Just In
Don't Miss
- News
ಬೆಂಗಳೂರಿಗೆ ಮೋದಿ: 3 ದಿನ ಈ ರಸ್ತೆಗಳಲ್ಲಿ ಸಂಚಾರಕ್ಕೆ ನಿಷೇಧ, ಯಾವುದೆಲ್ಲಾ ತಿಳಿಯಿರಿ
- Sports
Ranji Trophy: ಪಂಜಾಬ್ ವಿರುದ್ಧ ಗೆದ್ದ ಸೌರಾಷ್ಟ್ರ: ಸೆಮಿಫೈನಲ್ನಲ್ಲಿ ಕರ್ನಾಟಕ-ಸೌರಾಷ್ಟ್ರ ಮುಖಾಮುಖಿ
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Movies
ಹಣೆಯ ಮೇಲೆ ಗಾಯ! ಗಾಯಕಿ ವಾಣಿ ಜಯರಾಂ ಸಾವಿನ ಬಗ್ಗೆ ಅನುಮಾನ
- Lifestyle
ನವಣೆ ಬಳಿಸಿದರೆ ಕ್ಯಾನ್ಸರ್ನಿಂದ ಫೈಲ್ಸ್ವರೆಗೆ ಕಾಯಿಲೆ ತಡೆಗಟ್ಟಬಹುದು,ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಿಲಾಯನ್ಸ್ ಜಿಯೋ ಟ್ಯಾರಿಫ್ ಪ್ಲಾನ್ ಲೀಕ್: ರೂ. 50ಕ್ಕೆ 10GB 4G ನಿಜವೇ?
ರಿಲಾಯನ್ಸ್ ಕಂಪನಿ 2003 ರಲ್ಲಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಕಾರಿ ಮೂಡಿಸಿತು. ಅಂದಹಾಗೆ ಮುಕೇಶ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಜಿಯೋ ಈಗ ಭಾರತದಲ್ಲಿ ಪಾನ್-ಇಂಡಿಯಾ 4G ಲೈಸನ್ಸ್ ಪಡೆದ ಒಂದೇ ಒಂದು ಟೆಲಿಕಾಂ ಎಂದು ನ್ಯೂಸ್ ಆಗಿದೆ. ಎಲ್ಲರಿಗೂ ತಿಳಿದಿರುವ ಹಾಗೆ ರಿಲಾಯನ್ಸ್ ಜಿಯೋ ಪ್ರಿವೀವ್ ಆಫರ್ 90 ದಿನಗಳು. ಈ 90 ದಿನಗಳಲ್ಲಿ ಅನ್‌ಲಿಮಿಟೆಡ್ ಉಚಿತ ಡಾಟಾ, ಕರೆ ಮತ್ತು ಮೆಸೇಜ್ ಆಫರ್ ಸಹ ದೊರೆಯಲಿದೆ ಎಂದು ನಾವೇ ತಿಳಿಸಿದ್ದೇವೆ. ಆದ್ರೆ 90 ದಿನ ಕಳೆದ ನಂತರ ರಿಲಾಯನ್ಸ್ ಜಿಯೋ 4G ಟ್ಯಾರಿಫ್ ಪ್ಲಾನ್ ಹೇಗಿರುತ್ತದೆ ಎಂದು ಯೋಚಿಸಿದ್ದೀರಾ?
ಬಹುಶಃ ಕೆಲವರಿಗೆ ಕುತೂಹಲ ಇದ್ರೆ, ಇನ್ನೂ ಕೆಲವರಿಗೆ ರಿಲಾಯನ್ಸ್ ಜಿಯೋ 4G ಪ್ರಿವೀವ್ ಆಫರ್ ಮುಗಿದ ನಂತರ ಬಹುಶಃ ಯಾವ ಉತ್ತಮ ಆಫರ್ ಸಿಗುವುದಿಲ್ಲ ಎಂದು ತಿಳಿದಿದ್ದಾರೆ. ಆದರೆ ಅದು ಸುಳ್ಳು. ಈಗಿರುವ ಆಫರ್‌ಗಿಂತ ಉತ್ತಮ ಟ್ಯಾರಿಫ್ ಪ್ಲಾನ್‌ಗಳು ಇದ್ದೂ ನಿಮಗೆಲ್ಲ ಒಂದು ಗುಡ್ ನ್ಯೂಸ್ ಕಾದಿದೆ. ಅದೇನು? ಎಂದು ಕೆಳಗಿನ ಸ್ಲೈಡರ್‌ಗಳನ್ನು ಓದಿರಿ.
ರಿಲಾಯನ್ಸ್ ಜಿಯೋಗೆ ಮೊಬೈಲ್ ನಂಬರ್ ಪೋರ್ಟ್ ಮಾಡುವುದು ಹೇಗೆ?

ಲೀಕ್ ಆದ ಟ್ಯಾರಿಫ್ ಪ್ಲಾನ್
ರಿಲಾಯನ್ಸ್ ಜಿಯೋ 4G ಪ್ರಿವೀವ್ ಆಫರ್ ಮುಗಿದ ನಂತರ ಗ್ರಾಹಕರಿಗೆ ದೊರೆಯುವ ಟ್ಯಾರಿಫ್ ಪ್ಲಾನ್ ಬಗೆಗಿನ ಚಾರ್ಟ್ ಲೀಕ್ ಆಗಿದೆ.

ರಿಚಾರ್ಜ್ ಪ್ಲಾನ್ ಚಾರ್ಟ್
ಅಂದಹಾಗೆ 90 ದಿನಗಳ ನಂತರ ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಲೀಕ್ ಆದ ಮಾಹಿತಿ ಪ್ರಕಾರ 30 ದಿನಗಳ ಟ್ಯಾರಿಫ್ ಪ್ಲಾನ್‌ನಲ್ಲಿ ರೂ. 50 ಕ್ಕೆ 10GB 4g ಡಾಟಾ, 100 ಮೆಸೇಜ್‌ಗಳು, 500 ನಿಮಿಷ ಕರೆ ಅವಕಾಶ ದೊರೆಯಲಿದೆಯಂತೆ.

ಜಿಯೋ ಆಪ್‌ಗಳು
ಜಿಯೋ ವಿವಿಧ ಆಪ್‌ಗಳನ್ನು ಹೊಂದಿದ್ದು ತನ್ನ ಗ್ರಾಹಕರಿಗೆ ಆಫರ್ ಮಾಡುತ್ತಿದೆ. ಮ್ಯೂಸಿಕ್‌ಗಾಗಿ ಜಿಯೋಬೀಟ್ಸ್, ಮ್ಯಾಗಜೀನ್‌ಗಾಗಿ ಜಿಯೋಮ್ಯಾಗ್, ಟಿವಿ ಶೋಗಳಿಗಾಗಿ ಜಿಯೋಪ್ಲೇ ಮತ್ತು ಇತರೆ ಪ್ರಾಥಮಿಕ ಕಂಟೆಂಟ್‌ಗಳ ಆಪ್‌ಗಳ ಆಫರ್ ನೀಡಲಿದೆಯಂತೆ.

100 ರೂಗೆ ಡಬಲ್ ಬೆನಿಫಿಟ್ಸ್
ಜಿಯೋ ಸಬ್‌ಸ್ಕ್ರೈಬರ್ ಗ್ರಾಹಕರು ರೂ. 100 ಕ್ಕೆ ಡಬಲ್ ಬೆನಿಫಿಟ್ ಪಡೆಯಲಿದ್ದು, 20GB 4G ಡಾಟಾ, 200 ಮೆಸೇಜ್, 1,000 ನಿಮಿಷಗಳ ಕರೆ ಅವಕಾಶ ಸಿಗಲಿದೆ. ಜೊತೆಗೆ 3 ಆಪ್‌ಗಳ ಆಕ್ಸೆಸ್ ಸಹ ದೊರೆಯಲಿದೆ.

ಟ್ಯಾರಿಫ್ ಪ್ಲಾನ್ ರೂ.200
40GB ಡಾಟಾ, 400 ಮೆಸೇಜ್‌ಗಳು, 1,500 ನಿಮಿಷ ವಾಯ್ಸ್ ಕರೆ ಸೇವೆಗೆ ಗ್ರಾಹಕರು 200 ರೂ ಪಾವತಿಸಬೇಕು. ಈ ಟ್ಯಾರಿಫ್ ಪ್ಲಾನ್‌ಗಳು 30 ದಿನ ವ್ಯಾಲಿಡಿಟಿ ಹೊಂದಿರುತ್ತವೆ.

ವಿಶೇಷ ಸೂಚನೆ
ಪ್ರಿವೀವ್ ಆಫರ್ ಸಿಮ್ ಬಳಸಬಹುದಾದ ಎಲ್ಲಾ ಡಿವೈಸ್‌ಗಳಿಗೂ ಲಭ್ಯವಿದೆ. ವಾಣಿಜ್ಯಾತ್ಮಕವಾಗಿ ರಿಲಾಯನ್ಸ್ ಜಿಯೋ ಶೀಘ್ರದಲ್ಲೇ ಲಾಂಚ್ ಆಗಲಿದೆ. ಆದರೆ ಲೀಕ್ ಆಗಿರುವ 30 ದಿನಗಳ ಟ್ಯಾರಿಫ್ ಪ್ಲಾನ್ ಅನ್ನು ಕಂಪನಿ ಅಧಿಕೃತವಾಗಿ ಪ್ರಕಟಣೆ ಮಾಡಿಲ್ಲ. ಅಲ್ಲದೇ ಇದು ಸತ್ಯವೇ ಎಂಬುದು ಸಹ ಖಚಿತವಾಗಿಲ್ಲ.

ಟ್ಯಾರಿಫ್ ಪ್ಲಾನ್ ಬದಲಾಗಬಹುದು
ಲೀಕ್ ಆಗಿರುವ ಟ್ಯಾರಿಫ್ ಪ್ಲಾನ್ ರಿಲಾಯನ್ಸ್ ಜಿಯೋ ವಾಣಿಜ್ಯಾತ್ಮಕವಾಗಿ ಲಾಂಚ್ ಆದ ನಂತರ ಬದಲಾಗಬಹುದು.

ರಿಲಾಯನ್ಸ್ ಜಿಯೋ
ಟ್ಯಾರಿಫ್ ಪ್ಲಾನ್ ಬದಲಾಗುತ್ತದೋ, ಅಥವಾ ಅದೇ ಟ್ಯಾರಿಫ್ ಪ್ಲಾನ್ ದೊರೆಯುವ ಬಗ್ಗೆ ಸಂಶಯ ವ್ಯಕ್ತವಾಗಬಹುದು. ಆದರೆ ರಿಲಾಯನ್ಸ್ ಜಿಯೋ ಟೆಲಿಕಾಂ ಇಂಡಸ್ಟ್ರಿಯಲ್ಲಿ ಕ್ರಾಂತಿಕಾರಿ ಮೂಡಿಸಿದೆ.

ಇತರೆ ಟೆಲಿಕಾಂಗಳು
ಪ್ರಸ್ತುತದಲ್ಲಿ ರಿಲಾಯನ್ಸ್ ಜಿಯೋ ಹೊರತುಪಡಿಸಿದರೆ ಇತರೆ ಟೆಲಿಕಾಂಗಳ 1GB 4G ಡಾಟಾ ಸೇವೆಗೆ ರೂ.250 ಪಾವತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಟೆಲಿಕಾಂಗಳ ಸೇವೆ ನಡುವೆ ಬೆಲೆ ನಡುವೆ ಯುದ್ಧ ಜರುಗಿದೆ.

ಗಿಜ್‌ಬಾಟ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470