ಫ್ಲಾಷ್‌ ಸೇಲ್‌ಗೆ ಸೆಡ್ಡು ಹೊಡೆದ ಒನ್‌ಪ್ಲಸ್ 6: ಹೊಸದಾಗಿ 'ಫಾಸ್ಟ್ AF' ಸೇಲ್‌..!

|

ಇಷ್ಟು ದಿನ ಮಾರುಕಟ್ಟೆಯಲ್ಲಿ ಫ್ಲಾಷ್ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವುದನ್ನು ಕಾಣಬಹುದಾಗಿತ್ತು. ಆದರೆ ಈ ಬಾರಿ ಒನ್‌ಪ್ಲಸ್ ಮತ್ತು ಅಮೆಜಾನ್ ಹೊಸ ಮಾದರಿಯಲ್ಲಿ ಸ್ಮಾರ್ಟ್‌ಫೋನ್ ಮಾರಾಟಕ್ಕೆ ಮುಂದಾಗಿದ್ದು, ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ 'ಫಾಸ್ಟ್ AF' ಸೇಲ್‌ ಅನ್ನು ಆಯೋಜಿಸಿದ್ದು, ಈ ಮೂಲಕ ಒನ್‌ಪ್ಲಸ್ ಕೊಳ್ಳಬೇಕು ಎನ್ನುವವರು ಮೊದಲೇ ಪ್ರೀ ಬುಕ್ ಮಾಡಬಹುದಾಗಿದೆ.

ಫ್ಲಾಷ್‌ ಸೇಲ್‌ಗೆ ಸೆಡ್ಡು ಹೊಡೆದ ಒನ್‌ಪ್ಲಸ್ 6: ಹೊಸದಾಗಿ 'ಫಾಸ್ಟ್ AF' ಸೇಲ್‌..!

ಈಗಾಗಲೇ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಲಾಂಚ್‌ಗೆ ಮೂಹುರ್ತ ಫಿಕ್ಸ್ ಆಗಿದ್ದು, ಮೇ.16 ರಂದು ಲಂಡನ್‌ನಲ್ಲಿ ಹಾಗೂ ಮೇ.17 ರಂದು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಸ್ಮಾರ್ಟ್‌ಫೋನ್‌ ಅನ್ನು ಹೊಸ ಮಾದರಿಯಲ್ಲಿ ತಲುಪಿಸಲು ಒನ್‌ಪ್ಲಸ್ ಮುಂದಾಗಿದೆ.

ಅಮೆಜಾನ್ ಒಪ್ಪಂದ:

ಅಮೆಜಾನ್ ಒಪ್ಪಂದ:

ಅಮೆಜಾನ್‌ನಲ್ಲಿ ಮಾತ್ರವೇ ಎಕ್ಸ್‌ಕ್ಲೂಸಿವ್ ಆಗಿ ಮಾರಾಟವಾಗಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಮೊದಲ ಬಾರಿಗೆ 'ಫಾಸ್ಟ್ AF' ಸೇಲ್ ಆಯೋಜಿಸಿದೆ ಎನ್ನಲಾಗಿದೆ. ಇದರಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಖರೀದಿದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.

ಮೇ.13 ರಿಂದ ಮೇ.16ರ ವರೆಗೆ ಸೇಲ್:

ಮೇ.13 ರಿಂದ ಮೇ.16ರ ವರೆಗೆ ಸೇಲ್:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಮಾರಾಟದ ಅಂಗವಾಗಿ ಆಯೋಜಿಸಿರುವ 'ಫಾಸ್ಟ್ AF' ಸೇಲ್ ಮೇ.13 ರಿಂದ ಮೇ.16ರ ವರೆಗೆ ನಡೆಯಲಿದೆ ಎನ್ನಲಾಗಿದೆ. ಇಲ್ಲಿ ಬಳಕೆದಾರರಿಗೆ ಮೇ.13 ರಿಂದ ಮೇ.16ರ ವರೆಗೆ ಬಿಡುಗಡೆ ಮುನ್ನವೇ ಬುಕ್ ಮಾಡಬಹುದಾಗಿದೆ.

ಗಿಫ್ಟ್ ಕಾರ್ಡ್ ಬೈ ಮಾಡಬೇಕು:

ಗಿಫ್ಟ್ ಕಾರ್ಡ್ ಬೈ ಮಾಡಬೇಕು:

ಈ ಸಂದರ್ಭದಲ್ಲಿ ನೀವು ಗಿಫ್ಟ್ ಕಾರ್ಡ್ ಬೈ ಮಾಡಬಹುದಾಗಿದೆ. ಇದರಲ್ಲಿ ನೀವು ಮೇ.21 ಮತ್ತು ಮೇ.22 ರಂದು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಖರೀದಿಸುವ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ.

ಹೆಚ್ಚಿನ ಲಾಭ:

ಹೆಚ್ಚಿನ ಲಾಭ:

ಮೇ.13 ರಿಂದ ಮೇ.16ರ ವರೆಗೆ ನಡೆಯುವ ಸೇಲ್‌ನಲ್ಲಿ ಗಿಫ್ಟ್ ಕಾರ್ಡ್ ಕಾರ್ಡ್ ಖರೀದಿಸಿದ ಸಂದರ್ಭದಲ್ಲಿ ರೂ.1000 ಗಿಫ್ಟ್ ಕಾರ್ಡ್‌ ಮೌಲ್ಯವೂ ರೂ.2000ವಾಗಲಿದ್ದು, ಸ್ಮಾರ್ಟ್‌ಫೋನ್ ಬೆಲೆಯಲ್ಲಿ ರೂ.2000 ಕಡಿತವನ್ನು ಕಾಣಬಹುದಾಗಿದೆ. ಒಟ್ಟಿನಲ್ಲಿ ಖರೀದಿದಾರರಿಗೆ ಇದು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ಲಾಭವಿದೆ:

ಹೆಚ್ಚಿನ ಲಾಭವಿದೆ:

ಇದಲ್ಲದೇ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಅಮೆಜಾನ್‌ದಲ್ಲಿ ಮಾತ್ರವೇ ದೊರೆಯಲಿದ್ದು, ಕಂಪನಿ ನೀಡುವ ಒಂದು ವರ್ಷದ ವ್ಯಾರೆಂಟಿಯೊಂದಿಗೆ ಮತ್ತೇ ಮೂರು ತಿಂಗಳ ವ್ಯಾರೆಂಟಿಯೂ ಲಭ್ಯವಿರಲಿದೆ ಎನ್ನಲಾಗಿದೆ. ಇದು ಒನ್‌ಪ್ಲಸ್ ಅಭಿಮಾನಿಗಳಿಗೆ ಸಂತಸವನ್ನು ನೀಡಲಿದೆ.

ಲಾಂಚ್ ಗಿಂತಲೂ ಮುನ್ನವೇ:

ಲಾಂಚ್ ಗಿಂತಲೂ ಮುನ್ನವೇ:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಸ್ಮಾರ್ಟ್‌ಫೋನ್ ಲಾಂಚ್ ಗೂ ಮುನ್ನವೇ ಬುಕ್ ಮಾಡುವ ಅವಕಾಶವನ್ನು ನೀಡುವ ಮೂಲಕ ತನ್ನ ಅಭಿಮಾನಿಗಳಿಗೆ ಹೆಚ್ಚಿನ ಅವಕಾಶವನ್ನು ಮಾಡಿಕೊಡಲಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿದೆ.

ಸ್ಮಾರ್ಟ್‌ಫೋನ್ ವಿಶೇಷತೆ:

ಸ್ಮಾರ್ಟ್‌ಫೋನ್ ವಿಶೇಷತೆ:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ವೇಗದ ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಇದಲ್ಲದೇ 256GB ಇಂಟರ್ನಲ್‌ ಮೆಮೊರಿಯನ್ನು ನೋಡಬಹುದಾಗಿದೆ.

ಇದಲ್ಲದೇ ಡ್ಯುಯಲ್ ಲೆನ್ಸ್:

ಇದಲ್ಲದೇ ಡ್ಯುಯಲ್ ಲೆನ್ಸ್:

ಇದಲ್ಲದೇ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಲೆನ್ಸ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಅಕ್ಸಿಜನ್ OSನಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೇ FDH+ ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ.

Best Mobiles in India

English summary
Reserve your OnePlus 6 right now in the first-ever ‘Fast AF' Sale on Amazon.in. to know more visit kannada.gizbot.com
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X