ಜಸ್ಟ್ ಡಯಲ್‌ ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ಮುಖೇಶ್‌ ಅಂಬಾನಿ!

|

ರಿಲಯನ್ಸ್‌ ಇಂಡಸ್ಟ್ರಿಸ್‌ ಸರ್ಚ್‌ ಮತ್ತು ಡೇಟಾಬೇಸ್‌ ಸಂಸ್ಥೆ ಜಸ್ಟ್‌ ಡಯಲ್‌ ಅನ್ನು ತನ್ನ ಹಿಡತಕ್ಕೆ ತೆಗೆದುಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ತನ್ನ ರಿಟೇಲ್ ಆರ್ಮ್ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಮೂಲಕ ಜಸ್ಟ್ ಡಯಲ್ ನಲ್ಲಿ ನಿಯಂತ್ರಣ ಪಾಲನ್ನು 3,497 ಕೋಟಿ ರೂ.ಗಳಿಗೆ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಪ್ರಕಟಿಸಿದೆ. ಈ ಮೂಲಕ ಮುಖೇಶ್ ಅಂಬಾನಿ ಒಡೆತನದ ಕಂಪನಿಯು ಶೇಕಡಾ 40.95 ರಷ್ಟು ಪಾಲನ್ನು ಹೊಂದಿದ್ದು, ಸ್ವಾಧೀನದ ನಿಯಮಗಳಿಗೆ ಅನುಸಾರವಾಗಿ ಶೇಕಡಾ 26 ರವರೆಗೆ ಸ್ವಾಧೀನಪಡಿಸಿಕೊಳ್ಳಲು ಮುಕ್ತ ಪ್ರಸ್ತಾಪವನ್ನು ನೀಡಿದೆ.

ರಿಲಯನ್ಸ್‌

ಹೌದು, ರಿಲಯನ್ಸ್‌ ಇಂಡಸ್ಟ್ರಿಸ್‌ ಇದೀಗ ಸರ್ಚ್‌ ಡೇಟಾಬೇಸ್‌ ಜಸ್ಟಡಯಲ್‌ ಮೇಲೆ ಕಣ್ಣಿಟ್ಟಿದ್ದು, ತನ್ನ ಹಿಡತಕ್ಕೆ ತೆಗೆದುಕೊಂಡಿದೆ. ಸದ್ಯ ಜಸ್ಟ ಡಯಲ್‌ನಲ್ಲಿ 40.95 ರಷ್ಟು ಷೇರುಗಳನ್ನು ರಿಲಯನ್ಸ್‌ ಇಂಡಸ್ಟ್ರಿಸ್‌ ಪಡೆದುಕೊಂಡಿದೆ. ಇನ್ನು ಮುಂದಿನ ಹಂತದ ಬೆಳವಣಿಗೆಯ ಮೂಲಕ ಜಸ್ಟ್ ಡಯಲ್ ಅನ್ನು ಮುನ್ನಡೆಸಲು ವಿಎಸ್ಎಸ್ ಮಣಿ ಶಾಲ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕರಾಗಿ ಮುಂದುವರಿಯಲಿದ್ದಾರೆ ಎಂದು ರಿಲಯನ್ಸ್ ರಿಟೇಲ್ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗಾದ್ರೆ ಜಸ್ಟ್‌ ಡಯಲ್‌ ನಲ್ಲಿ ರಿಲಯನ್ಸ್‌ ಇಂಡಸ್ಟ್ರಿ ಹೂಡಿಕೆ ಮಾಡಲು ಕಾರಣ ಏಣು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೇಟಾಬೇಸ್‌

ಸರ್ಚ್‌ ಮತ್ತು ಡೇಟಾಬೇಸ್‌ ಸಂಸ್ಥೆಯಾಗಿರುವ ಜಸ್ಟ್‌ಡಯಲ್‌ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಸಂಸ್ಥೆಯಾಗಿದೆ. ಈಗಾಗಲೇ ಸ್ಥಳಗಳನ್ನು ಸರ್ಚ್‌ ಮಾಡುವುದು, ಗ್ರಾಹಕರಿಗೆ ಅಗತ್ಯ ಡೇಟಾ ಬೇಸ್‌ ನೀಡುವುದಕ್ಕೆ ಜಸ್ಟ ಡಯಲ್‌ ಜನಪ್ರಿಯತೆ ಪಡೆದಿದೆ. ರಿಲಯನ್ಸ್‌ ಜಿಯೋ ಮೂಲಕ ಟೆಲಿಕಾಂ ವಲಯದಲ್ಲಿ ಕ್ರಾಂತಿಯನ್ನೇ ಮಾಡಿದೆ. ಇದೀಗ ಜಸ್ಟ ಡಯಲ್‌ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರಿಂದ ಜಿಯೋ ಪ್ರಾಬಲಲ್ಯವನ್ನು ಇನ್ನಷ್ಟು ವಲಯಗಳಿಗೆ ವಿಸ್ತರಿಸಲು ಸಾಧ್ಯವಾಗಲಿದೆ.

ಅಂಬಾನಿ

ಈ ವಹಿವಾಟಿನ ಕುರಿತು ಮಾತನಾಡಿದ ಆರ್‌ಆರ್‌ವಿಎಲ್‌ನ ನಿರ್ದೇಶಕಿ ಇಶಾ ಅಂಬಾನಿ, "ಜಸ್ಟ್ ಡಯಲ್‌ನಲ್ಲಿನ ಹೂಡಿಕೆಯು ನಮ್ಮ ಲಕ್ಷಾಂತರ ಪಾಲುದಾರ ವ್ಯಾಪಾರಿಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ಹೊಸ ವಾಣಿಜ್ಯಕ್ಕೆ ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತದೆ. ನಾವು ವ್ಯವಹಾರವನ್ನು ಮತ್ತಷ್ಟು ವಿಸ್ತರಿಸುವುದರಿಂದ ಜಸ್ಟ್ ಡಯಲ್‌ನ ಹೆಚ್ಚು ಅನುಭವಿ ನಿರ್ವಹಣಾ ತಂಡದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಬೆಳವಣಿಗೆ

ಇನ್ನು " ಆರ್‌ಆರ್‌ವಿಎಲ್‌ನಿಂದ ತುಂಬಿದ ಬಂಡವಾಳವು ಜಸ್ಟ್ ಡಯಲ್‌ನ ಬೆಳವಣಿಗೆ ಮತ್ತು ವಿಸ್ತರಣೆಯನ್ನು ಸಮಗ್ರ ಸ್ಥಳೀಯ ಪಟ್ಟಿ ಮತ್ತು ವಾಣಿಜ್ಯ ವೇದಿಕೆಯತ್ತ ಸಾಗಿಸಲು ಸಹಾಯ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ. ಇನ್ನು ಈ ಹೂಡಿಕೆಗಳು ಜಸ್ಟ್ ಡಯಲ್‌ನ ಅಸ್ತಿತ್ವದಲ್ಲಿರುವ 30.4 ಮಿಲಿಯನ್ ಪಟ್ಟಿಗಳ ಡೇಟಾಬೇಸ್ ಮತ್ತು ಅದರ ಅಸ್ತಿತ್ವದಲ್ಲಿರುವ 129.1 ಮಿಲಿಯನ್ ತ್ರೈಮಾಸಿಕ ಅನನ್ಯ ಬಳಕೆದಾರರ (ಮಾರ್ಚ್ 31, 2021 ರಂತೆ) ಗ್ರಾಹಕರ ದಟ್ಟಣೆಯನ್ನು ನಿಯಂತ್ರಿಸುತ್ತದೆ ಎಂದು ಅದು ಹೇಳಿದೆ.

Most Read Articles
Best Mobiles in India

English summary
Oil-to-telecoms conglomerate Reliance Industries's retail arm is buying a nearly 41 percent stake in search and database firm Just Dial for Rs. 3,497 crores, the companies said late on Friday.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X