ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋಗೆ ಎರಡನೇ ಸ್ಥಾನ: ಮೊದಲು ಬಂದರು ಏರ್ ಟೆಲ್ ಗೆ ನಷ್ಟ..!
ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ರಿಯಲನ್ಸ್ ಮಾಲೀಕತ್ವದ ಜಿಯೋ, ಆರಂಭವಾಗಿ 19 ತಿಂಗಳು ಕಳೆಯುವ ಮೊದಲೇ ದೇಶದ ಎರಡನೇ ಆತೀ ದೊಡ್ಡ ಟೆಲಿಕಾಂ ಕಂಪನಿ ಎನ್ನುವ ಪಟ್ಟವನ್ನು ಪಡೆದುಕೊಂಡಿದೆ. ಈ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಏಕ ಸ್ವಾಮ್ಯತೆಯನ್ನು ಸಾಧಿಸುವ ನಿಟ್ಟಿನಲ್ಲಿ ಮುಂದುವರೆಯುತ್ತಿದೆ ಎನ್ನಲಾಗಿದೆ. ಬೇರೆ ಎಲ್ಲಾ ಟೆಲಿಕಾಂ ಕಂಪನಿಗಳು ಜಿಯೋ ಅಬ್ಬರದ ಮುಂದೆ ಸೊರಗಿ ಹೋಗಿವೆ ಎನ್ನಲಾಗಿದೆ.

ಇದುವರೆಗೂ ಎರಡನೇ ಸ್ಥಾನದಲ್ಲಿ ಇದಂತಹ ವೊಡಾಫೋನ್ ಅನ್ನು ಒಂದು ಸ್ಥಾನ ಕೆಳಕ್ಕೆ ತಳ್ಳಿರುವ ರಿಲಯನ್ಸ್ ಜಿಯೋ, ಏರ್ ಟೆಲ್ ನಂತರದ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ತನ್ನ ನೂತನ ಆಫರ್ ಗಳು ಮತ್ತು ಆಕರ್ಷಕ ಕೊಡುಗೆಗಳಿಂದಾಗಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಜಿಯೋ, ಜನ ಮಾನಸದಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಆದಾಯದ ವಿಚಾರದಲ್ಲಿ:
ಜಿಯೋ ಎರಡನೇ ಸ್ಥಾನವನ್ನು ಪಡೆದುಕೊಂಡಿರುವುದು ಆದಾಯದ ವಿಚಾರದಲ್ಲಿ, ಬಳಕೆದಾರರ ವಿಭಾಗದಲ್ಲಿ ಇನ್ನು ಕೆಳಗೆ ಇರುವ ಜಿಯೋ, ಹೆಚ್ಚಿನ ಪ್ರಮಾಣದ ಆದಾಯವನ್ನು ಪಡೆದುಕೊಂಡಿದ್ದು, ಒಟ್ಟು ರೂ.6217.64 ಕೋಟಿ ಪಡೆದುಕೊಂಡಿದೆ. ಈ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪಾರಮ್ಯವನ್ನು ಮೆರೆದಿದೆ.

ಏರ್ ಟೆಲ್ ಮೊದಲ ಸ್ಥಾನ:
ಬಳಕೆದಾರರ ಸಂಖ್ಯೆಯಲ್ಲಿ ಮತ್ತು ಆದಾಯದ ವಿಭಾಗದಲ್ಲಿ ಎರಡರಲ್ಲಿಯೂ ಏರ್ ಟೆಲ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಈ ವರ್ಷ ಒಟ್ಟು 7086.49 ಕೋಟಿ ಆದಾಯವನ್ನು ಪಡೆದುಕೊಳ್ಳುವ ಮೂಲಕ ಏರ್ ಟೆಲ್ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಏರ್ ಟೆಲ್ ಗೆ ನಷ್ಟ:
ಏರ್ ಟೆಲ್ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು ಸಹ ಆದಾಯದ ಗಳಿಕೆಯಲ್ಲಿ ಕಳೆದ ಬಾರಿಗಿಂತಲೂ ಶೇ.10%ರಷ್ಟು ಇಳಿಕೆಯನ್ನು ಕಂಡಿದೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಜಿಯೋ ಯನ್ನ ಆದಾಯದ ಏರಿಕೆಯಲ್ಲಿ ಬೆಳವಣಿಗೆಯನ್ನು ಸಾಧಿಸಿದೆ ಎನ್ನಲಾಗಿದೆ.

ಮೂರನೇ ಸ್ಥಾನದಲ್ಲಿ ವೊಡಾಫೋನ್:
ಇದೇ ಮಾದರಿಯಲ್ಲಿ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿರುವ ವೊಡಾಫೋನ್ ಒಟ್ಟು 4934 ಕೋಟಿಯನ್ನು ಪಡೆಯುವ ಮೂಲಕ ಜಿಯೋಗೆ ತನ್ನ ಸ್ಥಾನವನ್ನು ಬಿಟ್ಟುಕೊಟ್ಟು, ಕಡಿಮೆ ಆದಾಯವನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ನಾಲ್ಕರಲ್ಲಿ ಐಡಿಯಾ:
ಜಿಯೋದಿಂದ ಸಾಕಷ್ಟು ಹೊಡೆತವನ್ನು ತಿಂದಿರುವ ಐಡಿಯಾ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ರೂ.4033 ಕೋಟಿ ಆದಾಯವನ್ನು ಪಡೆದುಕೊಂಡಿದೆ. ಇದು ಅಷ್ಟೆನು ಜಾಸ್ತಿ ಎನ್ನುವಂತಿಲ್ಲ. ಮುಂದಿನ ದಿನಗಳ್ಲಿ ಐಡಿಯಾ ಮತ್ತು ವೊಡಾ ಒಂದಾಗುವ ಸಾಧ್ಯತೆ ಇದೆ.


Click it and Unblock the Notifications








