Home
ಸುದ್ದಿಜಾಲ

ಜಿಯೋವಿನ ಹೊಸ ವೈಶಿಷ್ಟ್ಯವಾದ 'ಜಿಯೋ ಸಾರಥಿ' ಉಪಯೋಗವೇನು?

ತಮ್ಮ ಡಿಜಿಟಲ್ ರೀಚಾರ್ಜ್ ಪಯಣದಲ್ಲಿ ಬಳಕೆದಾರರಿಗೆ ನೆರವಾಗಲು ಆಪ್‌ನೊಳಗೆ ರೂಪಿಸಲಾಗಿರುವ 'ಜಿಯೋ ಸಾರಥಿ' ಸಂವಾದಾತ್ಮಕ ಸಹಾಯ ವ್ಯವಸ್ಥೆಯನ್ನು ಪರಿಚಯಿಸುವುದರೊಂದಿಗೆ ಜಿಯೋ ತನ್ನ ಡಿಜಿಟಲ್ ಜೀವನ ದೃಷ್ಟಿಕೋನವನ್ನು ಇನ್ನೊಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದಿದೆ. ಮೈಜಿಯೋ ಆಪ್‌‌ನೊಳಗೆ ಸಂಯೋಜಿಸಲಾಗಿರುವ ಜಿಯೋ ಸಾರಥಿ, ಯಾವುದೇ ಅಡಚಣೆಗಳಿಲ್ಲದ ಡಿಜಿಟಲ್ ರೀಚಾರ್ಜ್‌ಗಳನ್ನು ಸಾಧ್ಯವಾಗಿಸುತ್ತದೆ.

ಜಿಯೋವಿನ ಹೊಸ ವೈಶಿಷ್ಟ್ಯವಾದ 'ಜಿಯೋ ಸಾರಥಿ' ಉಪಯೋಗವೇನು?

ರೀಚಾರ್ಜ್ ಪಯಣದುದಕ್ಕೂ ಜಿಯೋ ಸಾರಥಿ ನಿಮ್ಮ ಜೊತೆಗಿರಲಿದೆ. ಸೂಕ್ತವಾದ ಪ್ಲಾನ್ ಆರಿಸಿಕೊಳ್ಳುವುದರಿಂದ ಪ್ರಾರಂಭಿಸಿ ಹಣ ಪಾವತಿಸುವವರೆಗೆ ಈ ಪಯಣದ ಪ್ರತಿ ಹಂತದಲ್ಲೂ ಜಿಯೋ ಸಾರಥಿ ನಿಮಗೆ ಮಾರ್ಗದರ್ಶನ ಮಾಡಲಿದೆ. ಈ ಪ್ರಕ್ರಿಯೆಯುದ್ದಕ್ಕೂ ನಿಮ್ಮ ಭಾಷೆಯಲ್ಲೇ ಮಾತನಾಡುತ್ತ ನಿಮ್ಮನ್ನು ಮುನ್ನಡೆಸುವ ಜಿಯೋ ಸಾರಥಿ, ಹಣ ಪಾವತಿಗೆ ಸಂಬಂಧಿಸಿದಂತೆ ನಿಮ್ಮ ಕಾರ್ಡ್ ಸಂಖ್ಯೆ ಗುರುತಿಸುವುದು ಹೇಗೆ - ಅದನ್ನು ದಾಖಲಿಸಬೇಕಾದ್ದು ಎಲ್ಲಿ ಎನ್ನುವಂತಹ ವಿವರಗಳನ್ನು ಕಂಡುಕೊಳ್ಳಲೂ ನೆರವಾಗಲಿದೆ.

ಈವರೆಗೆ ಒಂದೂ ಆನ್‌ಲೈನ್ ರೀಚಾರ್ಜ್ ಮಾಡದ ಜಿಯೋ ಬಳಕೆದಾರರಿಗೆ ಈ ಹೊಸ ವೈಶಿಷ್ಟ್ಯವನ್ನು ಬಳಸುವಂತೆ ಸಲಹೆ ಮಾಡಲಾಗುತ್ತದೆ. ಮೊದಲಿಗೆ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಲಭ್ಯವಿರುವ ಡಿಜಿಟಲ್ ನೆರವಿನ ಈ ರೀಚಾರ್ಜ್ ಪಯಣವನ್ನು ದೇಶದೆಲ್ಲೆಡೆಯ ಜಿಯೋ ಬಳಕೆದಾರರ ಉಪಯೋಗಕ್ಕಾಗಿ ಕ್ರಮೇಣ 12 ಪ್ರಾಂತೀಯ ಭಾಷೆಗಳಲ್ಲಿ ಒದಗಿಸಲಾಗುವುದು ಎಂದು ಜಿಯೋ ತಿಳಿಸಿದೆ.

ಜಿಯೋವಿನ ಹೊಸ ವೈಶಿಷ್ಟ್ಯವಾದ 'ಜಿಯೋ ಸಾರಥಿ' ಉಪಯೋಗವೇನು?

ಈ ಆವಿಷ್ಕಾರವು ಈ ಬಗೆಯ ಮೊದಲ ಡಿಜಿಟಲ್ ಉಪಕ್ರಮವಾಗಿದ್ದು, ಡಿಜಿಟಲ್ ನೆರವಿನ ಗ್ರಾಹಕ ಪಯಣಗಳನ್ನು ರೂಪಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಜಿಯೋ ಬಳಕೆದಾರರಲ್ಲಿ ಆನ್‌ಲೈನ್ ಡಿಜಿಟಲ್ ರೀಚಾರ್ಜ್‌ಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಿರುವ ಜಿಯೋ ಸಾರಥಿ, ಡಿಜಿಟಲ್ ನೆರವಿನ ರೀಚಾರ್ಜ್ ಪಯಣದೊಂದಿಗೆ ಅವರಿಗೆ ಅಡೆತಡೆಗಳಿಲ್ಲದ ಸಂಪರ್ಕವನ್ನು ಖಾತರಿಗೊಳಿಸಲಿದೆ. ಡಿಜಿಟಲ್ ರೀಚಾರ್ಜ್ ಪ್ರಕ್ರಿಯೆಯ ಕುರಿತು ಈವರೆಗೂ ಖಚಿತತೆಯಿಲ್ಲದ ಬಳಕೆದಾರರೂ ಡಿಜಿಟಲ್ ರೀಚಾರ್ಜ್ ಬಳಸುವಂತೆ ಗ್ರಾಹಕ ಪಯಣದ ಈ ಆವಿಷ್ಕಾರ ಪ್ರೋತ್ಸಾಹಿಸಲಿದೆ.

ಡಿಜಿಟಲ್ ನೆರವಿನ ರೀಚಾರ್ಜ್ ಪಯಣದೊಂದಿಗೆ ಜಿಯೋ ಡಿಜಿಟಲ್ ಜೀವನ ದೃಷ್ಟಿಕೋನಕ್ಕೆ ಇನ್ನಷ್ಟು ಬಲತುಂಬಿದಾಂತಿಗಿದೆ. ಹಣ ಪಾವತಿಗೆ ಸಂಬಂಧಿಸಿದಂತೆ ನಿಮ್ಮ ಕಾರ್ಡ್ ಸಂಖ್ಯೆ ಗುರುತಿಸುವುದು ಹೇಗೆ ಮತ್ತು ಅದನ್ನು ದಾಖಲಿಸಬೇಕಾದ್ದು ಎಲ್ಲಿ ಎನ್ನುವಂತಹ ವಿವರಗಳನ್ನು ಕಂಡುಕೊಳ್ಳಲು ಜಿಯೋ ಸಾರಥಿ ನೆರವಾಗಲಿದೆ. ಸಾಕಷ್ಟು ಮೊಬೈಲ್ ಬಳಕೆದಾರರು ಈಗಷ್ಟೇ ಆನ್‌ಲೈನ್ ಪ್ರಪಂಚಕ್ಕೆ ಕಾಲಿಡ್ಡುತ್ತಿರುವುದರಿಂದ ಡಿಜಿಟಲ್ ಜಿಯೋ ಸಾರಥಿ ಅವರಿಗೆ ಸಹಾಯವಾಗಬಹುದು.

Best Mobiles in India

English summary
Reliance Jio launches ‘Jio Saarthi’ digital assistant for online recharges: Here’s how it works. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+