Home
ಸುದ್ದಿಜಾಲ

Jio: ಸದ್ದಿಲ್ಲದೆ ಎರಡು ಹೊಸ ಪ್ಲಾನ್ ಲಾಂಚ್; 365 ದಿನಗಳ ವ್ಯಾಲಿಡಿಟಿ.. ಬೆಲೆ, ಪ್ರಯೋಜನಗಳೇನು?

ಜಿಯೋ ತನ್ನ ಬಳಕೆದಾರರಿಗೆ ಖುಷಿ ಸುದ್ದಿ ನೀಡಿದೆ. ಸದ್ದಿಲ್ಲದೇ ಎರಡು ಹೊಸ ರಿಚಾರ್ಜ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಅದೂ ಸಹ 84 ಮತ್ತು 365 ದಿನಗಳ ವ್ಯಾಲಿಡಿಟಿಯ ಯೋಜನೆಗಳು. ಹೌದು, ನೀವು ವಾಯ್ಸ್ ಕಾಲ್ ಮತ್ತು ಎಸ್‌ಎಂಎಸ್ ಸೌಲಭ್ಯವುಳ್ಳ ಈ ಎರಡೂ ಹೊಸ ಪ್ಲಾನ್‌ಗಳ ಲಾಭ ಪಡೆಯಬುದು. ಈ ಹೊಸ ಯೋಜನೆಗಳನ್ನು 458 ರೂ. ಮತ್ತು 1,958 ರೂ.ಗಳ ಬೆಲೆಗೆ ಬಿಡುಗಡೆ ಮಾಡಲಾಗಿದೆ. ಬನ್ನಿ, ಈ ಎರಡು ಹೊಸ ರಿಚಾರ್ಜ್‌ ಪ್ಲಾನ್‌ಗಳ ಪ್ರಯೋಜನಗಳೇನು? ಅನ್ನೋದನ್ನು ತಿಳಿಯೋಣ.

ಭಾರತದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಜಿಯೋ (Jio) ಹೆಚ್ಚು ಕಾಲ್‌ ಮತ್ತು ಎಸ್‌ಎಸಂಎಸ್‌ ಬಳಸುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಮೂಲಕ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (TRAI) ಹೊಸ ನಿಯಮಗಳನ್ನು ಜಿಯೋ ಪಾಲಿಸಿದೆ. ಮೊದಲೇ ಹೇಳಿದಂತೆ ಇವು, ವಾಯ್ಸ್‌ ಕಾಲ್ ಮತ್ತು ಎಸ್‌ಎಂಎಸ್‌ ಸೌಲಭ್ಯ ಮಾತ್ರ ಹೊಂದಿರುವ ಪ್ರಿಪೇಯ್ಡ್ ಯೋಜನೆಗಳಾಗಿವೆ. ವಿಶೇಷವೆಂದರೆ, ಈ ಎರಡೂ ಪ್ಲಾನ್‌ಗಳಲ್ಲಿ ಇಂಟರ್ನೆಟ್ ಡೇಟಾ ಸೌಲಭ್ಯ ಇರುವುದಿಲ್ಲ.

Jio: ಎರಡು ಹೊಸ ಪ್ಲಾನ್ ಲಾಂಚ್; 365 ದಿನ ವ್ಯಾಲಿಡಿಟಿ.. ಬೆಲೆ, ಪ್ರಯೋಜನಗಳೇನು?

ಜಿಯೋ 458 ರೂ. ಪ್ರಿಪೇಯ್ಡ್ ಯೋಜನೆ

ಜಿಯೋ 458 ರೂ. ಬೆಲೆಗೆ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಇದು ಕೇವಲ ವಾಯ್ಸ್‌ ಕಾಲ್ ಮಾಡುವ ಬಳಕೆದಾರರಿಗೆ ಸೂಕ್ತವಾಗಿದೆ. ಈ ಪ್ಲಾನ್‌ 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ರೀಚಾರ್ಜ್‌ ಯೋಜನೆಯಲ್ಲಿ ನೀವು ದೀರ್ಘಾವದಿಯ ಕಾಲ್ ಸೌಲಭ್ಯಗಳ ಪ್ರಯೋಜನ ಪಡೆಯಬಹುದು. ಈ ಪ್ಲಾನ್ ಅನ್‌ಲಿಮಿಟೆಡ್ ವಾಯ್ಸ್‌ ಕಾಲ್‌ ಸೌಲಭ್ಯವನ್ನು ಒಳಗೊಂಡಿದೆ. ಇದರಿಂದ ನೀವು ಯಾವುದೇ ನೆಟ್‌ವರ್ಕ್‌ನಲ್ಲಿ ಯಾವುದೇ ಅಡಚಣೆಯಿಲ್ಲದೆ ಮಾತನಾಡಬಹುದು. ಇದಲ್ಲದೆ 1,200 ಎಸ್‌ಎಂಎಸ್‌ ಸಹ ಪಡೆಯಬಹುದು.

ಜಿಯೋ 1,958 ರೂ. ಪ್ರಿಪೇಯ್ಡ್ ಪ್ಲಾನ್

ಜಿಯೋ ಪರಿಚಯಿಸಿರುವ ಎರಡನೇ ಯೋಜನೆ ಇದಾಗಿದೆ. ಇದರ ಬೆಲೆ 1,958 ರೂ. ಆಗಿದೆ. ಇದು ಸಹ ಕೇವಲ ವಾಯ್ಸ್‌ ಕಾಲ್ ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ. ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ನೀವು ವರ್ಷಪೂರ್ತಿ ಯಾವುದೇ ನೆಟ್‌ವರ್ಕ್‌ನಲ್ಲಿ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ಗಳ ಪ್ರಯೋಜನೆ ಪಡೆಯಬಹುದು. ಹಾಗೆಯೇ ಈ ಯೋಜನೆಯಲ್ಲಿ 3,600 ಎಸ್‌ಎಂಎಸ್‌ ಸಹ ಪಡೆಯಬಹುದು. ಇದು ಇಡೀ ವರ್ಷ ನಿಮಗೆ ಎಸ್‌ಎಂಎಸ್‌ ಸೌಲಭ್ಯ ಒದಗಿಸುತ್ತದೆ.

ಒಟ್ಟಾರೆ ಟ್ರಾಯ್ (TRAI) ಆದೇಶದಂತೆ ಜಿಯೋ ಈ ಎರಡೂ ಪ್ಲಾನ್‌ಗಳನ್ನು ಅನಾವರಣಗೊಳಿಸಿದೆ. ಇವು ಕೇವಲ ವಾಯ್ಸ್‌ ಕಾಲ್ ಮತ್ತು ಎಸ್‌ಎಂಎಸ್‌ ಸೌಲಭ್ಯಗಳನ್ನು ಒಳಗೊಂಡಿದೆ. ಕಡಿಮೆ ಇಂಟರ್ನೆಟ್ ಡೇಟಾ ಬಳಸುವ ಅಥವಾ ವಾಯ್ಸ್‌ ಕಾಲ್ ಮತ್ತು ಎಸ್‌ಎಂಎಸ್‌ ಸೌಲಭ್ಯ ಮಾತ್ರ ಬಯಸುವ ಗ್ರಾಹಕರಿಗೆ ಅನುಕೂಲ ಮಾಡಿಕೊಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಇಂಟರ್ನೆಟ್ ಡೇಟಾದ ಕಿರಿಕಿರಿ ಇಲ್ಲದೆ ವಾಯ್ಸ್‌ ಕಾಲ್‌ ಮತ್ತು ಎಸ್‌ಎಂಎಸ್‌ ಮಾತ್ರ ಬಯಸುವ ಗ್ರಾಹಕರಿಗೆ ಮಾತ್ರ ಈ ಯೋಜನೆಯಾಗಿದೆ. ಜಿಯೋದ ಈ ಪ್ಲಾನ್‌ ಮಿತವ್ಯಯ ಮತ್ತು ಯಾವುದೇ ಚಿಂತೆಯಿಲ್ಲದೆ ಕಾಲ್‌ ಅನುಭವ ಒದಗಿಸುತ್ತದೆ.

ಜಿಯೋ ಬಳಕೆದಾರರಿಗೆ ಭರ್ಜರಿ ಉಡುಗೊರೆ

ಜಿಯೋ ಬಳಕೆದಾರರಿಗೆ ಒಂದು ಸಿಹಿ ಸುದ್ದಿ ಇದೆ. ನೀವು ಜನವರಿ 26ರ ಮೊದಲು ಜಿಯೋದ 1,029 ರೂ. ಪ್ಲಾನ್ ಖರೀದಿಸಿದರೆ, ನಿಮಗೆ 84 ದಿನಗಳ ಯೋಜನೆ ಸಿಗಲಿದೆ. ನೀವು ಅಮೆಜಾನ್ ಪ್ರೈಮ್‌ಗೆ ಉಚಿತ ಚಂದಾದಾರಿಕೆ ಮತ್ತು ಅನ್‌ಲಿಮಿಟೆಡ್ ವಾಯ್ಸ್‌ ಕಾಲ್ ಸಹ ಪಡೆಯಬಹುದು. ಈ ಯೋಜನೆಯಲ್ಲಿ ನೀವು, ಒಟ್ಟು 168 GB ಡೇಟಾವನ್ನು ಪಡೆಯಬಹುದು. ನೀವು ಅನ್‌ಲಿಮಿಟೆಡ್ ವಾಯ್ಸ್‌ ಕಾಲ್‌ ಮತ್ತು ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳ ಲಾಭ ಪಡೆಯಬಹುದು.

Best Mobiles in India

English summary
Reliance Jio launches prepaid voice and sms only plans: check validity and benefits
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+