ದೇಶದಲ್ಲಿ ಹೆಚ್ಚಾಯ್ತು 'ಮೊಬೈಲ್ ಪೋರ್ಟೆಬಿಲಿಟಿ' ಟ್ರೆಂಡ್!

|

ಒಂದು ಟೆಲಿಕಾಂ ಕಂಪನಿಯಿಂದ ಇನ್ನೊಂದು ಟೆಲಿಕಾಂ ಕಂಪನಿಯ ಸೇವೆಗೆ ಬದಲಾಯಿಸಿಕೊಳ್ಳಬಹುದಾದ ಮೊಬೈಲ್ ಪೋರ್ಟೆಬಿಲಿಟಿ ಟ್ರೆಂಡ್ ಇದೀಗ ಹೆಚ್ಚಾಗಿದೆ. ಟೆಲಿಕಾಂ ಕಂಪೆನಿಗಳ ಸೇವೆ ಮತ್ತು ಆಧ್ಯತೆಗೆ ಅನುಗುಣವಾಗಿರುವ ಮೊಬೈಲ್ ಪೋರ್ಟೆಬಿಲಿಟಿ ಮಾಡಿಕೊಳ್ಳಬಹುದಾಗಿದ್ದು, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಪ್ ಇಂಡಿಯಾ ಇತ್ತೀಚೆಗೆ ಬಿಡುಗಡೆ ಮಾಡಿರುವ ದಾಖಲೆಗಳ ಪ್ರಕಾರ, ಕಳೆದ ಮೇ ತಿಂಗಳಿನಲ್ಲೊಂದೇ 41.8 ಲಕ್ಷ ಸಂಖ್ಯೆಗಳಿಗೆ ಪೋರ್ಟೆಬಿಲಿಟಿ ನೀಡಲಾಗಿದೆ.

ದೇಶದಲ್ಲಿ ಹೆಚ್ಚಾಯ್ತು 'ಮೊಬೈಲ್ ಪೋರ್ಟೆಬಿಲಿಟಿ' ಟ್ರೆಂಡ್!

ಹೌದು, ಟೆಲಿಕಾಂ ಕಂಪನಿಗಳು ಸ್ಪರ್ಧೆಗೆ ಬಿದ್ದಿರುವುದರಿಂದ ಮೊಬೈಲ್ ಪೋರ್ಟೆಬಿಲಿಟಿ ಟ್ರೆಂಡ್ ಹೆಚ್ಚಿದೆ. ಕಳೆದ ಆರ್ಥಿಕ ವರ್ಷದ ಆರಂಭದಿಂದ ಮೇ ತಿಂಗಳವರೆಗೆ 4371 ಲಕ್ಷ ಮೊಬೈಲ್ ಪೋರ್ಟೆಬಿಲಿಗಳು ಏರ್ಪಟ್ಟಿವೆ. ಇದರಲ್ಲಿ ಶೇ.33.36ರಷ್ಟು ಭಾಗವನ್ನು ವೊಡಾಫೋನ್ ಐಡಿಯಾ ಸಂಸ್ಥೆ ಹೊಂದಿದ್ದರೆ, ರಿಲಯನ್ಸ್ ಜಿಯೋ ಶೇ.27.80ರಷ್ಟು, ಭಾರ್ತಿ ಏರ್‌ಟೆಲ್ ಶೇ.27.58 ರಷ್ಟು ಹಾಗೂ ಬಿಎಸ್​ಎನ್​ಎನ್ ಶೇ.9.98ರಷ್ಟು ಭಾಗವನ್ನು ಹೊಂದಿದೆ ಎಂದು ಟ್ರಾಯ್ ರಿಪೋರ್ಟ್ ತಿಳಿಸಿದೆ.

ಕೆಲ ಟೆಲಿಕಾಂ ಕಂಪೆನಿಗಳು ಕನಿಷ್ಟ ರೀಚಾರ್ಜ್ ನಿಯಮವನ್ನು ಜಾರಿಗೆ ತಂದಿರುವುದು ಮೊಬೈಲ್ ಪೋರ್ಟೆಬಿಲಿಟಿಗೆ ಹೆಚ್ಚು ಒತ್ತು ನೀಡುತ್ತಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಟೆಲಿಕಾಂ ಕ್ಷೇತ್ರದಲ್ಲಿ ನಡೆಯುತ್ತಿರುವ ಸ್ಪರ್ಧೆಯಿಂದಾಗಿ ಮೊಬೈಲ್ ಪೋರ್ಟೆಬಿಲಿಟಿ ಮತ್ತಷ್ಟು ಹೆಚ್ಚುವ ಸಂಭವವಿದೆ ಎಂದು ಟೆಲಿಕಾಂ ತಜ್ಞರು ಹೇಳಿದ್ದಾರೆ. ಹಾಗಾದರೆ, ಒಂದು ಟೆಲಿಕಾಂ ಕಂಪನಿಯಿಂದ ಇನ್ನೊಂದು ಟೆಲಿಕಾಂ ಕಂಪನಿಯ ಸೇವೆಗೆ ಬದಲಾಯಿಸಿಕೊಳ್ಳಬಹುದು ಎಂಬುದನ್ನು ಮುಂದೆ ಓದಿ ತಿಳಿಯಿರಿ.

"1900" ಗೆ ಮೆಸೇಜ್ ಮಾಡಿ.

ಒಂದು ಟೆಲಿಕಾಂ ಕಂಪೆನಿಯಿಂದ ಮತ್ತೊಂದು ಟೆಲಿಕಾಂ ಕಂಪೆನಿಗೆ ಪೋರ್ಟ್ ಆಗಲು, ನಿಮ್ಮ ಮೊಬೈಲ್ ಸಂಖ್ಯೆಯಿಂದ 'PORT' ಎಂದು ದಪ್ಪ ಅಕ್ಷರಗಳಲ್ಲಿ ಟೈಪ್‌ ಮಾಡಿ. ನಂತರ ಒಂದು ಸ್ಪೇಸ್ ಬಿಟ್ಟು ನಿಮ್ಮ ಪ್ರಸ್ತುತ ಬಳಸುತ್ತಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ. ನಂತರ "1900"ಗೆ ಮೆಸೇಜ್ ಮಾಡಿ. ಉದಾ: (PORT 84960**522)

"1901" ನಂಬರ್‌ನಿಂದ ಮೆಸೇಜ್ ಬರುತ್ತದೆ.

ನೀವು ಹೀಗೆ (PORT 84960**522) ಪೋರ್ಟ್ ಎಂದು ''1900"ಗೆ ಮೆಸೇಜ್ ಮಾಡಿದ ನಂತರ, ನಿಮ್ಮ ಮಾಹಿತಿ ಸರಿಯಾಗಿದ್ದಲ್ಲಿ ನಿಮ್ಮ ಮೊಬೈಲ್‌ಗೆ ತಕ್ಷಣವೇ ಸಂದೇಶವೊಂದು ವಾಪಸ್ ಬರಲಿದೆ. ನೀವು ''1900" ಮೆಸೇಜ್ ಸೆಂಡ್ ಮಾಡಿದರೆ, "1901" ನಂಬರ್‌ನಿಂದ ನಿಮ್ಮ ಮನವಿಯನ್ನು ವೆರಿಫೈ ಮಾಡಲು ಟೆಲಿಕಾಂ ಕಂಪೆನಿಯು ಸಂದೇಶದ ಮೂಲಕ ತಿಳಿಸುತ್ತದೆ.

ಯುನಿಕ್ ಪೋರ್ಟಲ್ ಕೋಡ್ ಪಡೆಯಿರಿ.

ಯುನಿಕ್ ಪೋರ್ಟಲ್ ಕೋಡ್ ಪಡೆಯಿರಿ.

ನೀವು ಸಿಮ್ ಬಳಸುತ್ತಿರುವ ಟೆಲಿಕಾಂ ನಿಮ್ಮ ಮನವಿಯನ್ನು ವೆರಿಫೈ ಮಾಡಿದ ನಂತರ, ನಿಮಗೆ ಕೆಲವು ಗಂಟೆಗಳ ಒಳಗಾಗಿ ಯುನಿಕ್ ಪೋರ್ಟಲ್ ಕೋಡ್ ಬರುತ್ತದೆ. ಈ ಕೋಡ್ ಮೂಲಕ ನೀವು ನಿಮ್ಮ ಸಿಮ್ ಅನ್ನು ಇತರೆ ಯಾವುದೇ ಟೆಲಿಕಾಂ ಕಂಪೆನಿಯೊಂದಿಗೆ ಬದಲಾಯಿಸಿಕೊಳ್ಳಬಹುದಾಗಿದೆ. ಈಗ ಈ ಪ್ರಕ್ರಿಯೆ ಅತ್ಯಂತ ಸುಲಭವಾಗಿದೆ.

ಟೆಲಿಕಾಂ ಸ್ಟೋರ್‌ಗೆ ಭೇಟಿ ನೀಡಿ.

ಟೆಲಿಕಾಂ ಸ್ಟೋರ್‌ಗೆ ಭೇಟಿ ನೀಡಿ.

ಒಮ್ಮೆ ನೀವು ಈ ಯುನಿಕ್ ಪೋರ್ಟಲ್ ಕೋಡ್ ಪಡೆದ ನಂತರ, ನಿಮ್ಮ ಎರಡು ಭಾವಚಿತ್ರ ಮತ್ತು ನಿಮ್ಮ ಆಧಾರ್ ಐಡಿ ತೆಗೆದುಕೊಂಡು ನೀವು ಪೋರ್ಟ್ ಆಗಬೇಕಿರುವ ಯಾವುದೇ ಟೆಲಿಕಾಂ ಸ್ಟೋರ್‌ಗೆ ಭೇಟಿ ನೀಡಿ( ಸಾಮಾನ್ಯ ಅಂಗಡಿಗಳಲ್ಲೂ ಸಾಧ್ಯ). ನಂತರ ಅವರಿಗೆ ನೀವು ಪಡೆದಿರುವ ಯುನಿಕ್ ಪೋರ್ಟಲ್ ಕೋಡ್ ನೀಡಿ ಪೋರ್ಟ್ ಮಾಡುವಂತೆ ಕೇಳಿಕೊಳ್ಳಿ.

ನೀವು ಪೋರ್ಟ್ ಆಗುತ್ತೀರಾ!

ನೀವು ಪೋರ್ಟ್ ಆಗುತ್ತೀರಾ!

ನೀವು ಸೂಚಿಸಿದ ಬೇರೊಂದು ಟೆಲಿಕಾಂ ಕಂಪೆನಿಗೆ ಬದಲಾಯಿಸಲು ಯುನಿಕ್ ಪೋರ್ಟಲ್ ಕೋಡ್ ಮತ್ತು ನಿಮ್ಮ ಆಧಾರ್ ಐಡಿಯನ್ನು ನೀಡಿದ ನಂತರ ನಿಮ್ಮ ಮೊಬೈಲ್ ನಂಬರ್ ಬೇರೊಂದು ಟೆಲಿಕಾಂ ಕಂಪೆನಿಗೆ ಪೋರ್ಟ್ ಆಗುತ್ತದೆ. ಮೊದಲು ಈ ಪ್ರಕ್ರಿಯೆ ಮುಗಿಯಲು ಹೆಚ್ಚು ದಿನ ಬೇಕಾಗುತ್ತಿದ್ದು, ಆದರೆ, ಈಗ ಕೇವಲ ಎರಡು ದಿನಗಳು ಸಾಕು.!

Most Read Articles
Best Mobiles in India

English summary
Requests for mobile number portability (MNP) in may mobile number portability, data from the Telecom Regulatory Authority of India (Trai). to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X