ಏರ್‌ಟೆಲ್‌ VS ಜಿಯೋ VS ವೀ..! ವರ್ಷದ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಯಾವುದು ಬೆಸ್ಟ್‌..?

By Gizbot Bureau
|

ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ಕಂಪನಿಗಳಯ ತಮ್ಮ ಆರಂಭಿಕ ಹಂತದ ಹಾಗೂ ಟಾಪ್ ಟಯರ್‌ ಪ್ಲಾನ್‌ಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿವೆ. ಎರಡು ಖಾಸಗಿ ಟೆಲಿಕಾಂ ಆಪರೇಟರ್‌ಗಳು ತಮ್ಮ ಎಲ್ಲಾ ಕೊಡುಗೆಗಳ ವ್ಯಾಲಿಡಿಟಿಯನ್ನು ಕೂಡ ಪರಿಷ್ಕರಿಸುತ್ತಿವೆ. ಟೆಲಿಕಾಂ ಆಪರೇಟರ್‌ಗಳ ಪ್ರಮುಖ ಆದಾಯವು ಪ್ರಿಪೇಯ್ಡ್ ಯೋಜನೆಗಳಿಂದ ಬರುತ್ತಿದ್ದು, ಈ ಹಿನ್ನೆಲೆ ಯೋಜೆನೆ ಪರಿಷ್ಕರಣೆಗೆ ಕಂಪನಿಗಳು ಮುಂದಾಗಿವೆ. ಆದ್ದರಿಂದ, ನಾವು ಏರ್‌ಟೆಲ್‌, ರಿಲಾಯನ್ಸ್‌ ಜಿಯೋ ಹಾಗೂ ವೊಡಾಫೋನ್‌-ಐಡಿಯಾ ಕಂಪನಿಗಳ ಪ್ರಿಪೇಯ್ಡ್‌ ಯೋಜನೆಗಳನ್ನು ಇಲ್ಲಿ ಪಟ್ಟಿ ಮಾಡಿದ್ದು, ಅವುಗಳ ಪ್ರಯೋಜನವನ್ನು ನೀಡಿದ್ದೇವೆ.

ಏರ್‌ಟೆಲ್‌ VS ಜಿಯೋ VS ವೀ!ವರ್ಷದ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಯಾವುದು ಬೆಸ್ಟ್?

ಏರ್‌ಟೆಲ್ 2,498 ರೂ. ಪ್ರಿಪೇಯ್ಡ್ ಪ್ಲಾನ್‌

ಏರ್‌ಟೆಲ್‌ನ 2,498 ರೂ. ಪ್ಲಾನ್‌ 365 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಪ್ರತಿ ದಿನ 2GB ಡೇಟಾ, 100 ಟೆಕ್ಸ್ಟ್‌ ಸಂದೇಶಗಳನ್ನು ನೀಡುತ್ತದೆ. ವಿಂಕ್ ಮ್ಯೂಸಿಕ್‌ನ ಉಚಿತ ಚಂದಾದಾರಿಕೆ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ, ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ ಉಚಿತ ಟ್ರಯಲ್‌, ಉಚಿತ ಹಲೋಟ್ಯೂನ್‌ ಮತ್ತು ಫಾಸ್ಟ್‌ಟ್ಯಾಗ್‌ನಲ್ಲಿ 100 ರೂಪಾಯಿ ಕ್ಯಾಶ್‌ಬ್ಯಾಕ್ ಅನ್ನು ನೀಡುತ್ತಿದೆ. ಇದರ ಜೊತೆಯಲ್ಲಿ ಪ್ರಮುಖವಾಗಿ 365 ದಿನಗಳ ಅವಧಿಗೆ ಬಳಕೆದಾರರು ಅನ್‌ಲಿಮಿಟೆಡ್‌ ಕರೆ ಸೌಲಭ್ಯ ಪಡೆಯುತ್ತಾರೆ.

ರಿಲಾಯನ್ಸ್ ಜಿಯೋನ 2,399 ರೂ. ಪ್ರಿಪೇಯ್ಡ್ ಪ್ಲಾನ್‌

2,399 ರೂ. ಪ್ಲಾನ್‌ನಲ್ಲಿ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ರಿಲಾಯನ್ಸ್ ಜಿಯೋ 365 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 2GB ಡೇಟಾವನ್ನು ನೀಡುತ್ತಿದೆ. ಅಂದರೆ, ಬಳಕೆದಾರರು ಭರ್ತಿ 730GB ಡೇಟಾವನ್ನು ಪಡೆಯುತ್ತಿದ್ದಾರೆ. ಇನ್ನು ಅನ್‌ಲಿಮಿಟೆಡ್‌ ಕರೆ ಮತ್ತು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್‌, ಜಿಯೋ ಸೆಕ್ಯೂರಿಟಿ ಸೌಲಭ್ಯಗಳು ಬಳಕೆದಾರರಿಗೆ ಸಿಗುತ್ತವೆ. ಪ್ರಮುಖವಾಗಿ ಗಮನಿಸಬೇಕಾದ ಸಂಗತಿಯೆಂದರೆ ರಿಲಾಯನ್ಸ್ ಜಿಯೋ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ನಂತಹ ಥರ್ಡ್‌ ಪಾರ್ಟಿ ಕಂಟೆಂಟ್‌ ಅನ್ನು ಬಳಕೆದಾರರಿಗೆ ನೀಡುವುದಿಲ್ಲ. ಜೊತೆಗೆ ಕಂಪನಿ ತನ್ನ ಡೇಟಾ ವೇಗವನ್ನು 64 Kbps ಗೆ ಇಳಿಸಲಾಗುವುದು ಎಂದು ಹೇಳಿದೆ.

ವೊಡಾಫೋನ್-ಐಡಿಯಾ 2,399 ರೂ. ಪ್ರಿಪೇಯ್ಡ್ ಪ್ಲಾನ್‌

ಇನ್ನು, ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ 2,399 ರೂ.ಗೆ 365 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 1.5GB ಡೇಟಾವನ್ನು ಒದಗಿಸುತ್ತಿದೆ. ಈ ಪ್ಯಾಕ್ ಅನಿಯಮಿತ ಕರೆ ಮತ್ತು ದಿನಕ್ಕೆ 100 ಸಂದೇಶಗಳನ್ನು ಒಳಗೊಂಡಿದೆ. ಈ ಪ್ಯಾಕ್ ವಾರಾಂತ್ಯದ ಡೇಟಾ ರೋಲ್‌ ಓವರ್ ಸೌಲಭ್ಯ, ಜೀ 5 ಪ್ರೀಮಿಯಂ ಮತ್ತು ವಿ ಮೂವೀಸ್ ಮತ್ತು ಟಿವಿ ಅಪ್ಲಿಕೇಶನ್‌ಗೆ ಪ್ರವೇಶವನ್ನು ನೀಡುತ್ತದೆ

ಎಲ್ಲಾ ಪ್ರೀಮಿಯಂ ಯೋಜನೆಗಳನ್ನು ಹೋಲಿಸಿದರೆ ರಿಲಾಯನ್ಸ್ ಜಿಯೋ ಕಡಿಮೆ ದರದಲ್ಲಿ ಹೆಚ್ಚಿನ ಡೇಟಾ ನೀಡುತ್ತದೆ. ಆದರೆ, ಜಿಯೋ ಯಾವುದೇ ಥರ್ಡ್‌ ಪಾರ್ಟಿ ಕಂಟೆಂಟ್‌ ನೀಡದಿರುವುದು ಬಳಕೆದಾರರಿಗೆ ಕೊರತೆಯುಂಟಾಗಬಹುದು. ಮತ್ತೊಂದೆಡೆ, ಏರ್‌ಟೆಲ್‌ ಮತ್ತು ವೊಡಾಫೋನ್-ಐಡಿಯಾ ಒಟಿಟಿ ಆಪ್‌ಗಳನ್ನು ಸಹ ತಮ್ಮ ಪ್ಲಾನ್‌ನೊಂದಿಗೆ ಸೇರಿಸಿದ್ದು, ಬಳಕೆದಾರರನ್ನು ಆಕರ್ಷಿಸುತ್ತಿವೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಪ್ಲಾನ್‌ ಆಯ್ಕೆಮಾಡಿಕೊಳ್ಳುವುದು ನಿಮ್ಮ ಆಯ್ಕೆ.

Best Mobiles in India

Read more about:
English summary
Airtel plan of Rs. 2,498 offers 2GB of data per day for 365 days. This pack includes 100 messages per day, Wynk Music free subscription, Airtel Xstream Premium, Amazon Prime Video mobile edition free trial, free hello tunes, and Rs 100 cashback on FASTag.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X