ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಜಿಯೋಬುಕ್ ಲ್ಯಾಪ್‌ಟಾಪ್!
ಭಾರತದಲ್ಲಿ ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ರಿಲಯನ್ಸ್ ಜಿಯೋ, ಟೆಕ್ ವಲಯದಲ್ಲೂ ತನ್ನ ಪ್ರಾಬಲ್ಯ ಸಾಧಿಸಲೂ ಮುಂದಾಗಿದೆ. ಅಗ್ಗದ ಬೆಲೆಯ ಜಿಯೋ ಫೀಚರ್ ಫೋನ್ ಮೂಲಕ ಸಂಚಲನ ಸೃಷ್ಟಿಸಿದ್ದ ಜಿಯೋ ಕೆಲ ದಿನಗಳ ಹಿಂದೆಯಷ್ಟೇ ಜಿಯೋಫೋನ್‌ನೆಕ್ಸ್ಟ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಮೂಲಕ ಸ್ಮಾರ್ಟ್‌ಫೋನ್ ವಲಯದಲ್ಲೂ ಹೊಸ ಸಂಚಲನಕ್ಕೆ ಕರಣವಾಗಿದೆ. ಇದರ ನಡುವೆ ಇದೀಗ ತನ್ನ ಹೊಸ ಲ್ಯಾಪ್‌ಟಾಪ್ ಬಿಡುಗಡೆ ಮಾಡಲು ಮುಂದಾಗಿದೆ. ಈ ಮೂಲಕ ಲ್ಯಾಪ್‌ಟಾಪ್ ವಲಯದಲ್ಲೂ ಸಖತ್ ಸೌಂಡ್ ಮಾಡ್ತಿದೆ.

ಹೌದು, ಜಿಯೋ ಕಂಪೆನಿ ಶೀಘ್ರದಲ್ಲೇ ತನ್ನ ಹೊಸ ಲ್ಯಾಪ್‌ಟಾಪ್ ಜಿಯೋಬುಕ್ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಜಿಯೋಬುಕ್ ಲ್ಯಾಪ್‌ಟಾಪ್ ಅಗ್ಗದ ಬೆಲೆಯಲ್ಲಿ ಉತ್ಕೃಷ್ಟ ತಂತ್ರಜ್ಞಾನ ನೀಡಲಿದೆ ಎನ್ನಲಾಗಿದೆ. ಸದ್ಯ ಈ ಹೊಸ ಲ್ಯಾಪ್‌ಟಾಪ್‌ನ ವಿಶೇಷತೆ ಹೇಗಿರಲಿದೆ ಎನ್ನುವ ಮಾಹಿತಿ ಈಗಾಗಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಜೊತೆಗೆ ರಿಲಯನ್ಸ್ ಜಿಯೋಬುಕ್ ಮೀಡಿಯಾ ಟೆಕ್ MT8788 ಪ್ರೊಸೆಸರ್ ಬಲವನ್ನು ಪಡೆದಿರಲಿದೆ ಎಂದು ಅಂದಾಜಿಸಲಾಗಿದೆ. ಹಾಗಾದ್ರೆ ಜಿಯೋಬುಕ್ ಲ್ಯಾಪ್‌ಟಾಪ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋಬುಕ್ ಮೀಡಿಯಾ ಟೆಕ್ MT8788 ಪ್ರೊಸೆಸರ್ ಹೊಂದಿರುವ ಸಾದ್ಯತೆ ಇದೆ. ಪ್ರೊಸೆಸರ್ ARM Mali G72 ನಿಂದ ಸಹಾಯ ಮಾಡಲಿದೆ ಎನ್ನಲಾಗಿದೆ. ಇದು ಸಿಂಗಲ್-ಕೋರ್ ಸ್ಕೋರ್ 1178 ಮತ್ತು ಮಲ್ಟಿ-ಕೋರ್ ಸ್ಕೋರ್ 4246 ಅನ್ನು ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್ Android ಆಧಾರಿತ ಆಪರೇಟಿಂಗ್ ಸಿಸ್ಟಮ್ ಅನ್ನು ನಿರೀಕ್ಷಿಸಬಹುದು. ಇನ್ನು ಈ ಲ್ಯಾಪ್‌ಟಾಪ್ ಫುಲ್ HD ರೆಸಲ್ಯೂಶನ್ ಅನ್ನು ಬೆಂಬಲಿಸಲಿದೆ. ಆದರೆ ಪ್ರೈಸ್ ಟ್ಯಾಗ್ ಕಡಿಮೆ ಆದಂತೆ ಜಿಯೋಬುಕ್ ಕಡಿಮೆ ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಪಡೆಯುವ ನಿರೀಕ್ಷೆಯಿದೆ.

ಜಿಯೋಬುಕ್ ಲ್ಯಾಪ್‌ಟಾಪ್ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಎರಡು ಲ್ಯಾಪ್‌ಟಾಪ್‌ಗಳಲ್ಲಿ, ಸ್ನಾಪ್‌ಡ್ರಾಗನ್ 665 ಪ್ರೊಸೆಸರ್‌ನಿಂದ ಚಾಲಿತವಾಗುವಂತೆ ಪಟ್ಟಿ ಮಾಡಲಾಗಿದೆ. ಸದ್ಯ ಈ ಹೊಸ ಜಿಯೋಬುಕ್ ಲ್ಯಾಪ್‌ಟಾಪ್‌ಗಳು HDMI, USB-A ನಂತಹ ಕನೆಕ್ಟಿವಿಟಿ ಪೋರ್ಟ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಇನ್ನು ವಾಯರ್‌ಲೆಸ್ ಸಂಪರ್ಕಕ್ಕಾಗಿ, ಜಿಯೋಬುಕ್ ಕೆಲವು ರೂಪಾಂತರಗಳಲ್ಲಿ ಡ್ಯುಯಲ್-ಬ್ಯಾಂಡ್ ವೈಫೈ ಮತ್ತು 4G LTE ಅನ್ನು ಪಡೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಈ ಲ್ಯಾಪ್‌ಟಾಪ್ ಬೆಲೆ ಎಷ್ಟು ಅನ್ನೊದು ಇನ್ನು ಬಹಿರಂಗವಾಗಿಲ್ಲ.

ಇನ್ನು ಇತ್ತೀಚಿಗೆ ಜಿಯೋ ಕಂಪೆನಿ ತನ್ನ ಹೊಸ ಜಿಯೋಫೋನ್ ನೆಕ್ಸ್ಟ್ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್ 720x1,440 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 5.45-ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಅನ್ನು ಹೊಂದಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 215 ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದ್ದು, ಪ್ರಗತಿ OS ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ನ ಆಪ್ಟಿಮೈಸ್ಡ್ ಆವೃತ್ತಿಯಾಗಿದ್ದು, ಭಾರತದಲ್ಲಿನ ಬಳಕೆದಾರರಿಗೆ ಲಭ್ಯವಾಗಲಿದೆ. ಜೊತೆಗೆ 2GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದನ್ನು 512GB ವರೆಗೆ ವಿಸ್ತರಿಸಬಹುದಾಗಿದೆ.

ಈ ಫೋನ್ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ರಿಯರ್ ಕ್ಯಾಮೆರಾ ಫೀಚರ್ಸ್‌ನಲ್ಲಿ ಪೋರ್ಟ್ರೇಟ್ ಮೋಡ್, ನೈಟ್ ಮೋಡ್ ಮತ್ತು ಫ್ರೀ ಲೋಡ್ ಮಾಡಿದ ಕಸ್ಟಮ್ ಇಂಡಿಯಾ-ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಜೊತೆಗೆ ಈ ಫೋನ್ 3,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೈಕ್ರೋ-USB ಪೋರ್ಟ್, 3.5mm ಆಡಿಯೋ ಜ್ಯಾಕ್, ಬ್ಲೂಟೂತ್ v4.1, Wi-Fi ಯನ್ನು ಬೆಂಬಲಿಸಲಿದೆ.

ಇದಲ್ಲದೆ ಜಿಯೋಫೋನ್ ನೆಕ್ಸ್ಟ್ ಗೂಗಲ್ ಅಸಿಸ್ಟೆಂಟ್ ಬೆಂಬಲದೊಂದಿಗೆ ಬರುತ್ತದೆ. ಇದು ಬಳಕೆದಾರರಿಗೆ "ಓಪನ್ ಅಪ್ಲಿಕೇಶನ್" ಮತ್ತು "ಸೆಟ್ಟಿಂಗ್‌ಗಳನ್ನು ನಿರ್ವಹಿಸಿ" ಸೂಚನೆಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಬಳಕೆದಾರರಿಗೆ ಆನ್-ಸ್ಕ್ರೀನ್ ವಿಷಯವನ್ನು ಓದಲು ಅನುವು ಮಾಡಿಕೊಡುವ 'ರೀಡ್ ಅಲೌಡ್' ಫೀಚರ್ಸ್ ಅನ್ನು ಕೂಡ ಒಳಗೊಂಡಿದೆ. ಇದು ಬಳಕೆದಾರರಿಗೆ ಅರ್ಥವಾಗುವ ಭಾಷೆಯಲ್ಲಿ ಕೇಳುವ ಮೂಲಕ ವಿಷಯವನ್ನು ಅರ್ಥ ಮಾಡಿಸುವುದಕ್ಕೆ ಅವಕಾಶ ನೀಡಲಿದೆ.


Click it and Unblock the Notifications








