ಜಿಯೋ 100% ಕ್ಯಾಷ್ ಬ್ಯಾಕ್ ಆಫರ್‌ಗಿಂತ ಕೆಟ್ಟ ಆಫರ್ ಮತ್ತೊಂದಿಲ್ಲ!!
ಮೊದಮೊದಲು ಭರ್ಜರಿ ಆಫರ್ ನೀಡುವಲ್ಲಿ ಎತ್ತಿದ ಕೈ ಆಗಿದ್ದ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಕಂಪೆನಿ ಈಗ ಆಫರ್ ನೀಡುವ ಮುನ್ನ ಹತ್ತು ಹಲವು ಷರತ್ತುಗಳನ್ನು ಹಾಕುತ್ತಿದೆ. ದಿಪಾವಳಿ ಹಬ್ಬದ ವಿಶೇಷವಾಗಿ 45 ದಿನಗಳವರೆಗೆ ಜಿಯೋ ಘೋಷಿಸಿರುವ 'ದೀಪಾವಾಳಿ 100% ಕ್ಯಾಷ್ ಬ್ಯಾಕ್ ಆಫರ್' ಪಡೆಯಲು ಗ್ರಾಹಕರೀಗ ನಾನಾ ಕಸರತ್ತನ್ನು ನಡೆಸಬೇಕಿದೆ.
ಹೌದು, ಜಿಯೋ ಈಗ ಏನೇ ಆಫರ್ ಅನ್ನು ಪ್ರಕಟಿಸಿದರೂ ಸಹ ಅದು ಮತ್ತೊಂದು ಲಾಭದ ಉದ್ದೇಶವನ್ನು ಹೊಂದಿರುತ್ತದೆ. ಭಾರೀ ಷರತ್ತುಗಳನ್ನು ಹಾಕಿದರೂ ಭರ್ಜರಿ 100% ಕ್ಯಾಷ್ ಬ್ಯಾಕ್ ಆಫರ್ ಎಂದು ಘೋಷಿಸುತ್ತಿದೆ. ಈ 100 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಆಸೆಗೆ ಜಿಯೋ ರೀಚಾರ್ಜ್ ಮಾಡಿಸುವ ಗ್ರಾಹಕರು ಈ ಆಫರ್ ಅನ್ನು ಪಡೆಯಲು ಭಾರೀ ಕಷ್ಟಗುವುದಂತೂ ಸರಿ.

ಹಾಗಾಗಿ, ಇಂದಿನ ಲೇಖನದಲ್ಲಿ ರಿಲಾಯನ್ಸ್ ಜಿಯೋ ಪ್ರಕಟಿಸಿರುವ 'ದೀಪಾವಾಳಿ 100% ಕ್ಯಾಷ್ ಬ್ಯಾಕ್ ಆಫರ್' ಹೇಗಿದೆ?, 'ದೀಪಾವಾಳಿ 100% ಕ್ಯಾಷ್ ಬ್ಯಾಕ್ ಆಫರ್ ಪಡೆಯುವುದು ಹೇಗೆ? ಗ್ರಾಹಕರಿಗೆ ಈ ಆಫರ್‌ನಿಂದ ಏನು ಲಾಭ? ಜಿಯೋ ವಿಧಿಸಿರುವ ಷರತ್ತುಗಳು ಯಾವುವು ಎಂಬುದಕ್ಕೆ ಪ್ರಮುಖ ಆರು ವಿಷಯಗಳ ಬಗ್ಗೆ ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

1.ದೀಪಾವಾಳಿ 100% ಕ್ಯಾಷ್ ಬ್ಯಾಕ್ ಪ್ಲಾನ್ಸ್
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ದೀಪಾವಾಳಿ 100% ಕ್ಯಾಷ್ ಬ್ಯಾಕ್ ಆಫರ್ ಪ್ರಕಟಿಸಿದೆ. ಈ ಆಫರ್ ಜೊಯೋವಿನ ₹149ರಿಂದ ಆರಂಭಿಸಿ ₹9999ರ ವರೆಗಿನ ಪ್ಲಾನ್‌ಗಳಿಗೆ ಈ ನ್ವಯವಾಗುತ್ತದೆ. ₹149, ₹198, ₹299, ₹349, ₹398, ₹399, ₹448, ₹449, ₹498, ₹509, ₹799, ₹999, ₹1999, ₹4999 ಹಾಗೂ ₹9,999 ರೀಚಾರ್ಜ್ ಪ್ಲಾನ್‌ಗಳನ್ನು ಜಿಯೋ ಹೊಂದಿದೆ.

2.ಕೂಪನ್ ರೂಪದಲ್ಲಿ 100% ಕ್ಯಾಷ್ ಬ್ಯಾಕ್
ಜಿಯೋ 100% ಕ್ಯಾಷ್ ಬ್ಯಾಕ್ ಅಡಿಯಲ್ಲಿ ರೀಚಾರ್ಜ್ ಮಾಡುವ ಗ್ರಾಹಕರಿಗೆ ಕೂಪನ್ ರೂಪದಲ್ಲಿ 100% ಕ್ಯಾಷ್ ಬ್ಯಾಕ್ ಆಫರ್ ಸಿಗಲಿದೆ. ಮೈಜಿಯೋ ಆಪ್‌ನ ಮೈಕೂಪನ್ ವಿಭಾಗದಲ್ಲಿ ಇದು ಜಮೆಯಾಗುತ್ತದೆ. ಗ್ರಾಹಕರು ಎಷ್ಟು ರೀಚಾರ್ಜ್ ಮಾಡುತ್ತಾರೋ ಅಷ್ಟೇ ಮೊತ್ತದ ಕೂಪನ್ ಅವರಿಗೆ ಸಿಗಲಿದೆ. ಉದಾಹರಣೆಗೆ ₹149ರ ರೀಚಾರ್ಜ್ ಮಾಡಿಸಿದರೆ ಅಷ್ಟೇ ಮೌಲ್ಯದ ಕೂಪನ್ ಅವರಿಗೆ ಸಿಗುತ್ತದೆ.

3 ಕೇವಲ ಪ್ರೀಪೇಯ್ಡ್ ಗ್ರಾಹಕರಿಗೆ ಮಾತ್ರ
ಜಿಯೋ 100% ಕ್ಯಾಷ್ ಬ್ಯಾಕ್ ಆಫರ್ ಒಂದು ರೀಚಾರ್ಜ್‌ಗೆ ಸೀಮಿತವಾಗಿಲ್ಲ. ಒಂದಕ್ಕಿಂತ ಹೆಚ್ಚು ಬಾರಿ ರೀಚಾರ್ಜ್ ಮಾಡಿದರೂ ಕೂಡಾ ಈ ಆಫರ್ ಸಿಗಲಿದೆ. ಎಷ್ಟು ಬಾರಿ ರೀಚಾರ್ಜ್ ಮಾಡುತ್ತೀರೋ, ಅದಕ್ಕೆ ಸರಿಯಾದ ಮೌಲ್ಯದ ಅಷ್ಟು ಕೂಪನ್ ಪಡೆಯಬಹುದು. ಆದರೆ, ಈ ಆಫರ್ ಕೇವಲ ಪ್ರೀಪೇಯ್ಡ್ ಗ್ರಾಹಕರಿಗೆ ಮಾತ್ರ! ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಇದು ಅನ್ವಯವಾಗುವುದಿಲ್ಲ.

4.ಶಾಪಿಂಗ್ ಮಾಡಿದರೆ ಮಾತ್ರ ಲಭ್ಯ
ಜಿಯೋ 100% ಕ್ಯಾಷ್ ಬ್ಯಾಕ್ ಆಫರ್ ಮೂಲಕ ಪಡೆದುಕೊಂಡ ಕೂಪನ್‌ಗಳನ್ನು ಗ್ರಾಹಕರು ರಿಲಾಯನ್ಸ್ ಡಿಜಿಟಲ್ ಅಥವಾ ರಿಲಾಯನ್ಸ್ ಡಿಜಿಟಲ್ ಎಕ್ಸ್‌ಪ್ರೆಸ್ ಮಿನಿ ಸ್ಟೋರ್‌ಗಳಲ್ಲಿ ಬಳಸಬಹುದು. ಅಂದರೆ, ನೀವು ಈ ಕೂಪನ್‌ಗಳನ್ನು ಬಳಸಿ ರಿಲಯನ್ಸ್ ಡಿಜಿಟಲ್‌ನಲ್ಲಿ ಶಾಪಿಂಗ್ ಮಾಡಿದರೆ, ಕೂಪನ್‌ನಲ್ಲಿರುವ ಹಣ ಕಡಿತಗೊಳ್ಳುತ್ತದೆ. ಆದರೆ, ಇದರಲ್ಲಿಯೂ ಜಿಯೋ ಕೆಲವೊಂದು ಷರತ್ತುಗಳನ್ನು ವಿಧಿಸಿರುವುದನ್ನು ನೋಡಬಹುದು.

5000ಕ್ಕಿಂತ ಹೆಚ್ಚಿರಬೇಕು
ಜಿಯೋ 100% ಕ್ಯಾಷ್ ಬ್ಯಾಕ್ ಆಫರ್ ನವೆಂಬರ್ 30ರ ವರೆಗೆ ಮಾತ್ರ ಜಾರಿಯಲ್ಲಿರುತ್ತದೆ.ಈ ಅವಧಿಯಲ್ಲಿ ಪಡೆದ ಕೂಪನ್ ಗಳನ್ನು 31 ಡಿಸೆಂಬರ್ 2018ರೊಳಗೆ ನೀವು ರೀಡೀಮ್ ಮಾಡಿಕೊಳ್ಳಬೇಕು. ಇನ್ನು ಈ ಕೂಪನ್ ಅಪ್ಲೈ ಅಗಲು ರಿಲಯನ್ಸ್ ಡಿಜಿಟಲ್ ಶಾಪಿಂಗ್‌ನಲ್ಲಿ ಖರೀದಿ ಮೌಲ್ಯ ₹5000ಕ್ಕಿಂತ ಹೆಚ್ಚಿರಬೇಕು. ಹಾಗಿದ್ದರೆ ಮಾತ್ರ ಈ ಕೂಪನ್ ನಿಮಗೆ ಅನ್ವಯವಾಗುತ್ತದೆ.

6.ಈ ಉತ್ಪನ್ನಗಳು ಹೊರಕ್ಕಿಟ್ಟಿದೆ
100% ಕ್ಯಾಷ್ ಬ್ಯಾಕ್ ಆಫರ್‌ನಿಂದ ಜಿಯೋ ಈ ಉತ್ಪನ್ನಗಳು ಹೊರಟ್ಟಿದೆ. ಇಲ್ಲಿ ರಿಲಾಯನ್ಸ್ ಜಿಯೋ ಸ್ಪಷ್ಟವಾಗಿ ಹೇಳಿದ್ದು, ಈ ಕೆಳಗಿನ ಉತ್ಪನ್ನಗಳು ಆಫರ್‌ನಡಿಯಲ್ಲಿ ಖರೀದಿಸಲಾಗುವುದಿಲ್ಲ ಎಂದಿದೆ. ಶಿಯೋಮಿ, ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು, ಸ್ಯಾಮ್‌ಸಂಗ್ ಟ್ಯಾಬ್ಲೆಟ್ಸ್, ಸೀಗೆಟ್, WD, ಸೋನಿ, ಲೆನೊವೋ ಕಂಪನಿಗಳ ಬಾಹ್ಯ ಹಾರ್ಡ್‌ಡ್ರೈವ್‌ಗಳು ಆಫರ್‌ನಿಂದ ಹೊರ ಇವೆ.


Click it and Unblock the Notifications








