ಜಿಯೋ ಫೋನ್ ಹಿಂದಿರುಗಿಸುವುದು ನೀವೆಂದು ಕೊಂಡಷ್ಟು ಸುಲಭವಲ್ಲ..!!
ಮಾಹಿತಿಯ ಪ್ರಕಾರ ಜಿಯೋ ಫೋನಿನ ತಯಾರಿಕೆಯ ಬೆಲೆಯೂ ರೂ. 4500ರ ಅಸುಪಾಸಿನಲ್ಲಿದ್ದು, ಈ ಹಿನ್ನಲೆಯಲ್ಲಿ ಮೂರು ವರ್ಷಕ್ಕೂ ಮುಂಚೆಯೇ ನೀವು ಜಿಯೋ ಫೋನ್ ಅನ್ನು ವಾಪಸ್ಸು ಮಾಡುವ ಮನಸ್ಸು ಮಾಡಿದೆ ನೀವು ಅಧಿಕ ಪ್ರಮಾಣದ ಹಣವನ್ನ ಪಾವತಿ ಮಾಡಬೇಕಾಗಿದೆ.
ರಿಲಯನ್ಸ್ ಮಾಲಿಕತ್ವದ ಜಿಯೋ ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ದೀಪಾವಳಿಗೂ ಮುನ್ನವೇ ಸುಮಾರು 60 ಲಕ್ಷ ಜಿಯೋ ಫೋನ್‌ಗಳು ಬಳಕೆದಾರರ ಕೈ ಸೇರಲಿದೆ ಎನ್ನಲಾಗಿದೆ. ಅಲ್ಲದೇ ಈ ಫೋನ್ ಸಂಪೂರ್ಣ ಉಚಿತವಾಗಿದ್ದು, ಗ್ರಾಹಕರು ರೂ.1500ಅನ್ನು ಭದ್ರತಾ ಠೇವಣಿಯನ್ನಾಗಿ ಇಡಬೇಕಾಗಿದೆ. ಇದನ್ನು ಮೂರು ವರ್ಷದ ನಂತರ ವಾಪಸ್ಸು ಪಡೆಯಬಹುದಾಗಿದೆ.

ಈಗಾಗಲೇ ದೊರೆತಿರುವ ಮಾಹಿತಿಯ ಪ್ರಕಾರ ಜಿಯೋ ಫೋನಿನ ತಯಾರಿಕೆಯ ಬೆಲೆಯೂ ರೂ. 4500ರ ಅಸುಪಾಸಿನಲ್ಲಿದ್ದು, ಈ ಹಿನ್ನಲೆಯಲ್ಲಿ ಮೂರು ವರ್ಷಕ್ಕೂ ಮುಂಚೆಯೇ ನೀವು ಜಿಯೋ ಫೋನ್ ಅನ್ನು ವಾಪಸ್ಸು ಮಾಡುವ ಮನಸ್ಸು ಮಾಡಿದೆ ನೀವು ಅಧಿಕ ಪ್ರಮಾಣದ ಹಣವನ್ನ ಪಾವತಿ ಮಾಡಬೇಕಾಗಿದೆ.

ಜಿಯೋ ಪೋನ್ ಟರ್ಮ್ಸ್ ಅಂಡ್ ಕಂಡಿಷನ್:
ಈಗಾಗಲೇ ಜಿಯೋ ಫೋನ್ ಮಾರುಕಟ್ಟೆಗೆ ಕಾಲಿಟ್ಟಿರುವ ಹಿನ್ನಲೆಯಲ್ಲಿ ಜಿಯೋ ಈ ಫೋನ್ ಹಿಂಪಡೆಯುವ ಬಗ್ಗೆ ಮಾಹಿತಿಯನ್ನು ಹೊರ ಹಾಕಿದ್ದ, ಅವಧಿಗೂ ಮುನ್ನವೇ ಫೋನ್ ಅನ್ನು ಹಿಂತಿರುಗಿಸಿಸುವವರು ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗಿದೆ.

ಜಿಯೋ ಫೋನ್ ರೂಟ್ ಮಾಡಬೇಡಿ:
ಜಿಯೋ ಫೋನ್ ಅನ್ನು ಹಿಂದಿರುಗಿಸುವ ಪ್ಲಾನ್ ಇದ್ದರೇ ನೀವು ಅದನ್ನು ರೂಟ್ ಮಾಡುವುದಾಗಲಿ, ಇಂಜಿನಿಯರಿಂಗ್ ಬದಲಾಯಿಸುವುದನ್ನು ಮಾಡಬೇಡಿ. ಹಾಗೇನಾದರು ಮಾಡಿದರೆ ನೀವು ದಂಡ ಕಟ್ಟಬೇಕಾಗುತ್ತದೆ.

ಬೇಗನೇ ಹಿಂದಿರುಗಿಸಬೇಕಾದರೆ?
ನೀವು ಫೋನ್ ಅನ್ನು ಬೇಗನೇ ಹಿಂದಿರುಗಿಸಬೇಕಾಗಿದೆ ನೀವು ಕಂಪನಿಯೂ ರೂ. 1500+ ಟ್ಯಾಕ್ಸ್ ಅನ್ನು ಹೆಚ್ಚುವರಿಯಾಗಿ ವಿಧಿಸಲಿಸದೆ. ಒಟ್ಟಿನಲ್ಲಿ ಮೂರು ವರ್ಷದ ನಂತರವಷ್ಟೆ ನೀವು ಪೋನ್ ಅನ್ನು ಹಿಂದಿರುಗಿಸಬಹುದಾಗಿದೆ.

ಡ್ಯಾಮೆಜ್ ಆಗಿದ್ದರೇ ಹಣ ಸಿಗಲ್ಲ:
ಇದಲ್ಲದೇ ನಿಮ್ಮ ಜಿಯೋ ಫೋನ್ ಸಣ್ಣ ಡ್ಯಾಮೆಜ್ ಆಗಿದ್ದರೂ ಸಹ ನಿಮ್ಮ ಹಣವೂ ವಾಪಸ್ಸು ದೊರೆಯುವುದಿಲ್ಲ ಎನ್ನಲಾಗಿದೆ. ಇದನ್ನು ಈಗಾಗಲೇ ಟರ್ಮ್ಸ್ ಅಂಡ್ ಕಂಡಿಷನ್ ನಲ್ಲಿ ಒತ್ತಿ ಹೇಳಲಾಗಿದೆ.


Click it and Unblock the Notifications








