Subscribe to Gizbot

ಜಿಯೋಗೆ ಒಂದೇ ಒಂದು ಒಪ್ಪಿಗೆ ಸಿಕ್ಕರೆ ಏರ್‌ಟೆಲ್ ಮನೆಗೆ!!..ಏನದು ಗೊತ್ತಾ?

Written By:

ಟೆಲಿಕಾಂನಲ್ಲಿ ಈಗಾಗಲೇ ದರಸಮರದ ಕಾವು ತುತ್ತ ತುದಿಗೆ ಹೋಗಿದೆ.! ಜಿಯೋ ಮಣಿಸಲು ಎಲ್ಲಾ ಟೆಲಿಕಾಂಗಳು ಪ್ರಯತ್ನಪಟ್ಟರೆ ಜಿಯೋ ಮಾತ್ರ ಎಲ್ಲಾ ಟೆಲಿಕಾಂಗಳಿಗೂ ಸೆಡ್ಡುಹೊಡೆಯುತ್ತಿದೆ.! ಇನ್ನು ಇದೀಗ ಜಿಯೋ, ಭಾರತ ಸ್ಪರ್ಧೆ ಆಯೋಗದಿಂದ ಮತ್ತೊಮ್ಮೆ ಸಿಹಿಸುದ್ದಿಯನ್ನು ಪಡೆಯುವ ತವಕದಲ್ಲಿದೆ.!!

ಹೌದು, ಜಿಯೋ ಇದೀಗ ರಿಲಾಯನ್ಸ್ ಕಮ್ಯೂನಿಕೇಷನ್ ಜೊತೆಗೆ ಸ್ಪೆಕ್ಟ್ರಮ್ ಹಂಚಿಕೆಗೆ ಬೇಕಾದ ಅನುಮೋದನೆಯನ್ನು CCI (Competition Commission of India,Government of India) ನಿಂದ ಪಡೆಯಲು ಮುಂದಾಗಿದೆ.! ಮುಖೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿಯ ರಿಲಾಯನ್ಸ್ ಟೆಲಿಕಾಂ ಜೊತೆಗೆ ಒಪ್ಪಂದ ಮಾಡಿಕೊಂಡು ಜಿಯೋ ಮತ್ತೆ ತನ್ನ ನೆಟ್‌ವರ್ಕ್ ವಿಸ್ತರಿಸಿಕೊಳ್ಳುತ್ತಿದೆ.!!

ಹಾಗಾದರೆ, ಜಿಯೋ ರಿಲಾಯನ್ಸ್ ಕಮ್ಯೂನಿಕೇಷನ್ ಜೊತೆ ಮಾಡಿಕೊಂಡಿರುವ ಒಪ್ಪಂದ ಏನು? ಭಾರತ ಸ್ಪರ್ಧೆ ಆಯೋಗದಿಂದ ಅನುಮನೋದನೆ ಏಕೆ ಬೇಕು? ಅನುಮೋದನೆ ಸಿಕ್ಕರೆ ಜಿಯೋವಿನ ಶಕ್ತಿ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ, ರಿಲಾಯನ್ಸ್ ಕಮ್ಯೂನಿಕೇಷನ್ ಒಪ್ಪಂದ!!

ಜಿಯೋ, ರಿಲಾಯನ್ಸ್ ಕಮ್ಯೂನಿಕೇಷನ್ ಒಪ್ಪಂದ!!

ಜಿಯೋ ತನ್ನ ನೆಟ್‌ವರ್ಕ್ ವಿಸ್ತರಣೆ ಮಾಡಿಕೊಳ್ಳುವ ತವಕದಲ್ಲಿದ್ದು, ಜನವರಿಯಲ್ಲಿಯೇ ಅನಿಲ್ ಅಂಬಾನಿಯ ರಿಲಾಯನ್ಸ್ ಟೆಲಿಕಾಂ ಜೊತೆ 800MHz ಬಳಕೆ ಮಾಡಲು ಒಪ್ಪಂದ ಮಾಡಿಕೊಂಡಿತ್ತು. ಹಾಗಾಗಿ, ಈ ಸ್ಪೆಕ್ಟಮ್ ಬಳಸಲು CCI ನಿಂದ ಒಪ್ಪಿಗೆಗಾಗಿ ಕಾಯುತ್ತಿದೆ.!!

CCI ನಿಂದ ಒಪ್ಪಿಗೆ ಏಕೆ ಬೇಕು?

CCI ನಿಂದ ಒಪ್ಪಿಗೆ ಏಕೆ ಬೇಕು?

ಯಾವುದೇ ಟೆಲಿಕಾಂ ಪ್ರವೇಶ ಸೇವೆ ಒದಗಿಸುತ್ತಿದ್ದರೆ ಪ್ರವೇಶಾತ್ಮಕ ಸ್ಪೆಕ್ಟ್ರಂನ ವ್ಯಾಪಾರಕ್ಕಾಗಿ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುತ್ತವೆ. ಹಾಗಾಗಿ, ಭಾರತ ಸ್ಪರ್ಧೆ ಆಯೋಗದಿಂದ ಅನಿಲ್ ಅಂಬಾನಿಯ ರಿಲಾಯನ್ಸ್ ಟೆಲಿಕಾಂ ಒಡೆತನದ 800MHz ಸ್ಪೆಕ್ಟ್ರಮ್ ಬಳಸಲು ಅನುಮತಿ ಕಡ್ಡಾಯ.!!

ಅನುಮೋದನೆ ಸಿಕ್ಕರೆ ಜಿಯೋವಿನ ಶಕ್ತಿ ಏನು?

ಅನುಮೋದನೆ ಸಿಕ್ಕರೆ ಜಿಯೋವಿನ ಶಕ್ತಿ ಏನು?

ಈಗಾಗಲೇ ಹಲವು ಸ್ಪೆಕ್ಟ್ರಮ್ ಮೂಲಕ ಸೇವೆ ನೀಡುತ್ತಿರುವ ಜಿಯೋ 800MHz ಸ್ಪೆಕ್ಟ್ರಮ್ ಮೂಲಕ ಸೇವೆ ನಿಡಿದರೆ ಮತ್ತೆ 7 ವಲಯಗಳಲ್ಲಿ ಜಿಯೋ ಸೇವೆ ಹೆಚ್ಚಾಗುತ್ತದೆ. 1800MHz ಸ್ಪೆಕ್ಟ್ರಮ್ ಮೂಲಕ ಈಗ 14 ವಲಯಗಳಲ್ಲಿ ಸೇವೆ ನೀಡುತ್ತಿರುವ ಜಿಯೋ ಶಕ್ತಿ ಮತ್ತಷ್ಟು ಹೆಚ್ಚಾಗಲಿದೆ.!!

ರಿವ್ಯೂವ್ ಹಂತದಲ್ಲಿದೆ ಅನುಮೋದನೆ!!

ರಿವ್ಯೂವ್ ಹಂತದಲ್ಲಿದೆ ಅನುಮೋದನೆ!!

ಲಾಯನ್ಸ್ ಕಮ್ಯೂನಿಕೇಷನ್ ಜೊತೆಗೆ ಸ್ಪೆಕ್ಟ್ರಮ್ ಹಂಚಿಕೆಗೆ ಬೇಕಾದ ಅನುಮೋದನೆಯನ್ನು CCI ವಿಮರ್ಶೆಗೆ ಒಳಪಡಿಸಿದೆ. ಈಗಲೂ ಟೆಸ್ಟಿಂಗ್ ಹಂತದಲ್ಲಿಯೇ ಸೇವೆ ನೀಡುತ್ತಿರುವ ಜಿಯೋಗೆ ಭಾರತ ಸ್ಪರ್ಧೆ ಆಯೋಗ 800MHz ಸ್ಪೆಕ್ಟ್ರಮ್ ಬಳಸಲು ಅನುಮತಿ ನೀಡಿದರೆ ಜಿಯೋವನ್ನು ಯಾರೂ ಕೂಡ ತಡೆಯಲು ಸಾಧ್ಯವಿಲ್ಲಾ!!

ಓದಿರಿ:ಒಂದೇ ದಿನದಲ್ಲಿ ಪಾನ್‌ಕಾರ್ಡ್‌ ಪಡೆಯಲು ಬರುತ್ತಿದೆ 'ಆಪ್'!! ಯಾವುದು ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
jio is now seeking to obtain a approval from CCI. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot