Home
ಸುದ್ದಿಜಾಲ

ಮೈಂಡ್‌ನಿಂದ ನಿಯಂತ್ರಿಸಬಹುದಾದ ಮೊಟ್ಟಮೊದಲ ಡ್ರೋನ್‌ ರೆಡಿ

By Suneel

ಇತ್ತೀಚಿನ ದಿನಗಳ ಹಿಂದಷ್ಟೆ ಅಮೇರಿಕದ ಫ್ಲೊರಿಡಾ ವಿಶ್ವವಿದ್ಯಾಲಯದ ಸಂಶೋಧಕರಿಂದ ಡ್ರೋನ್‌ ರೇಸ್‌ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿನ ವಿಶೇಷತೆ ಅಂದ್ರೆ ಡ್ರೋನ್‌ ನಿಯಂತ್ರಣವನ್ನು ಕೇವಲ ಮೈಂಡ್‌ನಿಂದ ನಿರ್ವಹಿಸುವುದಾಗಿತ್ತು. ಅದನ್ನು "ಬ್ರೈನ್‌ ಡ್ರೋನ್‌ ರೇಸಿಂಗ್" ಎಂದು ಕರೆಯಲಾಗುತ್ತದೆ. ಅಂದಹಾಗೆ ಅಂತು ಇಂತು ಡ್ರೋನ್‌ ನಿಯಂತ್ರಣವು ರಿಮೋಟ್‌ ಕಂಟ್ರೋಲ್‌ನಿಂದ ಆಗುತ್ತಿದ್ದದ್ದು, ಈಗ ಕೇವಲ ಮೈಂಡ್‌ನಿಂದ ಕಂಟ್ರೋಲ್‌ ಮಾಡುವವರೆಗೆ ಅಭಿವೃದ್ದಿ ಹೊಂದಿದೆ. ಮೈಂಡ್‌ ನಿಂದ ಡ್ರೋನ್‌ ಕಂಟ್ರೋಲ್‌ ಮಾಡುವ ಬಗ್ಗೆ ವಿಶೇಷ ಮಾಹಿತಿ ಇಂದಿನ ಲೇಖನದಲ್ಲಿ ತಿಳಿಯಿರಿ.

ಬ್ರೈನ್‌ ಡ್ರೋನ್‌ ರೇಸಿಂಗ್‌

ಬ್ರೈನ್‌ ಡ್ರೋನ್‌ ರೇಸಿಂಗ್‌

ಅಂದಹಾಗೆ ಬ್ರೈನ್‌ ಡ್ರೋನ್‌ ರೇಸಿಂಗ್‌ನಲ್ಲಿ ಡ್ರೋನ್‌ ನಿಯಂತ್ರಿಸಲು ಪೈಲಟ್‌ ಒಂದು ಹೆಡ್‌ಸೆಟ್‌ ಅನ್ನು ಬಳಸುತ್ತಾರೆ. ವಾಸ್ತವವಾಗಿ ಇದು ಎಲೆಕ್ಟ್ರೋಎನ್ಸೆಫಾಲೋಗ್ರಾಮ್ (electroencephalogram) ಆಗಿದ್ದು, ಬ್ರೈನ್‌ನ ಎಲೆಕ್ಟ್ರಿಕಲ್‌ ಚಟುವಟಿಕೆಯನ್ನು ಮಾಪನಾಂಕ ಮಾಡುತ್ತದೆ.

ಎಲೆಕ್ಟ್ರೋಎನ್ಸೆಫಾಲೋಗ್ರಾಮ್ (electroencephalogram)

ಎಲೆಕ್ಟ್ರೋಎನ್ಸೆಫಾಲೋಗ್ರಾಮ್ (electroencephalogram)

ಎಲೆಕ್ಟ್ರೋಎನ್ಸೆಫಾಲೋಗ್ರಾಮ್ (electroencephalogram) ಮತ್ತು ಡ್ರೋನ್‌ ನಡುವೆ ಸಂವಹನವನ್ನು ಬ್ರೈನ್‌ ಕಂಪ್ಯೂಟರ್‌ ಇಂಟರ್ಫೇಸ್‌ನಿಂದ ಅಭಿವೃದ್ದಿಪಡಿಸಲಾಗಿದೆ. ಇದು ವ್ಯಕ್ತಿಯ ಆಲೋಚನೆ ತರಂಗಗಳ ಮೂಲಕ ಕಂಪ್ಯೂಟರ್‌ ಅಥವಾ ಇತರೆ ಡಿವೈಸ್‌ಗಳನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ.

ಸಾಫ್ಟ್‌ವೇರ್

ಸಾಫ್ಟ್‌ವೇರ್

ಡ್ರೋನ್‌ ಅನ್ನು ಮೈಂಡ್‌ ಮೂಲಕ ನಿಯಂತ್ರಿಸಲು ಸಾಫ್ಟ್‌ವೇರ್ ಹೆಡ್‌ಸೆಟ್‌ಗೆ ಸಂಪರ್ಕಗೊಂಡ ನೋಟ್‌ಬುಕ್‌ ಮತ್ತು ರೋಬೋಟ್‌ ಅನ್ನು ಬಳಸಿಕೊಳ್ಳುತ್ತದೆ.

ಮೊಟ್ಟಮೊದಲ ಮೈಂಡ್‌ ಕಂಟ್ರೊಲ್‌ ಡ್ರೋನ್

ಮೊಟ್ಟಮೊದಲ ಮೈಂಡ್‌ ಕಂಟ್ರೊಲ್‌ ಡ್ರೋನ್

ಅಮೇರಿಕದ ಫ್ಲೊರಿಡಾ ವಿಶ್ವವಿದ್ಯಾಲಯದ ಮೆಕಾನಿಕಲ್‌ ಇಂಜಿನಿಯರಿಂಗ್‌ ವಿದ್ಯಾರ್ಥಿ 'ಡೇನಿಯಲ್‌ ರೋಯೆರ್' ಡ್ರೋನ್‌ ರೇಸಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇವರು " ಅಲೋಚನೆ ಮಾಡಲು ಪ್ರಾರಂಭಿಸಿದರೆ ಮೋಟಾರು ಸ್ಟಾರ್ಟ್‌ ಆಗಿ ನಿಮಗೆ ವಿವಿಧ ರೀತಿಯ ಮೆಂಟಲ್‌ ಸ್ಟೇಟ್‌ ಅನುಭವ ನೀಡುತ್ತದೆ. ಆದರೆ ಫೋಕಸ್‌ ಮಾಡಬೇಕಷ್ಟೆ" ಎಂದಿದ್ದಾರೆ.

ಪೈಲಟ್‌

ಪೈಲಟ್‌

ಮೈಂಡ್‌ ಕಂಟ್ರೋಲ್‌ ಡ್ರೋನ್‌ ಚಾಲನೆ ಮಾಡಲು ಪೈಲಟ್‌ಗಳು ಹೆಚ್ಚಿನ ಫೋಕಸ್‌ ಮಾಡಬೇಕು ಮತ್ತು ವಿಶೇಷವಾಗಿ ಅಲೋಚನೆ ಮಾಡಬೇಕು. ಎಲೆಕ್ಟ್ರೋಎನ್ಸೆಫಾಲೋಗ್ರಾಮ್ ಮೈಂಡ್‌ನ ಎಲೆಕ್ಟ್ರಿಕಲ್‌ ಚಟುವಟಿಕೆಯನ್ನು ಕ್ಯಾಪ್ಚರ್ ಮಾಡುತ್ತದೆ. ಸಾಫ್ಟ್‌ವೇರ್‌ ಸಿಗ್ನಲ್‌ಗಳನ್ನು ಪರಿವರ್ತಿಸಿ ಗ್ಯಾಜೆಟ್‌ಗೆ ಕಳುಹಿಸುತ್ತದೆ.

ಸೈನ್ಸ್‌ ಫಿಕ್ಶನ್‌ ಸಿನಿಮಾಗಳು

ಆಧುನಿಕ ಟೆಕ್ನಾಲಜಿ ಬೆಳವಣಿಗೆಯಲ್ಲಿ ಮೈಂಡ್‌ ಕಂಟ್ರೋಲ್‌ ಡ್ರೋನ್‌ ಒಂದು ರೀತಿಯಲ್ಲಿ ಸೈನ್ಸ್‌ ಫಿಕ್ಶನ್ ಸಿನಿಮಾಗಳಲ್ಲಿ ಬಳಸಿದಂತೆಯೇ ಇದೆ. ಆದರೆ ಡ್ರೋನ್‌ಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ. ಮೈಂಡ್‌ ಕಂಟ್ರೋಲ್ ಡ್ರೋನ್‌ ಹೇಗೆ ಚಲಿಸುತ್ತದೆ ಮತ್ತು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ವೀಡಿಯೋ ನೋಡಿ.
ವೀಡಿಯೋ ಕೃಪೆ:University of Florida

ಗಿಜ್‌ಬಾಟ್

ಗಿಜ್‌ಬಾಟ್

ಗಿಜ್‌ಬಾಟ್

ಗಿಜ್‌ಬಾಟ್

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Researchers Created First Drone Controlled By Mind. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+