Home
ಸುದ್ದಿಜಾಲ

ಭಾರತದಲ್ಲಿ ಹೆಚ್ಚು ಕವರೇಜ್ ಜಿಯೋ, ಹೆಚ್ಚು ಸ್ಪೀಡ್ ಏರ್ ಟೆಲ್

By Gizbot Bureau

ಇತ್ತೀಚೆಗೆ ಓಕ್ಲಾ ನಡೆಸಿದ ವಿಶ್ವದ ಸ್ಪೀಡ್ ಟೆಸ್ಟ್ ನಲ್ಲಿ ಏರ್ ಟೆಲ್ ಭಾರತದ ವೇಗದ 4ಜಿ ನೆಟ್ ವರ್ಕ್ ಆಗಿ ಹೊರಹೊಮ್ಮಿದ್ದು ಸರಾಸರಿ ಸ್ಪೀಡ್ 11.23 11.23 Mbps ನಷ್ಟಿದೆ. ವಡಾಫೋನ್ ಎರಡನೇ ವೇಗದ ಸರ್ವೀಸ್ ಪ್ರೊವೈಡರ್ ಆಗಿದ್ದು ಅದರ ಸರಾಸರಿ ವೇಗ 9.13 Mbps ಆಗಿದೆ. ರಿಲಯನ್ಸ್ ಜಿಯೋ ಮೂರನೇ ಸ್ಥಾನದಲ್ಲಿದ್ದು ಅದರ ಸರಾಸರಿ ವೇಗ 7.11 Mbps ಮತ್ತು ಐಡಿಯಾ ಕೊನೆಯ ಸ್ಥಾನದಲ್ಲಿ ಅಂದರೆ ಅದರ ಸರಾಸರಿ ವೇಗ 7.04 Mbps ಆಗಿದೆ. ಅಧ್ಯಯನಕಾರರು 2018 ರ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕದ ಡಾಟಾವೇಗವನ್ನು ಇಲ್ಲಿ ಪರಿಗಣಿಸಿದ್ದಾರೆ.

ಯಾವ ನೆಟ್ ವರ್ಕ್ ಗೆ ಯಾವ ಸ್ಥಾನ:

ಯಾವ ನೆಟ್ ವರ್ಕ್ ಗೆ ಯಾವ ಸ್ಥಾನ:

ಒಟ್ಟಾರೆ 4ಜಿ ನೆಟ್ ವರ್ಕ್ ಸ್ಪೀಡ್ ನ್ನು ಭಾರತದ ಅತೀ ದೊಡ್ಡ ಮೊಬೈಲ್ ಆಪರೇಟರ್ ಗಳಲ್ಲಿ ಹೋಲಿಕೆ ಮಾಡಿದಾಗ ಓಕ್ಲಾ ತನ್ನ ಪ್ರಿಯಾರಿಟಿ ಸ್ಪೀಡ್ ಸ್ಕೋರ್ ಮೆಥಡಾಲಜಿಯನ್ನು ಬಳಸಿ ಇದನ್ನು ದಾಖಲಿಸಿದೆ- ಬೇರೆಬೇರೆ ಪ್ರದರ್ಶನಗಳಲ್ಲಿ ಡೌನ್ ಲೋಡ್ ಮತ್ತು ಅಪ್ ಲೋಡ್ ಸ್ಪೀಡ್ ನ್ನು ಪರಿಗಣಿಸಿ ಇದರ ಲೆಕ್ಕಾಚಾರವನ್ನು ಮಾಡಲಾಗಿದೆ. ಏರ್ ಟೆಲ್ ಇದರಲ್ಲಿ ಅತ್ಯುನ್ನತ ಸ್ಥಾನವನ್ನು ಗಳಿಸಿದ್ದು ಅದರ ಸ್ಕೋರ್ 11.23 Mbps ಆಗಿದೆ. ವಡಾಫೋನ್ ಮತ್ತು ಐಡಿಯಾ ಸಮಾನ ಅಂಕಗಳನ್ನು ಗಳಿಸಿದೆ. ಆದರೂ ವಡಾಫೋನ್ ಎರಡನೇ ಸ್ಥಾನವನ್ನು ಪಡೆದಿರುವುದು ಯಾಕೆಂದರೆ ಐಡಿಯಾ ಭಾರತದಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬುದು ತಿಳಿದುಬಂದಿದೆ.

ಓಕ್ಲಾ ಸ್ಕೋರ್:

ಓಕ್ಲಾ ಸ್ಕೋರ್:

ಆದರೆ, ಓಕ್ಲಾ ಒಟ್ಟಾರೆ 4ಜಿ ನೆಟ್ ವರ್ಕ್ ನ ಲಭ್ಯತೆಯನ್ನು ಕೂಡ ಪರಿಗಣಿಸಿದೆ. ದೇಶದ ಎಲ್ಲಾ 4ಜಿ ಸೇವೆಗಳಲ್ಲಿ ಅತೀ ಹೆಚ್ಚು ಲಭ್ಯತೆ ಹೊಂದಿರುವ 4ಜಿ ಸೇವೆ ಯಾವ ಕಂಪೆನಿಯದ್ದು ಎಂಬುದನ್ನೂ ಕೂಡ ನೋಡಿದೆ. ಇದರಲ್ಲಿ ರಿಲಯನ್ಸ್ ಜಿಯೋ ಅತ್ಯುನ್ನತ ಸ್ಥಾನವನ್ನು ಪಡೆದಿದ್ದು ಒಟ್ಟಾರೆ 99.3 ಶೇಕಡಾ ಅಂಕವನ್ನು ಗಳಿಸಿದೆ. ಎರಡನೇ ಸ್ಥಾನವನ್ನು ಏರ್ ಟೆಲ್ ಪಡೆದಿದ್ದು 99.1 ಶೇಕಡಾ ಅಂಕವನ್ನು ಗಳಿಸಿದೆ. ವಡಾಫೋನ್ ಮೂರನೇ ಸ್ಥಾನದಲ್ಲಿದ್ದು 99 ಶೇಕಡಾ ಅಂಕ ಗಳಿಸಿದೆ. ಐಡಿಯಾ ಕೊನೆಯ ಸ್ಥಾನದಲ್ಲಿದ್ದು 98.9 ಶೇಕಡಾ ಅಂಕ ಗಳಿಸಿದೆ. ಇದರ ಡಾಟಾ ಕೂಡ 2018 ರ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕವನ್ನು ಆಧರಿಸಿರುವುದೇ ಆಗಿದೆ.

ಒಟ್ಟಾರೆ ಲೆಕ್ಕಾಚಾರ:

ಒಟ್ಟಾರೆ ಲೆಕ್ಕಾಚಾರ:

ಸುಮಾರು 250,138,853 ಸ್ಯಾಂಪಲ್ಸ್ ಗಳನ್ನು 595,034 4ಜಿ ಅನೇಬಲ್ ಆಗಿರುವ ಡಿವೈಸ್ ಗಳಿಂದ ಕಲೆಹಾಕಿರುವ ಓಕ್ಲಾ 2018 ರ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕದ ಮೇಲಿನ ಲೆಕ್ಕಾಚಾರವನ್ನು ಶೋಧಿಸಿದೆ.

ಜನರಲ್ ಲಭ್ಯತೆ ಎಂಬುದು ಯಾವುದೇ ರೀತಿಯ ಸೇವೆಗೆ(ರೋಮಿಂಗ್ ಕೂಡ ಸೇರಿ) ಪ್ರವೇಶವನ್ನು ಹೊಂದಿರುವ ಸಾಧನದ ಸ್ಥಳದ ಶೇಕಡಾವಾರು ಆಗಿದೆ. 4ಜಿ ಲಭ್ಯತೆ ಎಂಬುದು ಒಂದು ಸಾಧನವು LTE ಸೇವೆ( ರೋಮಿಂಗ್ ಕೂಡ ಸೇರಿ) ಗೆ ಪ್ರವೇಶವನ್ನು ಹೊಂದಿರುವ, ಆಯೋಜಕರು ತಿಳಿದಿರುವ ಪ್ರದೇಶದ ಶೇಕಡಾವಾರು ಮೊತ್ತವಾಗಿದೆ.

ಎಲ್ಲಿ ಎಷ್ಟು ಸ್ಕೋರ್:

ಎಲ್ಲಿ ಎಷ್ಟು ಸ್ಕೋರ್:

ಜನರಲ್ ಲಭ್ಯತೆಯು ದೇಶದ 15 ಸಿಟಿಗಳಲ್ಲಿ ಭಾರತದ ಅತ್ಯಂತ ದೊಡ್ಡ ಆಪರೇಟರ್ ಎನ್ನಿಸಿಕೊಂಡಿರುವ ಏರ್ ಟೆಲ್ ನದ್ದು ದೊಡ್ಡ ಮೊತ್ತದಲ್ಲಿದೆ( ಸುಮಾರು 98-99 ಶೇಕಾಡಾ).ಎಲ್ಲಾ 15 ಸಿಟಿಗಳಲ್ಲಿ ಏರ್ ಟೆಲ್ ಜನರಲ್ ಲಭ್ಯತೆಯನ್ನು 99 ಶೇಕಡಾ ಹೆಚ್ಚು ತೋರಿಸಿದೆ. ಜಿಯೋ ಅತ್ಯಂತ ಕಡಿಮೆ ಮೊತ್ತವನ್ನು ಕಳಿಸಿದೆ. ವಡಾಫೋನ್ 99 ಶೇಕಡಾಕ್ಕಿಂತ ಕಡಿಮೆ ಸ್ಕೋರ್ ನ್ನು ಕೋಲ್ಕತ್ತಾದಲ್ಲಿ ಮಾಡಿದೆ.

ಜಿಯೋ ಜಯಪುರದಲ್ಲಿ 98.9 ಶೇಕಡಾ ಅಂಕವನ್ನು ಗಳಿಸಿದೆ. ಐಡಿಯಾ ಜನರಲ್ ಲಭ್ಯತೆಯಲ್ಲಿ 6 ಸಿಟಿಗಳಲ್ಲಿ 99 ಶೇಕಡಾ ಸ್ಕೋರ್ ಮಾಡಿದೆ. ಹೈದರಾಬಾದ್(98.8 %), ದೆಹಲಿ(98.3%),ಜಯಪುರ (98.0 %), ಕೋಲ್ಕತ್ತಾ (97.9%), ವಿಶಾಖಾಪಟ್ಟಣ (97.9 %) ಮತ್ತು ಇಂಡೋರ್ (96.6 %).

Best Mobiles in India

English summary
Reliance Jio tops in overall 4G coverage but Airtel is still fastest 4G network in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+