Home
ಸುದ್ದಿಜಾಲ

ವಾಟ್ಸ್ಆಪ್‌ಗೂ ಸೆಡ್ಡು ಹೊಡೆದು ಹೊಸ ಆಪ್ ಲಾಂಚ್ ಮಾಡಿತು 'ಜಿಯೋ'!!

ಭಾರತದ ಟೆಲಿಕಾಂ ಪ್ರಪಂಚದಲ್ಲಿ ಚಂಡಮಾರುತ ಸೃಷ್ಟಿಸಿರುವ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಇದೀಗ ಮತ್ತೊಂದು ವಿಶಿಷ್ಟ ಆಪ್ ಅನ್ನು ಬಿಡುಗಡೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. ಡಿಜಿಟಲ್ ಪ್ರಪಂಚದ ಎಲ್ಲಾ ಸೇವೆಗಳನ್ನು ತನ್ನಡಿಯಲ್ಲಿ ತರಲು ಪ್ರಯತ್ನಿಸುತ್ತಿರುವ ಜಿಯೋ, ಹೊಸದಾಗಿ 'ಜಿಯೋ ಗ್ರೂಪ್ ಟಾಕ್' ಎಂಬ ವಿಶೇಷ ಆಪ್ ಅನ್ನು ಪರಿಚಯಿಸಿದೆ.

ಈ 'ಜಿಯೋ ಗ್ರೂಪ್ ಟಾಕ್' ಆಪ್ ಮೂಲಕ ಗುಂಪು ಕಾನ್ಫರೆನ್ಸ್ ಕರೆಗಳನ್ನು ಮಾಡಲು ಬಳಸಬಹುದಾಗಿದ್ದು, ಟೆಕ್ ಬಗ್ಗೆ ಹೆಚ್ಚು ತಿಳಿಯದವರೂ ಸಹ ಸುಲಭವಾಗಿ ಗುಂಪು ಅಥವಾ ಬಹು ಕರೆಗಳಿಗೆ ಆಪ್ ಅನ್ನು ಬಳಸಬಹುದಾಗಿದ್ದು ಎಂದು ಹೇಳಲಾಗಿದೆ. 10 ಜನರಿಗೆ ಒಂದು ಸಮಯದಲ್ಲಿ ಒಂದೇ ಬಾರಿ ಕರೆ ಮಾಡಬಹುದಾದ ವಿಶಿಷ್ಟ ಫೀಚರ್ ಅನ್ನು ಆಪ್‌ನಲ್ಲಿ ನೀಡಲಾಗಿದೆ.

ವಾಟ್ಸ್ಆಪ್‌ಗೂ ಸೆಡ್ಡು ಹೊಡೆದು ಹೊಸ ಆಪ್ ಲಾಂಚ್ ಮಾಡಿತು 'ಜಿಯೋ'!!

ಅಂತರ್ಜಾಲ ಆಧಾರಿತ ಕರೆ ವೈಶಿಷ್ಟ್ಯಗಳನ್ನು ಹೊಂದಿರುವ ಈ 'ಗ್ರೂಪ್ ಟಾಕ್' ಆಪ್ ಮೂಲಕ ಗ್ರಾಹಕರು ಗುಂಪನ್ನು ರಚಿಸುವುದು, ಗ್ರಾಹಕರ ಸಂಪರ್ಕದಿಂದ ಜನರನ್ನು ಸೇರಿಸಿ ಕರೆ ಮಾಡಲು ಮತ್ತು ಗ್ರಾಹಕರು 10 ಜನರನ್ನು ಆಯ್ಕೆ ಮಾಡಿಕೊಳ್ಳಲು ಹಾಗೂ ಕಾನ್ಫರೆನ್ಸ್ ಕರೆಗಳನ್ನು ಮಾಡಬಹುದಾದ ಅನೇಕ ಫೀಚರ್ಸ್‌ಗಳನ್ನು ಒದಗಿಸಿರುವ ಮಾಹಿತಿ ನೀಡಲಾಗಿದೆ.

ವಾಟ್ಸ್ಆಪ್‌ನೊಂದಿಗೆ ಆಪ್ ಅನ್ನು ಹೋಲಿಸಿದರೆ, ಕೇವಲ ಗುಂಪು ಕಾನ್ಫರೆನ್ಸ್ ಕರೆಗಳನ್ನು ಮಾಡಲು ಬಳಸಬಹುದಾದ ಈ ಗ್ರೂಪ್ ಟಾಕ್' ಆಪ್ ವಿಶೇಷವಾಗಿ ಕಾಣುತ್ತಿದೆ. ಆದರೆ, ವಾಟ್ಸ್ಆಪ್‌ನಲ್ಲಿ ಇರುವ ಇನ್ನಿತರ ವೈಶಿಷ್ಟ್ಯಗಳು ಮತ್ತು ವೀಡಿಯೊ ಮತ್ತು ಧ್ವನಿ ಕರೆಗಳ ನಡುವೆ ಬದಲಾಯಿಸಲು ಅನುಮತಿ ಈ ಆಪ್‌ನಲ್ಲಿ ಇಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ವಾಟ್ಸ್ಆಪ್‌ಗೂ ಸೆಡ್ಡು ಹೊಡೆದು ಹೊಸ ಆಪ್ ಲಾಂಚ್ ಮಾಡಿತು 'ಜಿಯೋ'!!

ವಾಟ್ಸ್ಆಪ್‌ನಷ್ಟು ಪೀಚರ್ಸ್ ಇಲ್ಲದಿದ್ದರೂ ಸಹ ಈ ಆಪ್ ಗುಂಪು ಕಾನ್ಫರೆನ್ಸ್ ಮೂಲಕ ವಾಟ್ಸ್ಆಪ್‌ಗೆ ಕಠಿಣ ಸ್ಪರ್ಧೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರೀರ್ವರಿಗೂ ಲಭ್ಯವಿರುವ ಈ ಆಪ್ ಈಗಾಗಲೇ ಪ್ಲೇ ಸ್ಟೋರ್‌ನಲ್ಲಿ ಬೀಡುಬಿಟ್ಟಿದ್ದು, ಆಪ್ ಬಳಸಲು, ಬಳಕೆದಾರರು ಜಿಯೋ ಸಂಖ್ಯೆಯನ್ನು ಹೊಂದಿರಬೇಕು.

Best Mobiles in India

English summary
Group conference calling: Reliance Jio launches GroupTalk App for Android, iOS users. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+