Subscribe to Gizbot

ಜಿಯೋವಿನಿಂದ ಮತ್ತೆ ಹೊಸ ರೀಚಾರ್ಜ್ ಆಫರ್‌ಗಳು ಬಿಡುಗಡೆ!!..ಗ್ರಾಹಕರು ಫುಲ್ ಖುಷ್!!

Written By:

ಭರವಸೆ ನೀಡಿದಂತೆ ತನ್ನ ಡೇಟಾ ಬೆಲೆಯನ್ನು ಕಡಿಮೆ ಮಾಡಿರುವ ಜಿಯೋ 2018ರಲ್ಲಿ ಗ್ರಾಹಕರಿಗೆ ಸಿಹಿಸುದ್ದಿ ನೀಡಿರುವುದು ನಿಮಗೆಲ್ಲಾ ಗೊತ್ತೇ ಇದೆ. ಆದರೆ, ಜಿಯೋ ತನ್ನ ಆಫರ್‌ಗಳ ಬೆಲೆಗಳನ್ನು ಕಡಿಮೆ ಮಾಡಿರುವುದರ ಜೊತೆಗೆ ಮತ್ತೆ ಹಲವು ಆಫರ್‌ಗಳನ್ನು ಬಿಡುಗಡೆ ಮಾಡಿರುವುದು ನಿಮಗೆ ಗೊತ್ತಾ?

ಹೌದು, ಜಿಯೋ ತನ್ನ ಗ್ರಾಹಕರಿಗಾಗಿ ಮತ್ತೆರಡು ಹೊಸ ಆಫರ್‌ಗಳನ್ನು ನೀಡಿದೆ. ಪ್ರತಿದಿನ 5 ಜಿಬಿ ಮತ್ತು 3ಜಿಬಿ ಡೇಟಾ ಬಳಕೆ ಮಾಡುವವರಿಗಾಗಿ ಜಿಯೋ ಹೊಸ ಆಫರ್‌ಗಳನ್ನು ಬಿಡುಗಡೆ ಮಾಡಿದೆ.! ಹಾಗಾಗಿ, ಜಿಯೋ ಪ್ರಸ್ತುತ ಹೊಂದಿರುವ ಎಲ್ಲಾ ಡೇಟಾ ಪ್ಲಾನ್‌ಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರತಿದಿನ 1 ಜಿಬಿ ಡೇಟಾ ಆಫರ್ಸ್!!

ಪ್ರತಿದಿನ 1 ಜಿಬಿ ಡೇಟಾ ಆಫರ್ಸ್!!

ಕಳೆದ ವಾರವಷ್ಟೆ ಜಿಯೋ ರೂ 149, ರೂ 349, ರೂ 399, ಮತ್ತು 449 ರೂಪಾಯಿಗಳ ಎಲ್ಲ ಆಫರ್ಸ್‌ಗಳು ದಿನಕ್ಕೆ 1 ಜಿಬಿ ಡೇಟಾ 100 ಎಸ್ಎಂಎಸ್, ಜಿಯೋ ಅಪ್ಲಿಕೇಶನ್ ಚಂದಾದಾರಿಕೆ ಹೊಂದಿವೆ.! 149ರೂ .ಆಫರ್ 28 ದಿನಗಳ ವ್ಯಾಲಿಡಿಟಿ ಹೊಂದಿದ್ದರೆ, 349ರೂ. ಆಫರ್ 70 ದಿನ, 399ರೂ. ಆಫರ್ 84 ದಿನ ಹಾಗೂ 449ರೂ. ಆಫರ್ 91 ದಿನಗಳ ವ್ಯಾಲಿಡಿಟಿ ಹೊಂದಿದೆ.!!

ಪ್ರತಿದಿನ 1.5 ಜಿಬಿ ಡೇಟಾ ಆಫರ್ಸ್!!

ಪ್ರತಿದಿನ 1.5 ಜಿಬಿ ಡೇಟಾ ಆಫರ್ಸ್!!

198ರೂ, 398ರೂ, 448ರೂ ಮತ್ತು 498ರೂಪಾಯಿಗಳ ಎಲ್ಲಾ ಆಫರ್‌ಗಳು ದಿನಕ್ಕೆ 1.5 ಜಿಬಿ ಡೇಟಾ 100 ಎಸ್ಎಂಎಸ್, ಜಿಯೋ ಅಪ್ಲಿಕೇಶನ್ ಚಂದಾದಾರಿಕೆ ಹೊಂದಿವೆ. 198 ರೂ. ಆಫರ್ 28 ದಿನಗಳ ವ್ಯಾಲಿಡಿಟಿ ಹೊಂದಿದ್ದರೆ, 398 ರೂ. ಆಫರ್ 70 ದಿನ, 448ರೂ ಆಫರ್ 84 ದಿನ ಹಾಗೂ 498ರೂ. ಆಫರ್ 91 ದಿನಗಳ ವ್ಯಾಲಿಡಿಟಿ ಹೊಂದಿವೆ.!!

ಪ್ರತಿದಿನ 2 ಜಿಬಿ ಡೇಟಾ ಆಫರ್ಸ್!!

ಪ್ರತಿದಿನ 2 ಜಿಬಿ ಡೇಟಾ ಆಫರ್ಸ್!!

ಪ್ರತಿದಿನ ಎರಡು ಜಿಬಿ ಡೇಟಾ ಆಫರ್ ಅನ್ನು ಜಿಯೋವಿನ 299ರೂ. ಆಫರ್ ಹೊಂದಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್‌ನಲ್ಲಿ 56GB ಡೇಟಾ ಲಭ್ಯವಿದ್ದು, ಪ್ರತಿದಿನ 100 ಎಸ್ಎಂಎಸ್, ಜಿಯೋ ಅಪ್ಲಿಕೇಶನ್ ಚಂದಾದಾರಿಕೆ ಮತ್ತು ಅನಿಯಮಿತ ಧ್ವನಿ ಕರೆಗಳೆಲ್ಲವೂ ಲಭ್ಯವಿದೆ.!!

ಹೊಸ ವರ್ಷಕ್ಕೆ ಮತ್ತೊಂದು Jio Surprise Cashback ಆಫರ್!!
ಪ್ರತಿದಿನ 3 ಜಿಬಿ ಡೇಟಾ!!

ಪ್ರತಿದಿನ 3 ಜಿಬಿ ಡೇಟಾ!!

509 ರೂಪಾಯಿಗಳ ರೀಚಾರ್ಜ್ ಮೇಲೆ ಪ್ರತಿದಿನ ಮೂರು ಜಿಬಿ ಡೇಟಾವನ್ನು ಜಿಯೋ ನೀಡುತ್ತಿದೆ. ಪ್ರತಿದಿನ 100 ಎಸ್ಎಂಎಸ್, ಜಿಯೋ ಅಪ್ಲಿಕೇಶನ್ ಚಂದಾದಾರಿಕೆ ಮತ್ತು ಅನಿಯಮಿತ ಧ್ವನಿ ಕರೆಗಳೆಲ್ಲವೂ ಉಚಿತವಿರುವ ಈ ಆಫರ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ.!!

ಪ್ರತಿದಿನ 5 ಜಿಬಿ ಡೇಟಾ!!

ಪ್ರತಿದಿನ 5 ಜಿಬಿ ಡೇಟಾ!!

ಜಿಯೋ ಹೊದಾಗಿ ಪರಿಚಯಿಸಿರುವ 799ರೂ. ಆಫರ್ ಜಿಯೋ ಗ್ರಾಹಕರಿಗೆ ಬಂಪರ್ ಕೊಡುಗೆಯಾಗಿದೆ. ದಿನಕ್ಕೆ 5 ಜಿಬಿ ಡೇಟಾ, ಪ್ರತಿದಿನ 100 ಎಸ್ಎಂಎಸ್, ಜಿಯೋ ಅಪ್ಲಿಕೇಶನ್ ಚಂದಾದಾರಿಕೆ ಮತ್ತು ಅನಿಯಮಿತ ಧ್ವನಿ ಕರೆಗಳೆಲ್ಲವೂ ಉಚಿತವಿರುವ ಈ ಆಫರ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ.!!

ಓದಿರಿ:ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಂತ್ರಜ್ಞಾನ ಮಾಯಾಲೋಕ ಸೃಷ್ಟಿಸಲಿದೆ ಜಪಾನ್!!..ಹೇಗಿರಲಿದೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Mukesh Ambani-led telco Jio recently introduced a Rs 299 tariff plan of Rs 299 that offers 2GB data per day for 28 days. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot