ಜಿಯೋ ಹ್ಯಾಪಿ ನ್ಯೂ ಇಯರ್ 2026 ಪ್ಲಾನ್ಸ್ ಲಾಂಚ್: ಗ್ರಾಹಕರು ಫುಲ್ ಖುಷ್!
ರಿಲಯನ್ಸ್ ಜಿಯೋ ಹೊಸ ವರ್ಷದ ಸಂಭ್ರಮವನ್ನು ಗಮನದಲ್ಲಿಟ್ಟುಕೊಂಡು "ಹ್ಯಾಪಿ ನ್ಯೂ ಇಯರ್ 2026" ಕೊಡುಗೆಗಳನ್ನು ಪ್ರಕಟಿಸಿದೆ. ವೇಗವಾದ 5G ಡೇಟಾ, ಜನಪ್ರಿಯ OTT ಮನರಂಜನೆ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಸೇವೆಗಳ ಸಮನ್ವಯವನ್ನು ನೀಡುವ ಮೂಲಕ ಡಿಜಿಟಲ್ ಬಳಕೆದಾರರ ದಿನನಿತ್ಯದ ಅಗತ್ಯಗಳನ್ನು ಗುರಿಯಾಗಿಸಿಕೊಂಡು ಹೊಸ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪರಿಶೀಲಿಸಲಾಗಿದೆ. ಹಾಗಾದರೆ, ಹೊಸ ವರ್ಷದ ಕೊಡುಗೆಯಾಗಿ ಜಿಯೋ ನೀಡುತ್ತಿರುವ ಹೊಸ ಕೊಡುಗೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಸೆಲೆಬ್ರೇಷನ್ ಮಂತ್ಲಿ ಪ್ಲಾನ್
ಹೆಚ್ಚು ಸ್ಟ್ರೀಮಿಂಗ್ ಮಾಡುವ ಮತ್ತು ಕಡಿಮೆ ಅವಧಿಯ ಇಷ್ಟಪಡುವ ಬಳಕೆದಾರರಿಗಾಗಿ ಜಿಯೀ ₹500 ಸೂಪರ್ ಸೆಲೆಬ್ರೇಷನ್ ಮಾಸಿಕ ಪ್ಲಾನ್ ಅನ್ನು ವಿನ್ಯಾಸಗೊಳಿಸಿದೆ. 28 ದಿನಗಳ ಮಾನ್ಯತೆಯೊಂದಿಗೆ ಈ ಪ್ಲಾನ್ ದಿನಕ್ಕೆ 2GB ಡೇಟಾ, ಅನಿಯಮಿತ 5G ಪ್ರವೇಶ, ಅನಿಯಮಿತ ವಾಯ್ಸ್ ಕಾಲ್‌ಗಳು ಮತ್ತು ದಿನಕ್ಕೆ 100 SMS ಒದಗಿಸುತ್ತದೆ. ಸಂಪರ್ಕದ ಜೊತೆಗೆ ಮನರಂಜನೆಯೂ ಮುಖ್ಯವಾಗಿರುವ ಯುವ ಬಳಕೆದಾರರನ್ನು ಇದು ವಿಶೇಷವಾಗಿ ಗುರಿಯಾಗಿಸಿದೆ.
ಈ ₹500 ಪ್ಲಾನ್‌ನಲ್ಲಿ ಪ್ರತಿ ತಿಂಗಳು ಸುಮಾರು ₹500 ಮೌಲ್ಯದ OTT ಸಬ್‌ಸ್ಕ್ರಿಪ್ಶನ್‌ಗಳು ಸೇರಿವೆ. YouTube Premium, JioHotstar, Amazon Prime Video Mobile Edition, Sony LIV, ZEE5, Lionsgate Play, Discovery+, Sun NXT ಸೇರಿದಂತೆ ಹಲವು ಜನಪ್ರಿಯ ವೇದಿಕೆಗಳು ಲಭ್ಯವಾಗುತ್ತವೆ. ಇದಕ್ಕೆ ಜೊತೆಗೆ Google Gemini Pro AI ಸೇವೆಯ ಪ್ರವೇಶವೂ ಇರುವುದರಿಂದ, ಈ ಪ್ಲಾನ್ ಮನರಂಜನೆ ಮತ್ತು ತಂತ್ರಜ್ಞಾನ ಎರಡನ್ನೂ ಒಟ್ಟುಗೂಡಿಸುತ್ತದೆ.
18 ತಿಂಗಳ Google Gemini Pro AI ಪ್ಲಾನ್
ಹ್ಯಾಪಿ ನ್ಯೂ ಇಯರ್ 2026 ಅಡಿಯಲ್ಲಿ ನವೀಕರಣದ ಮತ್ತೊಂದು ಪ್ರಮುಖ ಅಂಶವೆಂದರೆ ರಿಲಯನ್ಸ್ ಜಿಯೋ ಮತ್ತು ಗೂಗಲ್ ನಡುವಿನ ಸಹಭಾಗಿತ್ವ. ಆಯ್ದ ರೀಚಾರ್ಜ್‌ಗಳೊಂದಿಗೆ 18 ತಿಂಗಳ Google Gemini Pro AI ಪ್ಲಾನ್ ಅನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀಡಲಾಗುತ್ತಿದೆ. ಜಿಯೋ ಈ AI ಸಬ್‌ಸ್ಕ್ರಿಪ್ಶನ್‌ಗೆ ರೂ.35,100 ಮೌಲ್ಯವನ್ನು ಸೂಚಿಸಿದ್ದು, ಇದನ್ನು ತನ್ನ ಹೊಸ ಪ್ಲಾನ್‌ಗಳ ಪ್ರಮುಖ ಮೌಲ್ಯವರ್ಧಿತ ಲಾಭವಾಗಿ ತಂದಿದೆ.

3,599 ಹೀರೋ ವಾರ್ಷಿಕ ಪ್ಲಾನ್
ಇನ್ನು ದೀರ್ಘಾವಧಿಯ ರೀಚಾರ್ಜ್ ಹುಡುಕುವ ಗ್ರಾಹಕರಿಗಾಗಿ ಜಿಯೋ ₹3,599 ಹೀರೋ ವಾರ್ಷಿಕ ಪ್ಲಾನ್ ಅನ್ನು ಪರಿಚಯಿಸಿದೆ. ಇದು 365 ದಿನಗಳ ಕಾಲ ಮಾನ್ಯವಾಗಿದ್ದು, ದಿನಕ್ಕೆ 2.5GB ಡೇಟಾ, ಅನಿಯಮಿತ 5G, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ನೀಡುತ್ತದೆ. ಸ್ಥಿರ ಸಂಪರ್ಕ ಮತ್ತು ಹೆಚ್ಚಿನ ಡೇಟಾ ಬಳಕೆಗೆ ಆದ್ಯತೆ ನೀಡುವ ವೃತ್ತಿಪರರು ಹಾಗೂ ವಿದ್ಯಾರ್ಥಿಗಳಿಗೆ ಈ ಪ್ಲಾನ್ ಸೂಕ್ತವಾಗಿದೆ. ಈ ವಾರ್ಷಿಕ ಪ್ಲಾನ್‌ನಲ್ಲಿ ಪ್ರಮುಖ ಆಕರ್ಷಣೆ ಎಂದರೆ 18 ತಿಂಗಳ Google Gemini Pro AI ಪ್ಲಾನ್. ಮನರಂಜನೆಯಿಗಿಂತ, ಡೇಟಾ ಬಳಕೆ ಮತ್ತು AI ಹೆಚ್ಚಾಗಿ ಬಳಸುವ ಬಳಕೆದಾರರಿಗೆ ಇದು ಹೆಚ್ಚು ಮೌಲ್ಯ ನೀಡುವ ಆಯ್ಕೆಯಾಗಿದೆ.
ನಿರ್ದಿಷ್ಟ ಕಂಟೆಂಟ್ ಮಾತ್ರ ವೀಕ್ಷಿಸಿ
ಕಡಿಮೆ ದರದಲ್ಲಿ ನಿರ್ದಿಷ್ಟ ಕಂಟೆಂಟ್ ಮಾತ್ರ ವೀಕ್ಷಿಸಲು ಬಯಸುವವರಿಗಾಗಿ ಜಿಯೋ ₹103 ಫ್ಲೆಕ್ಸಿ ಪ್ಯಾಕ್ ಅನ್ನು ಪರಿಚಯಿಸಿದೆ. 28 ದಿನಗಳ ಮಾನ್ಯತೆಯೊಂದಿಗೆ 5GB ಒಟ್ಟು ಡೇಟಾ ನೀಡುವ ಈ ಪ್ಲಾನ್‌ನಲ್ಲಿ ಬಳಕೆದಾರರು ಹಿಂಡಿ, ಅಂತರರಾಷ್ಟ್ರೀಯ ಅಥವಾ ಪ್ರಾದೇಶಿಕ ಎನ್ನುವ ಮೂರು ವಿಭಿನ್ನ ಕಂಟೆಂಟ್ ಪ್ಯಾಕ್‌ಗಳಲ್ಲೊಂದು ಆಯ್ಕೆ ಮಾಡಬಹುದು. ಅಂತರರಾಷ್ಟ್ರೀಯ ಪ್ಯಾಕ್‌ನಲ್ಲಿ JioHotstar, FanCode, Lionsgate ಮತ್ತು Discovery+ ಲಭ್ಯ.ಹಿಂದಿ ಪ್ಯಾಕ್‌ನಲ್ಲಿ JioHotstar, ZEE5 ಮತ್ತು Sony LIV ಇದ್ದರೆ, ಪ್ರಾದೇಶಿಕ ಪ್ಯಾಕ್‌ನಲ್ಲಿ JioHotstar, Sun NXT, Kancha Lanka ಮತ್ತು Hoichoi ಸೇರಿವೆ. ಬಳಕೆದಾರರು ತಮ್ಮ ಭಾಷೆ ಮತ್ತು ಆಸಕ್ತಿಗೆ ತಕ್ಕಂತೆ ಕಂಟೆಂಟ್ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಈ ಎಲ್ಲಾ "ಹ್ಯಾಪಿ ನ್ಯೂ ಇಯರ್ 2026" ವಿಶೇಷ ಪ್ರೀಪೇಡ್ ಪ್ಲಾನ್‌ಗಳು ಜಿಯೋ ಅಧಿಕೃತ ವೆಬ್‌ಸೈಟ್, MyJio ಆ್ಯಪ್ ಮತ್ತು ದೇಶದಾದ್ಯಂತ ಇರುವ ಅಧಿಕೃತ ರಿಟೇಲ್ ಔಟ್‌ಲೆಟ್‌ಗಳಲ್ಲಿ ಶೀಘ್ರ ಲಭ್ಯವಾಗುವ ನಿರೀಕ್ಷೆಯಿದೆ. ಡೇಟಾ, ಮನರಂಜನೆ ಮತ್ತು AI ಸೇವೆಗಳ ಸಂಯೋಜನೆಯನ್ನು ಹುಡುಕುವ ಭಾರತೀಯ ಬಳಕೆದಾರರಿಗೆ ಈ ಹೊಸ ಜಿಯೋ ಪ್ಲಾನ್‌ಗಳು 2026ರ ಆರಂಭದಲ್ಲೇ ಆಕರ್ಷಕ ಆಯ್ಕೆಯಾಗಿ ಕಾಣಿಸುತ್ತಿವೆ. ಈ ಕುರಿತಂತೆ ನಿಮ್ಮ ಅನಿಸಿಕೆಗಳೇನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








