1,095 ರೂ.ಪಾವತಿಸಿದರೆ ಉಚಿತ ಜಿಯೋಫೋನ್ ಮತ್ತು 6 ತಿಂಗಳು ಪೂರ್ತಿ ಸೇವೆ!!
ಜಿಯೋಫೋನ್ ಗ್ರಾಹಕರಿಗೆ ಸದ್ಯ ರೂ. 49 ಹಾಗೂ ರೂ. 153ರ ಎರಡು ಪ್ಲಾನುಗಳು ಲಭ್ಯವಿವೆ. ಇದಕ್ಕಿಂತ ಹೆಚ್ಚು ಡೇಟಾವನ್ನು ಕಡಿಮೆ ಬೆಲೆಯಲ್ಲಿ ಅಪೇಕ್ಷಿಸುವ ಅನೇಕ ಗ್ರಾಹಕ ಗ್ರಾಹಕರು ಇರಬಹುದೆಂದು ನಮಗೆ ತಿಳಿದಿದೆ. ಹಾಗಾಗಿ, ಜಿಯೋಫೋನ್ ಗ್ರಾಹಕರಿಗೆ ನಾವು ರೂ. 99 ಮತ್ತು ರೂ. 594 ಬೆಲೆಯ ಹೊಸ ಪ್ಲಾನ್ ಅನ್ನು ಪರಿಚಯಿಸುತ್ತಿದ್ದೇವೆ ಎಂದು ಜಿಯೋ ತಿಳಿಸಿದೆ.
ಹೌದು, ಗ್ರಾಹಕರ ಮಾಸಿಕ ವೆಚ್ಚವನ್ನು ನೇರವಾಗಿ ಬಹುತೇಕ ಅರ್ಧದಷ್ಟು ಕಡಿಮೆ ಮಾಡಲಿರುವ ಜಿಯೋ ಮಾನ್ಸೂನ್ ಆಫರ್ ಬಗ್ಗೆ ಜಿಯೋ ಪ್ರತಿನಿಧಿ ತಿಳಿಸಿದ್ದಾರೆ. ಹಳೆಯ ಫೀಚರ್ ಫೋನ್ ಗಳನ್ನು ಕೇವಲ 501 ವಾಸ್ತವಿಕ ಬೆಲೆಗೆ ಜಿಯೋ ಫೋನ್ ವಿನಿಮಯ ಮಾಡಿಕೊಳ್ಳುವ ನಿಟ್ಟಿನಲ್ಲಿ ಗ್ರಾಹಕರಿಗೆ ಈಗ ಭರ್ಜರಿ ಮಾನ್ಸೂನ್ ಆಫರ್ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮಾನ್ಸೂನ್ ಆಫರ್ ಅಂಗವಾಗಿ ಜಿಯೋ ಹೊಸದಾಗಿ 594 ರೂ. ಮತ್ತು 99 ರೂಪಾಯಿಗಳ ಎರಡು ಆಫರ್‌ಗಳನ್ನು ನೀಡಿದ್ದು, ಎರಡು ಆಫರ್‌ಗಳು ಗ್ರಾಹಕರಿಗೆ ಅತ್ಯುತ್ತಮ ಡೇಟಾವನ್ನು ಸಹ ಒಳಗೊಂಡಿವೆ ಎಂದು ಜಿಯೋ ಪ್ರತಿನಿಧಿ ತಿಳಿಸಿದ್ದಾರೆ. ಹಾಗಾದರೆ, ಜಿಯೋಫೋನಿಗೆ ಈಗ ಲಭ್ಯವಿರುವ ಆಫರ್‌ಗಳ ಬಗೆಗಿನ ಮಾಹಿತಿಯನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಎಕ್ಸ್‌ಚೇಂಜ್ ಫೋನ್ ಕೂಡ ಉಚಿತ!
ಹಳೆಯ ಫೀಚರ್ ಫೋನ್ ನೀಡಿ ನೂತನ ಜಿಯೋ ಫೋನ್ ಪಡೆಯುವಾಗ ಪಾವತಿಸುವ ಹಣವನ್ನು ಜಿಯೋ ಮತ್ತೆ ವಾಪಸ್ ಮಾಡುವುದಾಗಿ ತಿಳಿಸಿದೆ. ಈಗ ಪಾವತಿಸಿದ 501 ರೂಪಾಯಿಗಳನ್ನು ಡೆಪಾಸಿಟ್ ಎಂದು ಪರಿಗಣಿಸಲಾಗಿದ್ದು, ಮೂರು ವರ್ಷಗಳ ನಂತರ ಮತ್ತೆ 501 ರೂಪಾಯಿ ಹಣವನ್ನು ವಾಪಸ್ ನೀಡುವುದಾಗಿ ಜಿಯೋ ತಿಳಿಸಿದೆ.

ಜಿಯೋ 99 ರೂ. ಆಫರ್!
ಜಿಯೋ ಫೋನ್ ಬಳಕೆದಾರರಿಗೆ ಜಿಯೋ ನೀಡಿರುವ ಒಂದು ತಿಂಗಳ ವ್ಯಾಲಿಡಿಟಿ ಹೊಂದಿರುವ ಆಫರ್ ಇದಾಗಿದೆ. 99 ರೂಪಾಯಿಗಳ ರೀಚಾರ್ಜ್ ಮಾಡಿಸಿದರೆ ಒಂದು ತಿಂಗಳು ಅನ್‌ಲಿಮಿಟೆಡ್ ಕರೆ ಸೌಲಭ್ಯ ಹಾಗೂ ಪ್ರತಿದಿನ 300 ಎಸ್‌ಎಮ್‌ಎಸ್ ಹಾಗೂ ಪ್ರತಿದಿನ 0.5GB ಸ್ಪೀಡ್ ಡೇಟಾ ದೊರೆಯಲಿದೆ.

ಜಿಯೋ 594 ರೂ. ಆಫರ್!
ಜಿಯೋ ಫೋನ್ ಬಳಕೆದಾರರಿಗೆ ಜಿಯೋ 594 ರೂಪಾಯಿಗಳಿಗೆ ಆರು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರುವ ಆಫರ್ ನೀಡಿದೆ. ಒಮ್ಮೆ 594 ರೂಪಾಯಿಗಳ ರೀಚಾರ್ಜ್ ಮಾಡಿಸಿಕೊಂಡರೆ, ಆರು ತಿಂಗಳು ಅನ್‌ಲಿಮಿಟೆಡ್ ಕರೆ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಹಾಗೂ ಒಟ್ಟಾರೆ 90GB ಹೈಸ್ಪೀಡ್ ಡೇಟಾವನ್ನು ಈ ಆಫರ್ ಒಳಗೊಂಡಿದೆ.

ಜಿಯೋ ಫೋನ್ ಎಕ್ಸ್‌ಚೇಂಜ್ ಹೇಗೆ?
ಕಳೆದ 3.5 ವರ್ಷಗಳ (2015) ಒಳಗೆ ಖರೀದಿಸಿದ ನಿಮ್ಮ ಹಳೆಯ ಫೀಚರ್ ಮೊಬೈಲ್ ಫೋನ್ ಕೆಲಸ ಮಾಡುತ್ತಿದ್ದರೆ, ಅದನ್ನು ಯಾವುದೇ ಜಿಯೋ ಸ್ಟೋರ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಜಿಯೋ ಫೋನ್ ವಿನಿಮಯ ಮಾಡಿಕೊಳ್ಳುವಾಗ ಡೆಪಾಸಿಟ್ ಹಣವೆಂದು 501 ರೂ. ಹಣವನ್ನು ಮಾತ್ರ ಪಾವತಿಸಬೇಕಿದೆ.

ಆಗಸ್ಟ್ 15 ಕ್ಕೆ ಅಪ್‌ಡೇಟ್!
ಜನಪ್ರಿಯ ಆಪ್‌ಗಳಾದ ಫೇಸ್‌ಬುಕ್, ವಾಟ್ಸ್‌ಆಪ್ ಮತ್ತು ಯೂಟ್ಯೂಬ್‌ಗಳನ್ನು ಸಹ ಈಗ ಜಿಯೋ ಫೋನಿನಲ್ಲಿ ಬಳಸಬಹುದಾಗಿದ್ದು, ಆಗಸ್ಟ್ 15 ಕ್ಕೆ ಜಿಯೋ ಫೋನ್ ಅಪ್‌ಡೇಟ್ ಆಗಲಿದೆ ಎಂದು ಜಿಯೋ ತಿಳಿಸಿದೆ. ಹಳೆಯ ಮತ್ತು ಈಗ ನೀಡಿರುವ ಎಲ್ಲಾ ಫೋನ್‌ಗಳಲ್ಲಿಯೂ ಹೊಸ ಅಪ್‌ಡೇಟ್ ಸಿಗಲಿದೆ ಎಂದು ಜಿಯೋ ಸ್ಪಷ್ಟಪಡಿಸಿದೆ.


Click it and Unblock the Notifications








