರುಕಟ್ಟೆಯನ್ನೇ ನಡುಗಿಸಬಹುದಾದ 'ಜಿಯೋ ಗೀಗಾ ಫೈಬರ್' ಯೋಜನೆ ಇದೀಗ ಮತ್ತೊಂದು ವಿಶೇಷ ಸುದ್ದಿಯನ್ನು ಹೊತ್ತು ತಂದಿದೆ. ಬಿಡುಗಡೆಗೂ ಮುನ್ನವೆ ಜಿಯೋ ಗೀಗಾಫೈಬರ್ ಡಿವೈಸ್ ಹೊಂದಿರುವ ಬೆಲೆ ಮತ್ತು ರೀಚಾರ್ಜ್ ಪ್ಲಾನ್‌ಗಳು ಯಾವುವು ಎಂಬ ಮಾಹಿತಿಗಳು ಖಚಿತ ಮೂಲಗಳಿಂದ ಲೀಕ್ ಆಗಿವೆ.

ಈ ವರೆಗೂ 4G ತಂತ್ರಜ್ಞಾನದ ಮೂಲಕ ಭಾರತದ ಟೆಲಿಕಾಂ ಮಾರುಕಟ್ಟೆಯನ್ನು ನಡುಗಿಸಿದ್ದ ಜಿಯೋ, ಈಗ ತನ್ನ 'ಗೀಗಾಫೈಬರ್' ಮೂಲಕ ಬದಲಾವಣೆಯ ಗಾಳಿ ಬೀಸಲು ತಯಾರಾಗಿದೆ. ಹಾಗಾದರೆ, ಲೀಕ್ ಆಗಿರುವ ಮಾಹಿತಿಯಂತೆ ಜಿಯೋ ಗೀಗಾ ಫೈಬರ್ ಡಿವೈಸ್ ಬೆಲೆ ಎಷ್ಟು? ಗೀಗಾ ಫೈಬರ್ ರೀಚಾರ್ಜ್ ಪ್ಲಾನ್‌ಗಳು ಯಾವುವು? ಎಂಬುದನ್ನು ಮುಂದೆ ತಿಳಿಯಿರಿ.

ಮತ್ತೆ ಮೂರು ತಿಂಗಳು ಉಚಿತ?
ಜಿಯೋ ಗೀಗಾ ಫೈಬರ್ ಹೊಂದಿರುವ ಬೆಲೆ ಮತ್ತು ರೀಚಾರ್ಜ್ ಪ್ಲಾನ್‌ಗಳು ಯಾವುವು ಎಂಬ ಮಾಹಿತಿಗಳು ಖಚಿತ ಮೂಲಗಳಿಂದ ಲೀಕ್ ಆಗಿರುವ ಸುದ್ದಿಯ ಜೊತೆಯಲ್ಲಿಯೇ ಮತ್ತೊಂದು ಶಾಕಿಂಗ್ ನ್ಯೂಸ್ ಅನ್ನು ಪ್ರಮುಖ ಮಾಧ್ಯಮಗಳು ಪ್ರಕಟಿಸಿವೆ. ಜಿಯೋ ಗೀಗಾಫೈಬರ್' ಕೂಡ ಮೂರು ತಿಂಗಳು ಉಚಿತ ಸೇವೆಯನ್ನು ಒದಗಿಸಬಹುದು ಎಂದು ನಿರೀಕ್ಷಿಸಲಾಗಿದೆ.

2 ಸಾವಿರಕ್ಕೆ ಡಿವೈಸ್?
ಅತ್ಯಾಧುನಿಕ ಫೈಬರ್ ಆಧಾರಿತ ಜಿಯೋ ಗೀಗಾ ಫೈಬರ್ ಡಿವೈಸ್ ಬೆಲೆ 2ಸಾವಿರ ರೂಪಾಯಿಗಳಾಗಿರಲಿದೆ ಎಂದು ಹೇಳಲಾಗಿದೆ. 2 ಸಾವಿರ ರೂಪಾಯಿಗಳನ್ನು ಪಾವತಿಸಿ ಜಿಯೋ ಗೀಗಾ ಫೈಬರ್ ಡಿವೈಸ್ ಖರೀದಿಸಿದರೆ, ಜಿಯೋ ಉಚಿತವಾಗಿ ಮನೆಗೆ ಕನೆಕ್ಷನ್ ಅನ್ನು ನೀಡಲಿದೆ. ಈ ಹಣವನ್ನು ಸಹ ಜಿಯೋ ವಾಪಸ್ ಮಾಡುವ ನಿರೀಕ್ಷೆಯನ್ನು ಹೊಂದಲಾಗಿದೆ.

500 ರೂ. ಜಿಯೋ ಗಿಗಾಫೈಬರ್ ಪ್ಲಾನ್!
ಜಿಯೋ ಗೀಗಾ ಫೈಬರ್ ಸೇವೆಯ ಆರಂಭಿಕ ರೀಚಾರ್ಜ್ ಬೆಲೆಗಳು 500 ರೂಪಾಯಿಗಳಿಂದ ಆರಂಭವಾಗಲಿದೆ ಎಂದು ಹೇಳಲಾಗಿದೆ. ಈ ಕನಿಷ್ಟ ರೀಚಾರ್ಜ್ ಪ್ಲಾನ್‌ನಲ್ಲಿ 500 ರೂ.ಗಳಿಗೆ ಒಂದು ತಿಂಗಳ ಅವಧಿಯವರೆಗೆ 50ಎಂಬಿಪಿಎಸ್ ವೇಗದಲ್ಲಿ 300GB ಡೇಟಾವನ್ನು ಸಿಗಲಿದೆ. ಮಿತಿ ದಾಟಿದ ನಂತರ ಡೇಟಾ ವೇಗವನ್ನು 100kB/sಗೆ ಕಡಿತಗೊಳಿಸಲಾಗುತ್ತದೆ.

750 ರೂ. ಜಿಯೋ ಗಿಗಾಫೈಬರ್ ಪ್ಲಾನ್!
ಜಿಯೋ ಗೀಗಾ ಫೈಬರ್ ಸೇವೆಯ ಎರಡನೇ ರೀಚಾರ್ಜ್ ಪ್ಲಾನ್ 750 ರೂಪಾಯಿಗಳಾಗಿವೆ. 750 ರೂಪಾಯಿಗಳ ಈ ಜಿಯೋ ಗೀಗಾ ಫೈಬರ್ ರೀಚಾರ್ಜ್ ಪ್ಲಾನ್‌ನಲ್ಲಿ ಒಂದು ತಿಂಗಳ ಅವಧಿಯವರೆಗೆ 50ಎಂಬಿಪಿಎಸ್ ವೇಗದಲ್ಲಿ 450GB ಡೇಟಾವನ್ನು ಸಿಗಲಿದೆ. ಡೇಟಾ ಮಿತಿ ದಾಟಿದ ನಂತರ ಡೇಟಾ ವೇಗವನ್ನು 100kB/sಗೆ ಕಡಿತಗೊಳಿಸಲಾಗುತ್ತದೆ.

999 ರೂ. ಜಿಯೋ ಗಿಗಾಫೈಬರ್ ಪ್ಲಾನ್!
ಜಿಯೋ ಗೀಗಾ ಫೈಬರ್‌ನ ಮೊದಲ 100 ಎಂಬಿಪಿಎಸ್ ವೇಗದ ಡೇಟಾ ಪ್ಲಾನ್ ಇದಾಗಿದೆ. 999 ರೂಪಾಯಿಗಳ ಜಿಯೋ ಗಿಗಾಫೈಬರ್ ಪ್ಲಾನ್ ರೀಚಾರ್ಜ್ ಮಾಡಿಸಿದರೆ, 30 ದಿನಗಳ ಅವಧಿಯವರೆಗೆ 100 ಎಂಬಿಪಿಎಸ್ ವೇಗದಲ್ಲಿ ಒಟ್ಟು 600 ಜಿಬಿ ಡೇಟಾ ಸಿಗಲಿದೆ. ಡೇಟಾ ಮಿತಿ ದಾಟಿದ ನಂತರ ಡೇಟಾ ವೇಗವನ್ನು 100kB/sಗೆ ಕಡಿತಗೊಳಿಸಲಾಗುತ್ತದೆ.

1,299 ರೂ. ಜಿಯೋ ಗಿಗಾಫೈಬರ್ ಪ್ಲಾನ್!
ಪ್ರತಿ ತಿಂಗಳು 900GB ಡೇಟಾವನ್ನು ಹೊಂದಿರುವ ಗೀಗಾ ಫೈಬರ್‌ನ ಬಿಗ್ ಡೇಟಾ ಪ್ಲಾನ್ ಇದಾಗಿದೆ. 1,299 ರೂಪಾಯಿಗಳ ಜಿಯೋ ಗಿಗಾಫೈಬರ್ ಪ್ಲಾನ್ ರೀಚಾರ್ಜ್ ಮಾಡಿಸಿದರೆ, 30 ದಿನಗಳ ಅವಧಿಯವರೆಗೆ 100 ಎಂಬಿಪಿಎಸ್ ವೇಗದಲ್ಲಿ ಒಟ್ಟು 900ಜಿಬಿ ಡೇಟಾ ಸಿಗಲಿದೆ. ಡೇಟಾ ಮಿತಿ ದಾಟಿದ ನಂತರ ಡೇಟಾ ವೇಗವನ್ನು 100kB/sಗೆ ಕಡಿತಗೊಳಿಸಲಾಗುತ್ತದೆ.


Click it and Unblock the Notifications








