ಜಿಯೋ 10ನೇ ವರ್ಷ: ಗ್ರಾಹಕರಿಗೆ ಭರ್ಜರಿ ಕೊಡುಗೆ, 1 ತಿಂಗಳು ಉಚಿತ ಸೇವೆ!
ಭಾರತದ ಪ್ರಮುಖ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ತನ್ನ 9 ವರ್ಷಗಳ ಯಶಸ್ವಿ ಪ್ರಯಾಣವನ್ನು ಪೂರೈಸಿ 10ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಮಹತ್ವದ ಮೈಲಿಗಲ್ಲಿನ ಸಂದರ್ಭದಲ್ಲಿ, ಜಿಯೋದ ಅಧ್ಯಕ್ಷರಾದ ಆಕಾಶ್ ಅಂಬಾನಿ ಅವರು 50 ಕೋಟಿಗೂ ಹೆಚ್ಚು ಬಳಕೆದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಡಿಜಿಟಲ್ ಇಂಡಿಯಾದ ಕನಸು ನನಸಾಗಿಸುವಲ್ಲಿ ಜಿಯೋ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ, ಜಿಯೋ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲು ಕಂಪನಿಯು ಹಲವು ಹೊಸ ಯೋಜನೆಗಳನ್ನು ಪ್ರಕಟಿಸಿದೆ. ಈ ಆಫರ್‌ಗಳು ವಾರಾಂತ್ಯದ ಕೊಡುಗೆಗಳು, ಒಂದು ತಿಂಗಳ ವಿಶೇಷ ಯೋಜನೆಗಳು ಮತ್ತು ಒಂದು ವರ್ಷದ ಅವಧಿಯ ಸರ್ಪ್ರೈಸ್‌ಗಳನ್ನು ಒಳಗೊಂಡಿವೆ. ಈ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
ಜಿಯೋ ಸಿಮ್ ಬಳಕೆದಾರರಿಗಾಗಿ ಮೂರು ವಿಧದ ಆಕರ್ಷಕ ಯೋಜನೆಗಳನ್ನು ಪರಿಚಯಿಸಲಾಗಿದೆ. ಮೊದಲನೆಯದಾಗಿ, 'ಆನಿವರ್ಸರಿ ವೀಕೆಂಡ್ ಆಫರ್' ಅಡಿಯಲ್ಲಿ, ಈ ಸೆಪ್ಟೆಂಬರ್ 5 ರಿಂದ 7 ರ ನಡುವೆ, ಎಲ್ಲಾ 5G ಬಳಕೆದಾರರಿಗೆ ಅನಿಯಮಿತ 5G ಡೇಟಾ ಲಭ್ಯವಿರುತ್ತದೆ. ಅಂದರೆ, ನೀವು ಕಡಿಮೆ ಬೆಲೆಯ ಪ್ಲಾನ್ ಹೊಂದಿದ್ದರೂ ಅಥವಾ ಅನಿಯಮಿತ 5G ರೀಚಾರ್ಜ್ ಮಾಡಿಸದೇ ಇದ್ದರೂ ಈ ಮೂರು ದಿನಗಳ ಕಾಲ ಉಚಿತವಾಗಿ 5G ಡೇಟಾ ಬಳಸಿಕೊಳ್ಳಬಹುದು. ಅದೇ ರೀತಿ, 4G ಸ್ಮಾರ್ಟ್‌ಫೋನ್ ಬಳಕೆದಾರರು ಕೇವಲ ₹39 ಮೌಲ್ಯದ ಡೇಟಾ ಆಡ್-ಆನ್ ಆಯ್ಕೆ ಮಾಡಿಕೊಂಡು ದಿನಕ್ಕೆ 3 GB ಉಚಿತ 4G ಡೇಟಾ ಪಡೆಯಬಹುದು.
ಎರಡನೆಯ ಕೊಡುಗೆಯು 'ಒಂದು ತಿಂಗಳ ಆಚರಣೆಯ ಯೋಜನೆ'ಯಾಗಿದೆ. ಇದು ₹349 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಯೋಜನೆಗಳನ್ನು ಹೊಂದಿರುವ ಗ್ರಾಹಕರಿಗೆ ಅನ್ವಯಿಸುತ್ತದೆ. ಸೆಪ್ಟೆಂಬರ್ 5 ರಿಂದ ಅಕ್ಟೋಬರ್ 5 ರ ಅವಧಿಯಲ್ಲಿ, ಈ ಬಳಕೆದಾರರಿಗೆ ದಿನಕ್ಕೆ 2 GB ಅಥವಾ ಅದಕ್ಕಿಂತ ಹೆಚ್ಚಿನ ಡೇಟಾ ಹಾಗೂ ಅನಿಯಮಿತ 5G ಸೌಲಭ್ಯ ದೊರೆಯಲಿದೆ. ಇದರ ಜೊತೆಗೆ, ₹3,000 ಮೌಲ್ಯದ ವೋಚರ್‌ಗಳು, ಜಿಯೋ ಫೈನಾನ್ಸ್‌ನಿಂದ ಜಿಯೋ ಗೋಲ್ಡ್ ಮೇಲೆ ಹೆಚ್ಚುವರಿ 2% ಡಿಜಿಟಲ್ ಚಿನ್ನ, ಒಂದು ತಿಂಗಳ ಜಿಯೋ ಹಾಟ್‌ಸ್ಟಾರ್ ಮತ್ತು 'ಜಿಯೋ ಸಾವನ್ ಪ್ರೊ' ಚಂದಾದಾರಿಕೆ ಲಭ್ಯವಿದೆ. ಅಲ್ಲದೆ, Zomato Gold 3 ತಿಂಗಳ ಚಂದಾದಾರಿಕೆ ಹಾಗೂ Netmeds ನಲ್ಲಿ ಮೊದಲ 6 ತಿಂಗಳುಗಳ ಡಿಸ್ಕೌಂಟ್ ಸಿಗಲಿದೆ. ಪೋಸ್ಟ್‌ಪೇಯ್ಡ್ ಗ್ರಾಹಕರಿಗೂ ಈ ಪ್ರಯೋಜನಗಳು ಲಭ್ಯವಿದ್ದು, ₹349 ಕ್ಕಿಂತ ಕಡಿಮೆ ಬೆಲೆಯ ಬಳಕೆದಾರರು ₹100 ಪ್ಯಾಕ್ ಸೇರಿಸುವ ಮೂಲಕ ಈ ಕೊಡುಗೆ ಪಡೆಯಬಹುದು.

ಮೂರನೆಯ ಪ್ರಮುಖ ಕೊಡುಗೆ 'ವಾರ್ಷಿಕೋತ್ಸವದ ವರ್ಷಾಚರಣೆ' ಯಾಗಿದೆ. ಇದರ ಅಡಿಯಲ್ಲಿ, ಗ್ರಾಹಕರು ಸಮಯಕ್ಕೆ ಸರಿಯಾಗಿ 12 ಮಾಸಿಕ ₹349 ರೀಚಾರ್ಜ್‌ಗಳನ್ನು ಪೂರ್ಣಗೊಳಿಸಿದರೆ, ಅವರಿಗೆ 13ನೇ ತಿಂಗಳ ಸೇವೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ. ಅಂದರೆ, ಒಂದು ವರ್ಷದ ರೀಚಾರ್ಜ್ ಪೂರ್ಣಗೊಳಿಸಿದವರಿಗೆ ಒಂದು ತಿಂಗಳ ಉಚಿತ ಸೇವೆ ದೊರೆಯಲಿದೆ ಎಂದು ಜಿಯೋ ತಿಳಿಸಿದೆ.
ಜಿಯೋ ಹೋಮ್ ಬಳಕೆದಾರರಿಗೂ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದೆ. ಸೆಪ್ಟೆಂಬರ್ 5 ರಿಂದ ಅಕ್ಟೋಬರ್ 5 ರ ಅವಧಿಯಲ್ಲಿ, ಹೊಸ ಜಿಯೋ ಹೋಮ್ ಸಂಪರ್ಕವನ್ನು ಕೇವಲ ₹1,200 ಕ್ಕೆ ಪಡೆಯಬಹುದು. ಈ ಪ್ಯಾಕೇಜ್‌ನಲ್ಲಿ 1000+ ಟಿವಿ ಚಾನೆಲ್‌ಗಳು, 30 Mbps ವೇಗದ ಅನಿಯಮಿತ ಡೇಟಾ, 12+ OTT ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ (ಜಿಯೋ ಹಾಟ್‌ಸ್ಟಾರ್ ಸೇರಿದಂತೆ), Wi-Fi 6 ರೂಟರ್ ಮತ್ತು 4K ಸ್ಮಾರ್ಟ್ ಸೆಟ್-ಟಾಪ್ ಬಾಕ್ಸ್, 2 ತಿಂಗಳ Amazon Prime Lite ಚಂದಾದಾರಿಕೆ, ಮತ್ತು ₹3,000 ಮೌಲ್ಯದ ವೋಚರ್‌ಗಳು ಸೇರಿವೆ. ಈ ಎಲ್ಲಾ ಕೊಡುಗೆಗಳು ಜಿಯೋ ತನ್ನ ಬಳಕೆದಾರರಿಗೆ ನೀಡುತ್ತಿರುವ ಕೃತಜ್ಞತೆಯ ಸಂಕೇತಗಳಾಗಿವೆ. ಹೆಚ್ಚಿನ ವಿವರಗಳಿಗಾಗಿ ನೀವು www.jio.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು.


Click it and Unblock the Notifications








