ಜಿಯೋಫೋನಿನಲ್ಲಿ ಮತ್ತಷ್ಟು ಗೇಮ್ಸ್ ಸೇರಿಸಲು ಆಲೋಚಿಸುತ್ತಿದೆ ರಿಲಯನ್ಸ್ ಜಿಯೋ

|

ರಿಲಯನ್ಸ್ ಜಿಯೋ ಸಂಸ್ಥೆ ಮೊಬೈಲ್ ಕಂಟೆಂಟ್ ರೀಟೈಲರ್ ಮೊಬೈಲ್ ಸ್ಟ್ರೀಮ್ಸ್ ಜೊತೆಗೆ HTML5 ಗೇಮ್ಸ್ ಕಟೆಂಟ್ ಗಳ ಜಿಯೋ ಗೇಮ್ಸ್ ಸ್ಟೋರ್ ಮತ್ತು ಜಿಯೋಫೋನ್ ಗಾಗಿ ಪಾಲುದಾರಿಕೆಯನ್ನು ಹೊಂದಿದೆ.

ಜಿಯೋಫೋನಿನಲ್ಲಿ ಮತ್ತಷ್ಟು ಗೇಮ್ಸ್ ಸೇರಿಸಲು ಆಲೋಚಿಸುತ್ತಿದೆ ರಿಲಯನ್ಸ್ ಜಿಯೋ

ಮೊಬೈಲ್ ಸ್ಟ್ರೀಮ್ಸ್ ಹಲವಾರು ಡೆವಲಪರ್ ಗಳ ಜೊತೆಗೆ ಕೆಲಸ ನಿರ್ವಹಿಸಿದ್ದು ಜಿಯೋನ 4ಜಿ ಫೀಚರ್ ಫೋನ್, ಜಿಯೋಫೋನ್ ಮತ್ತು ಇತ್ತೀಚೆಗೆ ಬಿಡುಗಡೆಗೊಂಡಿರುವ ಸ್ಮಾರ್ಟ್ ಫೋನ್ ಗೇಮ್ ಸ್ಟೋರ್ ಗಾಗಿ ಹೈ-ಕ್ವಾಲಿಟಿ HTML5 ಗೇಮ್ಸ್ ಗಳನ್ನು ನೀಡಲು ಪ್ರಯತ್ನಿಸುತ್ತಿದ್ದೆ. ಜಿಯೋ ಗೇಮ್ ಸ್ಟೋರ್ ನಲ್ಲಿ ಲಭ್ಯವಿರುವ ಟೈಟಲ್ಸ್ ಗಳಲ್ಲಿ ಮೊಬೈಲ್ ಸ್ಟ್ರೀಮ್ ನ ಟಾಪ್ ಸೆಲ್ಲರ್ಸ್ ಗಳು ಲಭ್ಯವಿದ್ದಾರೆ ಉದಾಹರಣೆಗೆ ಕಲರ್ ಪಿನ್, ಗೆಟ್10 ಮತ್ತು ನಿಯಾನ್ ಬೈಕರ್.

ನಾವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಟೆಲಿಕಾಂ ಕಂಪೆನಿಯ ಜೊತೆಗೆ ಪಾಲುದಾರಿಕೆ ಹೊಂದಲು ಉತ್ಸುಕರಾಗಿದ್ದೇವೆ. ಭಾರತೀಯ ಮೊಬೈಲ್ ಆರ್ಥಿಕತೆಯಲ್ಲಿ ರಿಲಯನ್ಸ್ ಮಾಡುತ್ತಿರುವ ಇಂಪ್ಯಾಕ್ಟ್ ಬಗ್ಗೆ ಮತ್ತು ಮಾರುಕಟ್ಟೆಯಲ್ಲಿ ಅವರು ಬಿಡುಗಡೆಗೊಳಿಸಿರುವ ವಿವಿಧ ರೇಂಜಿನ ಪ್ರೊಡಕ್ಟ್ ಗಳ ವಿಚಾರದಲ್ಲಿ ನಾವು ಆಕರ್ಷಿತರಾಗಿದ್ದೇವೆ. 2019 ರಲ್ಲಿ ಮತ್ತು ಮುಂದಿನ ವರ್ಷಗಳಲ್ಲಿ ನಾವು ಅವರ ಜೊತೆಗೆ ಹತ್ತಿರದಿಂದ ಕಾರ್ಯ ನಿರ್ವಹಿಸುವ ಬಗ್ಗೆ ಎದುರು ನೋಡುತ್ತಿದ್ದೇವೆ ಎಂದು ಮೊಬೈಲ್ ಸ್ಟ್ರೀಮ್ಸ್ ನ ಸಿಇಓ ಆಗಿರುವ ಸೈಮನ್ ಬಂಕಿಗ್ಹ್ಯಾಮ್ ತಿಳಿಸಿದ್ದಾರೆ.

ಮೊಬೈಲ್ ಸ್ಟ್ರೀಮ್ಸ್ ತಿಳಿಸಿರುವಂತೆ ಗೇಮ್ಸ್ ಗಳು ಜಾಹೀರಾತು ಅಭಿಯಾನದ ಮೂಲಕ ಹಣ ಸಂಪಾದನೆ ಮಾಡಲಿದೆ. ಕಳೆದ ವರ್ಷ ಜೂನ್ ನಲ್ಲಿ ಪ್ರಾರಂಭವಾದಾಗಿನಿಂದಲೂ,200 ಮಿಲಿಯನ್ ಜಾಹೀರಾತುಗಳು ಮೂರು ಟೈಟಲ್ ಗಳಲ್ಲಿ ನೀಡಲಾಗಿದೆ. ಉಳಿದ ಮೂರು ಟೈಟಲ್ ಗಳು ಜನವರಿಯಲ್ಲಿ ಬಿಡುಗಡೆಗೊಳ್ಳಲಿದೆ.

Best Mobiles in India

Read more about:
English summary
Reliance Jio set to bring more games to JioPhone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X