ಜಿಯೋಫೋನ್ ಡ್ಯುಯಲ್ ಸಿಮ್ ಅಕ್ಟೋಬರ್ ನಿಂದ ಲಭ್ಯ
ಜಿಯೋಫೋನ್ ಆಗಸ್ಟ್ 24ರಿಂದ ಪ್ರಿ-ಬುಕಿಂಗ್ ಗೆ ಲಭ್ಯವಿದ್ದು ಅಕ್ಟೋಬರ್ ನಿಂದ ಜನರ ಕೈ ಸೇರಲಿದೆ. ಜಿಯೋಫೋನ್ ಸ್ಮಾರ್ಟ್ ಫೀಚರ್ ಫೋನಿನ ಬೆಲೆ ಕೇವಲ ರೂ 0
ಜನರ ಕುತೂಹಲವನ್ನು ಕೆರಳಿಸಿರುವ ಜಿಯೋಫೋನ್ ಆಗಸ್ಟ್ 24ರಿಂದ ಪ್ರಿ-ಬುಕಿಂಗ್ ಗೆ ಲಭ್ಯವಿದ್ದು ಕೆಲವೇ ತಿಂಗಳುಗಳಲ್ಲಿ ಜನರ ಕೈ ಸೇರಲಿದೆ.


ಕೆಲವೊಂದು ಪತ್ರಿಕಾ ವರದಿಗಳ ಅನುಸಾರ ಭಾರತೀಯ ಮೊಬೈಲ್ ಕಂಪೆನಿಗಳಾದ ಮೈಕ್ರೋಮ್ಯಾಕ್ಸ್ ಮತ್ತು ಇಂಟೆಕ್ಸ್ ಜಿಯೋಫೋನ್ ಅನ್ನು ತಯಾರಿಸಲಿದೆ.ರಿಲಯೆನ್ಸ್ ಈ ಕಂಪೆನಿಗಳೊಂದಿಗೆ ಜಿಯೋಫೋನ್ ತಯಾರಿಯ ಕುರಿತು ಮುಂದುವರೆದ ಮಾತುಕತೆಗಳಲ್ಲಿ ತೊಡಗಿದೆ.
ಜಿಯೋಫೋನ್ ಎಂಬ ಸ್ಮಾರ್ಟ್ ಫೀಚರ್ ಫೋನಿನ ಬೆಲೆ ಕೇವಲ ರೂ 0!! ಹೌದು..ನೀವು ರೂ 1500 ಸೆಕ್ಯೂರಿಟಿ ಡಿಪಾಸಿಟ್ ಇಟ್ಟು ಜಿಯೋಫೋನ್ ಅನ್ನು ಖರೀದಿಸಬಹುದು. 36 ತಿಂಗಳುಗಳ ನಂತರ ಈ ಮೊತ್ತವನ್ನು ಸಂಪೂರ್ಣವಾಗಿ ಹಿಂಪಡೆಯಬಹುದು.ಸಧ್ಯಕ್ಕೆ ಜಿಯೋಫೋನ್ ಸಿಂಗಲ್ ಸಿಮ್ ಫೀಚರ್ ಫೋನ್ ಆಗಿದ್ದು ಶೀಘ್ರದಲ್ಲಿಯೇ ಇದರ ಡ್ಯುಯಲ್ ಸಿಮ್ ಆವೃತ್ತಿಯೂ ಲಭ್ಯವಾಗಲಿದೆ.
'ದಿ ಮೊಬೈಲ್ ಇಂಡಿಯನ್' ನ ವರದಿಯೊಂದರ ಪ್ರಕಾರ ರಿಲಯೆನ್ಸ್ ಕಂಪೆನಿಯು ಜಿಯೋಫೋನ್ ನ ಡ್ಯುಯಲ್ ಸಿಮ್ ಆವೃತ್ತಿಯನ್ನು ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಲಿದೆ.
ಜಿಯೋಫೋನ್ ಡ್ಯುಯಲ್ ಸಿಮ್ ನ ಮೊದಲ ಸಿಮ್ ಕಾರ್ಡ್ ಸ್ಲಾಟ್ ಜಿಯೋ 4ಜಿ ಸಿಮ್ ಗೆ ಮಾತ್ರ ಮೀಸಲು. ಎರಡನೆಯ ಸಿಮ್ ಕಾರ್ಡ್ ಸ್ಲಾಟ್ ನಲ್ಲಿ ಯಾವುದೇ ಆಪರೇಟರ್ ನ 2ಜಿ ಸಿಮ್ ಬಳಸಬಹುದು.ನಿಮಗೆ ಜಿಯೋಫೋನ್ ನ ಕುರಿತು ಏನೇ ಸಂಶಯಗಳಿದ್ದರೂ ಜಿಯೋಫೋನ್ FAQ ಮೂಲಕ ಅದನ್ನು ಪರಿಹರಿಸಿಕೊಳ್ಳಬಹುದು.
ಜಿಯೋಫೋನ್ ಒಂದು ಫೀಚರ್ ಫೋನ್ ಆಗಿದ್ದರೂ ಕೂಡ ಅದರ ಕೆಲವು ವಿಶೇಷತೆಗಳು ಸ್ಮಾರ್ಟ್ ಫೋನ್ಗಳಿಗಿಂತ ಕಡಿಮೆ ಇಲ್ಲ. ಜಿಯೋಫೋನ್ ನ ವಾಯ್ಸ್ ಅಸಿಸ್ಟೆಂಟ್ ಫೀಚರ್ ಬಳಕೆದಾರರಿಗೆ ಮೊಬೈಲ್ ನೊಂದಿಗೆ ಸುಲಭವಾಗಿ ಇಂಟರ್ಯಾಕ್ಟ್ ಮಾಡಲು ಸಹಕಾರಿಯಾಗಿದೆ. ಅಲ್ಲದೆ ಸ್ಕ್ರೀನ್ ಮಿರರಿಂಗ್ ರೀತಿಯ ಫೀಚರ್ನೊಂದಿಗೆ ಕೇವಲ ರೂ 309ಕ್ಕೆ ಟಿವಿಯನ್ನು ಮೊಬೈಲ್ನೊಂದಿಗೆ ಕನೆಕ್ಟ್ ಮಾಡಿ ಕೇಬಲ್ ಟಿವಿ ವೀಕ್ಷಿಸಬಹುದು.


Click it and Unblock the Notifications








