ಜಿಯೋ ಬಳಕೆದಾರರಿಗೆ ಇನ್ನು 5 ವರ್ಷ ಚಿಂತೆ ಇಲ್ಲ..!

|

ಭಾರತೀಯ ಟೆಲಿಕಾಂ ಮಾರುಕಟ್ಟೆಯ ಅತೀ ದೊಡ್ಡ ಡೇಟಾ ನೆಟ್‌ವರ್ಕ್ ಹೊಂದಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ತನ್ನ ಬಳಕೆದಾರರಿಗೆ ಮತ್ತೊಂದು ದೊಡ್ಡ ಮಟ್ಟದ ಆಫರ್ ಅನ್ನು ನೀಡಲು ಮುಂದಾಗಿದೆ. ಟೆಲಿಕಾಂ ಮಾರುಕಟ್ಟೆಯನ್ನು ಹೊರತುಪಡಿಸಿ ಬೇರೆ ವಲಯಗಳನ್ನು ಟಚ್ ಮಾಡುವ ಮೂಲಕ ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲು ಯೋಜನೆ ರೂಪಿಸಿದೆ.

ಜಿಯೋ ಬಳಕೆದಾರರಿಗೆ ಇನ್ನು 5 ವರ್ಷ ಚಿಂತೆ ಇಲ್ಲ..!

ದೇಶದಲ್ಲಿ ಕ್ರಿಕೆಟ್ ಹೆಚ್ಚಿನ ಪ್ರಮಾಣದ ಅಭಿಮಾನಿಗಳನ್ನು ಹೊಂದಿದೆ ಎನ್ನವ ಕಾರಣಕ್ಕಾಗಿ ತನ್ನ ಜಿಯೋ ಟಿವಿ ಆಪ್‌ ಬಳಕೆದಾರರಿಗೆ ಮುಂದಿನ ಐದು ವರ್ಷಗಳ ಕಾಲ ಯಾವುದೇ ಕ್ರಿಕೆಟ್ ಮ್ಯಾಚ್ ನಡೆದರು ಅದನ್ನು ಮಿಸ್ ಮಾಡಿಕೊಳ್ಳಬಾರದು ಎನ್ನವ ಕಾರಣಕ್ಕೆ ಸ್ಟಾರ್ ಇಂಡಿಯಾ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಇದು ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಖ್ಯಾತಿಗೆ ಹೆಚ್ಚಿನ ಬಲವನ್ನು ತುಂಬಿಕೊಡಲಿದೆ.

ಸ್ಟಾರ್ ನೊಂದಿಗೆ ಒಪ್ಪಂದ:

ಸ್ಟಾರ್ ನೊಂದಿಗೆ ಒಪ್ಪಂದ:

ಈಗಾಗಲೇ ನಡೆಯುತ್ತಿರುವ ಏಷ್ಯಾ ಕಪ್ ಸೇರಿದಂತೆ ಮಂದಿನ ಐದು ವರ್ಷಗಳಲ್ಲಿ ಟೀಮ್ ಇಂಡಿಯಾ ಭಾಗವಹಿಸುವ ಎಲ್ಲಾ ಕ್ರಿಕೆಟ್ ಪಂದ್ಯಾವಳಿಗಳನ್ನು ನೇರವಾಗಿ ಪ್ರಸಾರ ಮಾಡುವ ಹಕ್ಕನ್ನು ಹೊಂದಿರುವ ಸ್ಟಾರ್ ಇಂಡಿಯಾ ದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿರುವ ಜಿಯೋ, ಮುಂದಿನ ಐದು ವರ್ಷ ಎಲ್ಲಾ ಕ್ರಿಕೆಟ್ ಪಂದ್ಯಾವಳಿಗಳನ್ನು ತನ್ನ ಬಳಕೆದಾರರಿಗೆ ಉಚಿತವಾಗಿ ತೋರಿಸಲಿದೆ.

ಎಲ್ಲಾ ಮಾದರಿಯ ಕ್ರಿಕೆಟ್:

ಎಲ್ಲಾ ಮಾದರಿಯ ಕ್ರಿಕೆಟ್:

ಟೀಮ್ ಇಂಡಿಯಾ ಆಡುವ ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ಅಂದ್ರೆ, T20, ODI ಮತ್ತು ಟೆಸ್ಟ್‌ ಪಂದ್ಯಗಳನ್ನು ಜಿಯೋ ತನ್ನ ಜಿಯೋ ಟಿವಿ ಆಪ್‌ನಲ್ಲಿ ಬಳಕೆದಾರರಿಗೆ ನೀಡಲಿದೆ ಎನ್ನಲಾಗಿದೆ. ಅಲ್ಲದೇ ದೇಶದಲ್ಲಿ ಆಡುವ ರಣಜಿ ಪಂದ್ಯಗಳನ್ನು ಜಿಯೋದಲ್ಲಿಯೇ ನೋಡುವ ಅವಕಾಶವನ್ನು ಮಾಡಿಕೊಡಲಾಗಿದೆ.

ನಾನ್‌ ಸ್ಟಾಪ್ ಕ್ರಿಕೆಟ್:

ನಾನ್‌ ಸ್ಟಾಪ್ ಕ್ರಿಕೆಟ್:

ಜಿಯೋ ನೀಡಿರುವ ಹೊಸ ಸೇವೆಯಿಂದಾಗಿ ಬಳಕೆದಾರರು ನಾನ್ ಸ್ಟಾಪ್ ಕ್ರಿಕೆಟ್ ಸೇವೆಯನ್ನು ಆನಂದಿಸಬಹುದಾಗಿದೆ. ಇದಲ್ಲದೇ ಜಿಯೋ ಸ್ಮಾರ್ಟ್‌ಫೋನಿನಲ್ಲಿಯೇ ಸೇವೆಯನ್ನು ನೀಡುವುದರಿಂದಾಗಿ ನೀವು ಎಲ್ಲಿಬೇಕಾದರು ಕ್ರಿಕೆಟ್ ಮ್ಯಾಚ್ ನೋಡುವ ಅವಕಾಶವು ದೊರೆಯಲಿದೆ.

ಇನ್ನು ಅನೇಕ ಸೇವೆ:

ಇನ್ನು ಅನೇಕ ಸೇವೆ:

ಜಿಯೋ ಕೇವಲ ಟೆಲಿಕಾಂ ಸೇವೆಗಳ ಮೇಲೆ ಮಾತ್ರವೇ ಹೆಚ್ಚಿನ ಗಮನವನ್ನು ಹರಿಸದೆ, ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಅಗತ್ಯ ಎಂದು ಕಾಣಿಸಿಸುವ ಎಲ್ಲಾ ಮಾದರಿಯ ಸೇವೆಯನ್ನು ನೀಡುವ ಪ್ರಯತ್ಮವನ್ನು ಮಾಡುತ್ತಿದೆ. ಮುಂದೊದು ದಿನ ಮಾರುಕಟ್ಟೆಯಲ್ಲಿ ಎಲ್ಲವೂ ಜಿಯೋಮಯವಾಗಲಿದೆ.

ಬರ್ತಿದೆ ಜಿಯೋ ಹಬ್‌..! ನಿಮ್ಮೂರಿನಲ್ಲಿಯೇ ಮಾಲ್‌ ಒಪನ್‌..!

ಬರ್ತಿದೆ ಜಿಯೋ ಹಬ್‌..! ನಿಮ್ಮೂರಿನಲ್ಲಿಯೇ ಮಾಲ್‌ ಒಪನ್‌..!

ದೇಶದ ಅತಿ ಶ್ರೀಮಂತ ವ್ಯಕ್ತಿ ಮುಖೇಶ್‌ ಅಂಬಾನಿ ದೇಶಿಯ ಸಂವಹನ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿದ ನಂತರ ಹೊಸ ಯೋಜನೆಯೊಂದನ್ನು ಜಾರಿಗೆ ತರಲು ಚಿಂತಿಸುತ್ತಿದ್ದಾರೆ. ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದರೆ ಸಣ್ಣ ಸಣ್ಣ ವ್ಯಾಪಾರಿಗಳಿಗೆ ದೊಡ್ಡ ಹೊಡೆತ ಬೀಳುವುದು ಗ್ಯಾರಂಟಿ. ಹೀಗಾಗಲೇ ಟೆಲಿಕಾಂ, ಡಿಟಿಎಚ್‌, ಬ್ರಾಡ್‌ಬ್ಯಾಂಡ್‌ ಕ್ಷೇತ್ರದಲ್ಲಿ ಏಕಾಧಿಪತ್ಯ ಸ್ಥಾಪಿಸಲು ಮುಂದಾಗುತ್ತಿರುವ ಜಿಯೋ ಕಣ್ಣಿಗೆ ಈಗ ಗ್ರಾಮೀಣ ಭಾರತ ಬಿದ್ದಿದೆ.

ಹೌದು, ರಿಲಾಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ತನ್ನ ಉತ್ಪನ್ನಗಳನ್ನು ಗ್ರಾಮೀಣ ಭಾರತಕ್ಕೂ ತಲುಪಿಸುಬೇಕು ಎನ್ನುವ ಉದ್ದೇಶದಿಂದ ಸಣ್ಣ ಸಣ್ಣ ನಗರ, ಪಟ್ಟಣಗಳಲ್ಲಿ ರಿಲಾಯನ್ಸ್‌ ಜಿಯೋ ಹಬ್‌ಗಳನ್ನು ಪ್ರಾರಂಭಿಸಲು ನಿರ್ಧರಿಸಿದ್ದು, ಎಲ್ಲಾ ತರಹದ ಗ್ರಾಹಕರಿಗೆ ಎಲೆಕ್ಟ್ರಾನಿಕ್ ಉತ್ಪನ್ನಗಳಿಂದ ದಿನಸಿ ಉತ್ಪನ್ನಗಳವರೆಗೂ ಎಲ್ಲಾ ವಸ್ತುಗಳು ಇಲ್ಲಿ ಸಿಗುತ್ತವೆ. ಸಣ್ಣ ನಗರಗಳ ಜನರಿಗೆ ಜಿಯೋ ಹಬ್‌ಗಳು ಮೊದಲ ಮಾಲ್‌ ಶಾಪಿಂಗ್‌ ಅನುಭವವನ್ನು ನೀಡುತ್ತವೆ ಎಂದು ಹೇಳಿಕೊಂಡಿದೆ. ಜಿಯೋ ಹಬ್‌ ಏನೇಲ್ಲಾ ವಿಶೇಷತೆ ಹೊಂದಿದೆ ಎಂಬುದನ್ನು ಮುಂದೆ ನೋಡಿ.

ಗ್ರಾಮೀಣ ಭಾರತದಲ್ಲಿ ವ್ಯಾಪಾರ ಉತ್ತೇಜನ

ಗ್ರಾಮೀಣ ಭಾರತದಲ್ಲಿ ವ್ಯಾಪಾರ ಉತ್ತೇಜನ

ರಿಲಾಯನ್ಸ್‌ ರಿಟೇಲ್‌ ಲಿಮಿಟೆಡ್‌ನ ಭೌತಿಕ ಸ್ಟೋರ್‌ ಹಾಗೂ ರಿಲಾಯನ್ಸ್‌ ಜಿಯೋ ಇನ್ಫೋಕಾಮ್‌ ಲಿಮಿಟೆಡ್‌ನ ಡಿಜಿಟಲ್‌ ಇನ್‌ಫ್ರಾಸ್ಟ್ರಕ್ಚರ್ ವ್ಯಾಪಾರವನ್ನು ಸಣ್ಣ ಸಣ್ಣ ನಗರಗಳಿಗೆ ವಿಸ್ತರಿಸಬೇಕು ಎನ್ನುವ ಉದ್ದೇಶದೊಂದಿಗೆ ಜಿಯೋ ಹಬ್‌ ಸ್ಥಾಪಿಸಲು ಅಂಬಾನಿ ಮುಂದಾಗಿದ್ದಾರೆ. ಆಧುನಿಕ ರಿಟೇಲ್‌ ಮಾರುಕಟ್ಟೆ ಮತ್ತು ಆನ್‌ಲೈನ್‌ ಶಾಪಿಂಗ್‌ನಲ್ಲಿ ತೊಡಗಿಸಿಕೊಳ್ಳದ ಪ್ರದೇಶಗಳನ್ನು ಜಿಯೋ ಟಾರ್ಗೇಟ್ ಮಾಡಿದೆ.

ಗಿಗಾಫೈಬರ್ ನಂತರ ದೊಡ್ಡ ಯೋಜನೆ

ಗಿಗಾಫೈಬರ್ ನಂತರ ದೊಡ್ಡ ಯೋಜನೆ

ರಿಲಾಯನ್ಸ್‌ ಜಿಯೋ ಹಬ್‌ ಯೋಜನೆ ಗಿಗಾಫೈಬರ್ ಬ್ರಾಡ್‌ಬ್ಯಾಂಡ್ ಸೇವೆ ನಂತರ RIL ಕಂಪನಿಗೆ ಅತಿದೊಡ್ಡ ಕೇಂದ್ರೀಕೃತ ಯೋಜನೆಯಾಗಿದೆ. ಅಂಬಾನಿ ಕನಸಿನಂತೆ ಟೆಲಿಕಾಂ, ರಿಟೇಲ್‌ ಮತ್ತು ಇ-ಕಾಮರ್ಸ್‌ಗಳನ್ನು ಒಂದೇ ತಂತ್ರಜ್ಞಾನ ವೇದಿಕೆಯನ್ನಾಗಿ ಮಾಡಲು ಜಿಯೋ ಹಬ್‌ ಯೋಜನೆ ಸಹಕಾರಿಯಾಗಲಿದೆ ಎಂದು ಜಿಯೋದ ಹೆಸರೆಳಲಿಚ್ಚಿಸದ ಅಧಿಕಾರಿ ಹೇಳಿದ್ದಾರೆ.

ಅಂಬಾನಿ ಕನಸಿನ ಯೋಜನೆ

ಅಂಬಾನಿ ಕನಸಿನ ಯೋಜನೆ

ಜಿಯೋ ಹಬ್‌ ಯೋಜನೆ ರಿಲಾಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಚೇರ್‌ಮನ್‌ ಮುಖೇಶ್‌ ಅಂಬಾನಿಯವರ ಕನಸಿನ ಯೋಜನೆಯಾಗಿದೆ. ಸಣ್ಣ ಪಟ್ಟಣಗಳಿಗೆ ದೊಡ್ಡ ಪ್ರಮಾಣದಲ್ಲಿ ನಾವೂ ತಲುಪಬೇಕೆಂಬುದನ್ನು ಕಂಪನಿ ಅರಿತಿದೆ. ಜುಲೈ 5ರಂದು ಆಯೋಜಿಸಿದ್ದ ರಿಲಾಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‌ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಂಬಾನಿ ಮಾತನಾಡಿ, ಆನ್‌ಲೈನ್‌ನಿಂದ ಆಫ್‌ಲೈನ್‌ವರೆಗೆ ಹೊಸ ಕಾಮರ್ಸ್‌ನಂತಹ ಹೈಬ್ರಿಡ್ ಪ್ಲಾಟ್‌ಫಾರ್ಮ್‌ ಸೃಷ್ಟಿಸಿದರೆ ರಿಲಾಯನ್ಸ್‌ ಬೆಳವಣಿಗೆಗೆ ದೊಡ್ಡ ಅವಕಾಶ ಸಿಗುತ್ತದೆ ಎಂದು ಹೇಳಿದ್ದರು. ಅದು ಈಗ ಕಾರ್ಯರೂಪಕ್ಕೆ ಬರುತ್ತಿದೆ.

ಅನುಭವ ಕೇಂದ್ರವೂ ಹೌದು..!

ಅನುಭವ ಕೇಂದ್ರವೂ ಹೌದು..!

ಜಿಯೋ ಹಬ್‌ ಲಭ್ಯವಿರುವ ಉತ್ಪನ್ನಗಳನ್ನು ಪ್ರದರ್ಶಿಸುವುದಷ್ಟೇ ಅಲ್ಲದೇ ಅನುಭವ ಕೇಂದ್ರವಾಗಿಯೂ ಸಹ ಕಾರ್ಯನಿರ್ವಹಿಸುತ್ತದೆ. ಹಾಗೂ ದಾಸ್ತಾನು ಮಳಿಗೆಯಾಗಿಯೂ ಚಟುವಟಿಕೆ ನಡೆಸುತ್ತದೆ. ಹಾಗೂ ಹೊಸ ಇ-ಕಾಮರ್ಸ್‌ ಕರಡು ನೀತಿಯಂತೆ ಶೇ.100ರಷ್ಟು ಭಾರತದ ಮಾಲೀಕತ್ವವನ್ನು ಹೊಂದಿರುವುದರಿಂದ ಕಾರ್ಯಾರಂಭಕ್ಕೆ ಯಾವುದೇ ಅಡಚಣೆಯಿಲ್ಲ. ಕಳೆದ ತಿಂಗಳು ಕೇಂದ್ರ ಸರ್ಕಾರ ಹೊಸ ಇ-ಕಾಮರ್ಸ್‌ ಪಾಲಿಸಿಯನ್ನು ತಂದು ಕೇವಲ ಭಾರತೀಯರ ಮಾಲೀಕತ್ವದ ಕಂಪನೆಗಳು ರಿಟೇಲ್‌ ಕಂಪನಿಗಳನ್ನು ಸ್ಥಾಪಿಸಬಹುದು ಎಂದು ಹೇಳಿದೆ.

800 ಜಿಯೋ ಹಬ್‌

800 ಜಿಯೋ ಹಬ್‌

ಭಾರತದಾದ್ಯಂತ 800 ಜಿಯೋ ಹಬ್‌ಗಳನ್ನು ತೆರೆಯಲು ರಿಲಾಯನ್ಸ್‌ ನಿರ್ಧರಿಸಿದೆ. ಜಿಯೋ ಹಬ್‌ ಸ್ಥಾಪನೆಗೆ ಬೇಕಾದ ಹೂಡಿಕೆಯ ಮೌಲ್ಯವನ್ನು ಆದಷ್ಟು ಬೇಗ ಅಂತಿಮಗೊಳಿಸಿ ಜಿಯೋ ಹಬ್‌ಗಳನ್ನು ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತದೆ ಎಂದು ರಿಲಾಯನ್ಸ್‌ ಸಿಬ್ಬಂದಿ ಹೇಳಿದ್ದಾರೆ.

ಪ್ರಾದೇಶಿಕತೆಗೆ ಹೆಚ್ಚು ಒತ್ತು

ಪ್ರಾದೇಶಿಕತೆಗೆ ಹೆಚ್ಚು ಒತ್ತು

ರಿಲಾಯನ್ಸ್‌ನ ಹೊಸ ಯೋಜನೆಯೂ ಸ್ಥಳೀಯ ಮಾರುಕಟ್ಟೆಯನ್ನು ತಲುಪುವ ಉದ್ದೇಶ ಹೊಂದಿದೆ. ಇದರಿಂದ ಗ್ರಾಮೀಣ ವ್ಯಾಪಾರಿಗಳ ಹಾಗೂ ಗ್ರಾಮೀಣ ಗ್ರಾಹಕರ ಆಯ್ಕೆಯನ್ನು ತಿಳಿಯಲು ಸಹಾಯವಾಗುತ್ತದೆ. ಭಾರತೀಯ ಗ್ರಾಹಕರಲ್ಲಿ ದೊಡ್ಡ ಮಟ್ಟದ ಸಂಖ್ಯೆಯ ಗ್ರಾಹಕರು ಇನ್ನೂ ಆಫ್‌ಲೈನ್‌ ಶಾಪಿಂಗ್‌ ಮಾಡುತ್ತಿದ್ದಾರೆ. 2015ರಿಂದ ಭಾರತದಲ್ಲಿ ಆನ್‌ಲೈನ್‌ ರಿಟೇಲ್ ಮಾರುಕಟ್ಟೆ ಮೂರು ಪಟ್ಟು ಹೆಚ್ಚಾಗಿದೆ ಎಂದು eMarketer ವರದಿ ಹೇಳಿದೆ.

ಹೀಗಾಗಲೇ 7500 ಸ್ಟೋರ್‌ಗಳು

ಹೀಗಾಗಲೇ 7500 ಸ್ಟೋರ್‌ಗಳು

ರಿಲಾಯನ್ಸ್‌ ಹೀಗಾಗಲೇ 4,400 ನಗರಗಳಲ್ಲಿ ತನ್ನ 7,500 ಸ್ಟೋರ್‌ಗಳನ್ನು ಹೊಂದಿದೆ. ರಿಲಾಯನ್ಸ್‌ ಫ್ರೆಶ್, ರಿಲಾಯನ್ಸ್‌ ಡಿಜಿಟಲ್‌, ರಿಲಾಯನ್ಸ್‌ ಜುವೆಲ್ಸ್‌, ರಿಲಾಯನ್ಸ್‌ ಟ್ರೆಂಡ್‌ ತರಹದ ಬ್ರಾಂಡ್‌ಗಳ ಮೂಲಕ ಮೂಲಕ ದಿನಸಿ, ಎಲೆಕ್ಟ್ರಾನಿಕ್ಸ್‌, ಆಭರಣ, ಬಟ್ಟೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ.

ಜಿಯೋ ಪಾಯಿಂಟ್ಸ್‌

ಜಿಯೋ ಪಾಯಿಂಟ್ಸ್‌

ಹೀಗಾಗಲೇ ಭಾರತದಾದ್ಯಂತ 5,000 ಜಿಯೋ ಪಾಯಿಂಟ್‌ಗಳನ್ನು ಹೊಂದಿದೆ. ಇವುಗಳು 500 ಚ.ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಉಪ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ತಲೆ ಎತ್ತಿವೆ. ಸರ್ವೀಸ್ ಮತ್ತು ಗ್ರಾಹಕ ಸೇವಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಬ್ರಾಂಡ್‌ ಜಿಯೋ

ಬ್ರಾಂಡ್‌ ಜಿಯೋ

ಜಿಯೋ ಮೂಲಕ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಿರುವಾಗ ಮುಖೇಶ್ ಅಂಬಾನಿ ಜಿಯೋವನ್ನು ಬ್ರಾಂಡ್ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿಯೇ ಜಿಯೋ ಹಬ್‌ ಹೆಚ್ಚಿನ ಪ್ರದೇಶಕ್ಕೆ ವಿಸ್ತರಿಸಲಿದೆ. ಹಾಗೂ ಬ್ರಾಂಡ್‌ ಜಿಯೋ ಮೇಲೆಯೇ ಬಂಡವಾಳ ಹೂಡಿಕೆಯಾಗಲಿದೆ. ಗ್ರಾಮೀಣ ಭಾಗದಲ್ಲಿ 4G ನೆಟ್‌ವರ್ಕ್‌ ಮೂಲಕ ಜನಪ್ರಿಯತೆ ಗಳಿಸಿರುವ ಜಿಯೋ. ಈಗ ಅದೇ ಜನಪ್ರಿಯತೆಯಿಟ್ಟುಕೊಂಡು ಮತ್ತೊಂದು ಉದ್ಯಮವನ್ನು ಸ್ಥಾಪಿಸಲು ಮುಂದಾಗಿದೆ.

ಗ್ರಾಮೀಣದಲ್ಲಿ ಜಿಯೋ ಬೆಸ್ಟ್‌

ಗ್ರಾಮೀಣದಲ್ಲಿ ಜಿಯೋ ಬೆಸ್ಟ್‌

ಭಾರತದ ಗ್ರಾಮೀಣ ಮಾರುಕಟ್ಟೆಗಳಲ್ಲಿ (B ಮತ್ತು C ವಲಯಗಳಲ್ಲಿ) ಜಿಯೋ 4G ನೆಟ್‌ವರ್ಕ್‌ನ್ನು ಉತ್ತಮವಾಗಿಯೇ ನೀಡುತ್ತಿದೆ. ಜೂನ್ 2018ರ ಹೊತ್ತಿಗೆ 25 ದಶಲಕ್ಷ ಜಿಯೋಫೋನ್‌ಗಳನ್ನು ಮಾರಾಟ ಮಾಡಿ ಯಶಸ್ಸು ಕಂಡಿದೆ. ಮಾರ್ಚ್‌ 2020ರ ಹೊತ್ತಿಗೆ 40 ಕೋಟಿ ಗ್ರಾಹಕರನ್ನು ತಲುಪುವ ಗುರಿ ಹೊಂದಿದೆ.

ಕೇಬಲ್‌ಗಿಂತ ಕಡಿಮೆ ಬೆಲೆಯಲ್ಲಿ ಜಿಯೋ 'ಟಿವಿ ಹೋಮ್'!..ಡಿಟಿಹೆಚ್ ಕೂಡ ಮುಳುಗಡೆ!?

ಕೇಬಲ್‌ಗಿಂತ ಕಡಿಮೆ ಬೆಲೆಯಲ್ಲಿ ಜಿಯೋ 'ಟಿವಿ ಹೋಮ್'!..ಡಿಟಿಹೆಚ್ ಕೂಡ ಮುಳುಗಡೆ!?

ಒಂದೆರಡು ವರ್ಷಗಳ ಹಿಂದೆ ಮೊಬೈಲ್‌ನಲ್ಲಿ ಒಂದು ಜಿಬಿ ಡೇಟಾಗೆ 350 ರೂಪಾಯಿ ಕೊಡುತ್ತಿದ್ದ ಜನರು ಯೂಟ್ಯೂಬ್ ತೆರೆದು ನೋಡುವಾಗ ಜೇಬು ಮುಟ್ಟಿ ನೋಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಮೊಬೈಲ್‌ನಲ್ಲಿ ಗಂಟೆಗಟ್ಟಲೆ ವಿಡಿಯೋಗಳನ್ನು ನೋಡಲು ಸಾಧ್ಯವೇ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಒಂದು ರೀತಿಯಲ್ಲಿ ಇಂದಿನ ಮೊಬೈಲ್ ಡೇಟಾ ಬೆಳವಣಿಗೆಯನ್ನು ಯಾರೂ ಕೂಡ ಕನಸಿನಲ್ಲೂ ಊಹಿಸಿರಲಿಲ್ಲ ಎನ್ನಬಹುದು ಅಲ್ಲವೇ.?!

ಆಗ ಮೊಬೈಲ್‌ನಲ್ಲಿ ಟಿವಿ ವೀಕ್ಷಣೆಗೆ ಹೆಚ್ಚು ಡೇಟಾ ಜೊತೆಗೆ ಹೆಚ್ಚು ಹಣ ಬೇಕಾಗುತ್ತಿತ್ತು. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಮೊಬೈಲ್‌ನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿಯೇ ಟಿವಿಯನ್ನು ಸಹ ಗಂಟೆಗಟ್ಟಲೆ ನೋಡಬಹುದು. ಅದಕ್ಕಾಗಿಯೇ, ಟೆಲಿಕಾಂ ಕಂಪನಿಗಳು ಭಾರೀ ಪ್ರಮಾಣದ ಡೇಟಾ ಕೊಡುತ್ತಿವೆ. ಅಷ್ಟೆ ಏಕೆ, ಟೆಲಿಕಾಂ ಕಂಪನಿಗಳು ತಂತ್ರಜ್ಞಾನದಲ್ಲಿ ದಿನ ದಿನವೂ ಒಂದೊಂದೇ ಹೆಜ್ಜೆ ಮುಂದಿಡುತ್ತಲೂ ಇವೆ. ಜಿಯೋ ಇಂತಹ ಹೊಸ ಸಾಧ್ಯತೆ ತೆರೆಯುವಲ್ಲಿ ಮೊದಲ ಸ್ಥಾನದಲ್ಲಿದೆ.

ನಿಮಗೆ ಗೊತ್ತಾ? ಇನ್ನೆರಡು ವರ್ಷಗಳಲ್ಲಿ ಕೇಬಲ್ ಟಿವಿ ಎಂದ ಮಾತೇ ಇರುವುದಿಲ್ಲ ಎನ್ನುತ್ತಿವೆ ವರದಿಗಳು.ಎಲ್‌ಟಿಇ ಮತ್ತು ವಾಯ್ಸ ಓವರ್‌ ಎಲ್‌ಟಿಇ ಎಂಬ ಟೆಕ್ನಾಲಜಿಯನ್ನು ಅವದಿಗೂ ಮೊದಲೇ ಪರಿಚಯಿಸಿ ಯಶಸ್ವಿಯಾದ ಜಿಯೋಯಿಂದಾಗಿ 2019ನೇ ವರ್ಷದಲ್ಲಿ ಟಿವಿ ಮಾರುಕಟ್ಟೆ ಕೂಡ ಭಾರೀ ಬದಲಾಗಲಿದೆ. ಜನರು ಡೇಟಾ ಬಳಸಿ ಟಿವಿ ವೀಕ್ಷಿಸುವ ಕನಸು ನನಸಾಗಲಿದೆ. ಆದರೆ, ಇದಕ್ಕೆ ಪಾವತಿಸಬೇಕಾದ ಹಣ ಮಾತ್ರ ಈಗ ನಾವು ಕೇಬಲ್‌ ಸಂಪರ್ಕ ನೀಡುವವರಿಗೆ ಪಾವತಿಸುವ ಹಣಕ್ಕಿಂತ ಕಡಿಮೆ ಇರಲಿದೆ.!

ಇಎಂಬಿಎಂಎಸ್ ಎಂಬ ತಂತ್ರಜ್ಞಾನ!

ಇಎಂಬಿಎಂಎಸ್ ಎಂಬ ತಂತ್ರಜ್ಞಾನ!

ಮೊಬೈಲ್‌ ನೆಟ್‌ವರ್ಕ್‌ ಮಾತ್ರ ಬಳಸಿಕೊಂಡು ಟಿವಿ ಚಾನೆಲ್‌ಗ‌ಳನ್ನು ಪ್ರಸಾರ ಮಾಡುವ ಇಎಂಬಿಎಂಎಸ್ ಎಂಬ ಇನ್ನೊಂದು ತಂತ್ರಜ್ಞಾನವನ್ನು ಬಳಸಲು ಜಿಯೋ ಪಣತೊಟ್ಟಿದೆ. ಟೆಲಿಕಾಂ ನೆಟ್‌ವರ್ಕನ್ನೇ ಒನ್ ವೇ ಕಮ್ಯೂನಿಕೇಶನ್‌ಗೆ ಪರಿವರ್ತಿಸುವ ತಂತ್ರಜ್ಞಾನ ಇದಾಗಿದ್ದು, ಈ ತಂತ್ರಜ್ಞಾನ ಪರಿಪೂರ್ಣವಾಗಿ ಅಳವಡಿಯಾದರೆ, ಕೇಬಲ್ ಟಿವಿ ಮಾರುಕಟ್ಟೆ ಜೊತೆಗೆ ಡಿಶ್ ಟಿವಿ ಮಾರುಕಟ್ಟೆ ಕೂಡ ಪಾತಾಳಕ್ಕಿಳಿಯುವ ಸೂಚನೆ ಲಭ್ಯವಾಗಿದೆ.

ಏನಿದು ಇಎಂಬಿಎಂಎಸ್ ತಂತ್ರಜ್ಞಾನ?

ಏನಿದು ಇಎಂಬಿಎಂಎಸ್ ತಂತ್ರಜ್ಞಾನ?

ಟೆಲಿಕಾಂ ನೆಟ್‌ವರ್ಕನ್ನೇ ಒನ್ ವೇ ಕಮ್ಯೂನಿಕೇಶನ್‌ಗೆ ಪರಿವರ್ತಿಸುವ ತಂತ್ರಜ್ಞಾನ ಇದಾಗಿದ್ದು, ಮೊಬೈಲ್‌ ಕಮ್ಯೂನಿಕೇಶನ್ ಮತ್ತು ಟಿವಿ ಕಮ್ಯೂನ್ಕೇಶನ್ ವಿಧಾನದ ಮೂಲದಲ್ಲೇ ವ್ಯತ್ಯಾಸವಿರುತ್ತದೆ. ಇದು ಟಿವಿ ಚಾನೆಲ್‌ಗ‌ಳನ್ನು ಪ್ರಸಾರ ಮಾಡುವ ಟೆಲಿಕಾಂ ನೆಟ್‌ವರ್ಕ್‌ ಸಾಮರ್ಥ್ಯವನ್ನು ದುಪ್ಪಟ್ಟಾ ಗಿಸುವ ಹೈಬ್ರಿಡ್‌ ಟೆಕ್ನಾಲಜಿಯಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಸಂಪರ್ಕವನದನ್ನು ಈ ತಂತ್ರಜ್ಞಾನ ಒದಗಿಸಲಿದೆ.

ಇಎಂಬಿಎಂಎಸ್ vs ಟೆಲಿಕಾಂ ನೆಟ್‌ವರ್ಕ್

ಇಎಂಬಿಎಂಎಸ್ vs ಟೆಲಿಕಾಂ ನೆಟ್‌ವರ್ಕ್

ಈಗಿರುವ ಟೆಲಿಕಾಂ ನೆಟ್‌ವರ್ಕ್ಗೂ, ಇನ್ನೇನು ಬರುತ್ತಿರುವ ಇಎಂಬಿಎಂಎಸ್ ತಂತ್ರಜ್ಞಾನಕ್ಕೂ ವ್ಯತ್ಯಾಸಗಳಿವೆ. ಟೆಲಿಕಾಂ ನೆಟ್‌ವರ್ಕ್‌ ಬಳಸಿಕೊಂಡು ಟಿವಿ ಚಾನೆಲ್‌ಗ‌ಳನ್ನು ಪ್ರಸಾರ ಮಾಡುತ್ತೇವೆಂದಾದರೆ ಈ ಒನ್ ವೇ ಕಮ್ಯೂನಿಕೇಶನ್ ಸಾಕಲ್ಲವೇ ಎಂಬ ಪ್ರಶ್ನೆ ಎದುರಾದಾಗ ಈ ಇಎಂಬಿಎಂಎಸ್ ತಂತ್ರಜ್ಞಾನ ಹುಟ್ಟಿಕೊಂಡಿದೆ. ಮೊಬೈಲ್‌ ಕಮ್ಯೂನಿಕೇಶನ್ ಟು ವೇ ಆಗಿದ್ದರೆ, ಟಿವಿ ಒನ್ ವೇ ಆಗಿರುತ್ತದೆ. ಇದು ಟಿವಿ ಪ್ರಪಂಚವನ್ನು ಮತ್ತೊಂದು ಹಂತಕ್ಕೆ ಕರೆದೊಯ್ಯಲಿದೆ.

ಇಎಂಬಿಎಂಎಸ್ ಏಕೆ ಬೆಸ್ಟ್?

ಇಎಂಬಿಎಂಎಸ್ ಏಕೆ ಬೆಸ್ಟ್?

ನಾವು ಮೊಬೈಲ್‌ನಲ್ಲಿ ಟವರ್‌ನಿಂದ ಡೇಟಾ ಸ್ವೀಕರಿಸುತ್ತೇವೆ ಹಾಗೂ ಕಳುಹಿಸುತ್ತೇವೆ. ಇದನ್ನು ಯೂನಿಕಾಸ್ಟ್‌ ಎನ್ನುತ್ತೇವೆ. ಆದರೆ ಟಿವಿಯಲ್ಲಿ ನಾವು ಡೇಟಾವನ್ನು ಪಡೆಯುತ್ತೇವಷ್ಟೇ, ಕಳುಹಿಸುವುದಿಲ್ಲ. ಅಂದರೆ ಒಮ್ಮೆ ಒಂದು ಟ್ರಾನ್ಸ್‌ಪಾಂಡರ್ ಅಥವಾ ಟ್ರಾನ್ಸ್‌ಮಿಟರ್ ಸಂಕೇತಗಳನ್ನು ಕಳುಹಿಸಿದ ಮೇಲೆ ಅವು ಯಾವೇ ಸಂಕೇತಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಇದರಿಂದ ಇಎಂಬಿಎಂಎಸ್ ಸಂಕೇತಗಳ ಸಾಮರ್ಥ್ಯ ಹೆಚ್ಚಿರುತ್ತದೆ.

ನೆಟ್‌ವರ್ಕ್ ಸ್ಲೋ ಆಗೊಲ್ಲಾ!

ನೆಟ್‌ವರ್ಕ್ ಸ್ಲೋ ಆಗೊಲ್ಲಾ!

ಈ ಇಎಂಬಿಎಂಎಸ್ ತಂತ್ರಜ್ಞಾನದ ಮನ್ನೊಂದು ಅನುಕೂಲವೆಂದರೆ ಒಂದೇ ಟವರ್‌ನಡಿ ಸಾವಿರಾರು ಜನರು ಕೂತು ಒಂದೇ ಸಮನೆ ಹೈ ಹೆಚ್‌ಡಿ ಸಿನಿಮಾಗಳನ್ನು ನೋಡಿದರೂ ನೆಟ್‌ವರ್ಕ್‌ ಸ್ಲೋ ಆಗುವುದಿಲ್ಲ. ಈ ಇಎಂಬಿಎಂಎಸ್ ತಂತ್ರಜ್ಞಾನ ಬಳಸಿಕೊಂಡು ಸೆಟ್‌ ಟಾಪ್‌ ಬಾಕ್ಸ್‌ ಅನ್ನು ಟಿವಿಗೆ ಕನೆಕ್ಟ್ ಮಾಡಿದರೆ, ಅತ್ಯದ್ಭುತ ಕ್ಲಾರಿಟಿ ಚಾನೆಲ್‌ಗ‌ಳನ್ನು ನಾವು ಟಿವಿಯಲ್ಲಿ ನೋಡಬಹುದು. ಹಾಗಾಗಿ, ಇದು ಅನಿಯಮಿತ ಮನರಂಜನೆ ಸೇವೆಯನ್ನು ನೀಡಲಿದೆ.

ಇಂಟರ್‌ನೆಟ್ ಅಗತ್ಯವೇ ಇಲ್ಲ!

ಇಂಟರ್‌ನೆಟ್ ಅಗತ್ಯವೇ ಇಲ್ಲ!

ಇಎಂಬಿಎಂಎಸ್ ಕೇವಲ ಒನ್ ವೇ ಕಮ್ಯೂನಿಕೇಶನ್‌ಗೆ ಪರಿವರ್ತಿಸುವ ತಂತ್ರಜ್ಞಾನ ಮಾತ್ರವಲ್ಲ. ಬದಲಾಗಿ, ಇಂಟರ್‌ನೆಟ್‌ ಅಗತ್ಯವೇ ಇಲ್ಲದೆ ಮೊಬೈಲ್‌ ನೆಟ್‌ವರ್ಕ್‌ ಮಾತ್ರ ಬಳಸಿಕೊಂಡು ಟಿವಿ ಚಾನೆಲ್‌ಗ‌ಳನ್ನು ಪ್ರಸಾರ ಮಾಡುವ ತಂತ್ರಜ್ಞಾನ ಇದಾಗಿದೆ. ಈ ತಂತ್ರಜ್ಞಾನದಲ್ಲಿ ಟಿವಿಯಲ್ಲಿ ನಾವು ಡೇಟಾವನ್ನು ಪಡೆಯುತ್ತೇವಷ್ಟೇ, ಕಳುಹಿಸುವುದಿಲ್ಲವಾದುದರಿಂದ ಅನಿಯಮಿತ ಡೇಟಾವನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಪಡೆಯಬಹುದಾಗಿದೆ.

ಅತ್ಯಂತ ಕಡಿಮೆ ವೆಚ್ಚ!

ಅತ್ಯಂತ ಕಡಿಮೆ ವೆಚ್ಚ!

ಟಿವಿ ವೀಕ್ಷಣೆಗೆ ಹೆಚ್ಚು ಡೇಟಾ ಬೇಕಾಗುತ್ತದೆ. ಇನ್ನು ಟಿವಿಯಲ್ಲಿ ಜನರು ಡೇಟಾ ಬಳಸಿ ಟಿವಿ ವೀಕ್ಷಿಸಬೇಕು ಎಂದಾದರೆ ಅದಕ್ಕೆ ಟೆಲಿಕಾಂ ಕಂಪನಿಗಳು ಭಾರೀ ಪ್ರಮಾಣದಲ್ಲಿ ಮೂಲಸೌಕರ್ಯವನ್ನು ಒಗಗಿಸಬೇಕಾಗುತ್ತದೆ. ಟವರ್‌ನಿಂದ ಟವರ್‌ಗೆ ಒಎಫ್‌ಸಿ ಜಾಲ, ಆಪ್ಟಿಕಲ್‌ ಫೈಬರ್‌ ನೆಟ್‌ವರ್ಕ್‌ ಜಾಲ ಹಾಗೂ ಟವರ್‌ಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗುತ್ತದೆ. ಈ ವ್ಯವಸ್ಥೆಯನ್ನು ಇನ್ನಷ್ಟು ವ್ಯಾಪಕವಾಗಿ ವಿಸ್ತರಿಸಲು ಮೂಲಸೌಕರ್ಯ ಮಿತಿಗಳು ಅಡ್ಡಿಯಾಗುತ್ತಿವೆ. ಆದರೆ, ಈ ಇಎಂಬಿಎಂಎಸ್ ತಂತ್ರಜ್ಞಾನ ಕಡಿಮೆ ವೆಚ್ಚದ್ದಾಗಿದೆ.

ಕೇಬಲ್‌ಗಿಂತ ಕಡಿಮೆ ದರ!

ಕೇಬಲ್‌ಗಿಂತ ಕಡಿಮೆ ದರ!

ಈಗಾಗಲೇ ಫೈಬರ್ ಟು ದಿ ಹೋಮ್ ಮೂಲಕ ಹವಾ ಎಬ್ಬಿಸಿರುವ ಜಿಯೋ, ಟಿವಿ ಮಾರುಕಟ್ಟೆಯಲ್ಲಿ ಮತ್ತೊಮದು ಬದಲಾವಣೆಯನ್ನು ತರಲಿದೆ. ಈ ತಂತ್ರಜ್ಞಾನ ಟಿವಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ. ಕೇಬಲ್ ಟಿವಿ ಪ್ರಪಂಚವನ್ನು ತನ್ನ ಸುಳಿಯಲ್ಲಿ ಮುಳಿಗಿಸಿಬಿಡುತ್ತದೆ. ಇನ್ನು ಈಗಿರುವ ಕೇಬಲ್ ಸಂಪರ್ಕ ನೀಡುವ ಡಿಟಿಎಚ್ ಕಂಪನಿಗಳ ಕಥೆ ಕೂಡ ಕೊನೆಗೋಳ್ಳಲಿದೆ. 100 ರಿಂದ 200 ರೂಪಾಯಿಗಳಲ್ಲಿ ನಿಮ್ಮ ಮನೆಗೆ ಕೇಬಲ್ ಸಂಪರ್ಕ ಸಿಗಲಿದೆ.!

Best Mobiles in India

English summary
Reliance Jio, Star India in five-year deal for cricket telecast on JioTV, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X