196 ದಿನ ಪ್ರತಿದಿನ 5GB ಡೇಟಾದ 'ಜಿಯೋ ಲಿಂಕ್' ಹೊಸ ಆಫರ್ ಬಿಡುಗಡೆ!..ಮತ್ತೆ ಬೆಚ್ಚಿತು ಟೆಲಿಕಾಂ!!
ಇತ್ತೀಚಿಗಷ್ಟೇ ಡಬಲ್ ಡೇಟಾ ಆಫರ್ ಪ್ರಕಟಿಸಿ ಭಾರತದ ಟೆಲಿಕಾಂ ಅನ್ನು ಅಲ್ಲೋಲ ಕಲ್ಲೋಲಗೊಳಿಸಿರುವ ಜಿಯೋ ಈಗ 'ಜಿಯೋ ಲಿಂಕ್ ಆಫರ್ ಅನ್ನು ಬಿಡುಗಡೆ ಮಾಡಿ ಅಚ್ಚರಿಗೊಳಿಸಿದೆ. ಹೈ ಸ್ಪೀಡ್ ಡೇಟಾವನ್ನು ಒದಗಿಸುವ 'ಜಿಯೋ ಲಿಂಕ್ ಡಿವೈಸ್ ಜೊತೆಗೆ ಭರ್ಜರಿ ಆಫರ್ ಗಳನ್ನು ಬಿಡುಗಡೆ ಮಾಡಿರುವ ಜಿಯೋ ಟೆಲಿಕಾಂ ಮಾರುಕಟ್ಟೆಯನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿದೆ.
ಹೈ ಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಜಿಯೋಲಿಂಕ್ ಡಿವೈಸ್ ಅನ್ನು ಜಿಯೀ ದೇಶದಾಧ್ಯಂತ ಪರಿಚಯಿಸಲು ಮುಂದಾಗಿದೆ. ಈಗಿರುವ ಜಿಯೋ ವೈಫೈ ಹಾಟ್‌ಸ್ಪಾಟ್ ಬದಲಾಗಿ ಹೈ ಸ್ಪೀಡ್ ಇಂಟರ್ನೆಟ್ ಸೌಲಭ್ಯಕ್ಕಾಗಿ ಬರುತ್ತಿರುವ ಈ ಹೊಸ ಡಿವೈಸ್‌ಗಳು ಮನೆ, ಅಂಗಡಿ ಮತ್ತು ಕಚೇರಿಗಳಲ್ಲಿ ಬಳಕೆಗೆ ಉತ್ತಮವಾಗಿದೆ ಎಂದು ಬಿಜಿಆರ್ ಇಂಡಿಯಾ ವರದಿ ಮಾಡಿದೆ.

ಹೈ ಸ್ಪೀಡ್ ಡೇಟಾ ಒದಗಿಸುವ ಜಿಯೋ ಲಿಂಕ್' ಹೈ ಸ್ಪೀಡ್ ಡಿವೈಸ್ ಜೊತೆಗೆ ಜಿಯೋ ಕಂಪೆನಿ ಮೂರು 'ಜಿಯೋ ಲಿಂಕ್' ಆಫರ್‌ಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ್ದು, ಹಾಗಾದರೆ, ಏನಿದು 'ಜಿಯೋ ಲಿಂಕ್' ಡಿವೈಸ್? ಜಿಯೋ ನೀಡಿರುವ ಮೂರು 'ಜಿಯೋ ಲಿಂಕ್' ಆಫರ್‌ಗಳು ಯಾವುವು? ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯಿರಿ.

ಏನಿದು 'ಜಿಯೋ ಲಿಂಕ್' ಡಿವೈಸ್!
ಈಗಿರುವ ಜಿಯೋ ವೈಫೈ ಹಾಟ್‌ಸ್ಪಾಟ್ ಡಿವೈಸ್‌ಗಳ ಬದಲಾಗಿ ಜಿಯೋ ಕಂಪೆನಿ ನೂತನ 'ಜಿಯೋ ಲಿಂಕ್' ಡಿವೈಸ್‌ಗಳನ್ನು ಪರಿಚಯಿಸಿದೆ. ಕೆಲವು ಬಳಕೆದಾರರಿಗೆ ಮಾತ್ರ ಈಗ ಲಭ್ಯವಿರುವ ಈ ಡಿವೈಸ್ ಹೆಚ್ಚು ಸ್ಪೀಡ್ ಡೇಟಾವನ್ನು ಒದಗಿಸಲು ಶಕ್ತವಾಗಿದೆ. ಕೇಬಲ್‌ಗಳ ಮೂಲಕ ಮನೆಯಲ್ಲಿ ಅಥವಾ ಕಛೇರಿಗಳಲ್ಲಿ ಇದರ ಸಂಪರ್ಕ ಪಡೆಯಬಹುದಾಗಿದೆ.

'ಜಿಯೋ ಲಿಂಕ್' ಲಾಭವೇನು?
ಜಿಯೋ ವೈಫೈ ಹಾಟ್‌ಸ್ಪಾಟ್ ಬದಲಾಗಿ ಇರುವ ಈ 'ಜಿಯೋ ಲಿಂಕ್' ಡಿವೈಸ್ ಪ್ರತಿ ಸೆಕೆಂಡ್‌ಗೆ 30ಎಂಬಿಪಿಎಸ್ ಗಿಂತ ಹೆಚ್ಚು ವೇಗದಲ್ಲಿ ಡೇಟಾವನ್ನು ನೀಡಲಿದೆ. ಇದರಿಂದ ದುಪ್ಪಟ್ಟು ಹಣವನ್ನು ನೀಡಿ ಹೈ ಸ್ಪೀಡ್ ಇಂಟರ್‌ನೆಟ್ ಅನ್ನು ಪಡೆಯುತ್ತಿದ್ದ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿಯೇ ಹೈ ಸ್ಪೀಡ್ ಇಂಟರ್‌ನೆಟ್ ಅನ್ನು ಜಿಯೋ ಲಿಂಕ್' ಡಿವೈಸ್ ನೀಡಲಿದೆ.

'ಜಿಯೋ ಲಿಂಕ್' ಭರ್ಜರಿ ಡೇಟಾ!
ನೂತನ 'ಜಿಯೋ ಲಿಂಕ್' ಡಿವೈಸ್‌ಗಳ ಜೊತೆಗೆ ಜಿಯೋ ಕಂಪೆನಿ ಭರ್ಜರಿ ಡೇಟಾದ ಮೂರು ಆಫರ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಈ ಡಿವೈಸ್ ಜೊತೆಗೆ ಪ್ರತಿದಿನ 5GB ಡೇಟಾದಂತೆ ಒಟ್ಟು 196 ದಿನಗಳ ವ್ಯಾಲಿಡಿಟಿಯ ಭರ್ಜರಿ ಆಫರ್ ಅನ್ನು ಜಿಯೋ ನೀಡುತ್ತಿದೆ ಎಂದು ವರದಿಯಾಗಿದೆ. ಜೊತೆಗೆ ಮೂರು ಆಫರ್‌ಗಳ ಬೆಲೆಗಳನ್ನು ಸಹ ಜಿಯೋ ಬಿಡುಗಡೆ ಮಾಡಿದೆ.

ಜಿಯೋ 699 ರೂ. ಆಫರ್!
'ಜಿಯೋ ಲಿಂಕ್' ಡಿವೈಸ್ ಬಳಕೆದಾರರಿಗೆ ಜಿಯೋ 699 ರೂಪಾಯಿಗಳ ತಿಂಗಳ ಆಫರ್ ಅನ್ನು ನೀಡುತ್ತಿದೆ. ಈ 699 ರೂಪಾಯಿಗಳ 'ಜಿಯೋ ಲಿಂಕ್' ಆಫರ್ ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಒಟ್ಟು 140 ಜಿಬಿ ಸ್ಪೀಡ್ ಡೇಟಾವನ್ನು ನಿಡಲಿದೆ. ನಂತರ 64ಕೆಬಿಪಿಎಸ್ ವೇಗದಲ್ಲಿ ಡೇಟಾವನ್ನು ಬ್ರೌಸ್ ಮಾಡಬಹುದಾಗಿದೆ.

ಜಿಯೋ 2,099 ರೂ. ಆಫರ್!
'ಜಿಯೋ ಲಿಂಕ್' ಡಿವೈಸ್ ಬಳಕೆದಾರರಿಗೆ ಜಿಯೋ 2099 ರೂಪಾಯಿಗಳ ಮತ್ತೊಂದು ಆಫರ್ ಅನ್ನು ನೀಡುತ್ತಿದೆ. ಈ 2099 ರೂಪಾಯಿಗಳ ಜಿಯೋ 'ಜಿಯೋ ಲಿಂಕ್' ಆಫರ್ 98 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಒಟ್ಟು 538 ಜಿಬಿ ಡೇಟಾವನ್ನು ನೀಡಲಿದೆ. ನಂತರ 64ಕೆಬಿಪಿಎಸ್ ವೇಗದಲ್ಲಿ ಡೇಟಾವನ್ನು ಬ್ರೌಸ್ ಮಾಡಬಹುದಾಗಿದೆ.

ಜಿಯೋ 4,199 ರೂ. ಆಫರ್!
'ಜಿಯೋ ಲಿಂಕ್' ಡಿವೈಸ್ ಬಳಕೆದಾರರಿಗೆ ಜಿಯೋ 4,199 ರೂಪಾಯಿಗಳ ಆಫರ್ ಅನ್ನು ನೀಡುತ್ತಿದೆ. ಈ 4,199 ರೂಪಾಯಿಗಳ ಜಿಯೋ 'ಜಿಯೋ ಲಿಂಕ್' ಆಫರ್ 196 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಒಟ್ಟು 1076 ಜಿಬಿ ಡೇಟಾವನ್ನು ನೀಡಲಿದೆ. ನಂತರ 64ಕೆಬಿಪಿಎಸ್ ವೇಗದಲ್ಲಿ ಡೇಟಾವನ್ನು ಬ್ರೌಸ್ ಮಾಡಬಹುದಾಗಿದೆ.


Click it and Unblock the Notifications








