ಪ್ರತಿದಿನ 2GBಗಿಂತಲೂ ಹೆಚ್ಚು ಡೇಟಾ ಹೊಂದಿರುವ ಜಿಯೋವಿನ ಹೊಸ ಆಫರ್‌ಗಳಿವು!!
ಜಿಯೋ ಬಂದ ನಂತರ ಡೇಟಾ ಬಳಕೆ ಪ್ರಮಾಣ ಹೆಚ್ಚಾಗಿದ್ದು, ಗ್ರಾಹಕರು ಹೆಚ್ಚು ಡೇಟಾ ಹೊಂದಿರುವ ಆಫರ್‌ಗಳ ಕಡೆ ಮುಖಮಾಡಿದ್ದಾರೆ.!
ಒಂದು ಸಮಯದಲ್ಲಿ ಒಂದು ಜಿಬಿ ಡೇಟಾವನ್ನು ಒಂದು ತಿಂಗಳವರೆಗೆ ಉಪಯೋಗಿಸುತ್ತಿದ್ದ ಎಷ್ಟೋ ಜನರಿಗೆ ಇಂದು ಪ್ರತಿದಿನ ಒಂದು ಜಿಬಿ ಡೇಟಾ ಸಾಲುತ್ತಿಲ್ಲ ಎಂದರೆ ನಂಬಲೇಬೇಕು.! ಹೌದು, ಜಿಯೋ ಬಂದ ನಂತರ ಡೇಟಾ ಬಳಕೆ ಪ್ರಮಾಣ ಹೆಚ್ಚಾಗಿದ್ದು, ಗ್ರಾಹಕರು ಹೆಚ್ಚು ಡೇಟಾ ಹೊಂದಿರುವ ಆಫರ್‌ಗಳ ಕಡೆ ಮುಖಮಾಡಿದ್ದಾರೆ.!
ಆದರೆ, ಟೆಲಿಕಾಂ ಪ್ರಪಂಚಕ್ಕೆ ಡೇಟಾ ಮೂಲಕ ಎಂಟ್ರಿ ನೀಡಿ ದರಸಮರ ಸೃಷ್ಟಿಸಿಸ ಜಿಯೋವನ್ನು ಮಾತ್ರ ಯಾವ ಟೆಲಿಕಾಂಗಳು ಮೀರಿಸಲು ಸಾಧ್ಯವಾಗುತ್ತಿಲ್ಲ.! ಹಾಗಾದರೆ, 2GBಗಿಂತಲೂ ಹೆಚ್ಚು ಡೇಡಾ ಹೊಂದಿರುವ ಜಿಯೋ ಆಫರ್‌ಗಳು ಯಾವುವು? ಮತ್ತು ಜಿಯೊವಿನ ಅನ್‌ಲಿಮಿಟೆಡ್ ಆಪರ್‌ಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಜಿಯೋ 509ರೂ. ರಿಚಾರ್ಜ್ ಆಫರ್!!
ಪ್ರತಿದಿನ ಎರಡು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಆಫರ್ ಹೊಂದಿರುವ ಜಿಯೋ 509ರೂ. ರಿಚಾರ್ಜ್ ಆಫರ್ ಪ್ರಸ್ತುತ 2GB ಡೇಟಾ ಹೊಂದಿರುವ ಅತ್ಯುತ್ತಮ ಆಫರ್ ಆಗಿದೆ. ಈ ರೀಚಾರ್ಜ್ ಪ್ಯಾಕ್‌ನಲ್ಲಿ 98 ಜಿಬಿ ಗರಿಷ್ಠ ವೇಗದ ಡೇಟಾ ಲಭ್ಯವಿದ್ದು ಜೊತೆಗೆ 49 ದಿನಗಳ ವ್ಯಾಲಿಡಿಟಿ ಹೊಂದಿದೆ.!!

ಜಿಯೋ 799ರೂ. ರಿಚಾರ್ಜ್ ಆಫರ್!!
ಜಿಯೋ 799ರೂ. ರಿಚಾರ್ಜ್ ಆಫರ್ ಮೂಲಕ ಪ್ರತಿದಿನ 3 ಜಿಬಿ ಡೇಟಾ ಮತ್ತು ಅನ್‌ಲಿಮಿಟೆಡ್ ಆಫರ್‌ಗಳನ್ನು ಒದಗಿಸಿದೆ. ಜಿಯೋವಿನ ಎಲ್ಲಾ ಸೇವೆಗಳನ್ನು ಉಚಿತವಾಗಿ ಪಡೆಯಬಹುದಾದ ಈ ರೀಚಾರ್ಜ್ ಪ್ಯಾಕ್ 28 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದ್ದು, ಗರಿಷ್ಟ 84 ಜಿಬಿ ಡೇಟಾ ಗ್ರಾಹಕರಿಗೆ ದೊರೆಯಲಿದೆ.!!

ಜಿಯೋ 999ರೂ. ರಿಚಾರ್ಜ್ ಆಫರ್.!!
ಪ್ರತಿದಿನ ಡೇಟಾ ಬಳಕೆಗೆ ಲಿಮಿಟ್ ಹೊಂದಿರದ ಮೊದಲ ಜಿಯೋ ಆಫರ್ ಈ ಜಿಯೋ 999ರೂ. ರಿಚಾರ್ಜ್ ಆಫರ್.! 999ರೂಪಾಯಿಗಳಿಗೆ 90 ದಿವಸಗಳ ವ್ಯಾಲಿಡಿಟಿಯೊಂದಿಗೆ ಈ ಆಫರ್ ಲಭ್ಯವಿದ್ದು, ಅನ್‌ಲಿಮಿಟೆಡ್ ಕರೆ ಮತ್ತು 60BG ಡೇಟಾವನ್ನು ಒಳಗೊಂಡಿದೆ.! 90 ದಿವಸಗಳಲ್ಲಿ ಯಾವಾಗಲಾದರೂ ಡೇಟಾವನ್ನು ಬಳಸಿಕೊಳ್ಳಲಾಗಿದೆ.!!

ಜಿಯೋ 1999ರೂ. ರಿಚಾರ್ಜ್ ಆಫರ್.!!
ಜಿಯೋವಿನ ರೂ. ರಿಚಾರ್ಜ್ ಆಫರ್ ಅನ್ನು ಡಬಲ್ ಮಾಡಿದರೆ ಜಿಯೋವಿನ 1999ರೂ. ರಿಚಾರ್ಜ್ ಆಫರ್ ಆಗುತ್ತದೆ. ಅಂದರೆ, 1999 ರೂಪಾಯಿಗಳಿಗೆ 180 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುವ ಈ ಆಫರ್‌ನಲ್ಲಿ ಗ್ರಾಹಕರು ಅನ್‌ಲಿಮಿಟೆಡ್ ಕರೆ ಮತ್ತು 125 GB ಡೇಟಾವನ್ನು ಪಡೆಯಲಿದ್ದಾರೆ.!!

ಜಿಯೋ 4999ರೂ. ರಿಚಾರ್ಜ್ ಆಫರ್.!!
ವರ್ಷದ ಆಫರ್ ಎಂದು ಹೆಸರಾಗಿರುವ ಜಿಯೋ 4999ರೂ. ರಿಚಾರ್ಜ್ ಆಫರ್ ವಾರ್ಷಿಕವಾಗಿ ರೀಚಾರ್ಜ್ ಮಾಡಿಸುವ ಗ್ರಾಹಕರಿಗೆ ಅತ್ಯುತ್ತಮ ಆಫರ್.!! 360 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುವ ಈ ಆಫರ್‌ನಲ್ಲಿ ಗ್ರಾಹಕರು ಅನ್‌ಲಿಮಿಟೆಡ್ ಕರೆ ಮತ್ತು 350GB ಡೇಟಾವನ್ನು ಪಡೆಯಲಿದ್ದಾರೆ.!!


Click it and Unblock the Notifications








