Home
ಸುದ್ದಿಜಾಲ

ಇನ್ಮುಂದೆ Jio ಇಂಟರ್ನೆಟ್ ಬಲು ದುಬಾರಿ! ಇಲ್ಲಿದೆ ಹೊಸ ಪ್ಲ್ಯಾನ್‌ಗಳ ವಿವರ

ಭಾರತದ ಪ್ರಮುಖ ದೂರಸಂಪರ್ಕ ನೆಟ್‌ವರ್ಕ್ ಆಗಿರುವ ಜಿಯೋ ತನ್ನ ಇತ್ತೀಚಿನ ಶ್ರೇಣಿಯ ಅನಿಯಮಿತ ಯೋಜನೆಗಳನ್ನು ಅನಾವರಣಗೊಳಿಸಿದೆ. ಸ್ಪೆಕ್ಟ್ರಮ್ ಹರಾಜಿನ ಮರುದಿನ ತಕ್ಷಣವೇ ಅಸ್ತಿತ್ವದಲ್ಲಿರುವ ಸುಂಕದ ದರಗಳನ್ನು ಹೆಚ್ಚಿಸಿ Jio ಗ್ರಾಹಕರಿಗೆ ಶಾಕ್ ನೀಡಿದೆ. ಹೊಸ ಯೋಜನೆಗಳು 3 ಜುಲೈ 2024 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ ಮತ್ತು ಬಳಕೆದಾರರು ದೇಶಾದ್ಯಂತ ಅನಿಯಮಿತ 5G ಡೇಟಾವನ್ನು ಸ್ವೀಕರಿಸಬಹುದಾಗಿದೆ. ರಿಲಾಯನ್ಸ್‌ ಜಿಯೋ ತನ್ನ ಮೊಬೈಲ್‌ ಚಂದಾ ಶಲ್ಕವನ್ನು ಶೇ.12 ರಿಂದ ಶೇ. 27 ರವರೆಗೆ ಹೆಚ್ಚಿಸಿದೆ ಅಲ್ಲದೇ 5G ಸೇವೆಗಳ ಅನಿಯಮಿತ ಬಳಕೆ ಮೇಲೂ ಕಡಿವಾಣ ಹಾಕಲು ಜಿಯೋ (Jio) ನಿರ್ಧರಿಸಿದೆ.

5G ರೋಲ್‌ಔಟ್‌ನೊಂದಿಗೆ ಭಾರತದಲ್ಲಿನ ಕಾರ್ಯಾಚರಣೆಯ 5G ಸೆಲ್‌ಗಳಲ್ಲಿ ಸುಮಾರು 85 ಪ್ರತಿಶತದಷ್ಟು Jio ನ ಸ್ಟ್ಯಾಂಡ್ ಅಲೋನ್ ಟ್ರೂ 5G ನೆಟ್‌ವರ್ಕ್‌ನಿಂದ ಚಾಲಿತವಾಗಿದೆ ಎಂದು ಜಿಯೋ ಬಹಿರಂಗಪಡಿಸಿದೆ.

ಇನ್ಮುಂದೆ Jio ಇಂಟರ್ನೆಟ್ ಬಲು ದುಬಾರಿ! ಇಲ್ಲಿದೆ ಹೊಸ ಪ್ಲ್ಯಾನ್‌ಗಳ ವಿವರ

ಹೊಸದಾಗಿ ಜಾರಿಗೆ ತಂದಿರುವ ಸುಂಕದ ವಿವರಗಳು:

* ₹189 ಕ್ಕೆ 28 ದಿನಗಳ ವ್ಯಾಲಿಡಿಟಿಯೊಂದಿಗೆ 2GB ಡೆಟಾ ಪಡೆಯಬಹುದು
* ₹249 ಕ್ಕೆ 28 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 1GB ಡೇಟಾ ಪಡೆಯಬಹುದು.
* ₹299 ಕ್ಕೆ 28 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 1.5GB ಡೇಟಾ ಪಡೆಯಬಹುದು.
* ₹349 ಗಳ ರೀಚಾರ್ಜ್‌ಗೆ 28 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 2GB ಡೇಟಾ ಪಡೆಯಬಹುದು.
* ₹399 ಗಳ ರೀಚಾರ್ಜ್‌ ಜೊತೆಗೆ 28 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 2.5GB ಡೇಟಾ ಪಡೆಯಬಹುದು.
* ₹449 ಗಳ ರೀಚಾರ್ಜ್‌ನೊಂದಿದೆ 28 ದಿನಗಳ ವ್ಯಾಲಿಡಿಟಿಯೊಂದಿಗೆ 3GB ಡೇಟಾ ಪಡೆಯಬಹುದು.

ವಿಸ್ತೃತ ಮಾನ್ಯತೆ ಯೋಜನೆಗಳು ಈ ಕೆಳಗಿನಂತಿವೆ:

* ₹579 ಗಳ ರಿಚಾರ್ಜ್‌ ಜೊತೆಗೆ 56 ದಿನಗಳ ಮಾನ್ಯತೆಯೊಂದಿಗೆ 1.5GB ಡೇಟಾ ಪಡೆಯಬಹುದು.
* ₹629 ಗಳ ರೀಚಾರ್ಜ್‌ ಜೊಎತೆಗೆ 56 ದಿನಗಳ ಮಾನ್ಯತೆಯೊಂದಿಗೆ ಪ್ರತಿದಿನ 2GB ಡೇಟಾ ಪಡೆಯಬಹುದಾಗಿದೆ.
* ₹479 ಗಳ ರೀಚಾರ್‌ಜ್ ಜೊತೆಗೆ 84 ದಿನಗಳ ಮಾನ್ಯತೆಯೊಂದಿಗೆ 6GB ಡೇಟಾ ಪಡೆಯಬಹದು.
* ₹859 ಗಳ ರೀಚಾರ್ಜ್‌ ಜೊತೆಗೆ 84 ದಿನಗಳ ಮಾನ್ಯತೆಯೊಂದಿಗೆ ಪ್ರತಿದಿನ 2GB ಡೇಟಾ ಪಡೆಯಬಹುದು.
* ₹3599 ಗಳ ರಿಚಾರ್ಜ್ ಜೊತೆಗೆ 365 ದಿನಗಳ ಮಾನ್ಯತೆಯೊಂದಿಗೆ ದಿನಕ್ಕೆ 2.5GB ಡೇಟಾ ಪಡೆಯಬಹುದು.

ಹೊಸ ಯೋಜನೆಗಳ ಜೊತೆಗೆ, Jio ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಬಳಕೆದಾರರ ಅನುಭವವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಎರಡು ಅಪ್ಲಿಕೇಶನ್‌ಗಳನ್ನು ಕೂಡ ಪರಿಚಯಿಸಲು ಮುಂದಾಗಿದೆ:
JioSafe: ಕರೆ, ಸಂದೇಶ ಕಳುಹಿಸುವಿಕೆ ಮತ್ತು ಫೈಲ್ ವರ್ಗಾವಣೆಗಾಗಿ ಕ್ವಾಂಟಮ್ ಸುರಕ್ಷಿತ ಸೆನ್ಸಾರ್ ಅಪ್ಲಿಕೇಶನ್ ಪಡೆಯಲು ತಿಂಗಳಿಗೆ ₹199 ಬೆಲೆ ಹೊಂದಿದೆ.
JioTranslate: ಧ್ವನಿ ಕರೆಗಳು, ಧ್ವನಿ ಸಂದೇಶಗಳು, ಪಠ್ಯ ಮತ್ತು ಚಿತ್ರಗಳನ್ನು ಭಾಷಾಂತರಿಸಲು AI ಚಾಲಿತ ಬಹು-ಭಾಷಾ ಸೆನ್ಸಾರ್ ಅಪ್ಲಿಕೇಶನ್, ತಿಂಗಳಿಗೆ ₹99 ಬೆಲೆ ಹೊಂದಿದೆ.
ಜಿಯೋ ಬಳಕೆದಾರರು ಇಡೀ ವರ್ಷಕ್ಕೆ ಎರಡೂ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶ ಪಡೆಯಲು ತಿಂಗಳಿಗೆ ₹298 ರೂ. ನೀಡಬೇಕಾಗುತ್ತದೆ.

ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರಾದ ಆಕಾಶ್ ಎಂ ಅಂಬಾನಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು ಈ ಹೊಸ ಯೋಜನೆಗಳ ಪರಿಚಯವು ಉದ್ಯಮದ ಆವಿಷ್ಕಾರವನ್ನು ಹೆಚ್ಚಿಸುವುದರ ಜೊತೆಗೆ 5G ಮತ್ತು AI ತಂತ್ರಜ್ಞಾನದಲ್ಲಿ ಹೂಡಿಕೆಯ ಮೂಲಕ ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುವ ನಮ್ಮ ನಿರಂತರ ಪ್ರಯತ್ನದ ಭಾಗವಾಗಿದೆ. ಉತ್ತಮ ಗುಣಮಟ್ಟದ, ಕೈಗೆಟುಕುವ ಇಂಟರ್ನೆಟ್ ಡಿಜಿಟಲ್ ಇಂಡಿಯಾದ ಬೆನ್ನೆಲುಬಾಗಿದೆ ಮತ್ತು ಈ ರೂಪಾಂತರದಲ್ಲಿ ಮಹತ್ವದ ಪಾತ್ರವನ್ನು ವಹಿಸಲು ಜಿಯೋ ಹೆಮ್ಮೆಪಡುತ್ತದೆ. ನಮ್ಮ ಬದ್ಧತೆ ಯಾವಾಗಲೂ ನಮ್ಮ ದೇಶ ಮತ್ತು ಗ್ರಾಹಕರಿಗೆ, ಮತ್ತು ನಾವು ಭಾರತದ ಡಿಜಿಟಲ್ ಭವಿಷ್ಯದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

Best Mobiles in India

English summary
Reliance Jio has hiked its mobile subscription rates from 12 per cent to 27 per cent and has also decided to hike the prices of its 5G services.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+