RBI ನಿಂದ ಬಂತು ಗುಡ್ ನ್ಯೂಸ್! ಈ ಸುದ್ದಿ ಕೇಳಿದ್ರೆ ನೀವು ಕೂಡ ಥ್ರಿಲ್ ಆಗ್ತೀರಾ!
ಭಾರತದಲ್ಲಿ ಏಕಾಏಕಿ ಯುಪಿಐ ಪಾವತಿ ವ್ಯವಸ್ಥೆಗಳು ಬಂದ್ ಆದರೆ ಏನು ಮಾಡ್ತೀರಾ? ಯುದ್ದ ಸನ್ನಿವೇಶಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆಗಳು ಬಂದ್ ಆದರೆ ಏನು ಮಾಡೋದು, ಇಂತಹ ಸನ್ನಿವೇಶಗಳಲ್ಲಿ ಹಣಕಾಸು ವಹಿವಾಟಿಗೆ ಏನು ಮಾಡೋದು, ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಆರ್‌ಬಿಐ ಕಾಲಿಟ್ಟಿದೆ.
ಹೌದು, ಪ್ರಾಕೃತಿಕ ವಿಕೋಪ, ಪ್ರವಾಹ ಸೇರಿದಂತೆ ತುರ್ತು ಪರಿಸ್ಥಿತಿಗಳಲ್ಲಿ ಹಣ ಪಾವತಿ ಮಾಡುವುದು ಕಷ್ಟವಾಗಲಿದೆ. ಆದರೆ ಇಂತಹ ಸಂದರ್ಭದಲ್ಲಿಯೂ ಕೂಡ ನೀವು ಹಣಕಾಸುವ ಪಾವತಿ ಮಾಡಲು ಅವಕಾಶ ನೀಡುವ ಹೊಸ ಸಿಸ್ಟಂ ಪರಿಚಯಿಸಲು ಆರ್‌ಬಿಐ ಮುಂದಾಗಿದೆ. ಹಾಗಾದ್ರೆ RBIನ ಹೊಸ ಸಿಸ್ಟಂ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ತುರ್ತು ಪರಿಸ್ಥಿತಿಗಳಲ್ಲಿಯೂ ಕೂಡ ಕಾರ್ಯನಿರ್ವಹಿಸುವ ಹೊಸ ಪಾವತಿ ವ್ಯವಸ್ಥೆ ಪರಿಚಯಿಸಲು RBI ಮುಂದಾಗಿದೆ. ಇದರಿಂದ ನೀವು ನೆಟ್‌ವರ್ಕ್ ಇಲ್ಲದ ಸನ್ನಿವೇಶದಲ್ಲಿಯೂ ಸಹ ಪಾವತಿ ಮಾಡಲು ಸಹಾಯವಾಗಲಿದೆ. ಇನ್ನು ಈ ಹೊಸ ಮಾದರಿಯು ಹಗುರವಾದ ಮತ್ತು ಪೋರ್ಟಬಲ್ ಸಿಸ್ಟಮ್ ಆಗಿರುತ್ತದೆ. ಇದು ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದ್ದು, ಪ್ರಸ್ತುತ ಲಭ್ಯವಿರುವ ಪಾವತಿ ವ್ಯವಸ್ಥೆಗಳಿಗೆ ಆಧಾರವಾಗಿರುವ ತಂತ್ರಜ್ಞಾನಗಳಿಂದ ಸ್ವತಂತ್ರವಾಗಿರುತ್ತದೆ ಎಂದು ವರದಿಯಾಗಿದೆ.
ಸದ್ಯ ನೀವು ನಾವೆಲ್ಲಾ ಬಳಸುತ್ತಿರುವ ಯುಪಿಐ ಪಾವತಿ ವ್ಯವಸ್ಥೆಗಳಿಗೆ ಸಂಕಿರ್ಣವಾದ ವೈಡ್ ನೆಟ್‌ವರ್ಕ್ ಅವಶ್ಯಕತೆಯಿದೆ. ನೆಟ್‌ವರ್ಕ್ ಇಲ್ಲದ ಸಂದರ್ಭದಲ್ಲಿ ಈ ಪಾವತಿ ವ್ಯವಸ್ಥೆಗಳು ಬಳಕೆಗೆ ಬರುವುದಿಲ್ಲ. ಅದರಲ್ಲೂ ಮೂಲಸೌಕರ್ಯದಲ್ಲಿನ ಅಡೆತಡೆಗಳಿಂದಾಗಿ ನೈಸರ್ಗಿಕ ವಿಪತ್ತುಗಳು ಅಥವಾ ಯುದ್ಧಗಳಂತಹ ಸಂದರ್ಭಗಳಲ್ಲಿ ತಾತ್ಕಾಲಿಕವಾಗಿ ಈ ವ್ಯವಸ್ಥೆಗಳು ಅಲಭ್ಯವಾಗಬಹುದು ಎಂದು ಆರ್‌ಬಿಐ ತನ್ನ 2022-23 ರ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಆದರಿಂದ ತನ್ನದೇ ಆದ ಹೊಸ ಸಿಸ್ಟಂ ಪರಿಚಯಿಸಲು ಮುಂದಾಗಿದೆ.

RBIನ ಹೊಸ ಪಾವತಿ ವ್ಯವಸ್ಥೆ ಅಗತ್ಯವಿದೆಯಾ?
ಖಂಡಿತ ಅಗತ್ಯವಿದೆ, ಯಾಕೆಂದರೆ ಪ್ರಸ್ತುತ ಲಭ್ಯವಿರುವ ಯುಪಿಐ ಪಾವತಿ ವ್ಯವಸ್ಥೆಗಳು ನೆಟ್‌ವರ್ಕ್ ಇಲ್ಲದ ಸಮಯದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಯುದ್ಧ ಮತ್ತು ನೈಸರ್ಗಿಕ ವಿಕೋಪಗಳಂತಹ ಸನ್ನಿವೇಶಗಳಲ್ಲಿ ಇವುಗಳನ್ನು ಬಂದ್ ಮಾಡುವ ಸಾಧ್ಯತೆಯಿರುತ್ತದೆ. ಇಂತಹ ತುರ್ತು ಸಂದರ್ಭಗಳಲ್ಲಿ ತನ್ನದೇ ಆದ ಯುಪಿಐ ಪಾವತಿ ವ್ಯವಸ್ಥೆ ಇರಬೇಕು ಅನ್ನೊದು RBI ವಾದವಾಗಿದೆ. ಇದೇ ಕಾರಣಕ್ಕೆ ಇಂತಹ ಪಾವತಿ ವ್ಯವಸ್ಥೆಯ ಪರಿಕಲ್ಪನೆಯನ್ನು RBI ಹೊಂದಿದೆ.
ಇದು ದೇಶದಲ್ಲಿ ಪಾವತಿ ಮತ್ತು ವಸಾಹತು ವ್ಯವಸ್ಥೆಯ ಶೂನ್ಯ ಡೌನ್‌ಟೈಮ್ ಅನ್ನು ಖಚಿತಪಡಿಸುತ್ತದೆ. ಅಗತ್ಯ ಪಾವತಿ ಸೇವೆಗಳ ಅಡೆತಡೆಯಿಲ್ಲದ ಕಾರ್ಯನಿರ್ವಹಣೆಯನ್ನು ಇದು ನೀಡಲಿದೆ ಅನ್ನೊದು RBI ಹೇಳಿಕೆಯಾಗಿದೆ. ಸದ್ಯ ಅಸ್ತಿತ್ವದಲ್ಲಿರುವ ಪಾವತಿ ವ್ಯವಸ್ಥೆಗಳಿಗಿಂತ ಸಿಸ್ಟಮ್ ತನ್ನ ಬಳಕೆದಾರರ ಆಧಾರದ ಮೇಲೆ ವಿಭಿನ್ನವಾಗಿರುತ್ತದೆ ಎಂದು ಹೇಳಲಾಗಿದೆ. ಇದು ಭಾರತೀಯ ಆರ್ಥಿಕತೆಯ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕವಾದ ವಹಿವಾಟುಗಳನ್ನು ಮಾತ್ರ ಪ್ರಕ್ರಿಯೆಗೊಳಿಸುತ್ತದೆ.
ಈ ಹೊಸ ಸಿಸ್ಟಮ್ ಹೇಗೆ ಕಾರ್ಯನಿರ್ವಹಿಸಲಿದೆ?
RBIನ ಹೊಸ ಸಿಸ್ಟಮ್ ಕನಿಷ್ಠ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅವಶ್ಯಕತೆಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ವಿವಿಧ ಪರಿಸರಗಳಿಗೆ ಹೊಂದಿಕೊಳ್ಳುವ ಪೋರ್ಟಬಲ್ ಸಿಸ್ಟಮ್ ಆಗಿರುತ್ತದೆ. ಇದು ಪ್ರತಿಕೂಲ ಸಂದರ್ಭಗಳಲ್ಲಿಯೂ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುತ್ತದೆ ಎಂದು RBI ಹೇಳಿದೆ. ಈ ಆ ಮೂಲಕ ಡಿಜಿಟಲ್ ಪಾವತಿಗಳು ಮತ್ತು ಹಣಕಾಸು ಮಾರುಕಟ್ಟೆಯ ಮೂಲಸೌಕರ್ಯದಲ್ಲಿ ತೀವ್ರ ಪರಿಸ್ಥಿತಿಗಳಲ್ಲಿಯೂ ಸಹ ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡಲು ಆರ್‌ಬಿಐ ಮುಂದಾಗಿದೆ. ಆದರೆ ಈ ವ್ಯವಸ್ಥೆಯಲ್ಲಿ ನೀವು ಪಾವತಿ ಮಾಡುವ ಹಣದ ಮೊತ್ತದ ಲಿಮಿಟ್ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಅಲ್ಲದೆ ಈ ವ್ಯವಸ್ಥೆ ಯಾವಾಗ ಜಾರಿಗೆ ಬರಲಿದೆ ಅನ್ನೊದರ ಬಗ್ಗೆ ಕೂಡ ಖಚಿತ ಮಾಹಿತಿ ಇಲ್ಲ.


Click it and Unblock the Notifications








