Home
ಸುದ್ದಿಜಾಲ

2 ವರ್ಷದ ಸಂಭ್ರಮದಲ್ಲಿರುವ ಜಿಯೋಗೆ ಮತ್ತೊಂದು ಸಿಹಿಸುದ್ದಿ ನೀಡಿದ ಟ್ರಾಯ್!!

ಭಾರತದ ಟೆಲಿಕಾಂ ಪ್ರಪಂಚವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಜಿಯೋ ವೇಗಕ್ಕೆ ಈಗಲೂ ಸಹ ಸರಿಸಾಟಿ ಯಾರೂ ಇಲ್ಲ ಎಂಬ ಮಾಹಿತಿಯನ್ನು ಭಾರತೀಯ ಟೆಲಿಕಾಂ ನಿಯಂತ್ರಣ ಮಂಡಳಿ (ಟ್ರಾಯ್) ಬಿಡುಗಡೆ ಮಾಡಿದೆ. 4G ನೆಟ್​ವರ್ಕ್​ ಲೋಕದಲ್ಲಿ ಸಂಚಲನ ಮೂಡಿಸಿರುವ ಜಿಯೋ 2 ವರ್ಷಗಳ ನಂತರವೂ ಭಾರತದ ಅಂತರ್ಜಾಲ ದಿಗ್ಗಜನಾಗಿ ಮುಂದುವರೆದಿದೆ.

ಹೌದು, ಪ್ರತಿಸ್ಪರ್ಧಿ ನೆಟ್​ವರ್ಕ್​ಗಳ ವೇಗಕ್ಕಿಂತ ಜಿಯೋ ಇಂಟರ್‌ನೆಟ್ ವೇಗ ದುಪ್ಪಟ್ಟಿದ್ದು, ಜಿಯೋ ಡೌನ್​ಲೋಡ್ ವೇಗ 22.3 ಎಂಬಿಪಿಎಸ್ ಇದ್ದರೆ, ಭಾರ್ತಿ ಏರ್​ಟೆಲ್ ಡೌನ್​ಲೋಡ್ ವೇಗ ಕೇವಲ 10 ಎಂಬಿಪಿಎಸ್ ಮಾತ್ರ ಇದೆ. ಇನ್ನು ವೊಡಾಫೋನ್ ಮತ್ತು ಐಡಿಯಾಗಳು ಕ್ರಮವಾಗಿ 6.2 ಮತ್ತು 6.7 ಎಂಬಿಪಿಎಸ್ ವೇಗದ ಮೂಲಕ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

2 ವರ್ಷದ ಸಂಭ್ರಮದಲ್ಲಿರುವ ಜಿಯೋಗೆ ಮತ್ತೊಂದು ಸಿಹಿಸುದ್ದಿ ನೀಡಿದ ಟ್ರಾಯ್!!

ಟ್ರಾಯ್ ಬಿಡುಗಡೆ ಮಾಡಿರುವ ಈ ಎಲ್ಲಾ ಅಂಕಿಅಂಶಗಳು ಜುಲೈ ಹಾಗೂ ಆಗಸ್ಟ್ ತಿಂಗಳ ಅವಧಿಗೆ ಸಂಬಂಧಿಸಿದ್ದು, ಮಾಹಿತಿ ಪ್ರಕಾರ ಅಪ್​ಲೋಡ್ ವೇಗದಲ್ಲಿ ಐಡಿಯಾ ಪ್ರಾಬಲ್ಯ ಮೆರೆದಿದೆ. 5.9 ಎಂಬಿಪಿಎಸ್ ವೇಗದ ಮೂಲಕ ಇತರೇ ನೆಟ್​ವರ್ಕ್​ಗಳನ್ನು ಹಿಂದಿಕ್ಕಿರುವ ಐಡಿಯಾಕ್ಕೆ ಜಿಯೋ( 4.9 ಎಂಬಿಪಿಎಸ್) ವೇಗ ಕೂಡ ಸಾಟಿಯಾಗದಿರುವುದು ತಿಳಿದುಬಂದಿದೆ.

ಭಾರತದ ಟೆಲಿಕಾಂ ಪ್ರಪಂಚದಲ್ಲಿ ಇತ್ತೀಚಿಗಷ್ಟೆ ಎರಡು ವರ್ಷಗಳನ್ನು ಪೂರೈಸಿದ್ದ ಜಿಯೋಗೆ ಈ ಸುದ್ದಿ ಖುಷಿಯನ್ನು ತಂದಿದೆ. ಕೇವಲ ಎರಡು ವರ್ಷಗಳಲ್ಲೇ ಭಾರತದ ಟೆಲಿಕಾಂನಲ್ಲಿ ಜಿಯೋ ನಿರ್ಮಿಸಿರುವ ದಾಖಲೆಗಳನ್ನು ಸಹ ಜಿಯೋ ಪ್ರಕಟಿಸಿದೆ. ಹಾಗಾದರೆ, ಜಿಯೋ ಈ ಎರಡು ವರ್ಷಗಳಲ್ಲಿ ಸಾಧಿಸಿರುವುದೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಪ್ರಪಂಚದ ಅತಿದೊಡ್ಡ ಸಂಪೂರ್ಣ ಐಪಿ ಜಾಲ:

ಪ್ರಪಂಚದ ಅತಿದೊಡ್ಡ ಸಂಪೂರ್ಣ ಐಪಿ ಜಾಲ:

ಅತ್ಯುನ್ನತ ತಂತ್ರಜ್ಞಾನ ಬಳಸುವ ಸಂಪೂರ್ಣ ಐಪಿ ಜಾಲದ ಬೆಂಬಲ, 800 ಮೆಗಾಹರ್ಟ್ಸ್, 1800 ಮೆಗಾಹರ್ಟ್ಸ್ ಹಾಗೂ 2300 ಮೆಗಾಹರ್ಟ್ಸ್ ಬ್ಯಾಂಡುಗಳನ್ನು ವ್ಯಾಪಿಸಿರುವ ಎಲ್‌ಟಿಇ ತರಂಗಗುಚ್ಛ (ಸ್ಪೆಕ್ಟ್ರಂ) ಹಾಗೂ ಅತಿದೊಡ್ಡ ಫೈಬರ್ ಹೆಜ್ಜೆಗುರುತಿನೊಡನೆ ಜಿಯೋ ಭಾರತದ ಬೇರೆಲ್ಲ ಟೆಲಿಕಾಂ ಸಂಸ್ಥೆಗಳಿಗಿಂತ ದೊಡ್ಡದಾದ ಎಲ್‌ಟಿಇ ಪ್ರಸಾರವ್ಯಾಪ್ತಿಯನ್ನು ಹೊಂದಿದೆ. ಭಾರತದಲ್ಲಿ ಉಚಿತ ಕರೆಗಳ ಕನಸು ನನಸಾಗಿದೆ. ಜಿಯೋ ತನ್ನ ಎಲ್ಲ ಟ್ಯಾರಿಫ್ ಪ್ಲಾನುಗಳ ಜೊತೆಯಲ್ಲಿ ಅಪರಿಮಿತ ಉಚಿತ ಕರೆಗಳನ್ನು ನೀಡಿದೆ.

Get 1GB free Jio 4G data with Cadbury Dairy Milk - KANNADA
ಭಾರತಕ್ಕೆ ಈಗ ಮೊದಲ ಸ್ಥಾನ

ಭಾರತಕ್ಕೆ ಈಗ ಮೊದಲ ಸ್ಥಾನ

ಟೆಲಿಕಾಂ ಮಾರುಕಟ್ಟೆ ಬಹಳ ಕ್ಷಿಪ್ರವಾಗಿ ಡೇಟಾದತ್ತ ಸಾಗಿದೆ ಹಾಗೂ ಮತ್ತೊಮ್ಮೆ ಗ್ರಾಹಕರಿಗೆ ಜಯ ದೊರೆತಿದೆ. ಭಾರತದಲ್ಲಿ ಮೊಬೈಲ್ ಡೇಟಾ ಬಳಕೆಯ ಪ್ರಮಾಣ ತಿಂಗಳಿಗೆ 20 ಕೋಟಿ ಜಿಬಿಯಿಂದ ಸುಮಾರು 370 ಕೋಟಿ ಜಿಬಿಗೆ ತಲುಪಿದೆ. ಈ ಪೈಕಿ ಜಿಯೋ ಗ್ರಾಹಕರೇ ಸುಮಾರು 240 ಕೋಟಿ ಜಿಬಿ ಡೇಟಾ ಬಳಸುತ್ತಿದ್ದಾರೆ. ಮೊಬೈಲ್ ಡೇಟಾ ಬಳಸುವ ರಾಷ್ಟ್ರಗಳ ಸಾಲಿನಲ್ಲಿ 155ನೇ ಸ್ಥಾನದಲ್ಲಿದ್ದ ಭಾರತ ಈಗ ಮೊದಲ ಸ್ಥಾನಕ್ಕೆ ತಲುಪಿದೆ. ಪ್ರತಿ ತಿಂಗಳೂ 100 ಕೋಟಿ ಜಿಬಿಗಿಂತ ಹೆಚ್ಚು ಡೇಟಾ ನಿರ್ವಹಿಸುವ ಜಿಯೋ, ಪ್ರಾರಂಭವಾದ ಕೆಲವೇ ತಿಂಗಳುಗಳಲ್ಲಿ ವಿಶ್ವದ ಮೊದಲ ಹಾಗೂ ಏಕೈಕ ಎಕ್ಸಾಬೈಟ್ ಟೆಲಿಕಾಂ ಜಾಲವಾಗಿ ಬೆಳೆದಿದೆ.

ನವಯುಗವನ್ನು ಸಾರಿದ ಜಿಯೋಫೋನ್:

ನವಯುಗವನ್ನು ಸಾರಿದ ಜಿಯೋಫೋನ್:

ಫೀಚರ್‌ಗಳನ್ನು ಅಡಕಗೊಳಿಸಿದ ಫೋನ್‌ಗಳ ಬಳಕೆದಾರರಿಗೆ ಭಾರತದ ಹೊಸ ಸ್ಮಾರ್ಟ್ ಫೋನ್ ಎನಿಸಿದ ಜಿಯೋ ಫೋನ್ ಹೊಸದೊಂದು ಯುಗದ ಪ್ರಾರಂಭವನ್ನು ಸಾರುತ್ತಿದೆ. 2018 ಜೂನ್ 30ರ ವೇಳೆಗೆ, 25 ಮಿಲಿಯನ್ ಫೋನುಗಳನ್ನು ಮಾರಾಟಮಾಡಿರುವ ದಾಖಲೆ ಹೊಂದಿರುವ ಜಿಯೋ ಫೋನ್ ಮುಂದಿನ ದಿನಗಳಲ್ಲಿ ಅತಿ ಅಲ್ಪಾವಧಿಯಲ್ಲಿ 100 ಮಿಲಿಯ ಗ್ರಾಹಕರನ್ನು ತಲುಪುವ ಗುರಿ ಹೊಂದಿದೆ.

ಜಿಯೋಫೈ ಪರಿಚಯಿಸಿದುದು:

ಜಿಯೋಫೈ ಪರಿಚಯಿಸಿದುದು:

ವೈಯಕ್ತಿಕ ಧ್ವನಿ ಹಾಗೂ ಡಾಟಾ ಹಾಟ್ ಸ್ಪಾಟ್‌ಗಳ ಅಳವಡಿಕೆಯಿಂದಾಗಿ ಗ್ರಾಹಕರು ಜಿಯೋ ಡಿಜಿಟಲ್ ಜೀವನಶೈಲಿಯನ್ನು ಅನ್ನು ಹಲವು ಸಾಧನಗಳ ಮೂಲಕ ಬಳಸುವುದು ಸಾಧ್ಯವಾಗಿದೆ. ಅಲ್ಲದೆ, ವಿಒಎಲ್‌ಟಿಇ ಕರೆಗಳ ಲಾಭವನ್ನು ತಮ್ಮ ಹಳೆಯ 2ಜಿ/3ಜಿ ಮೊಬೈಲ್ ಗಳಿಂದಲೂ ಪಡೆಯುವುದಕ್ಕೆ ಅವಕಾಶವಾಗಿದೆ.

ರೂ. 15ಕ್ಕಿಂತ ಕಡಿಮೆ

ರೂ. 15ಕ್ಕಿಂತ ಕಡಿಮೆ

ಪ್ರತಿ ಜಿಬಿಗೆ ರೂ. 250 - ರೂ. 10,000 ಇದ್ದ ದರಗಳು, ಜಿಯೋ ಪ್ರಾರಂಭದ ನಂತರ ಪ್ರತಿ ಜಿಬಿಗೆ ರೂ. 15ಕ್ಕಿಂತ ಕಡಿಮೆಯಾಗಿದ್ದು ದರಪಟ್ಟಿಗಳು ಜನಸಾಮಾನ್ಯರ ಕೈಗೆಟುಕುವ ಮಟ್ಟಕ್ಕೆ ತಲುಪಿವೆ. ಡೇಟಾ ಪ್ರಜಾತಾಂತ್ರೀಕರಣಕ್ಕೆ ದಾರಿತೋರಿದ ಜಿಯೋ, ವಿವಿಧ ಪ್ಲಾನುಗಳ ಮೂಲಕ ಜಿಯೋ ಗ್ರಾಹಕರು ಇನ್ನೂ ಕಡಿಮೆ ಶುಲ್ಕ ಪಾವತಿಸುತ್ತಿದ್ದಾರೆ.ಭಾರತದಲ್ಲಿ ಟೆಲಿಕಾಂ ಜಾಲಗಳ ಗುಣಮಟ್ಟದ ಮೇಲ್ವಿಚಾರಣೆಯನ್ನು ಅಧಿಕೃತವಾಗಿ ನೋಡಿಕೊಳ್ಳುವ ಟ್ರಾಯ್ ಸ್ಪೀಡ್ಟೆಸ್ಟ್ ಪೋರ್ಟಲ್ ಜಿಯೋ ಅನ್ನು 4ಜಿ ಜಾಲಗಳ ವ್ಯಾಪ್ತಿ, ಬಳಕೆ ಹಾಗೂ ಡೇಟಾ ವೇಗಗಳಲ್ಲಿ ಅಗ್ರಗಣ್ಯವೆಂದು ಸತತವಾಗಿ ಗುರುತಿಸಿದೆ.

ಟ್ಯಾರಿಫ್ ಸರಳೀಕರಣ:

ಟ್ಯಾರಿಫ್ ಸರಳೀಕರಣ:

ಜಿಯೋ ಬರುವ ಮೊದಲು ಮಾರುಕಟ್ಟೆಯಲ್ಲಿ ಸುಮಾರು 22,000 ಪ್ಲಾನುಗಳಿದ್ದವು. ಜಿಯೋ ಬಂದ ನಂತರ ಮೊಬೈಲ್ ಸೇವಾ ಸಂಸ್ಥೆಗಳು ಜಿಯೋ ಮಾದರಿಯನ್ನು ಅನುಸರಿಸುವ ಮೂಲಕ ಪ್ಲಾನುಗಳ ಸಂಖ್ಯೆಯನ್ನು ಕಡಿಮೆಮಾಡಲು ಪ್ರಯತ್ನಿಸುತ್ತಿವೆ. ಕೆಲವೇ ಸರಳ ಪ್ಲಾನುಗಳನ್ನು ಪರಿಚಯಿಸಿರುವ ಜಿಯೋ ಏಕಕಾಲದಲ್ಲಿ ಕೇವಲ ಒಂದೆರಡು ಪ್ಲಾನುಗಳನ್ನಷ್ಟೇ ಪ್ರಮುಖವೆಂದು ಪರಿಗಣಿಸುತ್ತಿದೆ. ಇದರಿಂದಾಗಿ ಗ್ರಾಹಕರ ಬದುಕು ಬಹಳ ಸರಳವಾಗಿದೆ ಹಾಗೂ ತಮಗಾಗಿ ಅತ್ಯುತ್ತಮ ಕೊಡುಗೆಯನ್ನು ಸ್ವತಃ ಅವರೇ ಆಯ್ದುಕೊಳ್ಳುವುದು ಸಾಧ್ಯವಾಗಿದೆ.

ಡಿಜಿಟಲ್ ಇಕೋಸಿಸ್ಟಂನ ಭಾರೀ ಬೆಳವಣಿಗೆ:

ಡಿಜಿಟಲ್ ಇಕೋಸಿಸ್ಟಂನ ಭಾರೀ ಬೆಳವಣಿಗೆ:

ಜಿಯೋ ಪ್ರಾರಂಭದ ನಂತರ ಫೇಸ್‌ಬುಕ್, ಯೂಟ್ಯೂಬ್ ಸೇರಿದಂತೆ ಎಲ್ಲ ಪ್ರಮುಖ ಸೋಶಿಯಲ್ ಮೀಡಿಯಾ ವೇದಿಕೆಗಳ ಭಾರತೀಯ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜಿಯೋ ಪ್ರಾರಂಭದ ಮೊದಲ ವರ್ಷದಲ್ಲೇ ಸುಮಾರು 70 ಮಿಲಿಯನ್ ಹೊಸ ಬಳಕೆದಾರರನ್ನು ಪಡೆದಿರುವ ಗೂಗಲ್ ಹಾಗೂ ಫೇಸ್‌ಬುಕ್‌ ಪಾಲಿಗೆ ಭಾರತ ಅತ್ಯಂತ ಸಕ್ರಿಯ ಮಾರುಕಟ್ಟೆಯಾಗಿ ಪರಿಣಮಿಸಿದೆ.

ದೇಶದ ಡಿವೈಸ್ ಇಕೋಸಿಸ್ಟಂ ವೇಗವರ್ಧನೆ:

ದೇಶದ ಡಿವೈಸ್ ಇಕೋಸಿಸ್ಟಂ ವೇಗವರ್ಧನೆ:

ರಿಲಯನ್ಸ್ ರೀಟೈಲ್ ನಿಂದ ವಿಒ‌ಎಲ್‌ಟಿಇ ಅಂತರ್ಗತ LYF ಸಾಧನಗಳನ್ನು ಬಿಡುಗಡೆಮಾಡಿದುದರಿಂದ, ಸ್ಮಾರ್ಟ್‌ಫೋನ್ ಬ್ರಾಂಡ್ ಗಳೆಲ್ಲವೂ ಎಲ್‌ಟಿಇ ಶಿಪ್‌ಮೆಂಟ್‌ಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತಾಯಿತು. ಇದರಿಂದಾಗಿ ಈಗ ದೇಶದಲ್ಲಿ ಬಳಕೆಯಾಗುತ್ತಿರುವ ಎಲ್ಲ ಸ್ಮಾರ್ಟ್‌ಫೋನ್ ಶಿಪ್‌ಮೆಂಟ್‌ಗಳೂ ಎಲ್‌ಟಿಇ ಸಾಧನಗಳಾಗಿ ಬದಲಾಗಿರುವ ಸ್ಥಿತಿ ನಿರ್ಮಾಣವಾಗಿದೆ.

Best Mobiles in India

English summary
Reliance Jio tops 4G download speed chart; Idea leads in upload speed in Aug. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+