ಇನ್ನು ಮುಂದೆ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ ರಿಲಯನ್ಸ್ ಜಿಯೋಗಿಗಾಫೈಬರ್ ಬ್ರಾಡ್ ಬ್ಯಾಂಡ್ ಸೇವೆ
ಈ ವರ್ಷದ ಆರಂಭದಲ್ಲಿ ಮುಖೇಶ್ ಅಂಬಾನಿ ಮಾಲೀಕತ್ವದ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಫೈಬರ್ ಮೂಲಕ ಬ್ರಾಡ್ ಬ್ಯಾಂಡ್ ಸೇವೆ ಜಿಯೋಗಿಗಾಫೈಬರ್ ನ್ನು ಆರಂಭಿವಿಸುವ ಬಗ್ಗೆ ಪ್ರಕಟಿಸಿದ್ದರು. ಕಂಪೆನಿಯು ಇದೀಗ ಪ್ರಿವ್ಯೂ ಆಫರ್ ನ್ನು ರಿಲಯನ್ಸ್ ಬ್ರಾಡ್ ಬ್ಯಾಂಡ್ ಸೇವೆಯ ಭಾಗವಾಗಿ ನೀಡುತ್ತಿದೆ. ಇದರ ಬಗೆಗಿನ ಕೆಲವು ಮಾಹಿತಿಗಳು ಇಲ್ಲಿವೆ ನೋಡಿ. ರಿಲಯನ್ಸ್ ಜಿಯೋ ಗಿಗಾಫೈಬರ್ ನ ಪ್ಲಾನ್, ಆಫರ್ ಇತ್ಯಾದಿ ವಿವರಗಳನ್ನು ನೀಡುವ ಲೇಖನ ಇದು.

100ಜಿಬಿ ಮಾಸಿಕ ಡಾಟಾ - 100Mbps ನ ಹೈ-ಸ್ಪೀಡ್ ಇಂಟರ್ನೆಟ್ - 90 ದಿನಗಳ ಅವಧಿ:
ಸದ್ಯದ ಜಿಯೋಗಿಗಾಫೈಬರ್ ಪ್ರಿವ್ಯೂ ಆಫರ್ ನ ಅನ್ವಯ ಬಳಕೆದಾರರಿಗೆ ಅಲ್ಟ್ರಾ ಹೈ ಸ್ಪೀಡ್ ಇಂಟರ್ನೆಟ್ 100Mbps ವರೆಗೆ 90 ದಿನಗಳ ಅವಧಿಗೆ ಲಭ್ಯವಾಗಲಿದ್ದು ಇದರಲ್ಲಿ ಮಾಸಿಕ ಡಾಟಾ ಕೋಟ 100ಜಿಬಿ ಇರುತ್ತದೆ. ಇದು ಜಿಯೋ ಪ್ರೀಮಿಯಂ ಆಪ್ಸ್ ಗಳಿಗೆ ಕಾಂಪ್ಲಿಮೆಂಟರಿ ಆಕ್ಸಿಸ್ ನ್ನು ನೀಡುತ್ತದೆ.

100ಜಿಬಿ ಮಾಸಿಕ ಕೋಟಾದಲ್ಲಿ ಉಚಿತವಾಗಿ 40ಜಿಬಿ ಟಾಪ್-ಅಪ್ ಡಾಟಾ:
ಒಂದು ತಿಂಗಳಲ್ಲಿ ಬಳಕೆದಾರರು 100ಜಿಬಿ ಮಾಸಿಕ ಕೋಟಾವನ್ನು ಬಳಸಿದರೆ ಅವರು ಹೈ ಸ್ಪೀಡ್ ಇಂಟರ್ನೆಟ್ ಸೇವೆಯನ್ನು ಕಾಂಪ್ಲಿಮೆಂಟರಿ ಡಾಟಾ ಟಾಪ್-ಅಪ್ 40ಜಿಬಿ ಯನ್ನು ಮೈಜಿಯೋಆಪ್ ಅಥವಾ ಜಿಯೋ.ಕಾಮ್ ಮೂಲಕ ಪಡೆದುಕೊಳ್ಳಲು ಅವಕಾಶವಿರುತ್ತದೆ.

ಇನ್ಸ್ಟಾಲೇಷನ್ ಚಾರ್ಜ್ ಇರುವುದಿಲ್ಲ:
ಪ್ರಿವ್ಯೂ ಆಫರ್ ನಲ್ಲಿರುವುದರಿಂದಾಗಿ ಸದ್ಯಕ್ಕೆ ಯಾವುದೇ ರೀತಿಯ ಇನ್ಸ್ಟಾಲೇಷನ್ ಚಾರ್ಜ್ ಜಿಯೋಗಿಗಾಫೈಬರ್ ಗೆ ಇರುವುದಿಲ್ಲ.

ಸೆಕ್ಯುರಿಟಿ ಡೆಪಾಸಿಟ್:
4,500 ರುಪಾಯಿ ಮರುಪಾವತಿ ಮಾಡಲಾಗುವ ಸೆಕ್ಯುರಿಟಿ ಡೆಪಾಸಿಟ್ ನ್ನು ಬಳಕೆದಾರರು ಪಾವತಿಸಬೇಕಾಗುತ್ತದೆ.ಜಿಯೋ ಸಂಸ್ಥೆಯಿಂದ ನೀಡಲಾಗುವ ಗಿಗಾಹಬ್ ಹೋಮ್ ಗೇಟ್ ವೇ (ಓಎನ್ ಟಿ ಡಿವೈಸ್) ಗಾಗಿ ಇದನ್ನು ತೆಗೆದುಕೊಳ್ಳಲಾಗುತ್ತದೆ.

ಕ್ಯಾಷ್ ಪೇಮೆಂಟ್ ಇರುವುದಿಲ್ಲ:
ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಜಿಯೋ ಮನಿ ಅಥವಾ ಪೇಟಿಎಂ ಮೂಲಕ ಹಣವನ್ನು ಪಾವತಿಸಬೇಕಾಗುತ್ತದೆಯೇ ಹೊರತು ಕ್ಯಾಷ್ ಪೇಮೆಂಟ್ ಗೆ ಅವಕಾಶವಿರುವುದಿಲ್ಲ.

ಸೆಕ್ಯುರಿಟಿ ಡೆಪಾಸಿಟ್ ನ್ನು ರೀಫಂಡ್ ಮಾಡಲಾಗುತ್ತದೆ:
ಜಿಯೋ ಗಿಗಾಫೈಬರ್ ಸೇವೆಯನ್ನು ನೀವು ಡಿಸ್ಕನೆಕ್ಟ್ ಮಾಡಲು ಇಚ್ಛಿಸಿದ್ದಲ್ಲಿ ನೀವು ಇನ್ಸ್ಟಾಲ್ ಮಾಡಿಕೊಂಡಿರುವ ಡಿವೈಸ್ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಂಡೀಷನ್ ನಲ್ಲಿ ಇದ್ದಾಗ ನೀವು ಪಾವತಿ ಮಾಡಿರುವ 4,500 ರುಪಾಯಿ ಸೆಕ್ಯುರಿಟಿ ಡೆಪಾಸಿಟ್ ನ್ನು ಮರುಪಾವತಿ ಮಾಡಲಾಗುತ್ತದೆ.

ಜಿಯೋಗಿಗಾಫೈಬರ್ ಪ್ರಿಪೇಯ್ಡ್ :
ಸದ್ಯಕ್ಕೆ ಜಿಯೋಗಿಗಾಫೈಬರ್ ಸೇವೆಯು ಪ್ರಿಪೇಯ್ಡ್ ಆಗಿರುತ್ತದೆ. ಮುಂದಿನ ದಿನಗಳಲ್ಲಿ ಜಿಯೋಗಿಗಾಫೈಬರ್ ಪೋಸ್ಟ್ ಆಗುವ ಸಾಧ್ಯತೆ ಇದೆ.

ಗಿಗಾಫೈಬರ್ ನ ಪ್ರಿಪ್ಯೂ ಆಫರ್ ನ ಭಾಗವಾಗುವುದು ಹೇಗೆ?
ಆಸಕ್ತ ಗ್ರಾಹಕರು ಹತ್ತಿರದ ರಿಲಯನ್ಸ್ ಜಿಯೋ ಸ್ಟೋರ್ ಗೆ ಭೇಟಿ ನೀಡಿ ಮತ್ತು ನಿಮ್ಮ ಪ್ರದೇಶದಲ್ಲಿ ಲಭ್ಯವಿರುವ ಪ್ರಿವ್ಯೂ ಆಫರ್ ನ ಲಭ್ಯತೆಯನ್ನು ಪರೀಕ್ಷಿಸಿಕೊಳ್ಳಬಹುದು.

900 ನಗರದಲ್ಲಿ ಪ್ರಿವ್ಯೂ ಆಫರ್ ಲಭ್ಯವಿದೆ:
ಕಂಪೆನಿಯು ಸದ್ಯ ಜಿಯೋಗಿಗಾಫೈಬರ್ ಸೇವೆಯ ಟೆಸ್ಟಿಂಗ್ ನ್ನು ಸುಮಾರು 900 ಸಿಟಿ ಮತ್ತು ನಗರಗಳಲ್ಲಿ ನಡೆಸುತ್ತಿದೆ ಮತ್ತು ಕೆಲವು NCR ಪ್ರದೇಶವೂ ಕೂಡ ಆಗಿದೆ.

ಮೊದಲ ಹಂತದಲ್ಲಿ ಈ 29 ಸಿಟಿಗಳಲ್ಲಿ ಲಭ್ಯ:
ಹಲವಾರು ಆನ್ ಲೈನ್ ವರದಿಗಳ ಪ್ರಕಾರ ಭಾರತದ ಈ ಕೆಳಗಿನ 29 ಸಿಟಿಗಳಲ್ಲಿ ಪ್ರಾರಂಭಿಕವಾಗಿ ಗಿಗಾಫೈಬರ್ ಸೇವೆಯು ಲಭ್ಯವಿರುತ್ತದೆ. ಬೆಂಗಳೂರು, ಚೆನೈ,ಪುಣೆ, ಲಕ್ನೋ, ಕಾನ್ಪುರ, ರಾಯ್ ಪುರ, ನಾಗಪುರ, ಇಂಡೋರ್, ಥಾಣೆ, ಭೋಪಾಲ್, ಗಾಝಿಯಾಬಾದ್, ಲುದಿಯಾನ, ಕೊಯಂಬತ್ತೂರು, ಆಗ್ರಾ,ಮಧುರೈ, ನಾಸಿಕ್, ಫರಿದಾಬಾದ್, ಮೀರತ್, ರಾಜ್ಕೋಟ್, ಶ್ರೀನಗರ, ಅಮೃತಸರ, ಪಾಟ್ನಾ, ಅಲಹಾಬಾದ್, ರಾಂಚಿ, ಜೋಧಪುರ, ಕೋಟಾ, ಗೌಹಾಟಿ, ಚಂಡೀಘಡ ಮತ್ತು ಸೋಲಾಪುರ.


Click it and Unblock the Notifications








