Home
ಸುದ್ದಿಜಾಲ

ಜಿಯೋ ಚಂಡಮಾರುತ ಈಗ ಶುರು!..ಏರ್‌ಟೆಲ್ ಬಾಗಿಲು ಮುಚ್ಚಲು ಇದೊಂದೇ ಆಫರ್ ಸಾಕು!!

ಟೆಲಿಕಾಂ ಮಾರುಕಟ್ಟೆಯಲ್ಲಿ ಇಲ್ಲಿಯವರೆಗೂ ಬಿರುಗಾಳಿನಷ್ಟೆ ಬೀಸಿದ್ದ ರಿಲಾಯನ್ಸ್ ಜಿಯೋ ಇದೀಗ ಚಂಡಮಾರುತವನ್ನು ಶುರುಮಾಡಿದೆ.

By Bhaskar N J

ಟೆಲಿಕಾಂ ಮಾರುಕಟ್ಟೆಯಲ್ಲಿ ಇಲ್ಲಿಯವರೆಗೂ ಬಿರುಗಾಳಿನಷ್ಟೆ ಬೀಸಿದ್ದ ರಿಲಾಯನ್ಸ್ ಜಿಯೋ ಇದೀಗ ಚಂಡಮಾರುತವನ್ನು ಶುರುಮಾಡಿದೆ. ಇಲ್ಲಿಯವರೆಗೂ ಪ್ರೀಪೇಡ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದ ಜಿಯೋ ಪೋಸ್ಟ್‌ಪೆಡ್ ಮಾರುಕಟ್ಟೆಯಲ್ಲಿ ಹೊಸದೊಂದು ಹೆಜ್ಜೆಯನ್ನು ಇರಿಸಿ, ಇತರೆ ಟೆಲಿಕಾಂ ಕಂಪೆನಿಗಳಿಗೆ ನಡುಕಹುಟ್ಟಿದೆ.

ಹೌದು, ಈಗಾಗಲೇ 15 ಕೋಟಿಗೂ ಹೆಚ್ಚು ಗ್ರಾಹಕರನ್ನು ಸೆಳೆದಿರುವ ಜಿಯೋ, ಇನ್ಮುಂದೆ ತನ್ನಲ್ಲಿಯೇ ಉಳಿಯುವ ಪೋಸ್ಟ್ ಪೇಯ್ಡ್ ಬಳಕೆದಾರರನ್ನು ಸೆಳೆಯಲು ಯೋಜನೆಯನ್ನು ರೂಪಿಸಿದೆ. ಏರ್‌ಟೆಲ್, ವೊಡಾಪೋನ್ ನೀಡಿರುವ ಪೋಸ್ಟ್‌ಪೇಡ್ ಆಫರ್‌ಗಳ ಅರ್ಧಬೆಲೆಗಿಂತಲೂ ಕಡಿಮೆ ಬೆಲೆಗೆ ಜಿಯೋ ಪೋಸ್ಟ್ ಪೇಯ್ಡ್ ಬಳಕೆದಾರರ ಆಫರ್ ಅನ್ನು ಘೋಷಿಸಿದೆ.

ಜಿಯೋ ಚಂಡಮಾರುತ ಈಗ ಶುರು!..ಏರ್‌ಟೆಲ್ ಬಾಗಿಲು ಮುಚ್ಚಲು ಇದೊಂದೇ ಆಫರ್ ಸಾಕು!!

ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯ ಜಿಯೋ ನೀಡಿರುವ ಪೋಸ್ಟ್‌ಪೇಡ್ ಆಫರ್ ಕ್ರಾಂತಿಕಾರವಾಗಲಿದೆ ಹೆಜ್ಜೆಯಾಗಿದೆ ಹಾಗಾದರೆ, ಇತರೆ ಟೆಲಿಕಾಂ ಕಂಪೆನಿಗಳಿಗೆ ಹೆದರಿಕೆ ಹುಟ್ಟಿಸಿರುವ ಜಿಯೋವಿನ ನೂತನ ಪೋಸ್ಟ್‌ಪೇಡ್ ಆಫರ್ ಯಾವುದು? ಜಿಯೋವಿನ ಪೋಸ್ಟ್‌ಪೇಡ್ ಆಫರ್‌ನಿಂದ ಗ್ರಾಹಕರಿಗೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ಮುಂದೆ ತಿಳಿಯಿರಿ.

ಜಿಯೋ ರೂ.199 ಪ್ಲಾನ್

ಜಿಯೋ ರೂ.199 ಪ್ಲಾನ್

ಜಿಯೋ ಬಳಕೆದಾರರಿಗೆ ರೂ.199ಕ್ಕೆ ತಿಂಗಳ ಪೋಸ್ಟ್‌ಪೃಡ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬಳಕೆದಾರರನ್ನು ಸೆಳೆಯಲು ಮುಂದಾಗಿದೆ. ಬೇರೆ ಯಾವುದೇ ಟೆಲಿಕಾಂ ಕಂಪನಿಗಳು ಈ ಮಾದರಿಯ ಆಫರ್ ಅನ್ನು ಈ ವರೆಗೂ ನೀಡಿಲ್ಲದೇ ಇರುವುದು ಈ ಅಫರ್‌ನ ವಿಶೇಷತೆಯಾಗಿದೆ.

ಪ್ರತಿ ತಿಂಗಳು 25GB ಡೇಟಾ!!

ಪ್ರತಿ ತಿಂಗಳು 25GB ಡೇಟಾ!!

ಜಿಯೋ ರೂ.199ಕ್ಕೆ ಪೋಸ್ಟ್ ಪೇಯ್ಡ್ ಆಫರ್ ಮೂಲಕ ಬಳಕೆದಾರರಿಗೆ ತಿಂಗಳಿಗೆ 25GB 4G ಡೇಟಾವನ್ನು ಬಳಕೆಗೆ ನೀಡಲಿದೆ. ಪ್ರತಿ ತಿಂಗಳು ಕೇವಲ 199 ರೂಪಾಯಿಗಳಿಗೆ ಈ ಆಫರ್ ಅನ್ನು ಜಿಯೋ ಬಿಡುಗಡೆ ಮಾಡುತ್ತಿರುವುದರಿಂದ, ಜಿಯೋ ಬಳಕೆದಾರರು ಇತರೆ ಟೆಲಿಕಾಂ ಕಂಪನಿಗಿಂತಲೂ ಎರಡು ಪಟ್ಟು ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು.

ಉಚಿತ ಕರೆ, ಉಚಿತ ಎಸ್‌ಎಮ್‌ಎಸ್‌!

ಉಚಿತ ಕರೆ, ಉಚಿತ ಎಸ್‌ಎಮ್‌ಎಸ್‌!

ಈಗಾಗಲೇ ಪ್ರೀ ಪೇಯ್ಡ್ ಬಳಕೆದಾರರಿಗೆ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ನೀಡಿರುವ ಜಿಯೋ, ಕೇವಲ 199 ರೂಪಾಯಿಗಳಿಗೆ ಪೋಸ್ಟ್ ಪೇಯ್ಡ್ ಬಳಕೆದಾರರಿಗೂ ಸಂಪೂರ್ಣ ವಾಗಿ ಉಚಿತ ಕರೆ ಮಾಡುವ ಮತ್ತು ಮೇಸೆಜ್ ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ ಎಂದು ತಿಳಿದುಬಂದಿದೆ.

ಅಂತರಾಷ್ಟ್ರೀಯ ಕರೆಗಳು!!

ಅಂತರಾಷ್ಟ್ರೀಯ ಕರೆಗಳು!!

ಜಿಯೋ ಫೋಸ್ಟ್ ಪೇಯ್ಡ್ ಅನ್ನು ಗ್ರಾಹಕರು ಆಯ್ದುಕೊಳ್ಳಲು ಜಿಯೋವಿನ ಮೊದಲ ಪೋಸ್ಟ್‌ಪೇಡ್ ಆಫರ್ ಹೊಂದಿರುವ ಮತ್ತೊಂದು ಸೇವೆ ಕಾರಣವಾಗಲಿದೆ. ಅಂತರಾಷ್ಟ್ರೀಯ ಕರೆಗಳು ಪ್ರತಿ ನಿಮಿಷಕ್ಕೆ 50 ಪೈಸೆಯಿಂದ ಶುರುವಾಗಲಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಇನ್ನು ಲೋಕಲ್ ಬೆಲೆಯಲ್ಲಿ ಅಂತರಾಷ್ಟ್ರೀಯ ಕರೆಗಳು

ಮೇ 15 ರಿಂದ ಆರಂಭ!!

ಮೇ 15 ರಿಂದ ಆರಂಭ!!

ಜಿಯೋ ಲಾಂಚ್ ಮಾಡಲು ಮುಂದಾಗಿರುವ ರೂ.199 ಪೋಸ್ಟ್ ಪೇಯ್ಡ್ ಪ್ಲಾನ್ ಇದೇ ತಿಂಗಳ( ಮೇ) 15 ನೇ ತಾರೀಖಿನಿಂದ ಲಭ್ಯವಿರಲಿದೆ ಎನ್ನಲಾಗಿದೆ.ಪ್ರಮುಖ ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿರುವಂತೆ ಜಿಯೋವಿನ ಈ ಪೋಸ್ಟ್‌ಪೇಡ್ ಪ್ಲಾನ್‌ಗಳ ಜೊತೆ ಪ್ರೀಪೇಡ್ ಪ್ಲಾನ್‌ಗಳು ಸ್ವಲ್ಪ ಬದಲಾಗಲಿವೆಯಂತೆ.

ಫೇಸ್‌ಬುಕ್ ಅನ್ನು ಸಹ ಬಳಸಬಹುದಾದ ಈ ಫೀಚರ್ ಪೋನ್ ಅತ್ಯುತ್ತಮವಾಗಿದೆ
ಹೆದರಿದೆ ಟೆಲಿಕಾಂ ಪ್ರಪಂಚ!!

ಹೆದರಿದೆ ಟೆಲಿಕಾಂ ಪ್ರಪಂಚ!!

ಜಿಯೋ ಪೋಸ್ಟ್‌ಪೇಡ್ ಸೇವೆಯನ್ನು ಆರಂಭಿಸುವ ಸುದ್ದಿ ಪ್ರಕಟಿಸಿದ ನಂತರದ ಪ್ರೀಪೇಯ್ಡ್ ಬಳಕೆದಾರರನ್ನು ಕಳೆದುಕೊಂಡ ಏರ್‌ಟೆಲ್‌ ಮತ್ತು ಇತರೆ ಟೆಲಿಕಾಂ ಕಂಪೆನಿಗಳಿಗೆ ಈಗ ಭಯ ಉಂಟಾಗಿದೆ. ಈಗಾಗಲೇ, ಕೋಟ್ಯಾಂತರ ಗ್ರಾಹಕರನ್ನು ಕಳೆದುಕೊಂಡಿರುವ ಈ ಟೆಲಿಕಾಂಗಳು ಇದೇ ಪರಿಸ್ಥಿತಿ ಎದುರಾದರೆ ಮುಚ್ಚುವ ಪರಿಸ್ಥಿತಿ ಸಹ ಬರಬಹುದು.

Best Mobiles in India

English summary
The new post-paid Rs 199 plan announced by Reliance Jio is expected to hit revenue of competitors marginally and may trigger tariff war in the segment, according to market analysts. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+