ಈ ವರ್ಷದಲ್ಲಿ 80 ಸಾವಿರ ಜನರಿಗೆ ಉದ್ಯೋಗ ನೀಡಲಿದೆಯಂತೆ ಜಿಯೋ!!
ಭಾರತೀಯ ಟೆಲಿಕಾಂ ಪ್ರಪಂಚದಲ್ಲಿ ಪ್ರಸ್ತುತ ದಿಗ್ಗಜನಾಗಿ ಮೆರೆಯುತ್ತಿರುವ ಜಿಯೋ ಕಂಪೆನಿ ತನ್ನ ಉದ್ಯಮದ ವಿಸ್ತಾರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಹಾಗಾಗಿಯೇ, ಪ್ರಸಕ್ತ ಹಣಕಾಸು ವರ್ಷದಲ್ಲಿ ರಿಲಯನ್ಸ್ ಜಿಯೊ 75 ರಿಂದ 80 ಸಾವಿರದವರೆಗೆ ಜನರನ್ನು ನೇಮಕಾತಿ ಮಾಡಲಿದೆ ಎಂದು ಜಿಯೋ ಮೂಲಗಳು ಮಾಹಿತಿ ನೀಡಿವೆ.!
ಹೌದು, ಹೊಸ ಹೊಸ ಹಲವು ಉದ್ಯಮಗಳು ನಮಗಾಗಿ ತೆರೆದಿರುತ್ತವೆ. ಜಿಯೊ ಪೇಮೆಂಟ್ ಬ್ಯಾಂಕ್ ಕೂಡ ಭೌಗೋಳಿಕವಾಗಿ ವಿತರಣೆಯಾಗುತ್ತದೆ. ಮುಂದಿನ ದಿನಗಳಲ್ಲಿ ಜಿಯೊ ಜೊತೆ ಇನ್ನಷ್ಟು ಮಂದಿ ನೌಕರರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ರಿಲಯನ್ಸ್ ಜಿಯೊದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸಂಜಯ್ ಜೊಗ್ ತಿಳಿಸಿದ್ದಾರೆ.

ಪ್ರಸ್ತುತ ರಿಲಯನ್ಸ್ ಜಿಯೋವಿ ಹುದ್ದೆಗಳಿಗಾಗ 1,57,000 ಉದ್ಯೋಗಿಗಳು ಅರ್ಜಿ ಸಲ್ಲಿಸಿದ್ದಾರೆ. ಕಂಪೆನಿಗೆ ಅಭ್ಯರ್ಥಿಗಳನ್ನು ಉಲ್ಲೇಖದ ಮೂಲಕ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮಾಡಲಾಗುವುದು. ಜಿಯೋವಿನಲ್ಲಿ ಉದ್ಯೋಗ ಪಡೆಯುವ ಆಕಾಂಕ್ಷೆ ಹೊಂದಿರುವವರಿಗೆ ತರಬೇತಿಯನ್ನು ನೀಡಲಾಗುವುದು ಎಂದು ಸಂಜಯ್ ಜೊಗ್ ತಿಳಿಸಿದ್ದಾರೆ.

ದೇಶಾದ್ಯಂತ 6,000 ಕಾಲೇಜುಗಳು, ತಾಂತ್ರಿಕ ಸಂಸ್ಥೆಗಳ ಜೊತೆ ರಿಲಯನ್ಸ್ ಜಿಯೊ ಕಂಪೆನಿ ಸಹಯೋಗವನ್ನು ಹೊಂದಿದೆ. ಈ ಸಂಸ್ಥೆಗಳಲ್ಲಿ ತಂತ್ರಜ್ಞಾನ ಸೇರಿದಂತೆ ಹಲವು ವಿಭಾಗಗಳ ಬಗ್ಗೆ ಕೆಲವು ಕೋರ್ಸ್‌ಗಳನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಅದರಲ್ಲಿ ತೇರ್ಗಡೆ ಹೊಂದಿದವರನ್ನು ಜಿಯೋ ಕಂಪೆನಿಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ರಿಲಯನ್ಸ್ ಜಿಯೊವಿನ ಶೇಕಡಾ 32ರಷ್ಟು ಉದ್ಯೋಗಗಳು ಮಾರಾಟ ಮತ್ತು ತಾಂತ್ರಿಕ ಪ್ರದೇಶಗಳು ನಿರ್ಮಾಣ ಕೇಂದ್ರಗಳಿಗೆ ಸಂಬಂಧಿಸಿದ್ದಾಗಿದೆ. ಅದನ್ನು ಕೇಂದ್ರ ಮಟ್ಟದಲ್ಲಿ ತೆಗೆದುಕೊಳ್ಳುವುದಾದರೆ ಅದು ಕೇವಲ ಶೇಕಡಾ 2ರಷ್ಟಿದೆ. ಸರಾಸರಿ ತೆಗೆದುಕೊಂಡರೆ ಅದು ಶೇಕಡಾ 18ರಷ್ಟಾಗುತ್ತದೆ ಎಂದು ಸಂಜಯ್ ಜೊಗ್ ಮಾಧ್ಯಮಗಳಿಗೆ ಹೇಳಿದರು.


Click it and Unblock the Notifications








