Home
ಸುದ್ದಿಜಾಲ

ಮುಗಿತು ಏರ್‌ಟೆಲ್ ಕಥೆ: ಅಂಬಾನಿಯಿಂದ ಜಿಯೋ ಬಳಕೆದಾರರಿಗೆ 100Mbps ವೇಗದ 1300 GB ಉಚಿತ ಡೇಟಾ...!

By Srinidhi

ದೇಶಿಯ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಕಾಂತ್ರಿಗೆ ಮುಂದಾಗಿರುವ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ, ಬಳಕೆದಾರರಿಗೆ ವೆಲ್‌ ಕಮ್ ಆಫರ್ ಹೆಸರಿನಲ್ಲಿ ಉಚಿತ 1.1TB (1300GB) ಡೇಟಾವನ್ನು ಬಳಕೆದಾರರಿಗೆ ನೀಡಲಿದೆ ಎನ್ನಲಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸ್ಪರ್ಧೆಯನ್ನು ಹುಟ್ಟು ಹಾಕಲು ಯೋಜನೆ ರೂಪಿಸಿದ್ದು, ಇದಕ್ಕಾಗಿಯೇ ಈ ಮಟ್ಟದ ಆಫರ್ ಅನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ.

 ಅಂಬಾನಿಯಿಂದ ಜಿಯೋ ಬಳಕೆದಾರರಿಗೆ 100Mbps ವೇಗದ 1300 GB ಉಚಿತ ಡೇಟಾ...!

ಈಗಾಗಲೇ ಜಿಯೋ FTTH ಬ್ರಾಡ್ ಬ್ಯಾಂಡ್ ಸೇವೆಯನ್ನು ಆರಂಭಿಸಿದ್ದು, ದೇಶದ ಕೆಲವು ನಗರಗಳಲ್ಲಿ ಇದರ ಪ್ರಯೋಗಿಕ ಪರೀಕ್ಷೆಯನ್ನು ನಡೆಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಬಳಕೆದಾರರನ್ನು ಸೆಳೆಯುವ ಸಲುವಾಗಿ, ಟೆಲಿಕಾಂ ಮಾರುಕಟ್ಟೆಯಲ್ಲಿ ಅನುಸರಿಸಿದ ನೀತಿಯನ್ನು ಇಲ್ಲಿಯೂ ಬಳಕೆ ಮಾಡಿಕೊಳ್ಳುತ್ತಿದ್ದು, ಈ ಆಫರ್ ಗಾಗಿಯೇ ಹೆಚ್ಚಿನ ಬಳಕೆದಾರರು ಜಿಯೋ FTTH ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

1.1 TB ಡೇಟಾ:

1.1 TB ಡೇಟಾ:

ಜಿಯೋ FTTH ಬ್ರಾಡ್ ಬ್ಯಾಂಡ್ ಸೇವೆಯನ್ನು ಆರಂಭಿಸುತ್ತಿದ್ದು, ಈ ಹಿನ್ನಲೆಯಲ್ಲಿ ಬಳಕೆದಾರರಿಗೆ 1.1 ಟೆರಾಬೈಟ್ ಡೇಟಾವನ್ನು ಬಳಕೆಗೆ ನೀಡಲು ಮುಂದಾಗಿದೆ. ಇದು ಸಹ ಅತೀ ವೇಗದಲ್ಲಿ ಅಂದರಲೇ 100 Mbps ವೇಗದಲ್ಲಿ ದೊರೆಯಲಿದ್ದು, ಬಳಕೆದಾರರು ಅತ್ಯುತ್ತಮ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

40 GB ಟಾಪ್ ಅಪ್:

40 GB ಟಾಪ್ ಅಪ್:

ಬಳಕೆದಾರರಿಗೆ ಇಷ್ಟು ಡೇಟಾ ಒಂದು ತಿಂಗಳಿಗೆ ದೊರಯಲಿದ್ದು, 40GB ಡೇಟಾವನ್ನು ತಿಂಗಳಲ್ಲಿ 25 ಬಾರಿ ಪಡೆದುಕೊಳ್ಳಬಹುದಾಗಿದ್ದು, ಬಳಕೆದಾರರಿಗೆ ಡೇಟಾ ಕೊರತೆಯು ಎದುರಾಗುವುದಿಲ್ಲ ಎನ್ನಲಾಗಿದೆ. ಈ ಮಾದರಿಯ ಡೇಟಾ ಬಳಕೆದಾರಿಗೆ ಬೇರೆ ಯಾವುದೇ ಟೆಲಿಕಾಂ ಬಳಕೆದಾರರಿಗೆ ದೊರೆಯಲಿದೆ.

ರೂ.4500:

ರೂ.4500:

ಜಿಯೋ FTTH ಬ್ರಾಡ್ ಬ್ಯಾಂಡ್ ಸೇವೆಯೂ ಮೊದಲಿಗೆ ಬಳಕೆದಾರರಿಗೆ ರೂ.4500 ದರವನ್ನು ವಿಧಿಸಲಿದ್ದು, ಇದಾದ ನಂತರದಲ್ಲಿ ಉಚಿತ ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ.

ಇದಲ್ಲದೇ TV ಸೇವೆಯೂ ಇದೆ:

ಇದಲ್ಲದೇ TV ಸೇವೆಯೂ ಇದೆ:

ಬಳಕೆದಾರರಿಗೆ ಕೇವಲ ಬ್ರಾಂಡ್ ಬ್ಯಾಂಡ್ ಸೇವೆ ಮಾತ್ರವಲ್ಲದೇ TV ಸೇವೆಯನ್ನು ಜಿಯೋ ನೀಡಲಿದೆ. ಇದರಿಂದಾಗಿ ಹೆಚ್ಚುವರಿಯಾಗಿ ಕೇವಲ ಕನೆಕ್ಷನ್ ಅನ್ನು ಪಡೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಎನ್ನಲಾಗಿದೆ. ಇದರಿಂದ ಬಳಕೆದದಾರರಿಗೆ ಡಬ್ಬಲ್ ಲಾಭವಾಗಲಿದೆ.

IoTಗೆ ಸಹಾಯಕಾರಿ:

IoTಗೆ ಸಹಾಯಕಾರಿ:

ಜಿಯೋ FTTH ಬ್ರಾಡ್ ಬ್ಯಾಂಡ್ ಸೇವೆಯಿಂದಾಗಿ ಇಂಟರ್ನೆಟ್ ಆಪ್ ಥಿಂಗ್ಸ್ ಹೆಚ್ಚಿನ ಬಳಕೆಗೆ ಅವಕಾಶ ನೀಡಲಿದ್ದು, ದೇಶದಲ್ಲಿ ಇಂಟರ್ನೆಟ್ ಕಾಂತ್ರಿಗೆ ಕಾರಣವಾಗಲಿದೆ. ಇದರಿಂದಾಗಿ ಬಳಕೆದಾರರು ಹೆಚ್ಚಿನ ಡೇಟಾವನ್ನು ಅತೀ ಕಡಿಮೆ ಬೆಲೆಗೆ ಪಡೆದುಕೊಳ್ಳಬಹುದಾಗಿದೆ.

ಸ್ಮಾರ್ಟ್ ಹೋಮ್:

ಸ್ಮಾರ್ಟ್ ಹೋಮ್:

ನಿಮ್ಮ ಮನೆಯಲ್ಲಿರುವ ಎಲ್ಲಾ ಸ್ಮಾರ್ಟ್ ವಸ್ತುಗಳನ್ನು ಜಿಯೋ FTTH ಬ್ರಾಡ್ ಬ್ಯಾಂಡ್ ಸೇವೆಯ ಮೂಲಕ ಕನೆಕ್ಟ್ ಮಾಡಿಕೊಳ್ಳಬಹುದಾಗಿದ್ದು, ನಿಮ್ಮ ಮನೆಯನ್ನು ಸ್ಮಾರ್ಟ್ ಮನೆಯನ್ನಾಗಿ ಮಾಡಿಕೊಳ್ಳಬಹುದಾಗಿದೆ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
DTH ಗೆ ಹೊಡೆತ:

DTH ಗೆ ಹೊಡೆತ:

ಹೊಸದಾಗಿ DTH ಸೇವೆಯನ್ನು ನೀಡುವ ಬದಲಾಗಿ, ಜಿಯೋ FTTH ಬ್ರಾಡ್ ಬ್ಯಾಂಡ್ ಸೇವೆಯ ಮೂಲಕವೇ ಟಿವಿ ಮಾರುಕಟ್ಟೆಯಲ್ಲಿಯೂ ತನ್ನ ಹಿಡಿತವನ್ನು ಸಾಧಿಸಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಪ್ರಯತ್ನವು ಇದಾಗಿದೆ.

Best Mobiles in India

English summary
Reliance Jio offers 1.1TB FTTH broadband data. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+