Home
ಸುದ್ದಿಜಾಲ

ರಿಲಯನ್ಸ್ ಜಿಯೋ 5ಜಿ ಪ್ಲಾನ್ : ಬೆಲೆ ಮತ್ತು ಇತರೆ ವಿಚಾರಗಳು

By Gizbot Bureau

ಇದೀಗ ರಿಲಯನ್ಸ್ ಜಿಯೋ ಸರಿಸುಮಾರು 300 ಮಿಲಿಯನ್ ಗ್ರಾಹಕರನ್ನು ದಾಟಿದೆ. ಕೇವಲ ಎರಡುವರೆ ವರ್ಷದ ಕಾರ್ಯಗಳಲ್ಲೇ ಇದನ್ನು ಕಂಪೆನಿಯು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅಧಿಕೃತವಾಗಿ ರಿಲಯನ್ಸ್ ಜಿಯೋ ಇದನ್ನು ಪ್ರಕಟಪಡಿಸದೇ ಇದ್ದರೂ ಕೂಡ ಟಿವಿ ಜಾಹೀರಾತುಗಳಲ್ಲಿ ಮತ್ತು ಜಿಯೋ ರನ್ ಮಾಡುವ ಐಪಿಎಲ್ ಶೋಗಳಲ್ಲಿ 300 ಮಿಲಿಯನ್ ಬಳಕೆದಾರರ ಸಂಭ್ರಮವನ್ನು ಜಿಯೋ ಆಚರಿಸಿದೆ. ನಾವಿಲ್ಲಿ ರಿಲಯನ್ಸ್ ಜಿಯೋ ಸಂಸ್ಥೆಯ ಎಲ್ಲಾ ಅಪ್ ಡೇಟ್ ಗಳನ್ನು ಮತ್ತು 5ಜಿ ಪ್ಲಾನ್ ಗಳ ಬಗ್ಗೆ ಮತ್ತು ಇತ್ಯಾದಿ ವಿಚಾರಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದೇವೆ.

ರಿಲಯನ್ಸ್ ಜಿಯೋ ಬಹುಶ್ಯಃ ಬೆಲೆಯ ಯುದ್ಧವನ್ನು ಅಂತ್ಯಗೊಳಿಸುತ್ತದೆ!

ರಿಲಯನ್ಸ್ ಜಿಯೋ ಬಹುಶ್ಯಃ ಬೆಲೆಯ ಯುದ್ಧವನ್ನು ಅಂತ್ಯಗೊಳಿಸುತ್ತದೆ!

ಇತ್ತೀಚೆಗೆ ರಿಲಯನ್ಸ್ ಜಿಯೋ ಕಾಪಾಡಿಕೊಳ್ಳುತ್ತಿರುವ ಸ್ಥಿರತೆಯನ್ನು ಗಮನಿಸಿದರೆ ಬಹುಶ್ಯಃ ಜಿಯೋ ತನ್ನ ಬೆಲೆಯ ಯುದ್ಧವನ್ನು ಅಂತ್ಯಗೊಳಿಸುವ ಸೂಚನೆ ನೀಡುತ್ತಿದೆ. ಬ್ರೋಕರೇಜ್ ಸಂಸ್ಥೆ ಬಿಎನ್ ಪಿ ಪರಿಬಾಸ್ ವರದಿಯು ತಿಳಿಸುವ ಪ್ರಕಾರ "ಏರ್ ಟೆಲ್ ಮತ್ತು ವಿಐಎಲ್ ತಾರಿಫ್ ಗಳ ಸುಂಕವು ಅಧಿಕವಾಗಿರುವುದರಿಂದ ಬೆಳವಣಿಗೆ ಹೆಚ್ಚಾಗುತ್ತದೆ.

ಮುಂದಿನ ವರ್ಷ ರಿಲಯನ್ಸ್ ಜಿಯೋ 5ಜಿ ಸೇವೆಯನ್ನು ಆರಂಭಿಸುವ ನಿರೀಕ್ಷೆ ಎಸ್ ಬಿಐ ಸೆಕ್ಯುರಿಟೀಸ್ ಹೇಳುವ ಪ್ರಕಾರ, ರಿಲಯನ್ಸ್ ಜಿಯೋ 2020 ರ ದ್ವಿತೀಯಾರ್ಧದಲ್ಲಿ 5ಜಿ ಸೇವೆಯನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಇತ್ತೀಚೆಗೆ ವಡಾಫೋನ್ ಐಡಿಯಾ ಮತ್ತು ಭಾರತೀ ಏರ್ ಟೆಲ್ ತಮ್ಮ 4ಜಿ ಸೇವೆಯನ್ನು ಅಧಿಕಗೊಳಿಸುವುದಕ್ಕಾಗಿ ಅನುಸರಿಸಿದ ಮೆಗಾ ಪ್ಲಾನ್ ಗಳನ್ನು ಜಿಯೋ ಸಂಸ್ಥೆ ತನ್ನ 5ಜಿ ಪ್ಲಾನ್ ಗಳನ್ನು

ಏರ್ ಟೆಲ್ ಮತ್ತು ವಡಾಫೋನ್ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಗಳನ್ನು ಪ್ರಕಟಿಸಿದೆ

ಏರ್ ಟೆಲ್ ಮತ್ತು ವಡಾಫೋನ್ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಗಳನ್ನು ಪ್ರಕಟಿಸಿದೆ

ಕೆಲವು ತಿಂಗಳ ಹಿಂದೆ ಏರ್ ಟೆಲ್ ಮತ್ತು ವಡಾಫೋನ್ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಗಳನ್ನು ಪ್ರಕಟಿಸಿದೆ. ತಮ್ಮ ಸರ್ವೀಸ್ ನ್ನು ಆಕ್ಟೀವ್ ಆಗಿ ಇಟ್ಟುಕೊಳ್ಳುವುದಕ್ಕಾಗಿ ಬಳಕೆದಾರರಿಗೆ ಇದರ ಅಗತ್ಯವಿದೆ. ಈ ಪ್ಲಾನ್ ಗಳು ತತ್ಜ್ಞರ ಅಭಿಪ್ರಾಯದ ಪ್ರಕಾರ ಉತ್ತಮ ಹಣಗಳಿಕೆಗೆ ಸಹಕಾರಿಯಾಗಿದೆ.

ಈ ತಿಂಗಳು ರಿಲಯನ್ಸ್ ಜಿಯೋ ತನ್ನ 6ನೇ ಯಶಸ್ವೀ ತ್ರೈಮಾಸಿಕ ಲಾಭವನ್ನು ಪ್ರಕಟಿಸುವ ಸಾಧ್ಯತೆ

ಬ್ರೋಕರೇಜ್ ವರದಿಯು ತಿಳಿಸುವಂತೆ, ಜಿಯೋ ತನ್ನ 6ನೇ ತ್ರೈಮಾಸಿಕ ಯಶಸ್ವೀ ಲಾಭಗಳಿಕೆಯನ್ನು ತಿಳಿಸುವ ಸಾಧ್ಯತೆ ಇದೆ. ಜಿಯೋದ ನೆಟ್ ಲಾಭವು 64% ದಿಂದ 840 ಕೋಟಿ ರುಪಾಯಿಗೆ ಏರಿಕೆಯಾಗಿದೆ. 29.5 ಮಿಲಿಯನ್ ಬಳಕೆದಾರರಿಗೆ ಇದು ಹೆಚ್ಚಿಕೆಯಾಗಿದೆ.

ತಜ್ಞರು ತಿಳಿಸುವಂತೆ ಭಾರತೀ ಏರ್ ಟೆಲ್ ಮತ್ತು ವಡಾಫೋನ್ ಐಡಿಯಾದ ಬ್ಯಾಲೆನ್ಸ್ ಶೀಟ್ ಗಳ ಬಂಡವಾಳ ಮತ್ತು ಸುಧಾರಣೆಯು ರಿಲಯನ್ಸ್ ಜಿಯೋಗೆ ಸಿಹಿಸುದ್ದಿಯಾಗಿಲ್ಲ.

ರಿಲಯನ್ಸ್ ಜಿಯೋ ಮಾರುಕಟ್ಟೆ

ರಿಲಯನ್ಸ್ ಜಿಯೋ ಮಾರುಕಟ್ಟೆ

ಏರ್ ಟೆಲ್ ಮತ್ತು ವಡಾಫೋನ್ ಐಡಿಯಾಗಳ ಬಂಡವಾಳ ಸುಧಾರಣೆಯು ರಿಲಯನ್ಸ್ ಜಿಯೋಗೆ ಮಾರುಕಟ್ಟೆ ಶೇರ್ ನ್ನು ಮುಂದಿನ 9-12 ತಿಂಗಳಲ್ಲಿ ಪಡೆದುಕೊಳ್ಳುವುದಕ್ಕೆ ಕಷ್ಟವಾಗಿಸಬಹುದು.

ಏರ್ ಟೆಲ್ ವರದಿಯು 340.3 ಮಿಲಿಯನ್ ಗ್ರಾಹಕರನ್ನು ಜನವರಿ ಅಂತ್ಯದೊಳಗೆ ಹೊಂದಿದೆ ಎಂದು ತಿಳಿಸಿದೆ.

ಏರ್ ಟೆಲ್ ವರದಿಯು ತಿಳಿಸಿರುವಂತೆ ಡಿಸೆಂಬರ್ ಅಂತ್ಯದೊಳಗೆ 340.3 ಮಿಲಿಯನ್ ಗ್ರಾಹಕರು ಮತ್ತು ಜನವರಿ ಅಂತ್ಯದೊಳಗೆ 340.3 ಮಿಲಿಯನ್ ಗ್ರಾಹಕರನ್ನು ಏರ್ ಟೆಲ್ ಹೊಂದಿದೆ.

ಐಡಿಯಾ ಸೆಲ್ಯುಲರ್ ಜೊತೆಗೆ ಅಗಸ್ಟ್ 2018 ರಲ್ಲಿ ಮರ್ಜ್ ಆದ ನಂತರ ವಡಾಫೋನ್ ಭಾರತದ ದೊಡ್ಡ ಟೆಲಿಕಾಂ ಆಪರೇಟರ್ ಎಂದು ಕಳೆದ ವರ್ಷ ಅನ್ನಿಸಿಕೊಂಡಿದೆ.

ರಿಲಯನ್ಸ್ ಜಿಯೋ ಇತ್ತೀಚೆಗೆ ತನ್ನ ಫೈಬರ್ ಮತ್ತು ಟವರ್ ಬ್ಯುಸಿನೆಸ್ ನ್ನು ಎರಡು ಯುನಿಟ್ ಗಳಾಗಿ ಡಿಮರ್ಜ್ ಮಾಡಿದೆ-ಜಿಯೋ ಡಿಜಿಟಲ್ ಪೈಬರ್ ಪ್ರೈವೇಟ್ ಲಿಮಿಟೆಡ್ ಮತ್ತು ರಿಲಯನ್ಸ್ ಜಿಯೋ ಇನ್ಫ್ರಾಟೆಲ್ ಪ್ರೈವೇಟ್ ಲಿಮಿಟೆಡ್

ಜಿಯೋ ಇನ್ಫೋಕಾಮ್ ಫೈಬರ್ ನೆಟ್ ವರ್ಕ್

ಜಿಯೋ ಇನ್ಫೋಕಾಮ್ ಫೈಬರ್ ನೆಟ್ ವರ್ಕ್

ಜಿಯೋ ಇನ್ಫೋಕಾಮ್ ಫೈಬರ್ ನೆಟ್ ವರ್ಕ್ ಯುನಿಟ್ ವರದಿಯ ಪ್ರಕಾರ 27,000 ಕೋಟಿಯಷ್ಟು ವಿವಿಧ ಬ್ಯಾಂಕ್ ಗಳ ಗುಂಪುಗಳಿಂದ ಸಾಲವನ್ನು ಹೆಚ್ಚಿಸಿದೆ.

ಸೆಪ್ಟೆಂಬರ್ 2016 ರಲ್ಲಿ ಅಧಿಕೃತವಾಗಿ ರಿಲಯನ್ಸ್ ಜಿಯೋ ಸಂಸ್ಥೆ ಭಾರತೀಯ ಟೆಲಿಕಾಂ ಮಾರುಕಟ್ಟೆಯನ್ನು ಪ್ರವೇಶಿಸಿತು.

ಕಂಪೆನಿಯು ಬಿಡುಗಡೆಗೊಂಡಾಗಿನಿಂದಲೂ ಬೆಲೆಯ ಯುದ್ಧವನ್ನು ನಡೆಸುತ್ತಲೇ ಇದೆ. ಉಚಿತ ವಾಯ್ಸ್ ಕರೆಗಳು ಮತ್ತು 1ಜಿಬಿ ಪ್ರತಿದಿನ ಡಾಟಾ ಉಚಿತ ಸೇರಿದಂತೆ ಹಲವು ಟೆಲಿಕಾಂ ಸೆಕ್ಟರ್ ನಲ್ಲಿ ಕಡಿಮೆ ಬೆಲೆಯನ್ನು ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ.

Best Mobiles in India

English summary
Reliance Jio's 5G plans, price war and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+