Home
ಸುದ್ದಿಜಾಲ

Wow: ಒಂದೇ ರೀಚಾರ್ಜ್‌.. ಸಾಕಷ್ಟು ಡೇಟಾ, ಎಷ್ಟಾದ್ರೂ ಮಾತಾಡಿ.. Jio ಸೂಪರ್ ಯೋಜನೆಗಳಿವು!

ವಾವ್..! ಒಂದೇ ರೀಚಾರ್ಜ್‌ನಲ್ಲಿ ಇಷ್ಟೊಂದು ಲಾಭ. ಸಾಕಷ್ಟು ಡೇಟಾ, ಉಚಿತ ಕಾಲ್‌ ಸೌಲಭ್ಯ ಮತ್ತು ಬೊಂಬಾಟ್ ವ್ಯಾಲಿಡಿಟಿ. ಹೌದು, ರಿಲಯನ್ಸ್ ಜಿಯೋ (Reliance Jio) ಸ್ವತಃ ಜನಪ್ರಿಯ ಪ್ಲಾನ್‌ಗಳನ್ನು ಬಹಿರಂಗಪಡಿಸಿದೆ. ಈ ಯೋಜನೆಗಳು ಅನ್‌ಲಿಮಿಟೆಡ್ ವಾಯ್ಸ್‌ ಕಾಲ್, ಹೈ ಸ್ಪೀಡ್ ಡೇಟಾ ಮತ್ತು ಉಚಿತ ಎಸ್‌ಎಂಎಸ್ ಸೇರಿದಂತೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತವೆ. ಜೊತೆಗೆ JioTV, JioCinema ಮತ್ತು JioCloud ನಂತಹ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶ ನೀಡುತ್ತವೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಜಿಯೋ ತನ್ನ ಕೈಗೆಟುಕುವ ಬೆಲೆಯ ಪ್ಲಾನ್‌ಗಳು ಮತ್ತು ಅತ್ಯುತ್ತಮ ನೆಟ್‌ವರ್ಕ್‌ನೊಂದಿಗೆ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಕಂಪನಿಯು ಎಲ್ಲಾ ರೀತಿಯ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಪ್ರಿಪೇಯ್ಡ್ ರಿಚಾರ್ಜ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಮುಖ್ಯವಾಗಿ ಕಡಿಮೆ ಡೇಟಾ ಬಳಸುವ ಗ್ರಾಹಕರು ಅಥವಾ ಹೆಚ್ಚು ಸ್ಪೀಡ್ ಇಂಟರ್ನೆಟ್ ಬಯಸುವ ಬಹುತೇಕ ಬಳಕೆದಾರರಿಗೆ ಅನುಕೂಲವಾಗಲಿದೆ. ಈ ಲೇಖನದಲ್ಲಿ ನಾವು ಜಿಯೋದ ಜನಪ್ರಿಯ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸಿದ್ದೇವೆ. ಕಂಪನಿಯೇ ಈ ಪ್ಲಾನ್‌ಗಳ ಬಗ್ಗೆ ಮಾಹಿತಿ ನೀಡಿದೆ.

Wow: ಒಂದೇ ರೀಚಾರ್ಜ್‌.. ಸಾಕಷ್ಟು ಡೇಟಾ, ಫ್ರೀ ಕಾಲ್.. Jio ಸೂಪರ್ ಯೋಜನೆಗಳಿವು!

ಜಿಯೋ ಜನಪ್ರಿಯ ಯೋಜನೆಗಳಿವು!

  • ಜಿಯೋದ 249 ರೂ. ಪ್ಲಾನ್: 28 ದಿನಗಳ ವ್ಯಾಲಿಡಿಟಿ = ಉಚಿತ ಕರೆ, ನಿತ್ಯ 100 ಎಸ್‌ಎಂಎಸ್ ಮತ್ತು 1GB ಡೇಟಾ.
  • ಜಿಯೋದ 299 ರೂ. ಪ್ಲಾನ್: 28 ದಿನಗಳ ವ್ಯಾಲಿಡಿಟಿ = ಉಚಿತ ಕರೆ, ಪ್ರತಿದಿನ 100 ಎಸ್‌ಎಂಎಸ್ ಮತ್ತು 1.5 GB ಡೇಟಾ
  • ಜಿಯೋದ 399 ರೂ. ಪ್ಲಾನ್: 28 ದಿನಗಳ ವ್ಯಾಲಿಡಿಟಿ = ಉಚಿತ ಕರೆ, ಪ್ರತಿದಿನ 100 ಎಸ್‌ಎಂಎಸ್‌ ಮತ್ತು 2.5 GB ಡೇಟಾ
  • ಜಿಯೋದ 859 ರೂ. ಪ್ಲಾನ್: 84 ದಿನಗಳ ವ್ಯಾಲಿಡಿಟಿ = ಉಚಿತ ಕರೆ, ಪ್ರತಿದಿನ 100 SMS ಮತ್ತು 2GB ಡೇಟಾ

ಜಿಯೋ 249 ರೂ. ರೀಚಾರ್ಜ್ ಯೋಜನೆ

ಜಿಯೋ 249 ರೂ. ರೀಚಾರ್ಜ್ ಪ್ಲಾನ್ ಮಾಸಿಕ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ನೀವು 28 ದಿನಗಳ ವ್ಯಾಲಿಡಿಟಿಯೊಂದಿಗೆ ಒಟ್ಟು 28GB ಡೇಟಾವನ್ನು ಪಡೆಯಬಹುದು. ಅಂದರೆ ನೀವು ನಿತ್ಯ 1GB ಡೇಟಾ ಬಳಸಬಹುದು. ಇದರೊಂದಿಗೆ, ಉಚಿತ ಕರೆ ಮತ್ತು 100 ಎಸ್‌ಎಂಎಸ್‌ (SMS) ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ.

ಜಿಯೋ 299 ರೂ. ರೀಚಾರ್ಜ್ ಪ್ಲಾನ್

ಜಿಯೋ 299 ರೂ. ರೀಚಾರ್ಜ್‌ನಲ್ಲಿ 1.5GB ಡೇಟಾ ಲಭ್ಯವಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರೊಂದಿಗೆ, ಉಚಿತ ಕಾಲ್ ಮತ್ತು ಪ್ರತಿದಿನ 100 ಎಸ್‌ಎಂಎಸ್‌ ಸೌಲಭ್ಯವನ್ನು ಸಹ ಒದಗಿಸಲಾಗುತ್ತದೆ.

Wow: ಒಂದೇ ರೀಚಾರ್ಜ್‌.. ಸಾಕಷ್ಟು ಡೇಟಾ, ಫ್ರೀ ಕಾಲ್.. Jio ಸೂಪರ್ ಯೋಜನೆಗಳಿವು!

ಜಿಯೋ 399 ರೂ. ರೀಚಾರ್ಜ್ ಯೋಜನೆ

ಈ ಯೋಜನೆಯು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರ ಬೆಲೆ 399 ರೂ. ಆಗಿದೆ. ಈ ಪ್ಲಾನ್‌ನಲ್ಲಿ ಪ್ರತಿದಿನ 2.5GB ಡೇಟಾ ಬಳಸಬಹುದು. ಜೊತೆಗೆ ಅನ್‌ಲಿಮಿಟೆಡ್ ಉಚಿತ ಕಾಲ್ (ಕರೆ) ಮತ್ತು ನಿತ್ಯ 100 ಎಸ್ಎಂಎಸ್ ಸೌಲಭ್ಯ ನೀಡಲಾಗುತ್ತದೆ.

ಜಿಯೋ 859 ರೂ. ರೀಚಾರ್ಜ್ ಪ್ಲಾನ್

ಜಿಯೋ 859 ರೂ. ರೀಚಾರ್ಜ್‌ನಲ್ಲಿ ದಿನಕ್ಕೆ 2GB ಡೇಟಾ ಲಭ್ಯವಿದೆ. ಈ ಯೋಜನೆಯು 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದು ಉಚಿತ ಅನ್‌ಲಿಮಿಟೆಡ್ ಕರೆ, ದಿನಕ್ಕೆ 100 ಎಸ್‌ಎಂಎಸ್ ಮತ್ತು ಜಿಯೋಸಿನಿಮಾ, ಜಿಯೋಟಿವಿ ಮತ್ತು ಜಿಯೋ ಕ್ಲೌಡ್‌ಗೆ ಚಂದಾದಾರಿಕೆಯನ್ನು ಸಹ ನೀಡಲಾಗುತ್ತದೆ.

ಪ್ರಸ್ತುತ, ರಿಲಯನ್ಸ್ ಜಿಯೋ ತನ್ನ ಸೈಟ್‌ನಲ್ಲಿ ಜನಪ್ರಿಯ ಪ್ಲಾನ್‌ಗಳನ್ನು ಪಟ್ಟಿಮಾಡಿದೆ. ಇದರಲ್ಲಿ ಕೆಲವು ಯೋಜನೆಗಳನ್ನು ಸೇರಿಸಿದೆ. ಈ ಪ್ಲಾನ್‌ಗಳು ನಿಮಗೆ ಇಷ್ಟವಾದರೆ, ಕೂಡಲೇ ರೀಚಾರ್ಜ್ ಮಾಡಿಕೊಳ್ಳಿ. ಈ ಯೋಜನೆಗಳ ಪ್ರಯೋಜನ ಪಡೆಯಿರಿ.

Best Mobiles in India

English summary
Reliance Jio popular plans with free calling and internet data: know details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+