Home
ಸುದ್ದಿಜಾಲ

ಮತ್ತೊಂದು ಜಿಯೋ ಸ್ಪೋಟ!!..3 ಕೋಟಿ ಕಾಲೇಜು ವಿಧ್ಯಾರ್ಥಿಗಳಿಗೆ ಉಚಿತ ವೈ-ಫೈ!!?

ಕಾಲೇಜು ವಿಧ್ಯಾರ್ಥಿಗಳ ಆಧುನಿಕ ಶಿಕ್ಷಣ ದೃಷ್ಟಿಯಿಂದ ಈ ಸೌಲಭ್ಯ ಒದಗಿಸಲು ಬಯಸಿದ್ದೇವೆ ಎಂದು ರಿಲಯನ್ಸ್ ಜಿಯೋ ಪ್ರಸ್ತಾಪ ಸಲ್ಲಿಸಿದೆ ಎನ್ನಲಾಗಿದೆ.!!

By Bhaskar N J

ಕಳೆದ ಶುಕ್ರವಾರವಷ್ಟೆ ಉಚಿತ ಜಿಯೋ ಫೋನ್‌ ಘೋಷಿಸಿರುವ ರಿಲಯನ್ಸ್ ಸಂಸ್ಥೆ, ಈಗ ಕಾಲೇಜು 3 ಕೋಟಿಗೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ವೈ-ಫೈ ನೀಡಲು ಮುಂದಾಗಿದೆ.!! ಈ ಬಗ್ಗೆ ಹಿಂದುಸ್ಥಾನ್ ಪತ್ರಿಕೆ ವರದಿ ಮಾಡಿದ್ದು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ರಿಲಯನ್ಸ್ ಜಿಯೋ ಈ ಬಗ್ಗೆ ಪ್ರಸ್ತಾಪ ಸಲ್ಲಿಸಿದೆ ಎಂದು ತಿಳಿಸಿದೆ.!! .

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಡಿ ಇರುವ ಕಾಲೇಜುಗಳಿಗೆ ಜಿಯೋ ಉಚಿತ ವೈಫೈ ನೀಡಲು ಮುಂದಾಗಿದ್ದು, ಕಾಲೇಜು ವಿಧ್ಯಾರ್ಥಿಗಳ ಆಧುನಿಕ ಶಿಕ್ಷಣ ದೃಷ್ಟಿಯಿಂದ ಈ ಸೌಲಭ್ಯ ಒದಗಿಸಲು ಬಯಸಿದ್ದೇವೆ ಎಂದು ರಿಲಯನ್ಸ್ ಜಿಯೋ ಪ್ರಸ್ತಾಪ ಸಲ್ಲಿಸಿದೆ ಎನ್ನಲಾಗಿದೆ.!!

ಒಂದು ವೇಳೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಇದಕ್ಕೆ ಒಪ್ಪಿಗೆ ನೀಡಿದರೆ ಕೆಲವೇ ದಿವಸಗಳಲ್ಲಿ ಎಲ್ಲಾ ಕಾಲೇಜುಗಳಲ್ಲಿ ಜಿಯೋ ಉಚಿತ ವೈಫೈ ಸಿಗುತ್ತದೆ.!! ಹಾಗಾದರೆ, ಜಿಯೋ ಕಾಲೇಜು ವಿಧ್ಯಾರ್ಥಿಗಳಿಗೆ ಉಚಿತವಾಗಿ ವೈ-ಫೈ ನೀಡಲು ಮುಂದಾಗಿರುವುದುದೇಕೆ? ಇದರಿಂದ ಜಿಯೋಗೆ ಏನು ಲಾಭ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

38 ಸಾವಿರ ಕಾಲೇಜುಗಳಿಗೆ ಉಚಿತ ವೈಫೈ!!

38 ಸಾವಿರ ಕಾಲೇಜುಗಳಿಗೆ ಉಚಿತ ವೈಫೈ!!

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಡಿಯಲ್ಲಿ ದೇಶದಾಧ್ಯಂತ 38 ಸಾವಿರ ಕಾಲೇಜುಗಳಿದ್ದು, ಎಲ್ಲಾ ಕಾಲೇಜುಗಳಿಗೂ ಜಿಯೋ ಉಚಿತ ವೈಫೈ ನೀಡಲು ಮುಂದಾಗಿದೆ.!! ತಾಂತ್ರಿಕ ಮತ್ತು ತಾಂತ್ರಿಕೇತರ ಎಲ್ಲಾ ಕಾಲೇಜುಗಳಿಗೂ ಈ ಉಚಿತ ಫ್ರೀ ವೈ-ಫೈ ಸೌಲಭ್ಯ ಒದಗಿಸಲು ಮುಂದಾಗಿದೆ.!!

ಎಲ್ಲೇಡೇ ಜಿಯೋ ಹಾಟ್‌‌ಸ್ಪಾಟ್‌!!

ಎಲ್ಲೇಡೇ ಜಿಯೋ ಹಾಟ್‌‌ಸ್ಪಾಟ್‌!!

ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಸಂಪನ್ಮೂಲಗಳನ್ನು ಇಂಟರ್‌ನೆಟ್‌‌ ಮುಖಾಂತರ ಪಡೆಯಲು ಉಚಿತ ವೈ-ಫೈ ಸೌಲಭ್ಯ ನೀಡಲಾಗುತ್ತಿದೆ ಎಂದು ರಿಲಯನ್ಸ್ ಜಿಯೋ ಪ್ರಸ್ತಾಪದಲ್ಲಿ ತಿಳಿಸಿದೆ ಎಂದು ಇಂಗ್ಲೀಷ್ ಮಾಧ್ಯಮ ಮೂಲಗಳು ಹೇಳಿವೆ.!! ಇದಕ್ಕಾಗಿ, ಎಲ್ಲೇಡೇ ಜಿಯೋ ಹಾಟ್‌‌ಸ್ಪಾಟ್‌ ನೀಡಲಾಗುತ್ತದೆ.!!

ಯುವಜನತೆಯನ್ನು ಸೆಳೆಯಲು

ಯುವಜನತೆಯನ್ನು ಸೆಳೆಯಲು

ಜಿಯೋ ಕೇವಲ ಟೆಲಿಕಾಂ ಕಂಪೆನಿಗಳಿಗೆ ಮಾತ್ರ ಸೆಡ್ಡುಹೊಡೆಯಲು ನಿಂತಿಲ್ಲಾ. ಬದಲಾಗಿ ಫೇಸ್‌ಬುಕ್, ವಾಟ್ಸ್‌ಆಪ್ ಮತ್ತು ಇತರ ಬಹುರಾಷ್ಟ್ರೀಯ ಕಂಪೆನಿಗಳಿಗೂ ಸೆಡ್ಡು ಹೊಡೆಯಲು ಮುಂದಾಗಿದ್ದು, ಹಾಗಾಗಿ ಯುವಜನತೆಯನ್ನು ಸೆಳೆಯಲು ಈ ಆಫರ್ ನೀಡಲು ಮುಂದಾಗಿದೆ.!!

ಆಪ್ ಬಳಕೆಯೇ ಮುಖ್ಯ!!

ಆಪ್ ಬಳಕೆಯೇ ಮುಖ್ಯ!!

ಜಿಯೋ ಭವಿಷ್ಯ ಎಲ್ಲವೂ ಜಿಯೋವಿನ ಆಪ್‌ಬಳಕೆಯಲ್ಲಿಯೇ ಇದೆ.! ಹಾಗಾಗಿ, ಕಾಲೇಜು ವಿಧ್ಯಾರ್ಥಿಗಳೆಲ್ಲರೂ ತನ್ನದೇ ಆಪ್ ಬಳಕೆ ಮಾಡಬೇಕು ಎನ್ನುವ ಮಹದಾಸೆಯೊಂದಿಗೆ ಉಚಿತ ವೈ-ಫೈ ನೀಡುತ್ತಿದೆ ಎನ್ನುವ ರೂಮರ್ಸ್‌ಗಳು ಎಲ್ಲಡೆ ಹರಿದಾಡಿವೆ.!!

ಜಾಹಿರಾತು ಹಿಂದೆ ಜಿಯೋ!!

ಜಾಹಿರಾತು ಹಿಂದೆ ಜಿಯೋ!!

ಕಾಲೇಜು ವಿಧ್ಯಾರ್ಥಿಗಳಿಗೆ ಉಚಿತ ವೈಫೈ ನೀಡುತ್ತಿರುವ ಜಿಯೋ ಹಿಂದೆ ಕೂಡ ಬಹುದೊಡ್ಡ ಪ್ಲಾನ್ ಇದೆ.!! ಉಚಿತ ವೈ-ಫೈ ಮೂಲಕ ವಿಧ್ಯಾರ್ಥಿಗಳನ್ನು ಸೆಳೆಯಲು ಜಿಯೋ ಮುಂದಾಗಿದ್ದು, ಅವರು ಬಳಕೆ ಮಾಡುವ ಇಂಟರ್‌ನೆಟ್‌ನಲ್ಲಿ ಜಾಹಿರಾತುಗಳನ್ನು ನೀಡುವ ಮೂಲಕ ತನ್ನ ಆಧಾಯವನ್ನು ಪಡೆಯುತ್ತದೆ ಎಂದು ಟೆಲಿಕಾಂ ತಜ್ಞರು ಹೇಳಿದ್ದಾರೆ.!!

ಇದೇ ಮೊದಲು ಇಂತಹ ಪ್ರಸ್ತಾಪ!!

ಇದೇ ಮೊದಲು ಇಂತಹ ಪ್ರಸ್ತಾಪ!!

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಇದೇ ಮೊದಲ ಭಾರಿಗೆ ಟೆಲಿಕಾಂ ಕಂಪನಿಯಿಂದ ಇಂತಹದ್ದೊಂದು ಪ್ರಸ್ತಾಪ ಬಂದಿದೆ. ಹೀಗಾಗಿ ರಿಲಯನ್ಸ್ ಜಿಯೋ ಪ್ರಸ್ತಾಪವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
ಒಪ್ಪಿಗೆ ಸಿಗುವುದು ಕಷ್ಟ.!!

ಒಪ್ಪಿಗೆ ಸಿಗುವುದು ಕಷ್ಟ.!!

ಜಿಯೋ ಏನೋ ಕಾಲೇಜು ವಿಶ್ಯಾರ್ಥಿಗಳಿಗೆ ಉಚಿತವಾಗಿ ವೈ-ಫೈ ನೀಡಲು ಮುಂದಾಗಿದೆ. ಆದರೆ, ಭಾರತದ ಏಕಸಾಮ್ಯ ನಿಯಮವೂ ಜಿಯೋವಿನ ಈ ಸೇವೆಗೆ ಅಡ್ಡಿಯಾಗಬಹುದು ಎಂದ ಮಾತುಗಳು ಹರಿದಾಡಿವೆ.! ಬೇಸಿಕ್ ಇಂಟರ್‌ನೆಟ್‌ ನೀಡುವ ಫೇಸ್‌ಬುಕ್ ಯೋಜನೆಗೆ ಸರ್ಕಾರ ಒಪ್ಪಿರಲಿಲ್ಲ!!

Best Mobiles in India

English summary
Reliance Jio is upping the game in its drive to change the telecom industry.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+