ಜಿಯೋ ಪೋಸ್ಟ್‌ಪೇಡ್ ಗ್ರಾಹಕರಾದರೆ ಸಿಗಲಿದೆ ಬಂಪರ್ ಕೊಡುಗೆ!!
ಟೆಲಿಕಾಂ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಪೋಸ್ಟ್‌ಪೇಡ್ ಆಫರ್ ಅನ್ನು ಪರಿಚಯಿಸಿರುವ ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಪೋಸ್ಟ್‌ಪೇಡ್ ಗ್ರಾಹಕರಾಗುವುದು ಹೇಗೆ ಎಂಬುದನ್ನು ತಿಳಿಸಿದೆ. ಇಲ್ಲಿಯವರೆಗೂ ಪ್ರೀಪೇಡ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದ ಜಿಯೋ ಪೋಸ್ಟ್‌ಪೆಡ್ ಮಾರುಕಟ್ಟೆಯಲ್ಲಿ ಮತ್ತೊಂದು ಹೆಜ್ಜೆಯನ್ನು ಇರಿಸಲು ಮುಂದಾಗಿದೆ.
ಈಗಾಗಲೇ 15 ಕೋಟಿಗೂ ಹೆಚ್ಚು ಗ್ರಾಹಕರನ್ನು ಸೆಳೆದಿರುವ ಜಿಯೋ, ಇನ್ಮುಂದೆ ಅವರನ್ನು ತನ್ನಲ್ಲಿಯೇ ಉಳಿಯುವ ಅಲುವಾಗಿ ಪೋಸ್ಟ್ ಪೇಯ್ಡ್ ಬಳಕೆದಾರರನ್ನು ಪ್ರೇರೇಪಿಸಲು ಮುಂದಾಗಿದೆ. ಈಗಿರುವ ಜಿಯೋ ಪ್ರೀಪೇಡ್ ಗ್ರಾಹಕರೇ ಜಿಯೋ ಪೋಸ್ಟ್‌ಪೇಡ್ ಗ್ರಾಹಕರಾಗಲು ಜಿಯೋ ಅನುಮತಿಸಿದೆ ಮತ್ತು ಕಾರ್ಯವನ್ನು ಸರಳಗೊಳಿಸಿದೆ.

ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯ ಜಿಯೋ ನೀಡಿರುವ ಪೋಸ್ಟ್‌ಪೇಡ್ ಆಫರ್ ಕ್ರಾಂತಿಕಾರಿಕ ಹೆಜ್ಜೆಯಾಗಿದೆ.ಹಾಗಾದರೆ, ಜಿಯೋವಿನ ನೂತನ ಪೋಸ್ಟ್‌ಪೇಡ್ ಆಫರ್ ಹೇಗಿದೆ? ಜಿಯೋವಿನ ಪೋಸ್ಟ್‌ಪೇಡ್ ಆಫರ್‌ನಿಂದ ಗ್ರಾಹಕರಿಗೆ ಏನೆಲ್ಲಾ ಲಾಭಗಳಿವೆ? ಮತ್ತು ಜಿಯೋ ಪ್ರೀಪೇಡ್ ಗ್ರಾಹಕರು ಪೋಸ್ಟ್‌ಪೇಡ್ ಗ್ರಾಹಕರಾಗುವುದು ಹೇಗೆ? ಎಂಬುದನ್ನು ಮುಂದೆ ತಿಳಿಯಿರಿ.

ಹೆದರಿದೆ ಟೆಲಿಕಾಂ ಪ್ರಪಂಚ!!
ಜಿಯೋ ಪೋಸ್ಟ್‌ಪೇಡ್ ಸೇವೆಯನ್ನು ಆರಂಭಿಸುವ ಸುದ್ದಿ ಪ್ರಕಟಿಸಿದ ನಂತರದ ಪ್ರೀಪೇಯ್ಡ್ ಬಳಕೆದಾರರನ್ನು ಕಳೆದುಕೊಂಡ ಏರ್‌ಟೆಲ್ ಮತ್ತು ಇತರೆ ಟೆಲಿಕಾಂ ಕಂಪೆನಿಗಳಿಗೆ ಈಗ ಭಯ ಉಂಟಾಗಿದೆ. ಈಗಾಗಲೇ, ಕೋಟ್ಯಾಂತರ ಗ್ರಾಹಕರನ್ನು ಕಳೆದುಕೊಂಡಿರುವ ಈ ಟೆಲಿಕಾಂಗಳಿಗೆ ಇದೇ ಪರಿಸ್ಥಿತಿ ಎದುರಾದರೆ ಮುಚ್ಚುವ ಪರಿಸ್ಥಿತಿ ಸಹ ಬರಬಹುದು.

ಜಿಯೋ ರೂ.199 ಪ್ಲಾನ್
ಜಿಯೋ ಬಳಕೆದಾರರಿಗೆ ರೂ.199ಕ್ಕೆ ತಿಂಗಳ ಪೋಸ್ಟ್‌ಪೃಡ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬಳಕೆದಾರರನ್ನು ಸೆಳೆಯಲು ಮುಂದಾಗಿದೆ. ಬೇರೆ ಯಾವುದೇ ಟೆಲಿಕಾಂ ಕಂಪನಿಗಳು ಈ ಮಾದರಿಯ ಆಫರ್ ಅನ್ನು ಈ ವರೆಗೂ ನೀಡಿಲ್ಲದೇ ಇರುವುದು ಈ ಅಫರ್‌ನ ವಿಶೇಷತೆಯಾಗಿದೆ.

ಪ್ರತಿ ತಿಂಗಳು 25GB ಡೇಟಾ!!
ಜಿಯೋ ರೂ.199ಕ್ಕೆ ಪೋಸ್ಟ್ ಪೇಯ್ಡ್ ಆಫರ್ ಮೂಲಕ ಬಳಕೆದಾರರಿಗೆ ತಿಂಗಳಿಗೆ 25GB 4G ಡೇಟಾವನ್ನು ಬಳಕೆಗೆ ನೀಡಲಿದೆ. ಪ್ರತಿ ತಿಂಗಳು ಕೇವಲ 199 ರೂಪಾಯಿಗಳಿಗೆ ಈ ಆಫರ್ ಅನ್ನು ಜಿಯೋ ಬಿಡುಗಡೆ ಮಾಡುತ್ತಿರುವುದರಿಂದ, ಜಿಯೋ ಬಳಕೆದಾರರು ಇತರೆ ಟೆಲಿಕಾಂ ಕಂಪನಿಗಿಂತಲೂ ಎರಡು ಪಟ್ಟು ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು.

ಕೇವಲ 20 ರೂ.1GB ಡೇಟಾ!!
ಜಿಯೋ ರೂ.199ಕ್ಕೆ ಪೋಸ್ಟ್ ಪೇಯ್ಡ್ ಆಫರ್ ಮೂಲಕ ಬಳಕೆದಾರರಿಗೆ ತಿಂಗಳಿಗೆ 25GB 4G ಡೇಟಾವನ್ನು ನೀಡಿದೆ. ಬಳಕೆದಾರರ ಡೇಟಾ ಏನಾದರೂ ಮೊದಲೇ ಖಾಲಿಯಾದರೆ ಅವರಿಗೆ ಆಡ್ ಆನ್ ಡೇಟಾ ನೀಡಲು ಮುಂದಾಗಿದೆ. ಕೇವಲ 20 ರೂ.1GB ಡೇಟಾವನ್ನು ಜಿಯೋ ಗ್ರಾಹಕರು ಪಡೆಯಬಹುದಾಗಿದೆ.

ಉಚಿತ ಕರೆ, ಉಚಿತ ಎಸ್‌ಎಮ್‌ಎಸ್!
ಈಗಾಗಲೇ ಪ್ರೀ ಪೇಯ್ಡ್ ಬಳಕೆದಾರರಿಗೆ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ನೀಡಿರುವ ಜಿಯೋ, ಕೇವಲ 199 ರೂಪಾಯಿಗಳಿಗೆ ಪೋಸ್ಟ್ ಪೇಯ್ಡ್ ಬಳಕೆದಾರರಿಗೂ ಸಂಪೂರ್ಣ ವಾಗಿ ಉಚಿತ ಕರೆ ಮಾಡುವ ಮತ್ತು ಮೇಸೆಜ್ ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ಅಂತರಾಷ್ಟ್ರೀಯ ಕರೆಗಳು!!
ಜಿಯೋ ಫೋಸ್ಟ್ ಪೇಯ್ಡ್ ಅನ್ನು ಗ್ರಾಹಕರು ಆಯ್ದುಕೊಳ್ಳಲು ಜಿಯೋವಿನ ಮೊದಲ ಪೋಸ್ಟ್‌ಪೇಡ್ ಆಫರ್ ಹೊಂದಿರುವ ಮತ್ತೊಂದು ಸೇವೆ ಕಾರಣವಾಗಲಿದೆ. ಅಂತರಾಷ್ಟ್ರೀಯ ಕರೆಗಳು ಪ್ರತಿ ನಿಮಿಷಕ್ಕೆ 50 ಪೈಸೆಯಿಂದ ಶುರುವಾಗಲಿದೆ. ಹಾಗಾಗಿ, ಇನ್ನು ಲೋಕಲ್ ಬೆಲೆಯಲ್ಲಿ ಅಂತರಾಷ್ಟ್ರೀಯ ಕರೆಗಳನ್ನು ಮಾಡಬಹುದು.!

ಪೋಸ್ಟ್‌ಪೇಡ್ ಗ್ರಾಹಕರಾಗುವುದು ಹೇಗೆ?
ಹೊಸ ಗ್ರಾಹಕರು ಜಿಯೋ ಪೋಸ್ಟ್‌ಪೇಡ್ ಸಿಮ್ ಅನ್ನು ನೇರವಾಗಿ ಖರೀದಿಸಬಹುದು. ಇನ್ನು ಜಿಯೋ ಪ್ರೀಪೇಡ್ ಗ್ರಾಹಕರು ಜಿಯೋವಿನ ಅಫಿಷಿಯಲ್ ವೆಬ್‌ಸೈಟ್ ತೆರೆದು ಹಲೊ ಜಿಯೋ ಪೋಸ್ಟ್‌ಪೇಡ್ ಆಯ್ದುಕೊಂಡರೆ, ಅಲ್ಲಿ ಗೆಟ್ ನೌ ಎಂಬ ಆಯ್ಕೆ ಕಾಣಿಸುತ್ತದೆ. ನಂತರ ಅದನ್ನು ಕ್ಲಿಕ್ ಮಾಡಿ 'ಪ್ರಿ ಟು ಪೋಸ್ಟ್' ಆಯ್ಕೆ ಮೂಲಕ ಜಿಯೋ ಪ್ರೀಪೇಡ್ ಗ್ರಾಹಕರು ಪೋಸ್ಟ್‌ಪೇಡ್ ಗ್ರಾಹಕರಾಗಬಹುದು. ( http://www.jio.com/postpaid)

'ಲೆನೊವೊ ಜೆಡ್ 5' ಸ್ಮಾರ್ಟ್‌ಫೋನ್ ಖರೀದಿಸಲು ಕ್ಯೂ ನಿಲ್ಲೋದು ಖಂಡಿತ!!..ಏಕೆ ಗೊತ್ತಾ?
ಮೊಬೈಲ್ ಮಾರುಕಟ್ಟೆಯಲ್ಲಿ ನಿರೀಕ್ಷೆ ಹುಟ್ಟಿಸಿದ ನಂತರ ಬಿಡುಗಡೆಯಾಗುವ ಸ್ಮಾರ್ಟ್‌ಪೋನ್‌ಗಳು ಕೈಕೊಟ್ಟಿರುವುದನ್ನು ನಾವು ನೋಡಬಹುದು. ಆದರೆ, ಮೊಬೈಲ್ ಮಾರುಕಟ್ಟೆಯಲ್ಲಿ ಇಲ್ಲಿಯವರೆಗೂ ಸ್ವಲ್ಪವೂ ಸದ್ದನ್ನೇ ಮಾಡದ ಒಂದು ಬಜೆಟ್ ಸ್ಮಾರ್ಟ್‌ಫೋನ್ ಇಂದು ಬಿಡುಗಡೆಯಾಗಿ ಮೊಬೈಲ್ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.
ಹೌದು, ನಾವು ಸ್ವಲ್ಪ ಹೆಚ್ಚಾಗಿ ಹೇಳುತ್ತಿದ್ದೇವೆ ಎಂದು ನಿಮಗನಿಸಿದರೂ ಕೂಡ ಇದು ಸತ್ಯ. ಚೀನಾ ಮೂಲದ ಮೊಬೈಲ್ ತಯಾರಿಕಾ ಕಂಪೆನಿಯಾದ ಲೆನೊವೊ ಇಂದು ಶಿಯೋಮಿ ಸ್ಮಾರ್ಟ್‌ಫೋನ್‌ಗಳನ್ನು ಸಹ ಮೀರಿಸುವಂತಹ 'ಲೆನೊವೊ ಜೆಡ್ 5' ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ. ಈ ಫೋನಿನ ಬೆಲೆ ಮತ್ತು ಫೀಚರ್ಸ್ ಕೂಡ ಗ್ರಾಹಕರನ್ನು ಸೆಳೆಯುತ್ತದೆ.
ಆಪಲ್ ಐಫೋನ್ ಎಕ್ಸ್ ನೋಚ್ ಮಾದರಿ ಡಿಸ್‌ಪ್ಲೇ, ಸ್ನ್ಯಾಪ್‌ಡ್ರಾಗಲ್ 636 ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ ಓರಿಯೊನಂತಹ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಈಗ ವೈರಲ್ ಆಗಿದೆ. ಹಾಗಾದರೆ, ಶಿಯೋಮಿ ಫೋನ್‌ಗಳನ್ನು ಮೀರಿಸಿರುವ 'ಲೆನೊವೊ ಜೆಡ್ 5' ಸ್ಮಾರ್ಟ್‌ಫೋನ್ ಪೂರ್ತಿ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಪ್ರೊಸೆಸರ್ ಯಾವುದು?
ಶಿಯೋಮಿಗೆ ಸೆಡ್ಡುಹೊಡೆಯಲು ಮುಂದಾಗಿರುವ ಲೆನೊವೊ ಕಂಪೆನಿ 'ಲೆನೊವೊ ಜೆಡ್ 5' ಸ್ಮಾರ್ಟ್‌ಫೋನಿನಲ್ಲಿ ಸ್ನ್ಯಾಪ್‌ಡ್ರಾಗಲ್ 636 ಪ್ರೊಸೆಸರ್ ಅನ್ನು ಅಳವಡಿಸಿದೆ. ಈ ಮೂಲಕ ಮಧ್ಯಮ ಬಜೆಟ್ ಸ್ಮಾರ್ಟ್‌ಫೋನಿನ ಫೀಚರ್ ಒಂದನ್ನು ಲೆನೊವೊ ಕಂಪೆನಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನಿನಲ್ಲಿ ತಂದಿದೆ.

RAM ಮತ್ತು ಮೆಮೊರಿ.
ಸ್ನ್ಯಾಪ್‌ಡ್ರಾಗಲ್ 636 ಪ್ರೊಸೆಸರ್ ಅನ್ನು ಹೊಂದಿರುವ 'ಲೆನೊವೊ ಜೆಡ್ 5' ಸ್ಮಾರ್ಟ್‌ಫೋನ್ 6GB RAM / 64GB ಆಂತರಿಕ ಮೆಮೊರಿ ಮತ್ತು 6GB RAM / 128GB ಆಂತರಿಕ ಮೆಮೊರಿ ಹೊಂದಿರುವ ಎರಡು ವೇರಿಯಂಟ್‌ಗಳಲ್ಲಿ ಮಾರುಕಟ್ಟೆಗೆಬಂದಿದೆ. ಎಸ್‌ಡಿ ಕಾರ್ಡ್ ಮೂಲಕ ಸ್ಮಾರ್ಟ್‌ಫೋನ್ (256GB ವರೆಗೆ) ಮೆಮೊರಿಯನ್ನು ಹೆಚ್ಚಿಸಿಕೊಳ್ಳುವ ಆಯ್ಕೆ ಕೂಡ ಇದೆ.

ಡ್ಯುಯಲ್ ಕ್ಯಾಮೆರಾ ಸೆಟಪ್!
ಲೆನೊವೊ ಜೆಡ್ 5' ಸ್ಮಾರ್ಟ್‌ಫೋನ್ 16-ಮೆ ಮತ್ತು 8-ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. AI ಸಾಮರ್ಥ್ಯದೊಂದಿಗೆ, HDR +, 4K ಬೆಂಬಲ, f / 2.0 ಅಪಾರ್ಚರ್ ಮತ್ತು ಎಲ್ಇಡಿ ಫ್ಲಾಶ್ ಲಭ್ಯವಿದೆ. ಇನ್ನು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಎಫ್ / 2.0 ಅಪಾರ್ಚರ್ ಇದೆ. ಪೂರ್ಣ ಹೆಚ್‌ಡಿ ಸೆಲ್ಫಿ ವಿಡಿಯೋ ರೆಕಾರ್ಡಿಂಗ್ ಫೀಚರ್ ಹೊಂದಿದೆ.


ಇತರೆ ಏನೆಲ್ಲಾ ಫೀಚರ್ಸ್?
ಲೆನೊವೊ ಜೆಡ್ 5' ಸ್ಮಾರ್ಟ್‌ಫೋನ್ 3300 ಎಮ್ಎಹೆಚ್ ಬ್ಯಾಟರಿ ಮತ್ತು 18 ವ್ಯಾಟ್ ವೇಗದ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. 4ಜಿ ಎಲ್ ಟಿಇ, ಹಾಟ್‌ಸ್ಪಾಟ್, ಬ್ಲೂಟೂತ್ ವಿ 5.0, ಜಿಪಿಎಸ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಮತ್ತು ಯುಎಸ್ ಟೈಪ್ ಸಿ ಜೊತೆಗೆ ಡ್ಯುಯಲ್ ಬ್ಯಾಂಡ್ ವೈ-ಫೈ 802.11ac ಫೀಚರ್ಸ್ ಒಳಗೊಂಡಿದೆ.

ಲೆನೊವೊ ಜೆಡ್ 5 ಬೆಲೆ?
6 ಜಿಬಿ RAM / 64 ಜಿಬಿ ಶೇಖರಣಾ ರೂಪಾಂತರದ ಲೆನೊವೊ ಜೆಡ್ 5 ಬೆಲೆ ಚೀನಾದಲ್ಲಿ 1,399 ಸಿಎನ್‌ವೈಗಳಿಗೆ ಬಿಡುಗಡೆಯಾಗಿದೆ. ಅಂದರೆ ಭಾರತದಲ್ಲಿ ಸರಿಸುಮಾರು ರೂ 13,000 ಸಾವಿರ ರೂಪಾಯಿಗಳಿಂದ 14,000 ರೂಪಾಯಿಗಳಾಗಿರಲಿದೆ. ಇನ್ನು 6 ಜಿಬಿ ರಾಮ್ / 128 ಜಿಬಿ ರೂಪಾಂತರದ ಬೆಲೆ 1,799 ಸಿಎನ್‌ವೈಗಳಾಗಿವೆ. ಇದರ ಸರಿಸುಮಾರು ಬೆಲೆ ರೂ .18,900 ರೂಪಾಯಿಗಳಾಗಿರಲಿದೆ.


Click it and Unblock the Notifications








