Home
ಸುದ್ದಿಜಾಲ

ಎಲ್ಲದರಲ್ಲೂ ಇವೆ ₹ 100 ಒಳಗಿನ ಪ್ಲಾನ್ಸ್‌..! ಯಾವುದು ಬೆಸ್ಟ್‌ ನೀವೆ ಆಯ್ದುಕೊಳ್ಳಿ..?

2016 ಸೆಪ್ಟೆಂಬರ್ ನಿಂದ ರಿಲಯನ್ಸ್ ಜಿಯೋ ಭಾರತೀಯ ಟೆಲಿಕಾಂ ಇಂಡಸ್ಟ್ರಿಯನ್ನ ತನ್ನ ವಿಭಿನ್ನವಾಗಿರುವ ಅತೀ ಕಡಿಮೆ ದರದ ತಾರೀಫ್ ಗಳಿಂದಾಗಿ ಇತರೆ ಟೆಲಿಕಾಂ ಆಪರೇಟರ್ ಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದೆ. ಈ ವರ್ಷದ ಆರಂಭಕ್ಕೂ ಮುನ್ನ ಟೆಲ್ಕೋ ತನ್ನ ತಾರೀಫ್ ಪ್ಲಾನ್ ಗಳ ಫೋರ್ಟ್ ಪೋಲೀಯೋವನ್ನು ಪರಿಷ್ಕರಿಸಿದೆ ಮತ್ತು ಆ ಮೂಲಕ ಚಂದಾದಾರರಿಗೆ ಕಡಿಮೆ ದರದಲ್ಲಿ ಹೆಚ್ಚು ಲಾಭಗಳನ್ನು ನೀಡುವ ಪ್ಲಾನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

 ಎಲ್ಲದರಲ್ಲೂ ಇವೆ ₹ 100 ಒಳಗಿನ ಪ್ಲಾನ್ಸ್‌..! ಯಾವುದು ಬೆಸ್ಟ್‌ ಆಯ್ದುಕೊಳ್ಳಿ..?

ಇದಾದ ನಂತರ ಇತರೆ ಟೆಲಿಕಾಂ ಆಪರೇಟರ್ ಗಳಾದ ಏರ್ ಟೆಲ್, ವೊಡಾಫೋನ್‌ ಮತ್ತು ಬಿಎಸ್ಎನ್ಎಲ್ ಹೊಸ ಪ್ಲಾನ್ ಗಳನ್ನು ಪರಿಚಯಿಸಿತು ಮತ್ತು ಹಳೆಯ ಪ್ಲಾನ್ ಗಳನ್ನು ಪರಿಷ್ಕರಿಸಿತು. ಈ ಕೆಳಗೆ 100 ರುಪಾಯಿ ಒಳಗೆ ಈ ಎಲ್ಲಾ ಆಪರೇಟರ್ ಗಳು ನೀಡುವ ಪೀಪೇಯ್ಡ್ ಪ್ಲಾನ್ ನ್ನು ವಿಮರ್ಷಿಸಲಾಗಿದೆ. ಇದು ನಿಮಗೆ ಯಾವ ಪ್ಲಾನ್ ಬೆಸ್ಟ್ ಎಂದು ನಿರ್ಧರಿಸಲು ನೆರವಾಗುತ್ತದೆ.

ರಿಲಯನ್ಸ್ ಜಿಯೋ ರೂ.98 ಪ್ಲಾನ್:

ರಿಲಯನ್ಸ್ ಜಿಯೋ ರೂ.98 ಪ್ಲಾನ್:

ರಿಲಯನ್ಸ್ ನ 100 ರುಪಾಯಿ ಒಳಗಿನ ಪ್ರೀಪೇಯ್ಡ್ ಪ್ಲಾನ್ ಇದು. ಈ ರೆಗ್ಯುಲರ್ ಪ್ಲಾನ್ ನಲ್ಲಿ ನಿಮಗೆ 2ಜಿಬಿ 4ಜಿ ಡಾಟಾ, 300ಎಸ್ಎಂಎಸ್ ಮತ್ತು ಅನಿಯಮಿತ ವಾಯ್ಸ್ ಕರೆಗಳು ಎಫ್ ಯುಪಿ ರಹಿತವಾಗಿ 28 ದಿನಗಳ ಅವಧಿಗೆ ಲಭ್ಯವಾಗುತ್ತದೆ. ಜಿಯೂ ಸ್ಯೂಟ್ ಆಪ್ ಗಳಿಗೆ ಉಚಿತ ಚಂದಾದಾರಿಕೆ ಲಭ್ಯವಾಗುತ್ತದೆ.

ವೊಡಾಫೋನ್‌ ರೂ.99 ಪ್ಲಾನ್:

ವೊಡಾಫೋನ್‌ ರೂ.99 ಪ್ಲಾನ್:

ಇತ್ತೀಚೆಗಷ್ಟೇ ವೊಡಾಫೋನ್‌ ಈ ಪ್ಲಾನ್ ನ್ನು ಪರಿಚಯಿಸಿದೆ. ಈ 99 ರೂಪಾಯಿ ಪ್ರೀಪೇಯ್ಡ್ ಪ್ಲಾನ್ ಉಚಿತ ವಾಯ್ಸ್ ಕರೆಗಳನ್ನು 250 ನಿಮಿಷ ಪ್ರತಿದಿನ ನೀಡುತ್ತದೆ ಅಂದರೆ ನಿಮಗೆ ಒಂದು ವಾರಕ್ಕೆ 1000 ನಿಮಿಷ ಉಚಿತ ವಾಯ್ಸ್ ಕರೆಗಳಿಗೆ ಇದರಲ್ಲಿ ಅವಕಾಶವಿದೆ. ಇದರ ವ್ಯಾಲಿಡಿಟಿ ಕೂಡ 28 ದಿನಗಳು. ಆದರೆ ಇದರಲ್ಲಿ ಯಾವುದೇ ಡಾಟಾ ಮತ್ತು ಎಸ್ಎಂಎಸ್ ಲಾಭಗಳು ಇರುವುದಿಲ್ಲ.

ಏರ್ ಟೆಲ್ ರೂ.99 ಪ್ಲಾನ್:

ಏರ್ ಟೆಲ್ ರೂ.99 ಪ್ಲಾನ್:

ಏರ್ ಟೆಲ್ ನ 99 ರುಪಾಯಿಯ ಪ್ರೀಪೇಯ್ಡ್ ಪ್ಲಾನ್ ಜಿಯೋ ಪ್ಲಾನ್ ನಂತೆಯೇ ಇದೆ. ಇದು ಒಟ್ಟು 2 ಜಿಬಿ 3ಜಿ/4ಜಿ ಡಾಟಾ, ಅನಿಯಮಿತ ವಾಯ್ಸ್ ಕರೆಗಳು(ಅದಕ್ಕೆ ಯಾವುದೇ ಲಿಮಿಟ್ ಇಲ್ಲ) , 100 ಎಸ್ಎಂಎಸ್ ಪ್ರತಿದಿನ ಉಚಿತವಾಗಿ 28 ದಿನಗಳ ಅವಧಿಗೆ ಲಭ್ಯವಾಗುತ್ತದೆ. ಕೆಲವು ಸರ್ಕಲ್ ನಲ್ಲಿರುವ ಚಂದಾದಾರರಿಗೆ 2ಜಿಬಿ ಡಾಟಾ ಮತ್ತು ಇನ್ನು ಕೆಲವರಿಗೆ 1ಜಿಬಿ ಡಾಟಾ ಲಭ್ಯವಾಗುತ್ತದೆ. ಇತರೆ ಎಲ್ಲಾ ವಿಚಾರವೂ ಎಲ್ಲಾ ಚಂದಾದಾರರಲ್ಲೂ ಒಂದೇ ಆಗಿರುತ್ತದೆ. ಇನ್ನು 97 ರೂಪಾಯಿ ಪ್ರೀಪೇಯ್ಡ್ ಪ್ಲಾನ್ ಕೂಡ ಲಭ್ಯವಿದೆ. ಇದರಲ್ಲಿ ನೀವು ಕೋಂಬೋ ರೀಚಾರ್ಜ್ ಪ್ಲಾನ್ ನ್ನು ಪರೀಕ್ಷಿಸಿ.

ಬಿಎಸ್ಎನ್ಎಲ್ ರೂ.99 ಪ್ಲಾನ್:

ಬಿಎಸ್ಎನ್ಎಲ್ ರೂ.99 ಪ್ಲಾನ್:

ಬಿಎಸ್ಎನ್ಎಲ್ ಕೂಡ ಇತ್ತೀಚೆಗೆ ತನ್ನ ಚಂದಾದಾರರಿಗೆ ಉತ್ತಮ ಆಫರ್ ಗಳನ್ನು ನೀಡಲು ಚಿಂತನೆ ನಡೆಸುತ್ತಿದೆ. ದೆಹಲಿ ಮತ್ತು ಮುಂಬೈ ಗ್ರಾಹಕರನ್ನು ಹೊರತು ಪಡಿಸಿ ಇತರೆ ರಾಜ್ಯಗಳ ಚಂದಾದಾರರು ಬಿಎಸ್ಎನ್ಎಲ್ ನ ರೂ.99 ಪ್ಲಾನ್ ನ್ನು ಪಡೆಯಬಹುದು. ಇದು 26 ದಿನಗಳ ಅವಧಿಯನ್ನು ಹೊಂದಿದೆ ಮತ್ತು ಯಾವುದೇ ಡಾಟಾ ಅಥವಾ ಎಸ್ಎಂಎಸ್ ಲಾಭಗಳನ್ನು ಹೊಂದಿರುವುದಿಲ್ಲ.

ಯಾವುದು ಬೆಸ್ಟ್?

ಯಾವುದು ಬೆಸ್ಟ್?

ಇಲ್ಲಿ ನಮ್ಮ ಹೋಲಿಕೆಯಲ್ಲಿ ರಿಲಯನ್ಸ್ ಜಿಯೋ 99 ಪ್ಲಾನ್ ಅಧ್ಬುತ ಪ್ಲಾನ್ ಎನ್ನಿಸಿಕೊಳ್ಳುತ್ತದೆ. ಅನಿಯಮಿತ ಕರೆಯ ಜೊತೆಗೆ ಡಾಟಾ,ಎಸ್ಎಂಎಸ್ ಮತ್ತು ಜಿಯೋ ಆಪ್ ಗಳಿಗೂ ಅವಕಾಶ ನೀಡುವ ಈ ಪ್ಲಾನ್ ನಿಜಕ್ಕೂ ಗ್ರಾಹಕರ ದುಡ್ಡಿಗೆ ತಕ್ಕ ಸೌಲಭ್ಯವನ್ನು ಒದಗಿಸುವ ಪ್ಲಾನ್ ಆಗಿದೆ.

Best Mobiles in India

English summary
Reliance Jio vs Vodafone vs Airtel vs BSNL: Best prepaid plans under Rs. 100 compared. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+