Home
ಸುದ್ದಿಜಾಲ

ಅಂಬಾನಿ ಹೊಸ ಪ್ಲಾನ್: ಜಿಯೋದಿಂದಾಗಿ ಮುಳುಗಿ ಹೋಗಲಿದೆ TV ಲೋಕ..!

By Srinidhi

ಈಗಾಗಲೇ ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸ ಪ್ರಯತ್ನಕ್ಕೆ ಮುಂದಾಗಿರುವ ಅಂಬಾನಿ ಮಾಲೀಕತ್ವದ ಜಿಯೋ, ಈಗ ಹೊಸದಾಗಿ ಜಿಯೋ ಸ್ಕ್ರೀನ್ಸ್ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಇದರಲ್ಲಿ ಟಿವಿ ಮಾರುಕಟ್ಟೆಯನ್ನು ಮುಳುಗಿಸುವಂತಹ ಸೇವೆಯನ್ನು ಆರಂಭಿಸಲು ಮುಂದಾಗಿದೆ.

ಅಂಬಾನಿ ಹೊಸ ಪ್ಲಾನ್: ಜಿಯೋದಿಂದಾಗಿ ಮುಳುಗಿ ಹೋಗಲಿದೆ TV ಲೋಕ..!

ಈಗಾಗಲೇ ಜಿಯೋ ಬ್ರಾಂಡ್-ಎಂಗೇಜ್‌ಮೆಂಟ್ ವೇದಿಕೆಯೊಂದನ್ನು ಸೃಷ್ಠಿಸಿದ್ದು, ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಎಐ) ಆಧರಿತ ವಿಶ್ವದ ಮೊತ್ತಮೊದಲ ಬ್ರಾಂಡ್ ಎಂಗೇಜ್‌ಮೆಂಟ್ ವೇದಿಕೆಯಾಗಿ ಜಿಯೋ ಇಂಟರಾಕ್ಟ್ ಅನ್ನು ಆರಂಭಿಸಿತ್ತು. ಇದಾದ ನಂತರದಲ್ಲಿ ಸದ್ಯ ಜಿಯೋ ಸ್ಕ್ರೀನ್ಸ್ ಸೇವೆಯನ್ನು ಆರಂಭಿಸುತ್ತುದ್ದು, ಮನರಂಜನೆಯಲ್ಲಿ ಹೊಸ ಅಧ್ಯಾಯವನ್ನು ಶುರು ಮಾಡಲಿದೆ. ಈ ಹಿನ್ನಲೆಯಲ್ಲಿ ಜಿಯೋ ಹೊಸ ಸೇವೆಯ ಕುರಿತ ಮಾಹಿತಿಯೂ ಇಲ್ಲಿದೆ.

ದ್ವಿಮುಖ ಸಂವಹನ:

ದ್ವಿಮುಖ ಸಂವಹನ:

TV ಕಾರ್ಯಕ್ರಮದ ನಡುವೆ ರಸಪ್ರಶ್ನೆ, ಅಭಿಪ್ರಾಯ ಸಂಗ್ರಹಣೆ, ಮತದಾನ ಮೊದಲಾದ ಮಾರ್ಗಗಳ ಮೂಲಕ ಪ್ರಸರಣ ಸಂಸ್ಥೆಗಳು ಹಾಗೂ ಗ್ರಾಹಕರ ನಡುವೆ ತತ್‌ಕ್ಷಣದ ದ್ವಿಮುಖ ಸಂವಹನ ಏರ್ಪಡಿಸಲು ಜಿಯೋ ಸ್ಕ್ರೀನ್ಸ್ ವೇದಿಕೆ ನೆರವಾಗಲಿದೆ.

ಹೊಸ ಮಾದರಿ:

ಹೊಸ ಮಾದರಿ:

ಇಂಟರಾಕ್ಟಿವ್ ಎಂಗೇಜ್‌ಮೆಂಟ್‌ಗಳನ್ನು ವಿನ್ಯಾಸಗೊಳಿಸಿ, ರಚಿಸಿ, ಪ್ರಕಟಿಸಲು ನೆರವಾಗುವ ಸುಲಭ ಕಂಟೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಸಿಎಂಎಸ್) ಅನ್ನು ಜಿಯೋ ಸ್ಕ್ರೀನ್ಸ್ ಒದಗಿಸುತ್ತದೆ. ಇದರಿಂದ ಗ್ರಾಹಕರನ್ನು ಆರ್ಥ ಮಾಡಿಕೊಳ್ಳಬಹುದಾಗಿದೆ.

ಸಂಪೂರ್ಣ ಡಿಜಿಟಲ್:

ಸಂಪೂರ್ಣ ಡಿಜಿಟಲ್:

ಆಂಡ್ರಾಯ್ಡ್, ಐಓಎಸ್ ಹಾಗೂ ಜಿಯೋ ಕಾಯ್-ಓಎಸ್ ಬೆಂಬಲವಿರುವ ಎಸ್‌ಡಿಕೆ ಮೂಲಕ ಈ ಸೌಲಭ್ಯವನ್ನು ಯಾವುದೇ ಡಿಜಿಟಲ್ ಆಪ್‌ನಲ್ಲಿ ಸಕ್ರಿಯಗೊಳಿಸಬಹುದಾಗಿದೆ. ಇದರಿಂದಾಗಿ ಹೆಚ್ಚಿನ ಜನರನ್ನು ತಲುಪಬಹುದು.

ಸಾಮಾಜಿಕ ಜಾಲತಾಣ:

ಸಾಮಾಜಿಕ ಜಾಲತಾಣ:

ಇದಲ್ಲದೇ ಜಿಯೋ ಸ್ಕ್ರೀನ್ಸ್ ಗೂಗಲ್, ಫೇಸ್‌ಬುಕ್, ಟ್ವಿಟರ್ ಮತ್ತಿತರ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದ್ದು, ಹೆಚ್ಚಿನ ಜನರನ್ನು ತಲುಪಲಿದೆ.

How to use WhatsApp in Kannada - GIZBOT KANNADA
ಟಾರ್ಗೆಟೆಡ್ ಜಾಹೀರಾತು

ಟಾರ್ಗೆಟೆಡ್ ಜಾಹೀರಾತು

ನಿರಂತರ ಕಲಿಕೆ ಹಾಗೂ ಹಿಮ್ಮಾಹಿತಿ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಅದು ದತ್ತಾಂಶ ವರದಿಗಾರಿಕೆಯನ್ನು ಬೆಂಬಲಿಸುತ್ತದೆ. ಪ್ರತಿ ಗ್ರಾಹಕರಿಗೂ ವಿಶಿಷ್ಟ ಪ್ರೊಫೈಲ್ ರೂಪಿಸುವ ಮೂಲಕ ಅದು ನಿರ್ದಿಷ್ಟ ಬಳಕೆದಾರರನ್ನು ಮಾತ್ರ ಉದ್ದೇಶಿಸಿದ (ಟಾರ್ಗೆಟೆಡ್) ಜಾಹೀರಾತುಗಳನ್ನೂ ಸಾಧ್ಯವಾಗಿಸುತ್ತದೆ.

Best Mobiles in India

English summary
Reliance Jio partners Screenz to create its digital engagement platform. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+