Home
ಸುದ್ದಿಜಾಲ

ವಿವೋ ಫೋನ್ ಜೊತೆಗೆ ಜಿಯೋ 10,000rs ವರೆಗಿನ ಬೆನಿಫಿಟ್

By Gizbot Bureau

ಟೆಲಿಕಾಂ ಸೇವಾ ಪ್ರೊವೈಡರ್ ಆಗಿರುವ ರಿಲಯನ್ಸ್ ಜಿಯೋ ಇದೀಗ ಜಿಯೋ ವಿವೋ ಕ್ರಿಕೆಟ್ ಆಫರ್ ನ್ನು ಪ್ರಕಟಿಸಿದ್ದು 10,000 ರುಪಾಯಿವರೆಗಿನ ಬೆನಿಫಿಟ್ ನ್ನು ನೀಡುತ್ತಿದೆ. ಹೌದು ಮಾರ್ಚ್ 6 ರಿಂದ ಜೂನ್ 3ರ ವರೆಗೆ ವಿವೋ 15 ಮತ್ತು ವಿವೋ ವಿ15ಪ್ರೋ ಖರೀದಿದಾರರಿಗೆ ಈ ಬೆನಿಫಿಟ್ ಲಭ್ಯವಾಗಲಿದೆ.

ವಿವೋ ಫೋನ್ ಜೊತೆಗೆ ಜಿಯೋ 10,000rs ವರೆಗಿನ ಬೆನಿಫಿಟ್

10,000 ರುಪಾಯಿ ಮತ್ತು 6,000 ರುಪಾಯಿ ಬೆನಿಫಿಟ್ ನ್ನು ಕ್ಯಾಷ್ ಬ್ಯಾಕ್ ರೂಪದಲ್ಲಿ ಗ್ರಾಹಕರಿಗೆ ಕ್ರೆಡಿಟ್ ಮಾಡಲಾಗುತ್ತದೆ. ಅದು ಜಿಯೋ ರೀಚಾರ್ಜ್ ಮಾಡಿದ ನಂತರ ಲಭ್ಯವಾಗುತ್ತದೆ. ಪೇಟಿಎಂ,ಬೆಹರೋಝ್ ಬಿರಿಯಾನಿ, ಫಾಸೋಸ್, ಮಿಂತ್ರಾ, ಫಸ್ಟ್ ಕ್ರೈ, ಝೂಮ್ ಕಾರ್ ಮತ್ತು ಕ್ಲಿಯರ್ ಟ್ರಿಪ್ ಮತ್ತು ಇತ್ಯಾದಿ ಸಹಭಾಗಿಗಳ ಕೂಪನ್ ರೂಪದಲ್ಲಿ ಈ ಕ್ಯಾಷ್ ಬ್ಯಾಕ್ ಸಿಗುತ್ತದೆ.

Rs 6,000 ಕ್ಯಾಷ್ ಬ್ಯಾಕ್ ಬೆನಿಫಿಟ್:

Rs 6,000 ಕ್ಯಾಷ್ ಬ್ಯಾಕ್ ಬೆನಿಫಿಟ್:

ರುಪಾಯಿ 6,000 ಕ್ಯಾಷ್ ಬ್ಯಾಕ್ 150 ರುಪಾಯಿ ಫಾರ್ಮ್ ಗಳು 299 ರುಪಾಯಿ ಪ್ರೀಪೇಯ್ಡ್ ಪ್ಲಾನ್ ಗಳ 40 ರೀಚಾರ್ಜ್ ಸೈಕಲ್ ಗಳ ರೂಪದಲ್ಲಿ ಲಭ್ಯವಿರುತ್ತದೆ. ಅಂದರೆ ಪ್ರತಿ ಬಾರಿ 299 ರುಪಾಯಿಯ ಪ್ರೀಪೇಯ್ಡ್ ಪ್ಲಾನ್ ನ್ನು ರೀಚಾರ್ಜ್ ಮಾಡಿದಾಗ ಜಿಯೋ ಬಳಕೆದಾರರಿಗೆ 150 ರುಪಾಯಿಯ ರಿಯಾಯಿತಿ ಸಿಗುತ್ತದೆ. ಇದು ಮೈ ಜಿಯೋ ಆಪ್ ನಲ್ಲಿ ರೀಚಾರ್ಜ್ ಮಾಡಿದಾಗ ಲಭ್ಯವಾಗುತ್ತದೆ.

ಈ ಕೂಪನ್ ಗಳನ್ನು ಅರ್ಹ ಡಿವೈಸ್ ಗಳಲ್ಲಿ ಅಂದರೆ ವಿವೋ ವಿ15 ಮತ್ತು ವಿವೋ 15 ಪ್ರೋ ಗಳಲ್ಲಿ ಜುಲೈ 31,2022 ರ ವರೆಗೆ ಅಪ್ಲೈ ಮಾಡುವುದಕ್ಕೆ ಲಭ್ಯವಿರುತ್ತದೆ. ಗಮನಿಸಬೇಕಾಗಿರುವ ಅಂಶವೇನೆಂದರೆ ಪ್ರತಿ 299 ಪ್ಲಾನ್ 3ಜಿಬಿ ಪ್ರತಿದಿನ 4ಜಿ ಡಾಟಾ 28 ದಿನಗಳ ಅವಧಿಗೆ ಲಭ್ಯವಾಗುತ್ತದೆ. ಅಂತಹ 40 ರೀಚಾರ್ಜ್ ಗಳ ನಂತರ ಬಳಕೆದಾರರಿಗೆ 3,360ಜಿಬಿ ಅಂದರೆ 3.3ಟಿಬಿ ಡಾಟಾ ಸಿಗುತ್ತದೆ ಎಂದು ಜಿಯೋ ತಿಳಿಸಿದೆ. ಇದು ಜಿಯೋ ವಿವೋ ಕ್ರಿಕೆಟರ್ ಆಫರ್ ನ ಭಾಗವಾಗಿರುತ್ತದೆ.

ಉಳಿದ 4,000 ರುಪಾಯಿ ಬೆನಿಫಿಟ್:

ಉಳಿದ 4,000 ರುಪಾಯಿ ಬೆನಿಫಿಟ್:

ಪೇಟಿಎಂ ಬಳಸಿ ಗ್ರಾಹಕರು 1,000 ರುಪಾಯಿಯ ಕ್ಯಾಷ್ ಬ್ಯಾಕ್ ಆಫರ್ ನ್ನು ಫ್ಲೈಟ್ ಟಿಕೆಟ್ ಬುಕ್ಕಿಂಗ್ ನಲ್ಲಿ ಪಡೆಯಲಿದ್ದಾರೆ.ಆದರೆ ಟಿಕೆಟ್ ನ ಕನಿಷ್ಟ ಮೊತ್ತ 3,000 ರುಪಾಯಿ ಆಗಿರಬೇಕು. ಇದು ಎಪ್ರಿಲ್ 30,2019 ರ ವರೆಗೆ ವ್ಯಾಲಿಡ್ ಆಗಿರುತ್ತದೆ. ಇನ್ನು ಬೆಹರೋಝ್ ಬಿರಿಯಾನಿ, ಫಾಸೂಸ್ ಎರಡರಲ್ಲೂ ಕೂಡ ಗರಿಷ್ಟ 100 ರುಪಾಯಿ ವರೆಗೆ ರಿಯಾಯಿತಿ ಇದ್ದು ಮೇ 30,2019ರ ವರೆಗಿನ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.

ಮಿಂತ್ರಾ ಬಳಕೆದಾರರು 150 ರುಪಾಯಿಯ ರಿಯಾಯಿತಿಯನ್ನು ಆಯ್ದ ಕೆಲವು ಖರೀದಿಯಲ್ಲಿ ಪಡೆಯಲಿದ್ದಾರೆ ಮತ್ತು ಅದರ ಕನಿಷ್ಟ ಮೊತ್ತ 600 ರುಪಾಯಿ ಆಗಿರಬೇಕು. ಇದರ ಅವಧಿ ಮೇ 30,2019 ಆಗಿರಲಿದೆ. ಫಸ್ಟ್ ಕ್ರೈ ನಲ್ಲಿ 500 ರುಪಾಯಿಯ ರಿಯಾಯಿತಿ ಸಿಗುತ್ತದೆ ಆದರೆ ಅದಕ್ಕಾಗಿ ನೀವು ಕನಿಷ್ಟ 1500 ರುಪಾಯಿ ಖರೀದಿಸಬೇಕು. ಇದು ಮೇ 31,2019 ರ ವರೆಗೆ ಲಭ್ಯವಿರುತ್ತದೆ. ಝೂಮ್ ಕಾರ್ ನಲ್ಲಿ ಬಳಕೆದಾರರಿಗೆ 1,200 ಅಥವಾ 20% ರಿಯಾಯಿತಿ ಇರುತ್ತದೆ. ಇದು ಮೇ30 ರ ವರೆಗೆ ಅವಧಿಯನ್ನು ಹೊಂದಿರುತ್ತದೆ.

ಕ್ಯಾಷ್ ಬ್ಯಾಕ್

ಕ್ಯಾಷ್ ಬ್ಯಾಕ್

ಕೊನೆಯದಾಗಿ ಕ್ಲಿಯರ್ ಟ್ರಿಪ್ ನಲ್ಲಿ ಡೊಮೆಸ್ಟಿಕ್ ಹೊಟೆಲ್ ಬುಕ್ಕಿಂಗ್ ನಲ್ಲಿ ಬಳಕೆದಾರರು 750 ರುಪಾಯಿವರೆಗೆ ಕ್ಯಾಷ್ ಬ್ಯಾಕ್ ಪಡೆಯಲಿದ್ದಾರೆ ಮತ್ತು 1,000 ರುಪಾಯಿ ಅಂತರಾಷ್ಟ್ರೀಯ ಹೊಟೆಲ್ ಬುಕ್ಕಿಂಗ್ ನಲ್ಲಿ ರಿಯಾಯಿತಿ ಇರುತ್ತದೆ. ಇದು ಮೇ 30,2018 ರ ವರೆಗೆ ರಿಯಾಯಿತಿ ಹೊಂದಿರುತ್ತದೆ.

Best Mobiles in India

English summary
Reliance Jio offering benefits of up to Rs 10,000 on purchase of these two Vivo phones
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+