Home
ಸುದ್ದಿಜಾಲ

ಹೊಸ ಎರಡು ರೀಚಾರ್ಜ್ ಪ್ಲಾನ್ ಬಿಡುಗಡೆಗೊಳಿಸಿದ ಜಿಯೋ- ರೂ.594 & ರೂ.297

ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಹೊಸದಾಗಿ ಎರಡು ಪ್ಲಾನ್ ಗಳನ್ನು ಬಿಡುಗಡೆಗೊಳಿಸಿದ್ದು ಜಿಯೋ ಫೋನ್ ಬಳಕೆದಾರರು ಹೆಚ್ಚು ಅವಧಿಯನ್ನು ಇದರಲ್ಲಿ ನೀಡಲಾಗುತ್ತಿದೆ. ರೂ.594 ಮತ್ತು ರೂ.297 ರ ಪ್ಲಾನ್ ನ್ನು ಹೆಚ್ಚು ವ್ಯಾಲಿಡಿಟಿಯನ್ನು ಗ್ರಾಹಕರಿಗೆ ನೀಡುವ ಉದ್ದೇಶದಿಂದ ಬಿಡುಗಡೆಗೊಳಿಸಲಾಗಿದೆ.

594 ರುಪಾಯಿ ಪ್ಲಾನ್:

594 ರುಪಾಯಿ ಪ್ಲಾನ್:

594 ರುಪಾಯಿ ಪ್ಲಾನ್ ನ ಅಡಿಯಲ್ಲಿ, ಜಿಯೋಫೋನ್ ಬಳಕೆದಾರರಿಗೆ ಅನಿಯಮಿತ ಸ್ಥಳೀಯ ಮತ್ತು STD ಕರೆಗಳು ಮತ್ತು ಅನಿಯಮಿತ ಡಾಟಾ ಪ್ಲಾನ್ ಲಭ್ಯವಾಗುತ್ತದೆ. ಆದರೆ ಪ್ರತಿದಿನದ ಡಾಟಾ ಲಿಮಿಟ್ ಕೇವಲ 0.5GBಗೆ ನಿಗದಿಗೊಳಿಸಲಾಗಿದೆ. ಒಂದು ವೇಳೆ ಇಷ್ಟು ಡಾಟಾವನ್ನು ಬಳಕೆದಾರರು ಬಳಸಿದರೆ ನಂತರದ ಇಂಟರ್ನೆಟ್ ಸ್ಪೀಡ್ 64Kbpsಗೆ ಇಳಿಕೆಯಾಗಲಿದೆ.ಇದರ ಜೊತೆಗೆ ಬಳಕೆದಾರರಿಗೆ ಜಿಯೋ ಸ್ಯೂಟ್ ಆಪ್ ಮತ್ತು 300 ಎಸ್ಎಂಎಸ್ ಫೆಸಿಲಿಟಿಯನ್ನು ನೀಡಲಾಗುತ್ತಿದೆ. ಈ ಪ್ಲಾನ್ ನ ಅವಧಿಯು 168 ದಿನಗಳಾಗಿರುತ್ತದೆ. ಅಂದರೆ ಒಟ್ಟು 6 ತಿಂಗಳ ಅವಧಿಯನ್ನು ಈ ಪ್ಲಾನ್ ಗ್ರಾಹಕರಿಗೆ ನೀಡುತ್ತದೆ.

297 ರೂಪಾಯಿ ಪ್ಲಾನ್:

297 ರೂಪಾಯಿ ಪ್ಲಾನ್:

ಇನ್ನೊಂದೆಡೆ 297 ರುಪಾಯಿ ಪ್ಲಾನ್ ನಲ್ಲಿ ಬಳಕೆದಾರರಿಗೆ ಅನಿಯಮಿತ ಸ್ಥಳೀಯ ಮತ್ತು ನ್ಯಾಷನಲ್ ಕರೆಗಳಿಗೆ ಯಾವುದೇ ದಿನಂಪ್ರತಿ FUP ಲಿಮಿಟ್ ಇಲ್ಲದೆಯೇ ಬಳಕೆ ಮಾಡಬಹುದು.ಈ ಪ್ಲಾನ್ ನಲ್ಲಿ 300 SMS ಪ್ರತಿ ತಿಂಗಳು ಮತ್ತು 0.5GB ಪ್ರತಿದಿನ ಡಾಟಾ ಉಚಿತವಾಗಿರುತ್ತದೆ. ಒಂದು ವೇಳೆ ಬಳಕೆದಾರರು ಪ್ರತಿದಿನದ ಡಾಟಾ ಲಿಮಿಟ್ ನ್ನು ಮೀರಿದರೆ ಆಗ ಅಂತರ್ಜಾಲದ ಸ್ಪೀಡ್ 64Kbps ಗೆ ಇಳಿಕೆಯಾಗುತ್ತದೆ. ಈ ಪ್ಲಾನ್ 84 ದಿನಗಳ ಅವಧಿಯನ್ನು ಅಂದರೆ 3 ತಿಂಗಳ ಅವಧಿಯನ್ನು ಹೊಂದಿರುತ್ತದೆ.

ಏರ್ ಟೆಲ್ ಪ್ಲಾನ್ ಗಳು:

ಏರ್ ಟೆಲ್ ಪ್ಲಾನ್ ಗಳು:

ಇತ್ತೀಚೆಗೆ ರಿಲಯನ್ಸ್ ಜಿಯೋ ರೀತಿಯಲ್ಲೇ ಏರ್ ಟೆಲ್ ಕೂಡ ಹೆಚ್ಚು ಅವಧಿಯನ್ನು ನೀಡುವ ಪ್ಲಾನ್ ನ್ನು ಪರಿಚಯಿಸಿದೆ. ಏರ್ ಟೆಲ್ ನ ಪ್ರಿಪೇಯ್ಡ್ ಪ್ಲಾನ್ ರೂ.998 ಮತ್ತು ರೂ.597 ಆಗಿದ್ದು ಇದು ಕ್ರಮವಾಗಿ 336 ದಿನಗಳು ಮತ್ತು 168 ದಿನಗಳ ಅವಧಿಯನ್ನು ಹೊಂದಿರುತ್ತದೆ. ಈ ಹೊಸ ಪ್ಲಾನ್ ದೇಶದಾದ್ಯಂತ ಲಭ್ಯವಿದ್ದು ಹಳೆಯ ಮತ್ತು ಹೊಸದಾಗಿ ಸೇರ್ಪಡೆಗೊಳ್ಳುವ ಎಲ್ಲಾ ಗ್ರಾಹಕರು ಇದನ್ನು ಪಡೆದುಕೊಳ್ಳಬಹುದು. ಈ ಪ್ಲಾನಿನ ಅಡಿಯಲ್ಲಿ ಅನಿಯಮಿತ ಸ್ಥಳೀಯ ಮತ್ತು ನ್ಯಾಷನಲ್ ಕರೆಗಳ ಸೌಲಭ್ಯವಿದ್ದು ಯಾವುದೇ ಪ್ರತಿದಿನದ FUP ಲಿಮಿಟ್ ಇರುವುದಿಲ್ಲ. ರೂ.998 ಪ್ಲಾನ್ ನಲ್ಲಿ ಒಟ್ಟು 12ಜಿಬಿ ಡಾಟಾ ಆಫರ್ ಮಾಡಲಾಗುತ್ತದೆ ಇನ್ನು ರೂ. 597 ರುಪಾಯಿ ಪ್ಲಾನ್ ನಲ್ಲಿ 6ಜಿಬಿ ಡಾಟಾ ಲಭ್ಯವಾಗುತ್ತದೆ. ರಿಲಯನ್ಸ್ ಜಿಯೋ ನೀಡುವಂತೆ ಏರ್ ಟೆಲ್ ನ ಈ ಎರಡೂ ಪ್ಲಾನ್ ನಲ್ಲಿ 300 ಎಸ್ಎಂಎಸ್ ಗಳು ಪ್ರತಿ ತಿಂಗಳು ಉಚಿತವಾಗಿರುತ್ತದೆ.

Best Mobiles in India

English summary
Reliance Jio rolls out new Rs 594 and Rs 297 plans: Validity, data and all other details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+