Subscribe to Gizbot

24 ಗಂಟೆಯಲ್ಲಿ ಮನೆ ಕಟ್ಟುವ ಹೊಸ 3ಡಿ ಪ್ರಿಂಟರ್‌!

Written By:

3ಡಿ ಪ್ರಿಂಟರ್‌ ಬಂದ ಮೇಲೆ ಮೊಬೈಲ್‌ ಕವರ್‌,ಕಾರು,ರೈಫಲ್‌ ಪ್ರಿಂಟ್‌ ಮಾಡುವುದು ಹಳೇದಾಯಿತು.ಇನ್ನು ಮುಂದೆ ಸಂಪೂರ್ಣ‌ ಮನೆ,ಕಟ್ಟಡವನ್ನು ಪ್ರಿಂಟ್‌ ಮಾಡಬಹುದು!

ಹೌದು.ಮುಂದಿನ ದಿನದಲ್ಲಿ 2500 ಚದರಡಿ ವಿಸ್ತೀರ್ಣದವರೆಗಿನ ಮನೆಯನ್ನು ಒಂದೇ ದಿನದಲ್ಲಿ ನಿರ್ಮಾಣ ಮಾಡಿದರೂ ಆಶ್ಚರ್ಯ‌ವಿಲ್ಲ. ಇಷ್ಟು ದೊಡ್ಡ ಮನೆಯನ್ನು ನಿರ್ಮಿಸುವ ಹೊಸ 3ಡಿ ಪ್ರಿಂಟರ್‌ ತಂತ್ರಜ್ಞಾನ ಒಂದನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕ Behrokh Khoshnevis ಅಭಿವೃದ್ಧಿ ಪಡಿಸುತ್ತಿದ್ದಾರೆ.

ಪದರ ಪದರವಾಗಿ ಒಂದೇ ದಿನದಲ್ಲಿ ಮನೆ ಕಟ್ಟುವ ಕ್ರಾಂತಿಕಾರಕ ಕಂಟೂರ್‌ ಕ್ರಾಫ್ಟಿಂಗ್‌ ತಂತ್ರಜ್ಞಾನ ಇದಾಗಿದ್ದು,ಕಂಪ್ಯೂಟರ್‌ ಮೂಲಕ ನಿಯಂತ್ರಿಸಿ ಮನೆ ಕಟ್ಟಬಹುದು ಎಂದು ಹೇಳಿದ್ದಾರೆ.

ಮುಂದಿನ ಪುಟದಲ್ಲಿ ಈ ಹೊಸ ತಂತ್ರಜ್ಞಾನದ ಮಾಹಿತಿ, ಈ ಯಂತ್ರ ಹೇಗೆ ಮನೆ ನಿರ್ಮಿಸುತ್ತದೆ ಎಂದು ತೋರಿಸುವ ವಿಡಿಯೋ ನೀಡಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಏನಿದು ತಂತ್ರಜ್ಞಾನ?

1


ಕಂಟೂರ್‌ ಕ್ರಾಫ್ಟಿಂಗ್‌ ಎಂಬ ಪದರ ಪದರವಾದ ಫ್ಯಾಬ್ರಿಕೇಶನ್‌ ತಂತ್ರಜ್ಞಾನ ಇದಾಗಿದ್ದು,ಈ ಯಂತ್ರದಲ್ಲಿರುವ ಮೂತಿ ಮಿಶ್ರಣವನ್ನು ಚಿಮುಕಿಸುತ್ತಾ ಮನೆ ನಿರ್ಮಿಸುತ್ತದೆ.

 ಕಡಿಮೆ ಸಂಖ್ಯೆಯ ಕಾರ್ಮಿ‌ಕರು ಸಾಕು!

2


ನೂರಾರು ಜನರು ಮಾಡುವ ಕೆಲಸವನ್ನು ಈ ಒಂದೇ ಯಂತ್ರ ಮಾಡುತ್ತದೆ. ಹೀಗಾಗಿ ಭವಿಷ್ಯದಲ್ಲಿ ಈ ತಂತ್ರಜ್ಞಾನ ಕಟ್ಟಡ ನಿರ್ಮಾಣದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

 ಕಡಿಮೆ ಖರ್ಚಿನಲ್ಲಿ ಮನೆ!

3


ಈ ಕ್ರೈನ್‌ ಯಂತ್ರವನ್ನು ಬೇಕಾದ ಎತ್ತರಕ್ಕೆ ನಿಲ್ಲಿಸಿ ಕಡಿಮೆ ಖರ್ಚಿನಲ್ಲಿ,ಕಡಿಮೆ ದಿನದಲ್ಲಿ ಮನೆ ಮತ್ತು ದೊಡ್ಡ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೂ ಬಳಸಬಹುದು.

 ಮಾಲಿನ್ಯ ಪ್ರಮಾಣ ತಗ್ಗಿಸಬಹುದು!

4


ಈ ತಂತ್ರಜ್ಞಾನದಿಂದಾಗಿ ನಿರ್ಮಾಣ ಕ್ಷೇತ್ರದಲ್ಲಿ ಮಾಲಿನ್ಯ ಪ್ರಮಾಣವನ್ನು ತಗ್ಗಿಸಬಹುದು ಜೊತೆಗೆ ಕಡಿಮೆ ಇಂಧನ ಬಳಸಿ ಮನೆ ನಿರ್ಮಿಸಬಹುದಾಗಿದೆ.

 ಅನ್ಯ ಗ್ರಹದಲ್ಲಿ ಮನೆ ಕಟ್ಟಬಹುದು.!

5


ಚಂದ್ರ ಹಾಗೂ ಮಂಗಳನಂತಹ ಅನ್ಯಗ್ರಹಗಳಲ್ಲೂ ಈ ತಂತ್ರಜ್ಞಾನದ ಮೂಲಕ ಮನೆ ಕಟ್ಟಬಹುದು ಎಂದು ಸಂಶೋಧಕರು ಹೇಳಿದ್ದಾರೆ.

6


ವಿಡಿಯೋ ವೀಕ್ಷಿಸಿ

7


ಎರಡನೇ ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot