ಅಂಬಾನಿ ಜೊತೆ ಜಿಯೋದಲ್ಲಿ ಕೆಲಸ ಮಾಡುವ ಸುವರ್ಣ ಅವಕಾಶ: ಆಯ್ಕೆ ಹೇಗಿರುತ್ತೇ ಗೊತ್ತಾ..?
ಮಾರುಕಟ್ಟೆಯಲ್ಲಿ ದೈತ್ಯ ಟೆಲಿಕಾಂ ಕಂಪನಿ ಎನ್ನಿಸಿಕೊಳ್ಳುವ ಪ್ರಯತ್ನದಲ್ಲಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ಪ್ರಸಕ್ತ ಹಣಕಾಸು ವರ್ಷದಲ್ಲಿ 75 ರಿಂದ 80 ಸಾವಿರದವರೆಗೆ ಜನರನ್ನು ನೇಮಕಾತಿ ಮಾಡಿಕೊಳ್ಳಲಿದೆ ಎನ್ನಲಾಗಿದೆ. ಈ ಮೂಲಕ ದೇಶದಲ್ಲಿ ಹೆಚ್ಚಾಗುತ್ತಿರುವ ಉದ್ಯೋಗ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರವೂ ದೊರೆಯಲಿದೆ.

ಜಿಯೊ ಪೇಮೆಂಟ್ ಬ್ಯಾಂಕ್ ಶುರುವಾಗುತ್ತಿರುವ ಹಿನ್ನಲೆಯಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳು ಸೃಷ್ಠಿಯಾಗಿದ್ದು, ಈ ಹಿನ್ನಲೆಯಲ್ಲಿ ಜಿಯೋ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಯುವ ಸಮುಹಕ್ಕೆ ಆಸರೆಯಾಗಲಿದೆ ಎನ್ನಲಾಗಿದೆ. ಜಿಯೋ ಸೇವೆಯ ಬಳಕೆ ಹೆಚ್ಚಾಗುತ್ತಿದಂತೆ, ಜಿಯೋ ನೌಕರರ ಸಂಖ್ಯೆಯೂ ಏರಿಕೆಯಾಗುತ್ತಿದೆ.

ಟೆಲಿಕಾಂ ವಿಸ್ತರಣೆ:
ಜಿಯೋ ತನ್ನ ಟೆಲಿಕಾಂ ಜಾಲವನ್ನು ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸಲು ಮುಂದಾಗಿದ್ದು, ಈ ಹಿನ್ನಲೆಯಲ್ಲಿಟೆಪ್ರಸಕ್ತ ಹಣಕಾಸು ವರ್ಷದಲ್ಲಿ ರಿಲಯನ್ಸ್ ಜಿಯೋ 75 ರಿಂದ 80 ಸಾವಿರದವರೆಗೆ ಜನರನ್ನು ನೇಮಕ ಮಾಡಿಕೊಳ್ಳಲಿದೆ.

ಜಿಯೋ ಪೇಮೆಂಟ್ ಬ್ಯಾಂಕ್:
ಜಿಯೋ ಪೇಮೆಂಟ್ ಬ್ಯಾಂಕ್ ಹೆಚ್ಚಿನ ಸದ್ದು ಮಾಡಲಿದ್ದು, ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಜಿಯೋ ಜೊತೆ ಇನ್ನಷ್ಟು ಮಂದಿ ನೌಕರರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ರಿಲಯನ್ಸ್ ಜಿಯೋ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (HR) ಸಂಜಯ್ ಜೊಗ್ ಮಾಹಿತಿಯನ್ನು ನೀಡಿದ್ದಾರೆ. ಜಿಯೋ ಕುಟುಂಬವು ಬೆಳೆಯುತ್ತಿದೆ ಎನ್ನಲಾಗಿದೆ.

ಕ್ಯಾಂಪಸ್ ನೇಮಕಾತಿ:
ಹೆಚ್ಚಿನ ಯುವ ಜನರನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿಯೇ ರಿಲಯನ್ಸ್ ಜಿಯೋ ದೇಶಾದ್ಯಂತ 6,000 ಕಾಲೇಜುಗಳು, ತಾಂತ್ರಿಕ ಸಂಸ್ಥೆಗಳ ಜೊತೆ ಸಹಯೋಗವನ್ನು ಹೊಂದಿದ್ದು, ಈ ಸಂಸ್ಥೆಗಳಲ್ಲಿ ಕೆಲವು ಕೋರ್ಸ್ ಗಳನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಅದರಲ್ಲಿ ತೇರ್ಗಡೆ ಹೊಂದಿದವರನ್ನು ಕಂಪೆನಿ ನೇಮಕಾತಿ ಮಾಡಿಕೊಳ್ಳುತ್ತದೆ ಎನ್ನಲಾಗಿದೆ.


ಸೋಶಿಯಲ್ ಮೀಡಿಯಾ ಮೂಲಕ:
ಕಂಪನಿಗೆ ಅಗತ್ಯವಿರುವ ಅಭ್ಯರ್ಥಿಗಳನ್ನು ಇತರೆ ಉದ್ಯೋಗಿಗಳ ಉಲ್ಲೇಖದ ಮೇಲೆ ಸೇರಿಸಿಕೊಳ್ಳಲಾಗುವುದು ಮತ್ತು ಸಾಮಾಜಿಕ ಮಾಧ್ಯಮಗಳು, ಆನ್‌ಲೈನ್ ತಾಣಗಳ ಮೂಲಕವೂ ನೇಮಕಾತಿ ಮಾಡಲಾಗುವುದು ಎನ್ನಲಾಗಿದೆ.


Click it and Unblock the Notifications








