ಕೇಬಲ್‌ ಟಿವಿ ಉದ್ಯಮಕ್ಕೆ ಕಾಲಿಡಲು ಜಿಯೋ ಸಜ್ಜು..! ಹ್ಯಾಥ್‌ವೇ, DEN ಜತೆ ಬಿಗ್‌ ಒಪ್ಪಂದ..!

|

ಭಾರತದಲ್ಲಿ ಅತಿ ಶೀಘ್ರದಲ್ಲಿಯೇ ಜಿಯೋ ಗಿಗಾಫೈಬರ್‌ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಪ್ರಾರಂಭಿಸುತ್ತೇವೆ ಎಂದು ಘೋಷಿಸಿರುವುದು ಈಗ ಹಳೆಯ ಸುದ್ದಿಯಾಗಿದೆ. ಆದರೆ, ಹೊಸ ಸುದ್ದಿ ಏನಪ್ಪ ಎಂದರೆ ಜಿಯೋ ಗಿಗಾಫೈಬರ್‌ಗಾಗಿ ದೇಶದಲ್ಲಿ ಅತಿದೊಡ್ಡ ಕೇಬಲ್‌ ಟಿವಿ ಮತ್ತು ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ನೀಡುತ್ತಿರುವ ಕಂಪನಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದೆ.

ಹೌದು, ಭಾರತದಲ್ಲಿ ಜನಪ್ರಿಯ ಕೇಬಲ್‌ ಟಿವಿ ಮತ್ತು ಬ್ರಾಡ್‌ಬ್ಯಾಂಡ್‌ ಸೇವಾದಾತರಾಗಿರುವ Hathway cable & Datacom ಮತ್ತು DEN ನೆಟ್‌ವರ್ಕ್‌ಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಮಾತುಕತೆ ನಡೆಸಿದ್ದು, ಈ ಮೂಲಕ ತನ್ನ ಅತಿ ವೇಗದ ಬ್ರಾಡ್‌ಬ್ಯಾಂಡ್‌ ಸೇವೆಗೆ ಹೆಚ್ಚಿನ ಮಹತ್ವವನ್ನು ತರಲು RIL ಮುಂದಾಗಿದೆ.

ಕೇಬಲ್‌ ಟಿವಿ ಉದ್ಯಮಕ್ಕೆ ಜಿಯೋ..! ಹ್ಯಾಥ್‌ವೇ, DEN ಜತೆ ಬಿಗ್‌ ಒಪ್ಪಂದ..!

ಇತ್ತೀಚೆಗೆ ತಾನೇ ಜಿಯೋ ಗಿಗಾಫೈಬರ್ ಪ್ರಾರಂಭಿಸುವ ಕುರಿತು ಘೋಷಿಸಿ ಪ್ರಿವ್ಯೂವ್‌ ಆಫರ್‌ ಬಿಡುಗಡೆ ಮಾಡಿ 90 ದಿನಗಳಿಗೆ 300GB ಡೇಟಾ ಆಫರ್‌ನ್ನು ಗ್ರಾಹಕರಿಗೆ ನೀಡಿ, ಇತರೆ ಬ್ರಾಡ್‌ಬ್ಯಾಂಡ್‌ ಆಪರೇಟರ್‌ಗಳಿಗೆ ತಲೆನೋವು ತಂದಿತ್ತು. ಈಗ ದೊಡ್ಡ ಸಮ್ಮಿಲನವನ್ನು ಮಾಡಿಕೊಳ್ಳುವ ಮೂಲಕ ಜಿಯೋ ಮತ್ತೊಂದು ಬಾರಿ ಭಾರತದ ಕೇಬಲ್‌ ಟಿವಿ ಮತ್ತು ಬ್ರಾಡ್‌ಬ್ಯಾಂಡ್‌ ಜಗತ್ತನ್ನು ನಡುಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಶೇ.25ಕ್ಕಿಂತ ಹೆಚ್ಚಿನ ಶೇರು ಖರೀದಿ

ಶೇ.25ಕ್ಕಿಂತ ಹೆಚ್ಚಿನ ಶೇರು ಖರೀದಿ

RILನ ಪ್ರಮುಖ ಅಧಿಕಾರಿಗಳು ಹೇಳುವಂತೆ Hathway cable & Datacom ಮತ್ತು DEN ನೆಟ್‌ವರ್ಕ್‌ಗಳಲ್ಲಿ ಜಿಯೋ ಶೇ.25ಕ್ಕಿಂತ ಹೆಚ್ಚು ಷೇರುಗಳನ್ನು ಹೊಂದಲು ನಿರ್ಧರಿಸಿದ್ದು, ಮಾತುಕತೆಯನ್ನು ನಡೆಸುತ್ತಿದೆ.

ಶೇರು ಖರೀದಿಯಿಂದ ಏನಾಗುತ್ತದೆ..?

ಶೇರು ಖರೀದಿಯಿಂದ ಏನಾಗುತ್ತದೆ..?

ಶೇ.25ಕ್ಕಿಂತ ಹೆಚ್ಚು ಷೇರನ್ನು ರಿಲಾಯನ್ಸ್‌ ಜಿಯೋ Hathway cable & Datacom ಮತ್ತು DEN ನೆಟ್‌ವರ್ಕ್‌ಗಳಲ್ಲಿ ಖರೀದಿಸಿದರೆ ಎರಡು ಕಂಪನಿಗಳಲ್ಲಿನ ಕಾರ್ಯನಿರ್ವಹಣೆ, ಅಭಿವೃದ್ಧಿಯನ್ನು ನಿರ್ವಹಣೆ ಮಾಡಬಹುದು ಮತ್ತು ಬೋರ್ಡ್‌ನಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳಬಹುದು. ಇದರಿಂದ ಕಾಲ ಕ್ರಮೇಣ ಎರಡು ಕಂಪನಿಗಳನ್ನು ಜಿಯೋ ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಕೆಲವೇ ದಿನಗಳಲ್ಲಿ ಒಪ್ಪಂದ ಘೋಷಣೆ

ಕೆಲವೇ ದಿನಗಳಲ್ಲಿ ಒಪ್ಪಂದ ಘೋಷಣೆ

ಮುಂದಿನ ಕೆಲವೇ ದಿನಗಳಲ್ಲಿ ಒಪ್ಪಂದ ಘೋಷಿಸಲಾಗುವುದು ಎಂದು ಜಿಯೋ ಅಧಿಕಾರಿಗಳು ಹೇಳಿದ್ದಾರೆ. ಎರಡು ಕಂಪನಿಗಳು ಫಂಡ್‌ ಕುರಿತು ಪ್ರಸ್ತಾಪ ಮಾಡಲು ಮತ್ತು ಅನುಮೋದಿಸಲು ನಾಳೆ ಎಂದರೆ ಅಕ್ಟೋಬರ್‌ 17ರಂದು ಸಭೆ ನಡೆಸುತ್ತೇವೆ ಎಂದು ಸ್ಟಾಕ್‌ ಎಕ್ಸ್‌ಚೇಂಜ್‌ಗೆ ಹೇಳಿವೆ. ಆದರೆ, ಈ ಬಗ್ಗೆ RIL, ರಿಲಾಯನ್ಸ್‌ ಜಿಯೋ, Hathway cable & Datacom ಮತ್ತು DEN ನೆಟ್‌ವರ್ಕ್‌ಗಳು ಸ್ಪಷ್ಟನೆಯನ್ನು ನೀಡಿಲ್ಲ.

ಷೇರು ಬೆಲೆ ಎಷ್ಟಿದೆ..?

ಷೇರು ಬೆಲೆ ಎಷ್ಟಿದೆ..?

ರಹೇಜಾ ಸಮೂಹದ ಒಡೆತನದಲ್ಲಿರುವ Hathway cableನ ಪ್ರತಿ ಷೇರು 28.95 ರೂ.ನಲ್ಲಿ ಅಂತ್ಯವಾಗುತ್ತಿದ್ದು, BSEನಲ್ಲಿ ಶೇ.6.04 ರಷ್ಟು ಏರಿಕೆಯನ್ನು ಹೊಂದಿದೆ. ಇನ್ನು DEN ನೆಟ್‌ವರ್ಕ್‌ ಸಮೀರ್‌ ಮಂಚಂದಾ ಒಡೆತನದಲ್ಲಿದ್ದು, ಪ್ರತಿ ಷೇರು 75.65 ರೂ.ನಲ್ಲಿ ಅಂತ್ಯವಾಗುತ್ತಿದ್ದು, BSEನಲ್ಲಿ ಶೇ.10.84 ರಷ್ಟು ಏರಿಕೆಯನ್ನು ಹೊಂದಿದೆ. ಡೀಲ್‌ ಮಾತುಕತೆ ಆರಂಭವಾದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳ ಮೌಲ್ಯ ಹೆಚ್ಚುತ್ತಾ ಸಾಗುತ್ತಿದೆ.

ಒಪ್ಪಂದದ ಮಾತುಕತೆ ಭಾಗಶಃ ಮುಕ್ತಾಯ

ಒಪ್ಪಂದದ ಮಾತುಕತೆ ಭಾಗಶಃ ಮುಕ್ತಾಯ

ಮಾಹಿತಿಯ ಪ್ರಕಾರ ಒಪ್ಪಂದ ಭಾಗಶಃ ಪೂರ್ಣಗೊಂಡಿದ್ದು, Hathway ಮತ್ತು DEN ಕಂಪನಿಗಳು ಹೊಸ ಷೇರುಗಳನ್ನು ಪ್ರಕಟಿಸುತ್ತವೆ. ಹಾಗೂ ಒಪ್ಪಂದದ ಪೂರ್ಣ ರೂಪುರೇಷೆಗಳು ಆದಷ್ಟು ಬೇಗನೇ ಹೊರ ಬರುತ್ತದೆ. ಮತ್ತು RIL ಶೇ.25ರಷ್ಟು ಷೇರುಗಳನ್ನು ಹೊಂದಲಿದೆ ಎಂದು ಹೇಳಿದ್ದಾರೆ. ಎರಡು ಕಂಪನಿಯಲ್ಲಿ RIL ಗಮನಾರ್ಹವಾದ ಪಾಲನ್ನು ಹೊಂದಿರುತ್ತದೆ. ಆದರೆ, ಅದು ಶೇ.50ಕ್ಕಿಂತಲೂ ಕಡಿಮೆಯಾಗಿರುತ್ತದೆ ಎಂದಿದ್ದು, ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

ಕಳೆದ ವರ್ಷದಿಂದ ಪ್ರಯತ್ನ

ಕಳೆದ ವರ್ಷದಿಂದ ಪ್ರಯತ್ನ

ಕಳದ ವರ್ಷದ ಸೆಪ್ಟೆಂಬರ್‌ನಲ್ಲಿಯೇ ರಿಲಾಯನ್ಸ್‌ DEN ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಮಾತುಕತೆಯನ್ನು ಆರಂಭಿಸಿತ್ತು. ಆದರೆ, ಅದು ಒಪ್ಪಂದದವರೆಗೂ ತಲುಪದೆ ಮಧ್ಯದಲ್ಲಿಯೇ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ನಂತರ, ಕೆಲವು ತಿಂಗಳ ಹಿಂದೆ ಹ್ಯಾಥ್‌ವೇ ಜತೆ ಮಾತುಕತೆಯನ್ನು ನಡೆಸಲು ಪ್ರಾರಂಭಿಸಿತು. ಈ ಮೂಲಕ ಎರಡು ಕಂಪನಿಗಳ ಜತೆ ನಿರಂತರ ಮಾತುಕತೆಯಲ್ಲಿರುವ ಜಿಯೋ ತನ್ನ ಗಿಗಾಫೈಬರ್‌ ಪ್ರಾರಂಭಕ್ಕೆ ಮಹತ್ವದ ಒಪ್ಪಂದವನ್ನು ಮಾಡಿಕೊಳ್ಳುತ್ತಿದೆ.

ಗಿಗಾಫೈಬರ್‌ಗೆ ಸಿಗಲಿದೆ ಭಾರೀ ಉತ್ತೇಜನ

ಗಿಗಾಫೈಬರ್‌ಗೆ ಸಿಗಲಿದೆ ಭಾರೀ ಉತ್ತೇಜನ

ಈ ಒಪ್ಪಂದದಿಂದ ಜಿಯೋ ಗಿಗಾಫೈಬರ್‌ಗೆ ಭಾರೀ ಉತ್ತೇಜನ ಸಿಗಲಿದ್ದು, ಯಾವುದೇ ಅಡೆತಡೆಗಳಿಲ್ಲದೇ ಜನರನ್ನು ತಲುಪುತ್ತದೆ. ಏಕೆಂದರೆ, ಹೀಗಾಗಲೇ 7.2 ಮಿಲಿಯನ್‌ ಡಿಜಿಟಲ್‌ ಕೇಬಲ್‌ ಸಬ್‌ಸ್ಕ್ರೈಬರ್‌ಗಳನ್ನು ಹ್ಯಾಥ್‌ವೇ ಮತ್ತು DEN ನೆಟ್‌ವರ್ಕ್‌ಗಳು ಹೊಂದಿದ್ದು, ಎರಡು ಕ್ರಮವಾಗಿ 350 ಮತ್ತು 200 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಕೇಬಲ್‌ ಬ್ರಾಡ್‌ಬ್ಯಾಂಡ್‌ನಲ್ಲೂ ಬಿಗ್‌ ಬೂಸ್ಟ್‌

ಕೇಬಲ್‌ ಬ್ರಾಡ್‌ಬ್ಯಾಂಡ್‌ನಲ್ಲೂ ಬಿಗ್‌ ಬೂಸ್ಟ್‌

ಕೇಬಲ್‌ ಬ್ರಾಡ್‌ಬ್ಯಾಂಡ್‌ನಲ್ಲೂ ಈ ಒಪ್ಪಂದದಿಂದ ಜಿಯೋಗೆ ಹೆಚ್ಚು ಅನುಕೂಲವಾಗಲಿದೆ. ಹ್ಯಾಥ್‌ವೇ ಭಾರತದ ಒಟ್ಟು ಕೇಬಲ್‌ ಬ್ರಾಡ್‌ಬ್ಯಾಂಡ್‌ ಮಾರುಕಟ್ಟೆಯಲ್ಲಿ ಶೇ.52ರಷ್ಟು ಪಾಲನ್ನು ಹೊಂದಿದ್ದು, 0.77 ಮಿಲಿಯನ್‌ ಗ್ರಾಹಕರನ್ನು ಹೊಂದಿದ್ದು, 5.5 ಮಿಲಿಯನ್‌ ಮನೆಗಳನ್ನು ತಲುಪುವ ಸಾಮರ್ಥ್ಯ ಹೊಂದಿದೆ. DEN ನೆಟ್‌ವರ್ಕ್‌ 0.97 ಮಿಲಿಯನ್‌ ಮನೆಗಳನ್ನು ತಲುಪಿದರೆ, 106,000 ಗ್ರಾಹಕರನ್ನು ಹೊಂದಿದೆ.

CCI ಅನುಮತಿ ಸಿಗುತ್ತಾ..?

CCI ಅನುಮತಿ ಸಿಗುತ್ತಾ..?

ಕೆಲವು ತಜ್ಞರ ಪ್ರಕಾರ ಈ ಒಪ್ಪಂದ ಭಾರತೀಯ ಸ್ಪರ್ಧಾತ್ಮಕ ಆಯೋಗದ ಕಣ್ಣಿಗೆ ಬಿದ್ದೇ ಬೀಳುತ್ತದೆ. ಅದರ ಅನುಮತಿ ಸಿಗುತ್ತಾ ಎನ್ನುವುದು ಪ್ರಶ್ನೆಯಾಗಿದ್ದು, CCI ಅನುಮತಿ ಪಡೆಯುವುದು ಕಷ್ಟವೇನಲ್ಲ ಎಂದು ಕೂಡ ಹೇಳಿದ್ದಾರೆ. ಏಕೆಂದರೆ, ಉತ್ತರ ಪ್ರದೇಶ ಮತ್ತು ಉತ್ತರ ಭಾರತದಲ್ಲಿ DEN ಪ್ರಬಲವಾಗಿದ್ದರೆ, ಕೇಂದ್ರ ಮತ್ತು ಪಶ್ಚಿಮ ಭಾರತದಲ್ಲಿ ಹ್ಯಾಥ್‌ವೇ ಪ್ರಬಲವಾಗಿದೆ. ಅಲ್ಲದೆ, ಐದು DTH ಆಪರೇಟರ್‌ಗಳಿದ್ದರೂ ಯಾವುದೇ ಆಪರೇಟರ್‌ಗಳೂ ಯಾವುದೇ ಮಾರುಕಟ್ಟೆಯಲ್ಲಿ ಪ್ರಬಲವಾಗಿಲ್ಲ. ಆದ್ದರಿಂದ ಏಕಸ್ವಾಮ್ಯದ ಪ್ರಶ್ನೆ ಬರಲ್ಲ ಎಂದು ಅವರು ಹೇಳಿದ್ದಾರೆ.

2015ರಲ್ಲಿಯೇ ಲೈಸನ್ಸ್‌

2015ರಲ್ಲಿಯೇ ಲೈಸನ್ಸ್‌

ರಿಲಾಯನ್ಸ್‌ ಜಿಯೋ ಮೀಡಿಯಾ ಪ್ಯಾನ್ ಇಂಡಿಯಾ ಕೇಬಲ್ ಪರವಾನಗಿಯನ್ನು 2015ರಲ್ಲಿಯೇ ತೆಗೆದುಕೊಂಡಿದ್ದು, ಈಗ ಕೇಬಲ್‌ ಮತ್ತು ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ಪ್ರಾರಂಭಿಸಲು ಮುಂದಾಗಿದೆ.

Best Mobiles in India

English summary
Reliance Jio broadband service GigaFiber just deals away from next ‘big disruption’. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X