Home
ಸುದ್ದಿಜಾಲ

ಜಿಯೋ 5G ಗ್ರಾಹಕರಿಗೆ ಮತ್ತೊಂದು ಬಂಪರ್ ಆಫರ್: ಮಿಸ್ ಮಾಡದೇ ನೋಡಿ!

ಭಾರತೀಯ ಬಳಕೆದಾರರನ್ನು ಆಕರ್ಷಿಸಲು AI ಕಂಪನಿಗಳು ವಿವಿಧ ಆಫರ್‌ಗಳನ್ನು ಘೋಷಿಸುತ್ತಿರುವ ಈ ಸಮಯದಲ್ಲಿ, ರಿಲಯನ್ಸ್ ಜಿಯೋ ತನ್ನ ಗ್ರಾಹಕರ ದೊಡ್ಡ ಸರ್ಪ್ರೈಸ್ ನೀಡಿದೆ. ಇದೀಗ ಎಲ್ಲಾ ರಿಲಯನ್ಸ್ ಜಿಯೋ ಗ್ರಾಹಕರು 35,100 ರೂ. ಮೌಲ್ಯದ Gemini Pro Plan ಅನ್ನು ಸಹ ಉಚಿತವಾಗಿ ಪಡೆಯಲಿದ್ದಾರೆ ಎಂದು ಜಿಯೋ ಘೋಷಿಸಿದ್ದು, ಗೂಗಲ್ ಜೊತೆ ಸೇರಿ ತನ್ನ AI ಪರಿಸರ ವ್ಯವಸ್ಥೆಯನ್ನು ಗಮನಾರ್ಹವಾಗಿ ವಿಸ್ತರಿಸಲು ಮುಂದಾಗಿದೆ. ಇದರಿಂದ ಇತ್ತೀಚೆಗೆ ಬಿಡುಗಡೆಗೊಂಡ ಗೂಗಲ್‌ನ Gemini 3 AI ಮಾದರಿಯು ಸಹ ಉಚಿತವಾಗಿ ಲಭ್ಯವಾಗುತ್ತಿದೆ. ಹಾಗಾದರೆ, ಜಿಯೋ ಬಳಕೆದಾರರು ಈ ಕೊಡುಗೆಯನ್ನು ಸಕ್ರಿಯಗೊಳಿಳಿಸುವುದು ಹೇಗೆ?, Gemini 3 AI ಮಾದರಿ ಏಕೆ ಗಮನಸೆಳೆಯುತ್ತಿದೆ ಎಂಬುದನ್ನು ನೋಡೋಣ ಬನ್ನಿ.

ಜಿಯೋ ಗ್ರಾಹಕರಿಗೆ ಉಚಿತ Gemini Pro Plan : ಪೂರ್ಣ ಮಾಹಿತಿ
ಜಿಯೋ ಈಗ ದೇಶದಲ್ಲಿನ ತನ್ನ ಪ್ರತಿ Unlimited 5G ಬಳಕೆದಾರರಿಗೆ 18 ತಿಂಗಳ ಕಾಲ ಉಚಿತ Gemini Pro Plan ನೀಡುವುದಾಗಿ ಪ್ರಕಟಿಸಿದೆ. ಈ ಯೋಜನೆಯಲ್ಲಿ ಗೂಗಲ್‌ ಇತ್ತೀಚೆಗೆ ಪರಿಚಯಿಸಿರುವ ಗೂಗಲ್‌ನ Gemini 3 AI ಮಾದರಿಯ ಸೇವೆ ದೊರೆಯಲಿದೆ. ಕಂಪನಿಯ ಪ್ರಕಾರ, ಈ ಯೋಜನೆಯ ಮಾರುಕಟ್ಟೆ ಮೌಲ್ಯ ಸುಮಾರು ರೂ. 35,100, ಆದರೆ ಜಿಯೋ ಬಳಕೆದಾರರಿಗೆ ಇದು ಪೂರ್ಣ ಉಚಿತವಾಗಿರುತ್ತದೆ.

ಜಿಯೋ 5G ಗ್ರಾಹಕರಿಗೆ ಮತ್ತೊಂದು ಬಂಪರ್ ಆಫರ್: ಮಿಸ್ ಮಾಡದೇ ನೋಡಿ!

MyJio ಆಪ್ ಮೂಲಕ ಸುಲಭವಾಗಿ ಸಕ್ರಿಯಗೊಳಿಸಬಹುದು.
ಜಿಯೋ ಗ್ರಾಹಕರು 2025ರ ನವೆಂಬರ್ 19ರಿಂದ MyJio ಆಪ್‌ನ 'Claim Now' ಆಯ್ಕೆಯ ಮೂಲಕ ಈ ಉಚಿತ Gemini Pro Plan ಯೋಜನೆಯನ್ನು ಸಕ್ರಿಯಗೊಳಿಸಬಹುದು.ಈ ಸೇವೆ ಪಡೆಯಲು ಜಿಯೀ ಗ್ರಾಹಕರುಸಕ್ರಿಯ Jio SIM ಜೊತೆಗೆ Unlimited 5G ಪ್ಲ್ಯಾನ್ ಹೊಂದಿರಬೇಕು. ಈ ಯೋಜನೆಗಳಿಗೆ ಸಕ್ರಿಯಗೊಳಿಸಿದ ಬಳಿಕ, ಗ್ರಾಹಕರು Gemini 3 ನಲ್ಲಿನ ಎಲ್ಲಾ ಪ್ರೊ-ಮಟ್ಟದ ಸಾಮರ್ಥ್ಯಗಳನ್ನು ಬಳಸಬಹುದು.

Gemini 3: ಗೂಗಲ್‌ನ ಅತ್ಯಾಧುನಿಕ AI ಸರಣಿ
ಗೂಗಲ್ ಇತ್ತೀಚೆಗಷ್ಟೇ ಪರಿಚಯಿಸಿದ Gemini 3 Pro ಮತ್ತು Gemini 3 Deep Think, ಕಂಪನಿಯ ಅತ್ಯಂತ ಬಲವಾದ AI ಮಾದರಿ ಎಂದು ಪರಿಗಣಿಸಲಾಗಿದೆ. ಈ ಹೊಸ ಅಪ್‌ಡೇಟ್‌ಗಳು ಈಗ reasoning ಮತ್ತು problem-solving ಸಾಮರ್ಥ್ಯ, ನಿಖರ coding ಮತ್ತು mathematics ಉತ್ತರಗಳು ಹಾಗೂconversational AI ಗುಣಮಟ್ಟವನ್ನು ಹೊಂದಿವೆ. ಅಂದರೆ, Gemini 3 ಈಗ ಸ್ವಯಂ ಕಾರ್ಯನಿರ್ವಹಿಸುವ AI ಏಜೆಂಟ್ ಸಾಮರ್ಥ್ಯಗಳನ್ನು ಒಳಗೊಂಡಿದೆ.

ಜಿಯೋ 5G ಗ್ರಾಹಕರಿಗೆ ಮತ್ತೊಂದು ಬಂಪರ್ ಆಫರ್: ಮಿಸ್ ಮಾಡದೇ ನೋಡಿ!

ಗೂಗಲ್‌ನ ಆಂತರಿಕ ಪರೀಕ್ಷೆಗಳ ಪ್ರಕಾರ, Gemini 3 Pro ತನ್ನ ಹಿಂದಿನ ಆವೃತ್ತಿಯನ್ನು ಮಾತ್ರವಲ್ಲ, OpenAI GPT-5.1 ಮತ್ತು Claude 4.5 Sonnet ಮಾದರಿಗಳಿಗಿಂತ ಹಲವು ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿಸಿದೆ. Deep Think ಪ್ರಸ್ತುತ ಸುರಕ್ಷತಾ ಪರೀಕ್ಷಾ ಹಂತದಲ್ಲಿದ್ದು, ಸಾರ್ವಜನಿಕ ಬಳಕೆಗೆ ಇನ್ನೂ ಲಭ್ಯವಿಲ್ಲ. ( ನಾವು ಈಗಾಗಲೇ Google Gemini 3 ಪ್ರಮುಖ ಅಪ್‌ಡೇಟ್‌ಗಳ ಕುರಿತು ಲೇಖನವನ್ನು ಪ್ರಕಟಿಸಿದ್ದೇವೆ. ಈ ಕುರಿತ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ)

ಜಿಯೋ ಈ ಹೊಸ ಕೊಡುಗೆಯ ಮೂಲಕ, ಭಾರತದಲ್ಲಿ ಮುಂದಿನ ತಲೆಮಾರಿನ AI ಉಪಕರಣಗಳ ಬಳಕೆಯನ್ನು ಸಾಮಾನ್ಯ ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿದೆ. ವಿದ್ಯಾರ್ಥಿಗಳು, ಸ್ಟಾರ್ಟ್ಅಪ್‌ಗಳು, ಉದ್ಯಮಿಗಳು, ಟೆಕ್‌ ತಜ್ಞರು ಮತ್ತು ಕ್ರಿಯೇಟರ್‌ಗಳು ಎಲ್ಲರೂ Gemini 3 ನ ಸಾಮರ್ಥ್ಯಗಳಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದೆ .ಜಿಯೋ ನೀಡಿರುವ ಈ 18 ತಿಂಗಳ Gemini 3 ಉಚಿತ ಪ್ರವೇಶವು, ದೇಶದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಮತ್ತಷ್ಟು ವೇಗದಲ್ಲಿ ವಿಸ್ತರಿಸುವ ನಿರೀಕ್ಷೆ ಇದೆ. AI ಸೇವೆಗಳ ಭಾರೀ ಬಳಕೆಯ ದಿಕ್ಕಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಬಹುದು. ಏನಂತಿರಾ?

Best Mobiles in India

English summary
Reliance Jio has expanded access to the Gemini Pro Plan valued at ₹35,100 making it available completely free for all users on its unlimited 5G plans. check here for more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+