150 ದಶಲಕ್ಷ ಬಳಕೆದಾರರನ್ನು ಸೃಷ್ಠಿಸುವ ಗುರಿ ಹೊಂದಿರುವ ರಿಲಾಯನ್ಸ್ 4ಜಿ ಜಿಯೋ

By Prathap T
|

ತನ್ನ ಉಚಿತ 4ಜಿ ಇಂಟರ್ ನೆಟ್ ಸೇವೆಯಿಂದ ಕಡಿಮೆ ಅವಧಿಯಲ್ಲಿ ನಿರೀಕ್ಷೆಗೂ ಮೀರಿದ ಬಳಕೆದಾರರನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿರುವ ರಿಲಾಯನ್ಸ್ 4ಜಿ ಜಿಯೋ ಮುಂಬರುವ ದಿನಗಳಲ್ಲಿ 150 ದಶಲಕ್ಷ ಗ್ರಾಹಕರನ್ನು ಸೃಷ್ಟಿಸುವ ದಿಟ್ಟ ಹೆಜ್ಜೆ ಇಟ್ಟಿದೆ.

 150 ದಶಲಕ್ಷ ಬಳಕೆದಾರರನ್ನು ಸೃಷ್ಠಿಸುವ ಗುರಿ ಹೊಂದಿರುವ ರಿಲಾಯನ್ಸ್ 4ಜಿ ಜಿಯೋ

ತಮ್ಮ ಸಂಸ್ಥೆಯ ಆದಾಯದಲ್ಲಿ ಶೇ.16ರಿಂದ 17ರಷ್ಟು ಹಣವನ್ನು ಮೀಸಲಿಡುವ ಮೂಲಕ ರಿಲಾಯನ್ಸ್ 4ಜಿ ಜಿಯೋ ಸಂಪರ್ಕ ಹೊಂದುವ ಗುಣವಿಶೇಷತೆಯುಳ್ಳ ಸ್ಮಾರ್ಟ್ ಫೋನ್ ಗಳನ್ನು 500 ರಿಂದ 1000 ರೂ.ಗಳವರೆಗೆ ಅತ್ಯಂತ ಕಡಿಮೆ ದರದಲ್ಲಿ ಗ್ರಾಹಕರ ಕೈಸೇರುವಂತೆ ಮಾಡುವ ಮುಖಾಂತರ 150 ದಶಲಕ್ಷ ಬಳಕೆದಾರರನ್ನು ಗ್ರಾಹಕರನ್ನಾಗಿ ಮಾಡುವ ಸಂಕಲ್ಪ ತೊಟ್ಟಿರುವುದಾಗಿ ಸಿ.ಎಲ್.ಎಸ್.ಎ ಸಂಸ್ಥೆ ವಿಷಯ ಬಹಿರಂಗ ಪಡಿಸಿದೆ.

ವೋಲ್ಟೋ(VOLTE) ಇಂಟರ್ ನೆಟ್ ಲಭ್ಯತೆ, ಡಾಟಾ ಅಪ್ಲಿಕೇಶನ್ಸ್ ಒಳಗೊಂಡಂತೆ 4ಜಿ ಇಂಟರ್ ನೆಟ್ ಸೇವೆ ಬಳಸಲು ಅನುಗುಣವಾಗಿ ಸ್ಮಾರ್ಟ್ ಫೋನ್ ಸಿದ್ಧಪಡಿಸಿ ಗ್ರಾಹಕರಿಗೆ ಕೇವಲ 500 ರಿಂದ 1000ರೂ. ಮೌಲ್ಯದ ಅಗ್ಗದ ಬೆಲೆಗೆ ಬಿಕಿರಿ ಮಾಡಲು ಮುಂದಾಗಿದೆ.

ಭಾರತದಲ್ಲಿ ಸ್ಮಾರ್ಟ್ ಫೋನ್ ಸರಕುಗಳು ಒಟ್ಟು 136 ಮಿಲಿಯನ್ ಮೀರಿದ್ದು, ಅದರಲ್ಲಿ 113 ಮಿಲಿಯನ್ ಸ್ಮಾರ್ಟ್ ಫೋನ್ಗಳು ಮಾರಾಟಗೊಂಡಿವೆ ಎಂಬುದು ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಉಳಿದ 30 ಪ್ರತಿಶತ ಬಳಕೆದಾರರಿಂದ ಸರಾಸರಿ 150-180 ರೂಪಾಯಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಉದ್ಯಮದ ಆದಾಯದಲ್ಲಿ ಶೇ.15-17ರಷ್ಟು ಹೂಡಿಕೆ ಮಾಡಿ ಹೆಚ್ಚುವರಿ 100 ದಶಲಕ್ಷ ಚಂದಾದರರನ್ನು ರಿಲಾಯನ್ಸ್ 4ಜಿ ಜಿಯೋ ಮಾರುಕಟ್ಟೆ ಪಡೆದುಕೊಳ್ಳುವ ಮೂಲಕ ಶೇ.19-20ರಷ್ಟು ಆದಾಯ ಹೆಚ್ಚಿಸಿಕೊಳ್ಳುವ ತಂತ್ರಗಾರಿಕೆ ರೂಪಿಸಿದೆ. ಆಮೂಲಕ ಮೂರನೇ ಅತಿ ದೊಡ್ಡ ಆಯೋಜಕ ಸಂಸ್ಥೆಯಾದ ಐಡಿಯಾ ಸೆಲ್ಯುಲರ್ ಲಿಮಿಟೆಡ್ ಹಿಂದಿಕ್ಕಲು ಹವಣಿಸುತ್ತಿದೆ.

ಉದ್ಯಮದ ಆದಾಯದಲ್ಲಿನ ಸಂಕುಚಿತ ARPU ನ ದುರ್ಬಲತೆಯಿಂದಾಗಿ ಉನ್ನತ ಮಟ್ಟದ 4ಜಿ ಸ್ಮಾರ್ಟ್ ಫೋನ್ಗಳು ಮತ್ತು ಮಿಫಿ ಹ್ಯಾಂಡ್ ಸೆಟ್ ಬಳಸುವ ಚಂದಾದಾರರು (15 ಶೇಕಡಾ ಚಂದಾದಾರರು, ಆದಾಯದ 40 ಪ್ರತಿಶತ) ಕಾಣಬಹುದಾಗಿದೆ. ಆದಾಗ್ಯೂ, ಜಿಯೋ ಮೂಲಕ 4 ಜಿ ಫೀಚರ್ ಫೋನ್ ಬಿಡುಗಡೆ ಮತ್ತು ಪ್ರಚಾರದ ಕೊಡುಗೆಗಳು ಮಧ್ಯ ARPU ಚಂದಾದಾರರಲ್ಲಿ ARPU ದುರ್ಬಲಗೊಳಿಸುವಿಕೆಗೆ ಕಾರಣವಾಗುತ್ತವೆ.

ಇದು ಒಟ್ಟು ಚಂದಾದಾರರ ಪೈಕಿ 21 ಪ್ರತಿಶತ ಮತ್ತು 22 ಪ್ರತಿಶತ ಆದಾಯವನ್ನು ಹೊಂದಿದೆ. ಟೆಲಿಕಾಂ ವಲಯದ ಆದಾಯವು ಪ್ರಚಾರಗಳು ಮತ್ತು ಪ್ರತೀಕಾರದ ಸುಂಕಗಳು ನೇತೃತ್ವದಲ್ಲಿ FY18 ರಲ್ಲಿ ಶೇ.7% ರಷ್ಟು ವರ್ಷಕ್ಕೆ ಇಳಿಮುಖವಾಗಲು ನಿರೀಕ್ಷೆಯಿದೆ. ರಿಲಾಯನ್ಸ್ ಜಿಯೊ ಗ್ರಾಹಕರಿಗೆ ಸಂಪೂರ್ಣವಾಗಿ ಚಾರ್ಜ್ ಆಗಲು ಪ್ರಾರಂಭಿಸಿದಾಗ ಒಂದು ಮರುಕಳಿಸುವಿಕೆಯು FY19 ರಲ್ಲಿ ಮಾತ್ರ ಕಂಡುಬರುತ್ತದೆ.

Best Mobiles in India

Read more about:
English summary
The remaining 30 percent are likely to have an average revenue per user of Rs 150-180 and contribute around 15-17 percent to the industry's revenue

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X