ರಿಲಯನ್ಸ್ ಜಿಯೋ ಗಿಗಾಫೈಬರ್ : ಪ್ರಿವ್ಯೂ ಪ್ಲಾನ್ ಗಳು, ಆಫರ್ ಗಳು ಮತ್ತು ಇತ್ಯಾದಿ
ಇತ್ತೀಚೆಗೆ ಮುಖೇಶ್ ಅಂಬಾಲಿ ಮಾಲೀಕತ್ವದ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ತನ್ನ ಫೈಬರ್-ಟು-ದಿ-ಹೋಮ್(FTTH) ಬ್ರಾಡ್ ಬ್ಯಾಂಡ್ ಸೇವೆ ಜಿಯೋಗಿಗಾಫೈಬರ್ ಬಗ್ಗೆ ಕೆಲವು ಮಾಹಿತಿಗಳನ್ನು ಹೇಳಿದ್ದಾರೆ. ಅಪ್ ಡೇಟ್ ಗಳು, ಪ್ರೀವ್ಯೂ ಪ್ಲಾನ್ ಗಳು ಇತ್ಯಾದಿಗಳ ವಿವರ ಇಲ್ಲಿದೆ.

ಸದ್ಯಕ್ಕೆ ಮನವಿ ಪಡೆದ ಆಧಾರದಲ್ಲಿ ಜಿಯೋಗಿಗಾಫೈಬರ್ ಸೇವೆಯನ್ನು ಮನೆಗಳಿಗೆ ಕನೆಕ್ಟ್ ಮಾಡಲಾಗುತ್ತದೆ.
ಮನವಿಯನ್ನು ಎಷ್ಟು ಪಡೆದಿದ್ದೇವೆ ಎಂಬ ಅಗತ್ಯತೆಯ ಆಧಾರದಲ್ಲಿ ಸದ್ಯಕ್ಕೆ ಮನೆಗಳಿಗೆ ರಿಲಯನ್ಸ್ ಜಿಯೋಗಿಗಾಫೈಬರ್ ಸೇವೆಯನ್ನು ಕನೆಕ್ಟ್ ಮಾಡಲಾಗುತ್ತದೆ ಎಂದು ರಿಲಯನ್ಸ್ ಜಿಯೋ ಸಂಸ್ಥೆ ತಿಳಿಸಿದೆ.
1,400 ಸಿಟಿಗಳಲ್ಲಿ ಜಿಯೋಗಿಗಾಫೈಬರ್ ಸೇವೆಯನ್ನು ಕಂಪೆನಿಯು ಆಪ್ಟಿಮೈಜ್ ಮಾಡುತ್ತಿದೆ.

ಕೇಬಲ್ ಆಪರೇಟರ್ ಗಳ ಪಾಲು
ಕಳೆದ ತಿಂಗಳು ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಭಾರತದ ದೊಡ್ಡ ಕೇಬಲ್ ಆಪರೇಟರ್ ಗಳಾಗಿರುವ ಡೆನ್ ನೆಟ್ ವರ್ಕ್ಸ್ ಮತ್ತು ಹ್ಯಾಥ್ ವೇ ಕೇಬಲ್ & ಸಿಸಿಐ ನಿಂದ ಬಹುಪಾಲು ಪಾಲನ್ನು ಪಡೆದುಕೊಳ್ಳಲು ಮುಂದಾಗಿದೆ.
ವಯರ್ ಲೈನ್ ಬ್ರಾಡ್ ಬ್ಯಾಂಡ್ ಪ್ಲಾನ್ ಬೆಂಗಳೂರು, ಚೆನೈ, ಪುಣೆ, ಲಕ್ನೋ, ಕಾನ್ಪುರ, ರಾಯ್ ಪುರ ಮತ್ತು ಇತ್ಯಾದಿ ಸಿಟಿಗಳಲ್ಲಿ ಲಭ್ಯವಿದೆ.
ವರದಿಯೊಂದು ತಿಳಿಸುವಂತೆ ಜಿಯೋ ಗಿಗಾಫೈಬರ್ ಸೇವೆಯ ಮೊದಲ ಹಂತವಾಗಿ ಬೆಂಗಳೂರು, ಚೆನೈ, ಪುಣೆ, ಲಕ್ನೋ, ಕಾನ್ಪುರ, ರಾಯಪುರ, ನಾಗ್ಪುರ, ಇಂಡೋರ್, ಥಾಣೆ, ಭೋಪಾಲ್, ಗಾಝಿಯಾಬಾದ್, ಲುದಿಯಾನ, ಕೋಯಮತ್ತೂರ್, ಆಗ್ರಾಹ, ಮಧುರೈ, ನಾಸಿಕ್, ಫರಿದಾಬಾದ್, ಮೀರತ್, ರಾಜ್ ಕೋಟ್, ಶ್ರೀನಗರ, ಅಮೃತಸರ, ಪಾಟ್ನಾ, ಅಲಹಾಬಾದ್, ರಾಂಚಿ, ಜೋಧಪುರ, ಕೋಟಾ, ಗೌಹಾಣಿ, ಚಂಡೀಗಢ ಮತ್ತು ಸೋಲಾಪುರಗಳಲ್ಲಿ ಲಭ್ಯವಾಗುತ್ತದೆ.
ಕಳೆದ ವರ್ಷದ ಅಗಸ್ಟ್ 15 ರಂದು ಜಿಯೋ ಗಿಗಾಫೈಬರ್ ರಿಜಿಸ್ಟ್ರೇಷನ್ ಪ್ರಕ್ರಿಯೆ ಆರಂವಾಗಿದೆ.
ಕಂಪೆನಿಯ ಅಧಿಕೃತ ವೆಬ್ ಸೈಟ್ gigafiber.jio.com/registration. ನಲ್ಲಿ ಕಳೆದ ವರ್ಷದ ಅಗಸ್ಟ್ ನಿಂದಲೇ ರಿಜಿಸ್ಟ್ರೇಷನ್ ಪ್ರಕ್ರಿಯೆ ಆರಂಭವಾಗಿದೆ.

ಜಿಯೋಗಿಗಾಫೈಬರ್ ಸೇವೆ
ಜಿಯೋಗಿಗಾಫೈಬರ್ ಸೇವೆಯು ತನ್ನದೇ ಸ್ವಂತ ಜಿಯೋಗಿಗಾರೂಟರ್ ಹೆಸರಿನ ರೂಟರ್ ಬಂಡಲ್ ನೊಂದಿಗೆ ಬರುವ ಸಾಧ್ಯತೆ.
ಚಂದಾದಾರಿಗೆ ಸ್ಮಾರ್ಟ್ ರಿಮೋಟ್ ಜೊತೆಗೆತದೆ. ವಾಯ್ಸ್ ಕಮಾಂಡ್ ಗಳಿರುವ ರಿಮೋಟ್ ಸಿಗುವ ಸಾಧ್ಯತೆ
ಖರೀದಿದಾರರಿಗೆ ಸ್ಮಾರ್ಟ್ ರಿಮೋಟ್ ಉಚಿತವಾಗಿ ಸಿಗುವ ಸಾಧ್ಯತೆ ಇದೆ. ಈ ರಿಮೋಟ್ ವಾಯ್ಸ್ ಕಮಾಂಡ್ ಗಳಿಗೂ ಕೂಡ ಹಲವು ಭಾಷೆಗಳಲ್ಲಿ ಬೆಂಬಲ ನೀಡುವ ನಿರೀಕ್ಷೆ ಇದೆ.
ಬಳಕೆದಾರರಿಗೆ ಮೂರು ತಿಂಗಳ ಟ್ರಯಲ್ ನ್ನು ಈಗಾಗಲೇ ರಿಲಯನ್ಸ್ ಜಿಯೋ ಸಂಸ್ಥೆ ಆಫರ್ ಮಾಡುತ್ತಿದೆ. ಈ ಗಿಗಾಫೈಬರ್ ಪ್ರಿವ್ಯೂ ಆಫರ್ ನಲ್ಲಿ ಚಂದಾದಾರರಿಗೆ 300ಜಿಬಿ ಡಾಟಾ 90 ದಿನಗಳ ಅವಧಿಗೆ ಸಿಗುತ್ತದೆ ಜೊತೆಗೆ 100 ಜಿಬಿ ಪ್ರತಿ ತಿಂಗಳು ಉಚಿತವಾಗಿರುತ್ತದೆ.

ರಿಲಯನ್ಸ್ ಜಿಯೋ ಗಿಗಾಫೈಬರ್ ಪ್ರಿವ್ಯೂ ಆಫರ್
ರಿಲಯನ್ಸ್ ಜಿಯೋ ಹೇಳುವ ಪ್ರಕಾರ ಬಳಕೆದಾರರು 4ಕೆ ವೀಡಿಯೋಗಳನ್ನು ಮತ್ತು ವಿಆರ್ ಗೇಮ್ಸ್ ನ್ನು ಸ್ಟ್ರೀಮ್ ಮಾಡಬಹುದು, ಅಂದರೆ 1Gbps ಸ್ಪೀಡ್ ನಲ್ಲಿ ಇದು ಲಭ್ಯವಾಗುತ್ತದೆ.
ರಿಲಯನ್ಸ್ ಜಿಯೋ ಗಿಗಾಫೈಬರ್ ಪ್ರಿವ್ಯೂ ಆಫರ್ 4,500 ರುಪಾಯಿಯ ರೀಫಂಡ್ ಮಾಡಲಾಗುವ ಸೆಕ್ಯುರಿಟಿ ಡೆಪಾಸಿಟ್ ನಲ್ಲಿ ಲಭ್ಯವಾಗುತ್ತದೆ.
ಒಮ್ಮೆ ಪ್ರಿವ್ಯೂ ಆಫರ್ ಮುಗಿದ ನಂತರ ಜಿಯೋಗಿಗಾಫೈಬರ್ ನ್ನು ಚಂದಾದಾರರು ಕನೆಕ್ಷನ್ ಹಿಂದಿರುಗಿಸುವ ಆಯ್ಕೆಯನ್ನು ಹೊಂದಿರುತ್ತಾರೆ.
500 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡಬಹುದಾಗಿರುವ ಪ್ಯಾಕೇಜ್ ನಲ್ಲಿ ಜಿಯೋಗಿಗಾಫೈಬರ್ ಪ್ಯಾಕೇಜ್ ಗಳು ಲಭ್ಯವಾಗುತ್ತದೆ.


Click it and Unblock the Notifications








