ಟೆಲಿಕಾಂ ಇತಿಹಾಸದಲ್ಲೇ ಮೊದಲ ಬಾರಿಗೆ ಜಿಯೋ ನೀಡಿರುವ ಆಚ್ಚರಿಯ ಆಫರ್ ಇದು...!!!!!
ತನ್ನ ಗ್ರಾಹಕರಿಗೆಇತರೆ ಕಂಪನಿಗಳು ನೀಡುತ್ತಿರುವುದಕ್ಕಿಂತಲೂ ಹೆಚ್ಚಿನ ಕೊಡುಗೆಯನ್ನು ನೀಡಲೆಂದೇ ಈ ಆಫರ್ ನೀಡಿದೆ ಎಂದರೆ ತಪ್ಪಾಗುವುದಿಲ್ಲ ಎನ್ನಿಸುತ್ತದೆ.
ಜಿಯೋ ತನ್ನ ಗ್ರಾಹಕರಿಗೆ ಏನಾದರು ಹೊಸ ಆಫರ್ ಗಳನ್ನು ನೀಡಲೇಬೇಕು ಎಂದು ತೀರ್ಮಾನಿಸಿದಂತೆ ಕಾಣುತ್ತಿದೆ. ಈ ಹಿನ್ನಲೆಯಲ್ಲಿ ಮತ್ತೊಂದು ಹೊಸ ಆಫರ್ ಘೋಷನೆ ಮಾಡಿದೆ. ತನ್ನ ಗ್ರಾಹಕರಿಗೆಇತರೆ ಕಂಪನಿಗಳು ನೀಡುತ್ತಿರುವುದಕ್ಕಿಂತಲೂ ಹೆಚ್ಚಿನ ಕೊಡುಗೆಯನ್ನು ನೀಡಲೆಂದೇ ಈ ಆಫರ್ ನೀಡಿದೆ ಎಂದರೆ ತಪ್ಪಾಗುವುದಿಲ್ಲ ಎನ್ನಿಸುತ್ತದೆ.

ಸದ್ಯ ಜಿಯೋ ನೀಡಲು ಹೊರಟಿರುವ ಈ ಹೊಸ ಕೊಡುಗೆಯೂ ಟೆಲಿಕಾಂ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ. ಇದು ಟೆಲಿಕಾಂ ವಲಯದಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಲಿದೆ ಎನ್ನುವುದು ಸದ್ಯದ ಮಾತು. ಇಲ್ಲಿಯ ವರೆಗೂ ಯಾವುದೇ ಟೆಲಿಕಾಂ ಕಂಪನಿಗಳು ಈ ರೀತಿಯ ಕೊಡುಗೆಯನ್ನು ನೀಡಿರಲಿಲ್ಲ ಎನ್ನಲಾಗಿದೆ.

ಜಿಯೋ ಹೊಸ ಆಫರ್ ಹೆಸರು' ಮೈ ವೋಚರ್':
ಇದೇ ಮೊದಲ ಬಾರಿಗೆ ಜಿಯೋ ಪರಿಚಯಿಸುತ್ತಿರುವ ಆಫರ್ ಇದಾಗಿದೆ, 'ಮೈ ವೋಚರ್' ನಲ್ಲಿ ಗ್ರಾಹಕರು ತಮ್ಮ ಬಳಿ ದುಡ್ಡು ಇದ್ದ ಸಂದರ್ಭದಲ್ಲಿ ರೀಚಾರ್ಜ್ ಮಾಡಿಸಿಕೊಂಡು ತಮಗೆ ಬೇಕಾದ ಸಂದರ್ಭದಲ್ಲಿ ಅದನ್ನು ಉಪಯೋಗಿಸಿಕೊಳ್ಳಬಹುದಾಗಿದೆ.

ಈಗ ಖರೀದಿಸಿ ಬೇಕಿದರೆ ನಾಳೆ ಉಪಯೋಗಿಸಿ:
ಜಿಯೋ ಮೈ ವೋಚರ್ ಅನ್ನು ಹೊಸದಾಗಿ ಪರಿಚಯಿಸಿದ್ದು, ಇದರಲ್ಲಿ ಗ್ರಾಹಕರು ತಮಗೆ ಅವಶ್ಯವಿರುವ ಮೊತ್ತದ ರೀಚಾರ್ಜ್ ಮೊತ್ತವನ್ನು ಪಡೆದುಕೊಂಡು ತಮಗೆ ಅವಶ್ಯವಿರುವ ಸಂದರ್ಭದಲ್ಲಿ ರೀಚಾರ್ಜ್ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಸದ್ಯ ಲಭ್ಯವಿರುವ ವೋಚರ್ ಗಳು:
ಸದ್ಯ ಎರಡು ಬೆಲೆಗಳಲ್ಲಿ ಮೈ ವೋಚರ್ ಲಭ್ಯವಿದ್ದು, ರೂ.309 ಮತ್ತು ರೂ.509 ಬೆಲೆಗಳಲ್ಲಿ ಲಭ್ಯವಿದ್ದು, ಈ ವೋಚರ್ ಗಳನ್ನು ನೀವು ಈಗ ಖರೀದಿಸಿ ನಿಮಗೆ ಬೇಕು ಎನ್ನಿಸಿದ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಬಹುದು.

ವೋಚರ್ ಗಿಫ್ಟ್ ಮಾಡಬಹುದು:
ನಿಮ್ಮ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಇಲ್ಲವೇ ನಿಮ್ಮ ಪ್ರೀತಿ ಪಾತ್ರರಿಗೆ ನೀವು ಈ ಮೈ ವೋಚರ್‌ಗಳನ್ನು ಗಿಫ್ಟ್ ಸಹ ಮಾಡಬಹುದಾಗಿದ್ದು, ಜಿಯೋ ಈ ಮೂಲಕ ನಿಮ್ಮ ಬಾಂಧವ್ಯವನ್ನು ವೃದ್ಧಿಸಲು ಸಹಕಾರಿಯಾಗಿದೆ.

ಮತ್ತೇ ಧನ್ ಧನಾ ಧನ್ ಆಫರ್ ಖರೀದಿಸಬಹುದು:
ಇದಲ್ಲದೇ ತನ್ನ ಗ್ರಾಹಕರಿಗೆ ಹೆಚ್ಚಿನ ಲಾಭ ಮಾಡಿಕೊಡುವ ಸಲುವಾಗಿ ಜಿಯೋ ಧನ್ ಧನಾ ಧನ್ ಆಫರ್ ವೋಚರ್ ಸಹ ಪಡೆದುಕೊಳ್ಳಬಹುದಾಗಿದೆ. ಇದನ್ನು ಮೂರು ತಿಂಗಳ ನಂತರ ಬೇಕಿದ್ದರು ಬಳಸುವ ಆಯ್ಕೆಯನ್ನು ಜಿಯೋ ಮಾಡಿಕೊಟ್ಟಿದೆ.

ಜಿಯೋ ಸೇವೆಯ ಲಾಭ ಪಡೆಯಿರಿ:
ಜಿಯೋ ಸದ್ಯ ನೀಡಿರುವ ಸೇವೆಯ ಲಾಭ ಪಡೆಯಬೇಕಾಗಿದೆ, ಈಗಲೇ ಧನ್ ಧನಾ ಧನ್ ಆಪರ್ ಪಡೆದುಕೊಂಡರೆ ಮುಂದೆ ಮತ್ತೆ ಬಳಸಿದಿರೆ ಮತ್ತೇ ಮೂರು ತಿಂಗಳು ಉಚಿತವಾಗಲಿದೆ. ನೋಡಿ ಯೋಚನೆ ಮಾಡಿ.


Click it and Unblock the Notifications








