ಜಿಯೋ ಫೋನ್ ಅಸಲಿ ಬೆಲೆ ಬಯಲು: ಅಂಬಾನಿ ಈ ರೀತಿ ಮಾಡಿದ್ದೇಕೆ?
ಜಿಯೋ ಬಿಡುಗಡೆ ಮಾಡಿರುವ ಜಿಯೋ ಫೋನ್ ಈಗಾಗಲೇ ಗ್ರಾಹಕರ ಕೈ ಸೇರಲು ಪ್ಯಾಕಿಂಗ್ ಆಗಿದ್ದು, ಇನ್ನೇನು ಎರಡು ಮೂರು ದಿನದಲ್ಲಿ ಮನೆ ಬಾಗಿಲಿಗೆ ಬಂದು ಸೇರಲಿದೆ. ಈ ಹಿನ್ನಲೆಯಲ್ಲಿ ಜಿಯೋ ಫೋನಿನ ಹಲವು ಸತ್ಯ ಸಂಗತಿಗಳು ಇಲ್ಲಿದೆ.
ಸಖತ್ ಸದ್ದು ಮಾಡುತ್ತಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ಬಿಡುಗಡೆ ಮಾಡಿರುವ 'ಜಿಯೋ ಫೋನ್' ಈಗಾಗಲೇ ಗ್ರಾಹಕರ ಕೈ ಸೇರಲು ಪ್ಯಾಕಿಂಗ್ ಆಗಿದ್ದು, ಇನ್ನೇನು ಎರಡು ಮೂರು ದಿನದಲ್ಲಿ ಮನೆ ಬಾಗಿಲಿಗೆ ಬಂದು ಸೇರಲಿದೆ. ಈ ಹಿನ್ನಲೆಯಲ್ಲಿ ಜಿಯೋ ಫೋನಿನ ಹಲವು ಸತ್ಯ ಸಂಗತಿಗಳು ಇಲ್ಲಿದೆ.

ಭಾರತೀಯರಿಗೆ ಅತೀ ಕಡಿಮೆ ಬೆಲೆಗೆ 4G ವೇಗದ ಫೋನ್ ನೀಡಬೇಕು ಹಾಗೂ ಈ ಫೋನ್ ಸ್ಮಾರ್ಟ್‌ಫೋನ್ ಮಾದರಿಯಲ್ಲಿಯೂ ಕಾರ್ಯನಿರ್ವಹಿಸಬೇಕು ಎನ್ನುವ ಕಾರಣಕ್ಕೆ ರಿಲಯನ್ಸ್ ಮಾಲೀಕ ಮುಖೇಶ್ ಅಂಬಾನಿ ಉತ್ತಮ ಗುಣಮಟ್ಟದ ಫೋನ್ ಅನ್ನೇ ನಿಮ್ಮ ಕೈಗೆ ಇಟ್ಟಿದ್ದಾರೆ. ರೂ. 1500ಕ್ಕೆ ನಿಮ್ಮ ಕೈಗೆ ಈ ಪೋನ್ ನೀಡುತ್ತಿದ್ದರೂ ಸಹ ಇದರ ಬೆಲೆ ಮಾತ್ರ ಇನ್ನು ಹೆಚ್ಚಿದೆ ಎಂದರೆ ನೀವು ನಂಬಲೇ ಬೇಕು.

ಜಿಯೋ ಫೋನ್ ಅಸಲಿ ಬೆಲೆ?
ಈಗಾಗಲೇ ಜಿಯೋ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಮತ್ತು ಭಾರತೀಯರಲ್ಲಿ ಒಂದು ನಂಬಿಕೆಯನ್ನು ಹುಟ್ಟಿಹಾಕಿರುವ ಅಂಬಾನಿ, ಅದನ್ನು ಉಳಿಸಿಕೊಳ್ಳುವ ಸಲುವಾಗಿ ಉತ್ತಮ ಫೋನ್ ಅನ್ನು ಭಾರತೀಯರ ಕೈಗೆ ನೀಡಿದ್ದಾರೆ. ಮೂಲಗಳ ಪ್ರಕಾರ ಜಿಯೋ ಫೋನಿನ ಬೆಲೆ ರೂ.2.500ಕ್ಕಿಂತಲೂ ಹೆಚ್ಚಾಗಿದೆ ಎನ್ನಲಾಗಿದೆ.

ಹೊರೆ ಹೊತ್ತ ಅಂಬಾನಿ:
ಜಿಯೋ ಫೋನಿನ ಹೆಚ್ಚುವರಿ ಬೆಲೆಯನ್ನು ಜಿಯೋ ಬರಿಸಿದ್ದು, ಜನರಿಗೆ ಹೊರೆಯನ್ನು ಹೊರಿಸಿಲ್ಲ. ಮತ್ತು ಮೂರು ವರ್ಷದ ಬಳಿಕ ಈ ಫೋನ್ ಇಷ್ಟವಾಗದೇ ಹೊದರೆ ಹಣವನ್ನು ಹಿಂತಿರುಗಿಸಲಿದೆ ಸಹ. ಒಟ್ಟಿನಲ್ಲಿ ಉಚಿತ ಫೋನ್ ಎಂದೆ ಹೇಳಬಹುದು. ಮೂಲಗಳ ಪ್ರಕಾರ ಈ ಫೋನ್ ಉತ್ಪಾದನ ಬೆಲೆಯೂ ರೂ. 3000ದ ವರೆಗೂ ಆಗಿದ್ದು, ಜಿಯೋ ಶೇ. 50% ರಷ್ಟು ಹಣವನ್ನು ಪಾವತಿ ಮಾಡುತ್ತಿದೆ.

300 ಮಿಲಿಯನ್ ಬಳಕೆದಾರರ ಗುರಿ:
ಅತೀ ಕಡಿಮೆ ಅವಧಿಯಲ್ಲಿಯೇ 100 ಮಿಲಿಯನ್ ಗಿಂತಲೂ ಹೆಚ್ಚಿನ ಬಳಕೆದಾರರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದ್ದ ಜಿಯೋ ಮುಂದಿನ ಮೂರು ತಿಂಗಳಿನಲ್ಲಿ 300 ಮಿಲಿಯನ್ ಮಂದಿ ಬಳಕೆದಾರರನ್ನು ಹೊಂದುವ ಯೋಜನೆಯನ್ನು ರೂಪಿಸಿದೆ. ಈ ಹಿನ್ನಲೆಯಲ್ಲಿ ಈ ಫೋನ್ ಅನ್ನು ಕಡಿಮೆ ಬೆಲೆಗೆ ನೀಡುವ ಪ್ರಯತ್ನವನ್ನು ಮಾಡುತ್ತಿದೆ.

ಮಾರುಕಟ್ಟೆಯಲ್ಲಿ ಹೊಸ ಭಾಷ್ಯ:
ಈಗಾಗಲೇ ಮೊದಲ ಹಂತವಾಗಿ ಜಿಯೋ 60 ಲಕ್ಷ ಫೋನ್ ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಒಂದೇ ಫೋನ್ ಇಷ್ಟು ಪ್ರಮಾಣದಲ್ಲಿ ಮಾರಾಟವಾಗುತ್ತಿರುವುದು ಎನ್ನಲಾಗಿದೆ. ಈ ಪೋನ್ ಗಳೇಲ್ಲವು ಈಗಾಗಲೇ ಬುಕ್ ಆಗಿರುವವರಿಗೆ ಮಾತ್ರವೇ ದೊರೆಯಲಿದೆ.


Click it and Unblock the Notifications








