Home
ಸುದ್ದಿಜಾಲ

ಜಿಯೋ ಎಫೆಕ್ಟ್..ಕೇವಲ 6 ತಿಂಗಳಲ್ಲಿ ಟೆಲಿಕಾಂ ಕಂಪೆನಿಗಳಿಗಾದ ಲಾಸ್ ಎಷ್ಟು ಗೊತ್ತಾ?!!

ಜಿಯೋಯಿಂದಾಗಿ ಮುಂದಿನ ವರ್ಷಗಳಲ್ಲಿ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

By Bhaskar N J

ರಿಲಯನ್ಸ್ ಜಿಯೋಯಿಂದಾಗಿ ಭಾರತದ 9 ಟೆಲಿಕಾಂ ಕಂಪೆನಿಗಳ ಆದಾಯ ಕೇವಲ 18.8 ಲಕ್ಷ ಕೋಟಿ ರೂ.ಗೆ ಕುಸಿತವಾಗಿದೆ ಎಂದು ಹೂಡಿಕೆ ಮಧ್ಯಸ್ಥಿಕೆ ಸಂಸ್ಥೆ ಸಿಎಲ್‍ಎಸ್‍ಎ ಅಂಕಿಅಂಶಗಳನ್ನು ಆಧಾರಿಸಿ ವರದಿ ಮಾಡಿದೆ. ಟೆಲಿಕಾಂ ಕಂಪೆನಿಗಳು ಕೇವಲ 6 ತಿಂಗಳಿನಲ್ಲಿ ಶೇಖಡ 50 ಪರ್ಸೆಂಟ್‌ಗೂ ಹೆಚ್ಚು ನಷ್ಟವನ್ನು ಅನುಭವಿವೆ.!!

ಕಳೆದ 7 ವರ್ಷಗಳಲ್ಲಿಯೇ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳು ಇಷ್ಟು ನಷ್ಟ ಅನುಭವಿಸಿದ್ದು, ಜಿಯೋಯಿಂದಾಗಿ ಮುಂದಿನ ವರ್ಷಗಳಲ್ಲಿ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಡಿಸೆಂಬರ್‌ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಏರ್‌ಟೆಲ್ ನಿವ್ವಳ ಆದಾಯದಲ್ಲಿ ಶೇ. 70 ರಷ್ಟು ಕುಸಿತವಾಗಿದ್ದರೆ, ಐಡಿಯಾದ ಆದಾಯದಲ್ಲಿ ಶೇ. 50 ರಷ್ಟು ಇಳಿಕೆಯಾಗಿತ್ತು ಎಂದು ವರದಿಯಾಗಿದೆ.!!

ಇದರಿಂದ ಏರ್‌ಟೆಲ್ ಮತ್ತು ಐಡಿಯಾ ಕಂಪೆನಿಗಳು ಕ್ರಮವಾಗಿ ಶೇ10.4ರಷ್ಟು ಮತ್ತು ಶೇ10.8 ರಷ್ಟು ನಷ್ಟ ಅನುಭವಿಸಿವೆ.!! ಹಾಗಾದರೆ, ಟೆಲಿಕಾಂನಲ್ಲಿ ಆಗುತ್ತಿರುವ ದೊಡ್ಡ ಬದಲಾವಣೆಗಳೇನು? ಜಿಯೋ ಮತ್ತು ಏರ್‌ಟೆಲ್ ಫೈಟ್ ಹೇಗಿದೆ.? ಇನ್ನು ಭಾರತದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆ ಯಾವುದು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಟೆಲಿಕಾಂ ದರಸಮರ!!

ಟೆಲಿಕಾಂ ದರಸಮರ!!

ಜಿಯೋವನ್ನು ಮಟ್ಟಹಾಕಲು ಏನೆಲ್ಲಾ ಪ್ರಯತ್ನಿಸುತ್ತಿರುವ ಇತರ ಟೆಲಿಕಾಂ ಕಂಪೆನಿಗಳು ಜಿಯೋ ವಿರುದ್ದ ದರಸಮರಕ್ಕೆ ನಿಂತಿವೆ. ಹಾಗಾಗಿ, ಜಿಯೋ ಆಫರ್‌ಗಳಿಗೆ ಎದುರಾಗಿ ಇತರ ಕಂಪೆನಿಗಳು ಆಫರ್ ನೀಡುತ್ತಿವೆ.!!

ಇನ್ನು ಭಾರತದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆ ಯಾವುದು?

ಇನ್ನು ಭಾರತದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆ ಯಾವುದು?

ದೇಶದ ಅತೀ ದೊಡ್ಡ ಟೆಲಿಕಾಂ ಸಂಸ್ಥೆಯನ್ನು ಸ್ಥಾಪಿಸುವ ಸಲುವಾಗಿ ಐಡಿಯಾ ಸೆಲ್ಯುಲರ್ ಮತ್ತು ಬ್ರಿಟಿಷ್ ಟೆಲಿಕಾಂ ಸಂಸ್ಥೆ ವೊಡಾಫೋನ್ ಭಾರತದ ಘಟಕ ವಿಲೀನಗೊಳ್ಳುತ್ತಿರುವ ಬಗ್ಗೆ ಘೋಷಿಸಿತ್ತು. ಐಡಿಯಾ ಹಾಗೂ ವೊಡಾಫೋನ್ ಐಡಿಯಾ ವಿಲೀನದಿಂದ 40 ಕೋಟಿಗೂ ಅಧಿಕ ಗ್ರಾಹಕರ ಭಾರತದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯಾಗಿ ಹೊರಹೊಮ್ಮಲಿದೆ.

ಏರ್‌ಟೆಲ್ ತಂತ್ರವೇನು?

ಏರ್‌ಟೆಲ್ ತಂತ್ರವೇನು?

ಜಿಯೋಗೆ ಸ್ಪರ್ಧೆ ನೀಡಲು ಭಾರಿ ದರಸಮರ ಘೋಷಿಸುತ್ತಿರುವ ಏರ್‌ಟೆಲ್ ಬಂಡವಾಳ ಹೂಡಿಕೆಯಲ್ಲಿಯೂ ಹಿಂದೆ ಬಿದ್ದಿಲ್ಲ. ಫೆಬ್ರವರಿಯಲ್ಲಿ ನಾರ್ವೆಯ ಟೆಲಿನಾರ್ ಕಂಪೆನಿಯ ಭಾರತದ ಘಟಕವನ್ನು ಖರೀದಿಸಿದ್ದ ಏರ್‌ಟೆಲ್, ಸ್ಪೆಕ್ಟ್ರಮ್ ಖರೀದಿ ವಿಚಾರದಲ್ಲಿ ಮುಂದಿದೆ.!!

ಜಿಯೋಗೆ ಗ್ರಾಹಕ ಬಲ!!

ಜಿಯೋಗೆ ಗ್ರಾಹಕ ಬಲ!!

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪ್ರಸ್ತುತ ಜಿಯೋಗೆ 10 ಕೋಟಿ ಗ್ರಾಹಕರಿದ್ದಾರೆ ಎಂದು ಹೇಳಿದ್ದು, ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಗ್ರಾಹಕರನ್ನು ಸಂಪಾದಿಸುವ ಮೂಲಕ ಜಿಯೋ ವಿಶ್ವದಾಖಲೆ ನಿರ್ಮಿಸಿದೆ. ಇದೇ ಜಿಯೋಗೆ ಬಲವಾಗಿದೆ.!!

Best Mobiles in India

English summary
Profitability in the quarter stood at its lowest in last six quarters, CARE said.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+